ಮುದ್ದೇಬಿಹಾಳ : ಬರಗಾಲದ ಕುರಿತು ಕರೆದಿದ್ದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ರಾಜ್ಯದ ರೈತರಿಗೆ ಸೂಕ್ತ ಪರಿಹಾರ ಒದಗಿಸುವ ಸ್ಪಷ್ಟವಾದ ತೀರ್ಮಾನ,ಗಂಭೀರ ಚರ್ಚೆ ನಡೆಸದೇ ಇರುವುದು ರಾಜ್ಯದ ರೈತ ಕುಲಕ್ಕೆ ಸರ್ಕಾರ ಮಾಡಿರುವ ಅಪಮಾನ.ಸಿಎಂ ಡಿ.ಕೆ.ಶಿವಕುಮಾರ ಈ ವಿಷಯದಲ್ಲಿ ರಾಜ್ಯದ ರೈತರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಬರಗಾಲ ಕುರಿತು ನಡೆದ ವಿಶೇಷ ಅಧಿವೇಶನದಲ್ಲಿ ಗಂಭೀರತೆ ಇರಲಿಲ್ಲ. ರೈತರ ಪರವಾಗಿ ಯಾವುದೇ ಚರ್ಚೆಗಳು ನಡೆಯಲಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.ಸದನದಲ್ಲಿ ಬಹುತೇಕ ಶಾಸಕರ ಗೈರು ಕಾಣುತ್ತಿತ್ತು. 224 ಶಾಸಕರು ಒಮ್ಮತದ ನಿರ್ಣಯ ಮಾಡಲಿಲ್ಲ ಎಂದು ಟೀಕಿಸಿದರು.
150 ವರ್ಷಗಳ ಹಿಂದೆ ಬಂದAತಹ ಭೀಕರ ಬರಗಾಲ ರಾಜ್ಯದಲ್ಲಿ ಬಂದಿದೆ. ಯಾವೊಬ್ಬ ಶಾಸಕರಲ್ಲಿ, ಮಂತ್ರಿಗಳಲ್ಲಿ ಅಂಕಿಅoಶಗಳು ಇರಲಿಲ್ಲ. ಕಾಟಾಚಾರಕ್ಕೆ ಎಂಬoತೆ ಮಾತನಾಡಿದರು. ರಾಜ್ಯ ಕಾಂಗ್ರೆಸ್ ಸರಕಾರ ಬರಗಾಲ ಘೋಷಣೆ ಮಾಡಿದ್ದೆ ದೊಡ್ದ ರಾಜಕೀಯ ಪ್ರಹಸನ ಮಾಡಿತು. ವಿಜಯಪುರ ಜಿಲ್ಲೆ ಸಂಪೂರ್ಣ ಬರಗಾಲ ಘೋಷಣೆ ಆಗುವಲ್ಲಿ ರೈತರ ಹಾಗೂ ಬಿಜೆಪಿ ರೈತ ಮೋರ್ಚಾ ಹೋರಾಟದ ಫಲವಾಗಿದೆ. ಆದರೆ ಬರ ಕುರಿತು ವಿಶೇಷ ಅಧಿವೇಶನದಲ್ಲಿ ರಾಜ್ಯದ ಹಣಕಾಸಿನ ಪರಿಸ್ಥಿತಿ, ರೈತರಿಗೆ ಏನು ನಿರ್ಣಯ ಕೈಗೊಳ್ಳುತ್ತಿದ್ದೇವೆಂದು ಚರ್ಚೆ ಆಗಲಿಲ್ಲ. ಕೇಂದ್ರ, ರಾಜ್ಯ ನೀಡಲಿ ಎಂದೇ ಕಾಲ ಕಳೆದರು .ಅಧಿವೇಶನದಲ್ಲಿ ಒಬ್ಬ ಶಾಸಕರಿಗೆ ಒಂದು ದಿನದ ಊಟ ತಿಂಡಿ ಸೇರಿದಂತೆ ಖರ್ಚು 10 ಸಾವಿರ ರೂಪಾಯಿ ವೆಚ್ಚವಾಗಿದೆ ಎಂದು ಹೇಳಿದರು.
ಸಿಎಂ ಡಿ ಕೆ ಶಿವಕುಮಾರ್ ಸದನದಲ್ಲಿ ಅವರ ಹಾಬಭಾವದ ಕುರಿತು ಟೀಕಿಸಿದ ನಡಹಳ್ಳಿ, ಬರ ಕುರಿತು ಅವರು ಮಾತನಾಡಿದ್ದಕ್ಕಿಂತ ಬೆಂಗಳೂರಿನ ಬಗ್ಗೆ ಹೆಚ್ಚು ಮಾತನಾಡಿದರು.ಉತ್ತರ ಶಾಸಕರು ಎರಡೆರಡು ಕುಟುಂಬಗಳು ಬೆಂಗಳೂರಿನಲ್ಲಿ ನೆಲಸಿವೆ ಎಂದು ಹೇಳಿದರು. ರೈತರ ಬಗ್ಗೆ ಮಾತೆ ಇಲ್ಲ. ಇದು ರಾಜ್ಯದ ರೈತರಿಗೆ ಮಾತ್ರವಲ್ಲದೆ 224 ಶಾಸಕರಿಗೆ ಮಾಡಿದ ಅವಮಾನ. ಬೆಂಗಳೂರು ಡಿಕೆಶಿ ಅವರ ತಂದೆಯವರದ್ದಾ ? ಇವರ ಸ್ವತ್ತಾ? ನಮ್ಮ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಜನರದ್ದು ಅಲ್ಲವೆ ಎಂದು ಕಿಡಿಕಾರಿದರು. ರೈತರ ಖಾತೆಗೆ 2500 ನೀಡ್ತಾರಂತೆ ನಾಚಿಕೆ ಆಗಬೇಕು. ವಿಶೇಷ ಅಧಿವೇಶನದಲ್ಲಿ ನೀವು ಮಾಡಿದ ಒಂದು ಊಟದ ಬೆಲೆ 2500ರೂ. ಇದೆ 5 ವರ್ಷ ಅಧಿಕಾರ ನೀಡಿದ ರೈತರ ಬಗ್ಗೆ ಪರಿಹಾರದ ಬಗ್ಗೆ ಒಬ್ಬ ಶಾಸಕರು, ಸಚಿವರು ಮಾತನಾಡಲಿಲ್ಲ. ಮತದಾನ ಮಾಡಿದ ರೈತರು ನಿಮ್ಮ ಶಾಸಕರು ಸಚಿವರಿಗೆ ಪ್ರಶ್ನೆ ಮಾಡಿ. ರಾಜ್ಯದಲ್ಲಿ ರೈತರು ದಂಗೆ ಏಳುತ್ತಾರೆ. ರೈತರು ಸಂಘಟಿತರಾಗಬೇಕು. ಜನಪ್ರತಿನಿಧಿಗಳಿಗೆ ಪಾಠ ಕಲಿಸುವ ಕಾಲ ಬಂದಿದೆ ಎಂದರು.
ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬರಗಾಲ ಸಂದರ್ಭದಲ್ಲಿ ಎನ್.ಡಿ.ಆರ್.ಎಫ್ ನಿಯಮಾನುಸಾರ ಖುಷ್ಕಿ ಭೂಮಿಗೆ ಕೇಂದ್ರ ಸರಕಾರ 8600 ರೂ., ಜೊತೆ ರಾಜ್ಯ ಸರಕಾರ 5100 ನೀಡಿದೆ. ರಾಜ್ಯಸಭಾ ಖಾತೆಯಿಂದ ಒಟ್ಟು 13600 ನೀಡಿದೆ ಇರಿಗೇಶನ್‌ಗೆ 17,600 ರೂ ರಾಜ್ಯ ಸರ್ಕಾರ 8000 ಸೇರಿ ಒಟ್ಟು 25,000 ರೂ ಪ್ರತಿ ಹೆಕ್ಟೇರ್ ಗೆ ನೀಡಿದೆ. ಈ ಬಗ್ಗೆ ಯಾವೂಬ್ಬರು ಮಾತನಾಡಲಿಲ್ಲ ಎಂದು ಸ್ವಪಕ್ಷದ ಶಾಸಕರ ಬಗ್ಗೆಯೂ ನಡಹಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಜಗದೀಶ್ ಪಂಪಣ್ಣನವರ, ಪಕ್ಷದ ಮುಖಂಡರಾದ ಗಂಗಾಧರರಾವ್ ನಾಡಗೌಡ ,ಕೆಂಚಪ್ಪ ಬಿರಾದಾರ, ಮಲಕೇಂದ್ರಗೌಡ ಪಾಟೀಲ್, ಶಂಕರಗೌಡ ಶಿವಣಗಿ, ಸಿದ್ದರಾಜ ಹೋಳಿ, ಮಲ್ಲಯ್ಯಾ ಗೂಡಚಿ, ಸೋಮನಗೌಡ ಬಿರಾದಾರ, ಮಲ್ಲು ತಂಗಡಗಿ,ಗುರುನಾಥಗೌಡ ಬಿರಾದಾರ,ಹರೀಶ ನಾಟಿಕಾರ,ಶ್ರೀಶೈಲ್ ದೂಡಮನಿ, ಸಂಗಣ್ಣ ಹತ್ತಿ,ನಾಗೇಶ ಕವಡಿಮಟ್ಟಿ,ಲಕ್ಷ್ಮಣ ಬಿಜ್ಜೂರ,ರಾಜಶೇಖರ ಹೋಳಿ,ಪರಶುರಾಮ ನಾಲತವಾಡ, ಸಂಗಮ್ಮ ದೇವರಳ್ಳಿ,ರಾಜು ಬಳ್ಳೊಳ್ಳಿ, ಗೌರಮ್ಮ ಹುನಗುಂದ,ಮದನಸ್ವಾಮಿ ಹಿರೇಮಠ, ಗಿರೀಶಗೌಡ ಪಾಟೀಲ್, ಚೇತನ ಸಂಗಮ ಸೇರಿದಂತೆ ಪಕ್ಷದ ಮುಖಂಡರು ಭಾಗವಹಿಸಿದ್ದರು.
ಕೂಲಿ ಮಾಡಿ ಸಿಎಂಗೆ ಹಣ ರವಾನೆಗೆ ನಿರ್ಧಾರ:
ಕಾಂಗ್ರೆಸ್‌ನವರು ರೈತರು ಭಿಕ್ಷುಕರೆಂದು ಭಾವಿಸಿದ್ದಾರೆ. ಮುದ್ದೇಬಿಹಾಳ ಎಪಿಎಂಸಿಯಲ್ಲಿ ನಮ್ಮ ಭಾಗದ ರೈತರು ಒಂದು ದಿನ ಕೂಲಿ ಮಾಡಿ ಬಂದ ಹಣವನ್ನು ಸಿಎಂ ಅವರಿಗೆ ಪೋಸ್ಟ್ ಮೂಲಕ ಕಳಿಸಲಿದ್ದಾರೆ.ಯಾವುದೇ ಜನಪ್ರತಿನಿಧಿಗಳು ಮಂತ್ರಿಗಳು ಕ್ಷೇತ್ರದಲ್ಲಿ ಬಂದರೆ ಅವರಿಗೆ ರೈತರು ದುಡಿದ 2500 ಹಣವನ್ನು 10,20 ನೋಟುಗಳ ಹಾರವನ್ನು ಮಾಡಿ ಅವರಿಗೆ ಹಾಕಿ ರೈತರ ಸ್ವಾಭಿಮಾನ ಎಲ್ಲಾ ರೈತರು ತೋರಿಸಬೇಕು ಎಂದರು.
ಶಾಸಕ ಅಪ್ಪಾಜಿ ನಾಡಗೌಡರಿಗೆ ರೈತರ ಮೇಲೇಕೆ ಸಿಟ್ಟು ?
ಮುದ್ದೇಬಿಹಾಳ : ಶಾಸಕ ಅಪ್ಪಾಜಿ ನಾಡಗೌಡರಿಗೆ ರೈತರ ಮೇಲೆ ಎಲ್ಲಿಲ್ಲದ ಸಿಟ್ಟು.ಕಾಲುವೆಗಳ ಮೇಲೆ ರೈತರು ಪಂಪಸೆಟ್ ಹಾಕಿಕೊಳ್ಳುವುದು ಅಕ್ರಮ.ಅದನ್ನು ತಗೆಯಬೇಕು ಎಂದು ಅಧಿವೇಶನದಲ್ಲಿ ಮಾತನಾಡುತ್ತಾರೆ.ಕಾಲುವೆ ಮೇಲೆ ಮೋಟರ್ ಹಚ್ಚಿದರೆ ನಿಮಗೆ ಏನು ತೊಂದರೆ.ನಿಮಗೇನು ತ್ರಾಸ್ ಆಗುತ್ತದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಅಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಪ್ರಶ್ನಿಸಿದರು.
ಚಿಮ್ಮಲಗಿ ಏತ ನೀರಾವರಿ ಕಾಲುವೆ ಮಾಡಿದ್ದಲ್ಲಿ ಮೋಟರ್ ಹಚ್ಚಿದ್ದಾರೆ.ಕೆಬಿಜೆಎನ್‌ಎಲ್ ಸಿಇ ಬಸವರಾಜ ಹಾಗೂ ಹೆಸ್ಕಾಂ ಎಇಇ ಹಂಡಿ ಅವರಿಗೆ ಮಾತನಾಡಿದ್ದೇನೆ.ಕೆನಾಲ್ ಮೇಲೆ ಮೋಟರ್ ಹಚ್ಚಿದರೆ ನಿಮಗೇನು ಕಷ್ಟ, ತ್ರಾಸ್ ಆಯ್ತು ನಿಮಗೆ.ನಿಮ್ಮ ಯೋಗ್ಯತೆಗೆ ಎಎಲ್‌ಬಿಸಿ ಕೆನಾಲ್‌ಗೆ 4 ಟಿಎಂಸಿ ನಿರು ಬಿಡಬೇಕು.ಯಾವತ್ತಾದರೂ ನೀರು ಬಿಡಿಸಿದ್ದೀರಾ ಎಂದು ನಡಹಳ್ಳಿ ಪ್ರಶ್ನಿಸಿದರು.
ಏಳು ಮೋಟರಗಳಲ್ಲಿ ನಾಲ್ಕು ಮೋಟರ್ ಮಾತ್ರ ಚಾಲನೆಯಲ್ಲಿಡುತ್ತಾರೆ.ನಾನು ಶಾಸಕನಿದ್ದ ಅವಧಿಯಲ್ಲಿ ಐದು ಮೋಟರ್ ಚಾಲನೆಯಲ್ಲಿ ಇರಿಸಿದ್ದರು.ಕಮಾಂಡ್ ಏರಿಯಾದಲ್ಲಿ ನೀರಾವರಿ ಮಾಡಿದ್ದರೆ ರೈತರು ಮೋಟರ್ ಹಚ್ಚುವ ಪ್ರಶ್ನೆಯೇ ಇರಲಿಲ್ಲ.ಉಪಕಾಲುವೆ,ಹೊಲಗಾಲುವೆ ಮಾಡದೇ ಇರುವುದರಿಂದ ರೈತರು ಕಾಲುವೆ ಮೇಲೆ ಮೋಟರ್ ಹಚ್ಚುತ್ತಿದ್ದಾರೆ.ಕಾಲುವೆ ಮೇಲ್ಭಾಗ ಬರಗಾಲ ಇದೆ,ಮೋಟರ್ ಹಾಕಿದ್ದಾರೆ.ಟೇಲ್ ಎಂಡ್‌ಗೆ ನೀರು ಕೊಡಬೇಕು ಕೊಡಿ.ಎಂದಾದರೂ ಶಾಸಕ ಅಪ್ಪಾಜಿ ನಾಡಗೌಡರೇ ಆರೇಶಂಕರ ಕೆರೆ ತುಂಬಿಸಿದ್ದೀರಾ ಎಂದು ಪ್ರಶ್ನಿಸಿದರು.
ಒಂದು ವೇಳೆ ಮೋಟರ್ ಮುಟ್ಟಲು ಯಾರೇ ಬಂದರೂ ರೈತರು ಬಾರಕೋಲು ತಗೆದುಕೊಳ್ಳಿ,ಕೈಯ್ಯಲ್ಲಿ ಬಡಿಗೆ ತಗೆದುಕೊಳ್ಳಿ. ಯಾವ ಪೊಲೀಸ ಬರುತ್ತಾನೋ ನೋಡುತ್ತೇನೆ.ಆರ್.ಆರ್ ನಂಬರ ಕೊಟ್ಟಿರುವ ರೈತರ ಮೋಟರ್ ಸಂಪರ್ಕ ಕಡಿತಗೊಳಿಸುವ ಅಧಿಕಾರ ಹೆಸ್ಕಾಂನವರಿಗೆ ಇಲ್ಲ.ರೈತರ ತಂಟೆಗೆ ಬರಬೇಡಿ.ನನ್ನ ಕ್ಷೇತ್ರದ ರೈತರು ಕಾಲುವೆ ಮೇಲೆ ಧಾರಾಳವಾಗಿ ಮೋಟರ್ ಹಚ್ಚಿಕೊಳ್ಳಿ.ಅಲ್ಲಿ ಕಟ್ ಮಾಡಲು ಬಂದರೆ ನನ್ನ ಗಮನಕ್ಕೆ ತನ್ನಿ. ನಾನು ಬರುತ್ತೇನೆ.ಬಿಜೆಪಿ ರೈತ ಮೋರ್ಚಾ ನಿಮ್ಮ ಜೊತೆಗೆ ಇದೆ ಎಂದು ನಡಹಳ್ಳಿ ರೈತರಿಗೆ ಅಭಯ ತುಂಬಿದರು.







