ತಾಳಿಕೋಟಿ : ಪಟ್ಟಣದಲ್ಲಿ ಇತ್ತೀಚಿಗೆ ಗ್ಯಾಸ್ ಸಿಲಿಂಡರ್ ಸ್ಫೋಟದಿಂದ ಮೃತಪ್ಪಟ ಕಟ್ಟಡ ಕಾರ್ಮಿಕರಾದ ಶಕೀಲಅಹ್ಮದ್ ಕುಂಬಾರವಾಡಿ ಹಾಗೂ ಬಷಿರಅಹ್ಮದ್ ಕಡದರಾಳ ಅವರ ಕುಟುಂಬಕ್ಕೆ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಆರ್ಥಿಕ ನೆರವು ನೀಡಿದರು.
ಇಬ್ಬರು ಸಂತ್ರಸ್ಥರ ಕುಟುಂಬಕ್ಕೆ ಭೇಟಿ ಮಾಡಿದ ಅಧ್ಯಕ್ಷ ಅಸ್ಕಿ ಅವರು ಸಾಂತ್ವನ ಹೇಳಿ ಒಂದು ಲಕ್ಷ ರೂ. ಧನ ಸಹಾಯ ಮಾಡಿದರು.
ಈ ಸಮಯದಲ್ಲಿ ತಾಳಿಕೋಟಿ ಧಾರ್ಮಿಕ ಮುಖಂಡ ಸೈಯದ ಶಕೀಲಅಹ್ಮದ್ ಖಾಜಿ, ಗ್ಯಾರಂಟಿ ಸಮಿತಿ ಸದಸ್ಯ ಮೋದಿನಸಾಬ ನಗಾರ್ಚಿ ,ಯುವ ಮುಖಂಡರಾದ ಗೌಸಅಹ್ಮದ ನಾಸಿರ್ ,ಸಾಮಾಜಿಕ ಕಾರ್ಯಕರ್ತರಾದ ಶಫೀಕ್ ಇನಾಮದಾರ, ಗೋಪಾಲ ಕಟ್ಟಿಮನಿ ಸೇರಿದಂತೆ ಹಲವರು ಇದ್ದರು.







