ಪ್ರಧಾನಿ ಮೋದಿ ಹೆಸರು ಕೆಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಇಂಚಗೇರಿ ಮಠದ ಶಶಿಕಾಂತ ಗುರೂಜಿ ವಾಗ್ದಾಳಿ

ಪ್ರಧಾನಿ ಮೋದಿ ಹೆಸರು ಕೆಡಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ: ಇಂಚಗೇರಿ ಮಠದ ಶಶಿಕಾಂತ ಗುರೂಜಿ ವಾಗ್ದಾಳಿ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಹ್ಲಾದ ಜೋಶಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಹೆಸರು ಕೆಡಿಸಿದ್ದಾರೆ ಎಂದು ಇಂಚಗೇರಿ ಮಠದ ಸ್ವಾಮೀಜಿಯೂ ಆದ ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಶಶಿಕಾಂತ ಗುರೂಜಿ ವಾಗ್ದಾಳಿ ನಡೆಸಿದರು.

ಇಲ್ಲಿನ ರಾಣಿ ಚನ್ನಮ್ಮ ಸರ್ಕಲ್ ನಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಆಯೋಜಿಸಿರುವ ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಇಲ್ಲಿ ಸೇರಿದ ಹೋರಾಟಗಾರರಲ್ಲಿ ಬಿಜೆಪಿಯ ಕಾರ್ಯಕರ್ತರೇ ಹೆಚ್ಚಾಗಿದ್ದಾರೆ ಎಂದರು.

ನಿ ಬಾಳ ಡ್ಯೊಂಗಿ ಅದಿ ಅಂಥ ಹೋರಾಟಕ್ಕ ಬಂದ ಬಿಜೆಪಿ ಕಾರ್ಯಕರ್ತರೇ ಹೇಳಿದ್ದಾರೆ‌. ಅಷ್ಟೆ ಅಲ್ಲ ವಟ್ಟ ಬಿಡಬ್ಯಾಡ್ರಿ ಅವನನ್ನ ಅಂಥನೂ ಹೇಳಿದ್ದಾರೆ ಎಂದು ಹರಿಹಾಯ್ದರು.

ಬಾರೋ ಇಲ್ಲಿ ಯಾಕೋ ದೆಹಲಿಗೆ ಓಡಿ ಹೋಗಿ? ಯಾರೋ ರೈತ ಸಂಘದವರ ಬಂದು ಮನವಿ ಕೊಟ್ಟಾರ ಅಂತಿಯಾ? ಕರ್ನಾಟಕ ರಾಜ್ಯ ರೈತ ಸಂಘವು ರಾಜ್ಯಾಧ್ಯಕ್ಷ ಚುನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ಇಂಚಗೇರಿ ಮಠದ ಸನ್ಯಾಸಿಯಾದ ರೈತ ಸಂಘದ ಗೌರವಾಧ್ಯಕ್ಷ ಬಂದಿನಿ ಎಂದು ಎಚ್ಚರಿಸಿದರು.

ಮನವಿ ಕೊಡಲು ಬಂದಾಗ ಮೂರು ತಾಸು ಮನೆ ಹೊರಗ ರಸ್ತೆ ಮೇಲೆ ಮೂರುನೂರು ರೈತರೊಂದಿಗೆ ಕಾದಿನಿ. ಆ ಮೇಲೆ ಬಂದ ಮನವಿ ತಗೊಂಡಿ. ಈಗ ದೆಹಲಿ ನಿಯೋಗ ಹೋಗೋಣ ಅಂತ ನಾಟಕ ಮಾಡಬೇಡ. ಸಿದ್ಧಾರೂಢ ಸ್ವಾಮೀಜಿ ಮೇಲಾಣೆ ಅವನ ಮನೆಯಲ್ಲಿ ಚಹಾ ಕುಡಿಯಲು ಕರೆದರೂ ಒಳಗೆ ಹೋಗಿಲ್ಲ ಎಂದು ತಿವಿದರು.

ಸತ್ಯವಾಯ್ತು ಬಬಲಾದಿ ಭವಿಷ್ಯವಾಣಿ:
ಬಬಲಾದಿ ಸದಾಶಿವ ಮುತ್ಯಾ ಧಾರವಾಡಕ್ಕ ದಾರಿ ಆಗಲಿದೆ ಎಂದಿದ್ದರು. ಅದರಂತೆ ಈಗಾಗಲೇ 31 ಜಿಲ್ಲೆಯಿಂದ ರೈತರು ಬಂದಿದ್ದಾರೆ. ಅಷ್ಟೆ ಅಲ್ಲ ಮಹಾರಾಷ್ಟ್ರದಿಂದಲೂ ಅನ್ನದಾತರು ಬಂದು ಸೇರಿದ್ದಾರೆ. ಈ ಮೂಲಕ ಬಬಲಾದಿ ಭವಿಷ್ಯವಾಣಿ ಸತ್ಯವಾಗಿದೆ ಎಂದು ಹೇಳಿದರು.

ಎರಡು ಎಕರೆ ಹೊಲ ಮಾರಿದ ಚುನಪ್ಪ ಪೂಜಾರಿ:
ರೈತ ಸಂಘವನ್ನು ಗಟ್ಟಿ ಮಾಡಲು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಚುನಪ್ಪ ಪೂಜಾರಿ ತನ್ನ ಎರಡು ಎಕರೆ ಹೊಲ ಮಾರಿದ್ದಾನೆ ಎಂದು ತಿಳಿಸಿದರು.

ವಿದೇಶದಿಂದ ಸಕ್ಕರೆ ಆಮದು ಮಾಡಿಕೊಂಡು 52 ರೂಪಾಯಿಗೆ ಮಾರಿ ಎಂದು ಫ್ಯಾಕ್ಟರಿಯವರಿಗೆ ಹೇಳ್ಯಾಣ. ನಾವೇನು ಭಯೋತ್ಪಾದಕರಲ್ಲ. ಚೆನ್ನಮ್ಮನ ನಾಡಿಗೆ ರಾಯಣ್ಣಗೊಳ ಬಂದಿವಿ. ಬಾ ಬಂದು ರಾಯಣ್ಣಗೊಳಿಗೆ ಉತ್ತರ ಕೊಡು. ಇಲ್ಲ‌ ಅಂದ್ರೆ ಹೋರಾಟ ತೀವ್ರ ಗೊಳ್ಳಲಿದೆ. ಇಲ್ಲಿ ಬಂದು 60 ರೂಪಾಯಿ ಎಂಆರ್ಪಿ ಘೋಷಣೆ ಮಾಡು ಎಂದರು.

Latest News

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಬರಗಾಲದ ಕುರಿತು ಕರೆದಿದ್ದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ರಾಜ್ಯದ ರೈತರಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ:                                            ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ: ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಮುದ್ದೇಬಿಹಾಳ : ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು 60 ರೂ.ಗಳಿಗೆ ಹೆಚ್ಚಿಸಬೇಕು.ಸಬ್ 2026-27ನೇ ಸಾಲಿನಲ್ಲಿ

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಮುದ್ದೇಬಿಹಾಳ : ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿಯ ಕೆಪಿಎಸ್ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಥ್ರೋಬಾಲ್ ಬಾಲಕರು,ಬಾಲಕಿಯರ ವಿಭಾಗದಲ್ಲಿ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ವೈಯಕ್ತಿಕ ಪ್ರತಿಭೆಯ ಜತೆಗೆ ಅವರು ಪ್ರತಿನಿಧಿಸುವ ಪ್ರದೇಶದ ಹೆಸರೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು. ಪಟ್ಟಣದ ಓಸ್ವಾಲ್ ಹಾಲ್‌ನಲ್ಲಿ ರವಿವಾರ ನಡೆದ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಏಕಲವ್ಯ ರೋಲರ್

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ :                                      ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ : ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಮುದ್ದೇಬಿಹಾಳ : ಭೀಕರ ಬರಗಾಲದ ಸಮಯದಲ್ಲಿ ನೇಕಾರರಿಗೂ ಸಮರ್ಪಕ ಕಚ್ಚಾನೂಲು,ಬೀಮ್ ಪೂರೈಕೆ ಆಗುತ್ತಿಲ್ಲ.ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನಡೆಸುವ ನೇಕಾರರು ಗ್ರಾಮೀಣ ಭಾಗದಲ್ಲಿ ಸಂಕಷ್ಟದಲ್ಲಿದ್ದು ಅವರಿಗೆ ಸರ್ಕಾರ ಸೂಕ್ತ ನೆರವು ಒದಗಿಸಬೇಕು ಎಂದು ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಈ.ಹೆಬ್ಬಾಳ ಹೇಳಿದರು. ಪಟ್ಟಣದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ 27ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.ನೇಕಾರರ ಬದುಕು