ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ: ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಂಗಲ: ತುಳಿಯುವವರ ಮಧ್ಯೆ ಬೆಳೆದು ನಿಲ್ಲುವುದೇ ಸಾಧನೆ-ಸಿದ್ಧಲಿಂಗ ಶ್ರೀ

ಮುದ್ದೇಬಿಹಾಳ : ಎಲ್ಲದಕ್ಕೂ ಮನಸ್ಸೆ ಕಾರಣವಾಗಿದ್ದು ಇನ್ನೊಬ್ಬರ ಮನೆ ಹಾಳು ಮಾಡುವುದು ಮನಸ್ಸೇ ಆಗಿದೆ.ತುಳಿಯುವವರ ಮಧ್ಯೆ ಬೆಳೆಯುವುದೇ ದೊಡ್ಡ ಸಾಧನೆಯಾಗಿದೆ ಎಂದು ತಾಳಿಕೋಟಿ ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ಹೇಳಿದರು.

ಪಟ್ಟಣದ ಖಾಸ್ಗತೇಶ್ವರ ಮಠದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಜ್ಜಲಗುಡ್ಡ ಶರಣಮ್ಮನವರ ಪುರಾಣ ಮಹಾಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಕಿಸ್ತಾನ,ಬಾಂಗ್ಲಾದೇಶಗಳಿಗೆ ಮಾತಾ ಎಂದು ಕರೆದಿಲ್ಲ.ಆದರೆ ಭಾರತಕ್ಕೆ ಮಾತ್ರ ಮಾತಾ ಎಂದು ಕರೆಯುತ್ತಾರೆ. ಯಾಕೆಂದರೆ ಇಲ್ಲಿ ಇರುವ ಪ್ರತಿಯೊಬ್ಬರು ಮಾತೆಯ ಸ್ವರೂಪರು,ನಮ್ಮ ದೇಶದ ಮಹಿಳೆಯರೆಲ್ಲರೂ ಮಹಾರಾಣಿಯರು ಎಂದರು.
ಸಂಸಾರದಲ್ಲಿ ಪ್ರೀತಿ ಕಮ್ಮಿ ಆಗದಂತೆ ನೋಡಿಕೊಳ್ಳಬೇಕು.ನಮ್ಮ ಹಿಂದೆ ಮಾತನಾಡುವವರು ಇದ್ದೇ ಇರುತ್ತಾರೆ.ಇನ್ನೊಬ್ಬರ ಟೀಕೆಗಳಿಗೆ ಹೆದರುವುದು ಸಲ್ಲದು.ನಾನು ನಮ್ಮ ಮನೆಯವರು ಇನ್ನೊಬ್ಬರ ಉಸಾಬರಿ ಮಾಡುವುದು ಬಿಡುತ್ತೇವೆ ಎಂದು ಹೇಳಿದರೆ ಸಂಸಾರ,ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು.

ಹೊಸ ವರ್ಷ ಎಂದರೆ ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹೊಸ ವರುಷವಾಗಿದೆ.ಅಂದು ಭಾರತೀಯರು ಮೈಗೆ ಎಣ್ಣಿ ಹಚ್ಚಿಕೊಂಡು ಪರಸ್ಪರ ಕೈಮುಗಿಯುತ್ತೇವೆ.ಆದರೆ ಪಾಶ್ಚಿಮಾತ್ಯರ ಸಂಸ್ಕೃತಿಯಲ್ಲಿ ಹೊಟ್ಟೆಗೆ ಎಣ್ಣಿ ಹಾಕಿಕೊಂಡು ರಸ್ತೆ ಬದಿ ಬಿದ್ದುಕೊಂಡರೆ ಅದು ಇಂಗ್ಲಿಷ್‌ರ ಹೊಸ ವರ್ಷ ಎಂದು ತಿಳಿದುಕೊಳ್ಳುವಂತಾಗಿದೆ.ನಾವು ಪಾಶ್ಚಿಮಾತ್ಯ ಸಂಸ್ಕೃತಿ ಅಳವಡಿಸಿಕೊಂಡರೆ ಸುಧಾರಿಸವುದಿಲ್ಲ.ಪಾಶ್ಚಿಮಾತ್ಯರು ನಮ್ಮ ದೇಶೀಯ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದಾರೆ ಎಂದರು. ಬಸವನ ಬಾಗೇವಾಡಿ ಒಡೆಯ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ಈ ಭಾಗದಲ್ಲಿ ತಾಳಿಕೋಟಿ ಮಠದ ಕೀರ್ತಿಯನ್ನು ಉನ್ನತ ಮಟ್ಟಕ್ಕೆ ಬೆಳೆಸುತ್ತಿರುವ ಸಿದ್ಧಲಿಂಗ ದೇವರು ನಮ್ಮ ಭಾಗದಲ್ಲಿ ಒಳ್ಳೆಯ ಹೆಸರು ಗಳಿಸುತ್ತಿರುವುದು ಸಂತಸದ ಸಂಗತಿ ಎಂದರು.ಜAಗಮ ಸಮಾಜದ ಮಾಜಿ ಅಧ್ಯಕ್ಷ ಸಿದ್ಧಲಿಂಗಯ್ಯ ಕಲ್ಯಾಣಮಠ, ವೇ.ಮುರುಗೇಶ ವಿರಕ್ತಮಠ,ಕೋಳೂರಿನ ಸಂತೋಷ ಹಿರೇಮಠ ಇದ್ದರು.

ನನ್ನ ಉಸಿರು ಇರುವರೆಗೂ ಖಾಸ್ಗತೇಶ್ವರ ಮಠದಲ್ಲಿಯೇ ಇರುವೆ-ಸಿದ್ಧಲಿಂಗ ದೇವರು :
ಖಾಸ್ಗತೇಶ್ವರ ಮಠದಲ್ಲಿ ಹುಟ್ಟಿ ಬೆಳೆದಿರುವ ನನಗೆ ದೊಡ್ಡ ದೊಡ್ಡ ಮಠದ ಆಹ್ವಾನ ಬಂದಿತ್ತು.ಜಗದ್ಗುರು ಪಟ್ಟವು ಇದೆ ಎಂದು ಹೇಳಿದ್ದರು.ಆದರೆ ನನ್ನ ಉಸಿರು ಇರುವರೆಗೂ ಖಾಸ್ಗತೇಶ್ವರ ಮಠದಲ್ಲಿಯೇ ಇರುವೆ. ವಿರಕ್ತ ಶ್ರೀಗಳ ಆಶಯದಂತೆ ತಾಳಿಕೋಟೆ ಖಾಸ್ಗತೇಶ್ವರ ಭಾಗದಲ್ಲಿ ಬಹುದೊಡ್ಡ ಸಂಗೀತ ಪಾಠಶಾಲೆ, ನಿರಂತರ ನಿತ್ಯ ದಾಸೋಹ, ಶಿಕ್ಷಣದ ದಾಸೋಹ,ಮಹಿಳೆಯರಿಂದಲೇ ಶಾಖಾ ಮಠಗಳಲ್ಲಿ ರಥೋತ್ಸವದ ಕಾರ್ಯಗಳ ಸಂಕಲ್ಪ ಹೊಂದಿದ್ದು ಅದನ್ನು ಈಡೇರಿಸುವರೆಗೂ ವಿರಮಿಸುವುದಿಲ್ಲ ಎಂದು ಖಾಸ್ಗತೇಶ್ವರ ಮಠದ ಸಿದ್ಧಲಿಂಗ ದೇವರು ನುಡಿದರು.

Latest News

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಔಷಧ ತಜ್ಞರು ಜೀವ ಉಳಿಸುವ ಮಾರ್ಗದರ್ಶಕರು-ಸಿದ್ಧಲಿಂಗ ದೇವರು

ಮುದ್ದೇಬಿಹಾಳ : ಔಷಧ ತಜ್ಞರು ವೈದ್ಯರ ಬೆನ್ನೆಲುಬಾಗಿದ್ದು ಜೀವ ಉಳಿಸುವ ಮಾರ್ಗದರ್ಶಕರಂತೆ ಕೆಲಸ ಮಾಡುತ್ತಿದ್ದಾರೆ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಬರಗಾಲದ ಕುರಿತು ಕರೆದಿದ್ದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ರಾಜ್ಯದ ರೈತರಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ:                                            ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ: ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಮುದ್ದೇಬಿಹಾಳ : ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು 60 ರೂ.ಗಳಿಗೆ ಹೆಚ್ಚಿಸಬೇಕು.ಸಬ್ 2026-27ನೇ ಸಾಲಿನಲ್ಲಿ

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಮುದ್ದೇಬಿಹಾಳ : ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ

ಸೀರತ್ ಅಭಿಯಾನ :                                                           ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ-ಅಕ್ಬರ್‌ಅಲಿ ಉಡುಪಿ

ಸೀರತ್ ಅಭಿಯಾನ : ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ-ಅಕ್ಬರ್‌ಅಲಿ ಉಡುಪಿ

ಮುದ್ದೇಬಿಹಾಳ : ಜಾತಿ, ಪಂಗಡಗಳ ಎಲ್ಲೆಗಳನ್ನು ಮೀರಿ ಮಾನವೀಯತೆ, ಪ್ರೀತಿ, ತ್ಯಾಗ ಹಾಗೂ ಸಮಾನತೆಯ ಮೌಲ್ಯಗಳನ್ನು ಸಾರಿದ ಪ್ರವಾದಿ ಮಹಮ್ಮದ್ ಪೈಗಂಬರ ಅವರ ಸಂದೇಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್‌ಅಲಿ ಉಡುಪಿ ಹೇಳಿದರು. ಪಟ್ಟಣದ ವಿಜಯ ಮಹಾಂತೇಶ ಮಂಗಲಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ‘ಕ್ರಾಂತಿಯ ಜ್ಯೋತಿ ಪ್ರವಾದಿ ಮಹಮ್ಮದ್ ಸೀರತ್ ಅಭಿಯಾನ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರವಾದಿ ಮಹಮ್ಮದ್ ಅವರ ಸಂದೇಶ ಯಾವುದೇ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ವೈಯಕ್ತಿಕ ಪ್ರತಿಭೆಯ ಜತೆಗೆ ಅವರು ಪ್ರತಿನಿಧಿಸುವ ಪ್ರದೇಶದ ಹೆಸರೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು. ಪಟ್ಟಣದ ಓಸ್ವಾಲ್ ಹಾಲ್‌ನಲ್ಲಿ ರವಿವಾರ ನಡೆದ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಏಕಲವ್ಯ ರೋಲರ್