ಮುದ್ದೇಬಿಹಾಳ : ಒಂದೆಡೆ ಮಸೀದಿ,ಇನ್ನೊಂದೆಡೆ ದೇವಸ್ಥಾನ.ಇಂತಹ ಭಾವೈಕ್ಯತೆಯ ನೆಲದಲ್ಲಿ ತಂದೆ-ತಾಯಿಯ ಸ್ಮರಣೆಯೊಂದಿಗೆ ಗಾಂಧೀಜಿ-ಶಾಸ್ತಿçಜಿ ಜಯಂತಿ ಆಚರಿಸುವ ಅಬ್ದುಲರಹೆಮಾನ್ ಬಿದರಕುಂದಿ ಅವರು ನಿಜವಾದ ಸೌಹಾರ್ದತೆಯ ಸಂಕೇತವಾಗಿದ್ದಾರೆ ಎಂದು ಬೆಂಗಳೂರಿನ ಸಾಹಿತಿ ಆರ್.ಜಿ.ಹಳ್ಳಿ ನಾಗರಾಜ್ ಹೇಳಿದರು.
ತಾಲ್ಲೂಕಿನ ಬಿದರಕುಂದಿಯ ಸಂಗಮೇಶ್ವರ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದಿ.ಎನ್.ಎಲ್.ನಾಯ್ಕೋಡಿ ಶಿಕ್ಷಕರ ಪ್ರತಿಷ್ಠಾನದಿಂದ ಆಯೋಜಿಸಿದ್ದ ಗಾಂಧೀಜಿ-ಶಾಸ್ತಿçಜಿ ಜಯಂತಿ ,ದಿ.ಎನ್.ಎಲ್.ನಾಯ್ಕೋಡಿ ಅವರ 37ನೇ ಪುಣ್ಯಸ್ಮರಣೋತ್ಸವ ಹಾಗೂ ಅಪ್ಪನ ಸ್ಮರಣೆಯಲ್ಲಿ ಅವ್ವನ ನೆನಹು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗಾಂಧೀಜಿಯವರoತೆ ಶಾಸ್ತಿಜಿಯವರು ದೇಶಕ್ಕೆ ಹಲವು ಕೊಡುಗೆ ನೀಡಿದ್ದಾರೆ.ದೇಶಕ್ಕೆ ಬಡತನ ಬಂದಾಗ ಅದನ್ನು ಜಾಣತನದಿಂದ ನಿಭಾಯಿಸಿದವರು ಶಾಸ್ತಿಯವರು. ಬುದ್ಧ,ಬಸವ,ಅಂಬೇಡ್ಕರ್ ಇದ್ದಂತ ದೇಶದಲ್ಲಿ ಗಾಂಧಿಜಿಯವರ ಸಂದೇಶಗಳು ಗಾಳಿಪಾಲಾಗುತ್ತಿವೆ.ಭಾರತಕ್ಕೆ ಯುದ್ಧ ಮಾಡಿ ಸ್ವತಂತ್ರö್ಯ ತಂದುಕೊಡಲಿಲ್ಲ.ಗಾoಧೀಜಿ ಶಾಂತಿಯಿOದಲೇ ಸ್ವಾತಂತ್ರö್ಯ ತಂದುಕೊಟ್ಟರು.ವಿಶ್ವ ಯುದ್ಧೋನ್ಮಾದಲ್ಲಿ ನರಳುತ್ತಿದೆ.ಅಮೆರಿಕಾ ಉಕ್ರೇನ್,ಅಮೇರಿಕಾ ಸೇಡನ್ನು ಇಟ್ಟುಕೊಂಡು ಇರಾನ್ ಮೇಲೆ ಯುದ್ಧ ಮಾಡುತ್ತಿದೆ.ಇಸ್ರೇಲ್-ಪ್ಯಾಲೇಸ್ಟೀನ್ ಮಧ್ಯೆ ಯುದ್ಧ ನಡೆದಿವೆ.ಎಲ್ಲೂ ಕೂಡಾ ಶಾಂತಿ ನೆಲೆಸುತ್ತಿಲ್ಲ ಎಂದರು.
ಚಿOತಕ ವಿವೇಕಾನಂದ ಎಚ್.ಕೆ. ಮಾತನಾಡಿ, ಧಾರಾವಾಹಿಗಳನ್ನು ನೋಡುವುದನ್ನು ಮಹಿಳೆಯರು ಕಡಿಮೆ ಮಾಡಬೇಕು.ಇಲ್ಲದಿದ್ದಲ್ಲಿ ನಿಮ್ಮ ಮನಸ್ಥಿತಿ ಕೂಡಾ ಹಾಗೆ ಹೋಗುತ್ತದೆ.ಮಕ್ಕಳು ಹಾಗೆ ಆಗುತ್ತಾರೆ.ಎಳನೀರು,ಮಿಲೆಟ್ ತಿನ್ನಿ ಎಂದು ಯಾವುದೇ ಕ್ರೀಡಾಪಟು,ಸ್ಟಾರ್ ಆಟಗಾರ ಹೇಳುವುದಿಲ್ಲ.ರಮ್ಮಿ,ಡ್ರೀಮ್ ಇಲೆವನ್ ಆಡಿ ಎಂದು ಹೇಳುವ ಆಟಗಾರರು ನಮಗೆ ರೋಲ್ ಮಾಡೆಲ್ಲಾಗಿದ್ದಾರೆ.ಶರಣ ಸಂಸ್ಕೃತಿ ಇದ್ದರೂ ನಾವೆಲ್ಲ ಭ್ರಷ್ಟರಾಗುತ್ತಿದ್ದೇವೆ.ಐಎಎಸ್,ಕೆಎಎಸ್ ಇದ್ದ ಅಧಿಕಾರಿಗಳು ಟಿವಿ ಶೋಗಳಲ್ಲಿ ತಮ್ಮ ಬಡತನದ ಕುರಿತು ಮಾತನಾಡುತ್ತಾರೆ.ಆದರೆ ಈಗ ಇರುವ ಹಂತದಲ್ಲಿ ಲಂಚಕ್ಕೆ ಕೈ ಒಡ್ಡುತ್ತಿರುತ್ತಾರೆ.ಅವರಿಗೆ ಯಾವ ಶಿಕ್ಷಣ ಸಿಕ್ಕಿದೆ ಎಂದು ಹೇಳಿದರು.
ವಿಜಯಪುರ ಅಂಚೆ ಇಲಾಖೆ ಅಧೀಕ್ಷಕ ಮಹಾಂತೇಶ ತೊಗರಿ ಮಾತನಾಡಿ, ತಂದೆ ತಾಯಿಯವರನ್ನು ಪೂರ್ವಜರನ್ನು ಮರೆಯಬಾರದು ಎಂಬುದನ್ನು ಈ ಕಾರ್ಯಕ್ರಮ ತೋರಿಸಿಕೊಟ್ಟಿದೆ.
ಸಂಘಟಕ ಅಬ್ದುಲರಹೆಮಾನ್ ಬಿದರಕುಂದಿ ಮಾತನಾಡಿ,ಅಣ್ಣ ತಮ್ಮ ತಂಗಿ ಬಾಂಧವ್ಯ ಈ ದೇಶದ ನೆಲದಲ್ಲಿ ಇರುವವರಿಗೂ ಯಾರು ಏನೆ ಬೆಂಕಿ ಹಚ್ಚಲಿ,ಉರಿ ಹಚ್ಚಲಿ ಅದನ್ನು ಆರಿಸುವಂತಹ ಇಂತಹ ಕಾರ್ಯಕ್ರಮಗಳು,ಜನರು ಇದ್ದೇ ಇರುತ್ತಾರೆ ಎಂದು ಹೇಳಿದರು.
ಬೆಂಗಳೂರಿನ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ,ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಮಾತನಾಡಿದರು.ದಿವ್ಯ ಸಾನಿಧ್ಯ ವಹಿಸಿದ್ದ ಇಲಕಲ್ ಚಿತ್ತರಗಿ ಸಂಸ್ಥಾನಮಠದ ಗುರು ಮಹಾಂತ ಸ್ವಾಮೀಜಿ,ಗಣ್ಯರಾದ ಚೆನ್ನಬಸಪ್ಪಗೌಡ ಪಾಟೀಲ ಇದ್ದರು.
ನಿವೃತ್ತ ಶಿಕ್ಷಕರಾದ ಇಬ್ರಾಹಿಂ ಬಿಳೇಕುದರಿ,ಮಲ್ಲಿಕಾರ್ಜುನ ಅಂಗಡಿ, ಎ.ಎಚ್.ವಾಲೀಕಾರ, ಅಲ್ತಾಫಹುಸೇನ್ ಮುದ್ದೇಬಿಹಾಳ,ಎಸ್.ಆರ್.ಗೌಡರ,ಆಯ್.ವಿ.ಬಿಜ್ಜೂರ,ಕಮಲಾಬಾಯಿ ಸಂಗಮ,ಶಮೀನಾಬೇಗo ಮುಲ್ಲಾ ಅವರನ್ನು ಸನ್ಮಾನಿಸಲಾಯಿತು.ಅಲ್ಲಾಭಕ್ಷ ಖಾಜಿ ಕುರಾನ್ ಪಠಿಸಿದರು.ಸಂಗಮೇಶ ಶಿವಣಗಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಆರ್.ಜಿ.ಕಿತ್ತೂರ, ಎಂ.ಬಿ.ಗುಡಗುoಟಿ,ಬಿ.ವಿ.ಕೋರಿ ಕಾರ್ಯಕ್ರಮ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಮನೆಯಲ್ಲಿ ಮಹಾಮನೆ ಬಳಗ,ಕಸಾಪ,ಶರಣ ಸಾಹಿತ್ಯ ಪರಿಷತ್,ಬಸವ ಬಳಗ,ಕದಳಿ ವೇದಿಕೆ,ಶಿಕ್ಷಕರ ಬಳಗ ಸೇರಿದಂತೆ ಅಬ್ದುರಹೇಮಾನ್ ಬಿದರಕುಂದಿ ಕುಟುಂಬದವರು ಪಾಲ್ಗೊಂಡಿದ್ದರು.







