ಸಿದ್ಧರಾಮಯ್ಯ ಸರಕಾರದಲ್ಲಿ ನಾಡಗೌಡರು ಮಂತ್ರಿಯಾಗಬೇಕಿತ್ತು-ಸಿಎo ಡಿಕೆಶಿ

ಸಿದ್ಧರಾಮಯ್ಯ ಸರಕಾರದಲ್ಲಿ ನಾಡಗೌಡರು ಮಂತ್ರಿಯಾಗಬೇಕಿತ್ತು-ಸಿಎo ಡಿಕೆಶಿ

ಮುದ್ದೇಬಿಹಾಳ : ಸಿದ್ಧರಾಮಯ್ಯನವರ ಸರ್ಕಾರದಲ್ಲಿಯೇ ಈ ಹಿಂದೆ ನಿಮ್ಮ ಶಾಸಕ ಸಿ.ಎಸ್.ನಾಡಗೌಡರ ಹೆಸರು ಮಂತ್ರಿ ಸ್ಥಾನಕ್ಕೆ ಅಂತಿಮಗೊoಡಿತ್ತು.ಆದರೆ ಕೊನೆ ಗಳಿಗೆಯಲ್ಲಿ ಎಸ್.ಆರ್.ಪಾಟೀಲರ ಹೆಸರು ಘೋಷಣೆಯಾಯಿತು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರ ಬೆಂಬಲಿಗರು ನಾಡಗೌಡರಿಗೆ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಸಿಎಂ ಕಚೇರಿಗೆ ಆಗಮಿಸಿದ್ದ ಪಕ್ಷದ ಕಾರ್ಯಕರ್ತರು,ಬೆಂಬಲಿಗರನ್ನುದ್ದೇಶಿಸಿ ಸಿಎಂ ಡಿಕೆಶಿ ಮಾತನಾಡುವ ವೇಳೆ ಈ ಹೇಳಿಕೆ ನೀಡಿದ್ದಾರೆ.
ನಿಮ್ಮ ಆಸೆ,ವಿಚಾರ ನಾನು ಅರಿತಿದ್ದೇನೆ.ನಾಡಗೌಡರ ಬಗ್ಗೆ ಯಾರು ಏನು ಹೇಳುವ ಅವಶ್ಯಕತೆ ಇಲ್ಲ. ಬಂಗಾರಪ್ಪನವರ ಸಂಪುಟದಲ್ಲಿ ನಾನು ಅವರು ಕೂಡಿಯೇ ಕೆಲಸ ಮಾಡಿದವರು.ಅನೇಕ ಬಾರಿ ನಾಡಗೌಡರು ಪಕ್ಷಕ್ಕೆ ತ್ಯಾಗ ಮಾಡಿದ್ದಾರೆ.ಅವರು ಹಾಗೂ ನಿವೆಲ್ಲ ನಮ್ಮ ಮೇಲೆ ಇಟ್ಟಿರುವ ಅಭಿಮಾನದ ಬಗ್ಗೆ ಅರಿವಿದೆ.ನನಗೂ ಅವರಿಗೂ 40 ವರ್ಷದ ಗೆಳೆತನದಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ.ಅವರು ಆರು ಬಾರಿ ಗೆದ್ದಿದ್ದಾರೆ.ಅವರ ವಿಚಾರದಲ್ಲಿ ವರಿಷ್ಠರಿಗೆ ಏನು ತಿಳಿಸಬೇಕು,ಮಂಡಿಸಬೇಕು ನಾನು ಆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ. ನನ್ನ ಮೇಲೆ ನಾಡಗೌಡರು ಹೇಗೆ ವಿಶ್ವಾಸ ಇಟ್ಟಿದ್ದಾರೆ ಎಂಬುದರ ಅರಿವಿದೆ.ಪಕ್ಷದ ನಿಷ್ಠೆಗೆ ಎಲ್ಲರೂ ಸೇರಿ ದುಡಿದಿದ್ದಕ್ಕೆ ಸರಕಾರ ಬಂದಿದೆ.ರಾಜಕಾರಣ ವ್ಯವಸಾಯ ಇದ್ದಂತೆ.ಹಲವಾರು ವರ್ಷಗಳಿಂದ ದುಡಿಯಬೇಕು.ನಿಮ್ಮ ಕ್ಷೇತ್ರಕ್ಕೆ ನಾನು ಬರುತ್ತೇನೆ.ನಾಡಗೌಡರಿಗೆ ಒಳ್ಳೆಯದಾಗಲಿ ಎಂದು ಸಿಎಂ ಹೇಳಿದರು.

ಶಾಸಕ ನಾಡಗೌಡರಿಗೆ ನ್ಯಾಯ ಸಿಗಬೇಕು-ಬಿ.ಕೆ.ಹರಿಪ್ರಸಾದ್
ಮುದ್ದೇಬಿಹಾಳ : ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರಿಗೆ ಡಿ.ಕೆ.ಶಿವಕುಮಾರ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಮುದ್ದೇಬಿಹಾಳ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿನ ಕೆಪಿಸಿಸಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ಪಕ್ಷದ ವರಿಷ್ಠರ ಮೇಲೆ ಒತ್ತಡ ಹೇರುವ ಕಾರ್ಯ ಮಾಡಿದ್ದಾರೆ.
ಮುದ್ದೇಬಿಹಾಳ ಮತಕ್ಷೇತ್ರದ ಮುದ್ದೇಬಿಹಾಳ,ತಾಳಿಕೋಟಿ ಪುರಸಭೆ ಹಾಗೂ ನಾಲತವಾಡ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಾಗೂ ಜಿಲ್ಲಾ,ತಾಪಂ ಮತಕ್ಷೇತ್ರಗಳ ಮಾಜಿ ಸದಸ್ಯರು,ಪಕ್ಷದ ಮುಖಂಡರು,ಸರ್ಕಾರ ವಿವಿಧ ಇಲಾಖೆಗಳ ನಾಮನಿರ್ದೇಶಿತ ಸದಸ್ಯರು ಬೆಂಗಳೂರಿನ ಕೆಪಿಸಿಸಿ ಕಚೇರಿಗೆ ತೆರಳಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ನಾಡಗೌಡರಿಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಕಾರ್ಯಕರ್ತರು,ಪಕ್ಷದ ಮುಖಂಡರ ಮನವಿ ಸ್ವೀಕರಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ ಮಾತನಾಡಿ, ಪಕ್ಷದಲ್ಲಿ ಹಿರಿಯ ಶಾಸಕರಾಗಿರುವ ನಾಡಗೌಡರಿಗೆ ನ್ಯಾಯ ಸಿಗಬೇಕು ಎಂಬುದು ನನ್ನ ಮನಸ್ಸಲ್ಲಿಯೂ ಇದೆ.ವಿಜಯಪುರದಲ್ಲಿರುವವರು ಎಲ್ಲರೂ ಹಿರಿಯರಿ ಶಾಸಕರಿದ್ದಾರೆ.ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡೋಣ.ನೀವು ಕೊಟ್ಟಿರುವ ಮನವಿಯನ್ನು ಯಥಾವತ್ತಾಗಿ ಪಕ್ಷದ ಹೈಕಮಾಂಡ್‌ನ ವರಿಷ್ಠರಾದ ರಾಹುಲ್ ಗಾಂಧಿ,ಪಕ್ಷದ ರಾಷ್ಟಿಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಗಮನಕ್ಕೆ ತರುವೆ ಎಂದು ಕಾರ್ಯಕರ್ತರಿಗೆ ಭರವಸೆ ನೀಡಿದ್ದಾರೆ. ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ಬಾಲಾಜಿ ಶುರ‍್ಸ್ನ ನಿರ್ದೇಶಕ ರಾಹುಲ್‌ಗೌಡ ಪಾಟೀಲ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಪ್ರಮುಖರಾದ ಎ.ಗಣೇಶ ನಾರಾಯಣಸ್ವಾಮಿ,ರಮೇಶ ಓಸ್ವಾಲ್, ದಾನಪ್ಪ ನಾಗಠಾಣ,ಎಸ್.ಎಸ್.ಹುಲ್ಲೂರ,ಶಿವಶಂಕರಗೌಡ ಹಿರೇಗೌಡರ,ಪ್ರಭುರಾಜ ಕಲ್ಬುರ್ಗಿ,ಶ್ರೀಕಾಂತ ಚಲವಾದಿ,ಸಿಕಂದರ್ ಜಾನ್ವೇಕರ್,ಬಾಪುರಾಯ ದೇಸಾಯಿ,ರಾಜು ಕರಡ್ಡಿ,ರಾಯನಗೌಡ ತಾತರೆಡ್ಡಿ,ಸಂತೋಷ ಚವ್ಹಾಣ(ಹುಲ್ಲೂರ),ಕಾಶೀಂಪಟೇಲ್ ಮೂಕಿಹಾಳ, ವಾಯ್.ಎಚ್.ವಿಜಯಕರ್, ಎಸ್.ಎಸ್.ಮಾಲಗತ್ತಿ, ಎಂ.ಎಚ್.ಹಾಲಣ್ಣವರ,ಯಲ್ಲಪ್ಪ ಚಲವಾದಿ,ಮಹಿಳಾ ಘಟಕದ ಅಧ್ಯಕ್ಷೆ ಅಕ್ಷತಾ ಚಲವಾದಿ, ಮಾಜಿ ಅಧ್ಯಕ್ಷ ಶೋಭಾ ಶೆಳ್ಳಗಿ,ಸರಸ್ವತಿ ಪೀರಾಪೂರ,ನೀಲಮ್ಮ ಬೋರಾವತ್,ಕಮಲಾ ಭಜಂತ್ರಿ,ನೀಲಮ್ಮ ಚಲವಾದಿ ಸೇರಿದಂತೆ 500ಕ್ಕೂ ಹೆಚ್ಚು ಕಾರ್ಯಕರ್ತರು ನಿಯೋಗದಲ್ಲಿ ತೆರಳಿ ನಾಡಗೌಡರಿಗೆ ಮಂತ್ರಿ ಸ್ಥಾನ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರಿದ್ದಾರೆ.

ಮಾಜಿ ಸಿಎಂಗೂ ಭೇಟಿ: ಮಾಜಿ ಸಿಎಂ,ಸಿಡಬ್ಲೂö್ಯಸಿ ಸಮೀತಿ ಸದಸ್ಯರಾದ ಸಿದ್ಧರಾಮಯ್ಯ ಅವರನ್ನು ಮುದ್ದೇಬಿಹಾಳ ಮತಕ್ಷೇತ್ರದ ಪ್ರಮುಖ ಮುಖಂಡರು ಭೇಟಿಯಾಗಿ ಒತ್ತಡ ಹೇರಿದ್ದಾರೆ.ಸಿಎಂ ಡಿ.ಕೆ.ಶಿವಕುಮಾರ ಹಾಗೂ ಮಾಜಿ ಸಿಎಂ ಸಿದ್ಧರಾಮಯ್ಯ ಅವರಿಂದ ನಾಡಗೌಡರಿಗೆ ಮಂತ್ರಿ ಸ್ಥಾನ ಕಲ್ಪಿಸುವ ಕುರಿತು ಸಕಾರಾತ್ಮಕ ಭರವಸೆ ದೊರೆತಿದೆ ಎಂದು ಮುಖಂಡರಾದ ಬಿ.ಕೆ.ಬಿರಾದಾರ,ಎ.ಗಣೇಶ ನಾರಾಯಣಸ್ವಾಮಿ ತಿಳಿಸಿದ್ದಾರೆ.

Latest News

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನ ;                                      ಎರಡು ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೆ ಕ್ರಮ-ಸಚಿವ ಜಾರಕಿಹೊಳಿ

ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಸನ್ಮಾನ ; ಎರಡು ತಿಂಗಳಲ್ಲಿ ಬಾಕಿ ಹಣ ಬಿಡುಗಡೆಗೆ ಕ್ರಮ-ಸಚಿವ ಜಾರಕಿಹೊಳಿ

ವಿಜಯಪುರ : ಗುತ್ತಿಗೆದಾರರ ಬಾಕಿ ಬಿಲ್ ಬಿಡುಗಡೆ ಸೇರಿದಂತೆ ಗುತ್ತಿಗೆದಾರರ ಬೇಡಿಕೆಗಳನ್ನು ಆದ್ಯತೆ ಮೇರೆಗೆ

ಶಿಕ್ಷಣ,ಆರ್ಥಿಕ  ಸಬಲತೆಗೆ ಒತ್ತು ನೀಡಿ:                                       ಸಮಾಜದ ಋಣ ತೀರಿಸುವ ಕಾರ್ಯ ಮಾಡೋಣ-ಎಂ.ಎಸ್.ಬಡದಾನಿ

ಶಿಕ್ಷಣ,ಆರ್ಥಿಕ ಸಬಲತೆಗೆ ಒತ್ತು ನೀಡಿ: ಸಮಾಜದ ಋಣ ತೀರಿಸುವ ಕಾರ್ಯ ಮಾಡೋಣ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಹಿಂದುಳಿದ ಸಮಾಜದಲ್ಲಿ ಜನಿಸಿದ್ದರೂ ಶಿಕ್ಷಣದಲ್ಲಿ ನಮ್ಮವರು ಎಂದಿಗೂ ಹಿಂದೆ ಬಿದ್ದಿಲ್ಲ.ಶಿಕ್ಷಣದೊಂದಿಗೆ ಜನಾಂಗವನ್ನು

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ

ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಲ್ಲೂರು ಗ್ರಾಮದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆಯ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಅಂಜುಮನ್ ಸಂಸ್ಥೆಯಲ್ಲಿ ನನ್ನ ಮಕ್ಕಳು ಕಲಿಯುತ್ತಾರಾ ?-ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಪವಿತ್ರವಾದ ಸಂಸ್ಥೆಯಾಗಿದೆ. ಅಂಜುಮನ್ ಕಮೀಟಿ ಹದಿನೈದು ವರ್ಷಗಳಿಂದ ಅಭಿವೃದ್ಧಿ

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

ಮುದ್ದೇಬಿಹಾಳ : ರಾಜ್ಯಾದ್ಯಂತ ಬರದ ಪರಿಸ್ಥಿತಿ ಇದ್ದರೂ ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿರುವ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಎಂದು ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರಿಗೆ ರಾಜೀನಾಮೆ ನೀಡಿ ಮನೆಗೆ ಹೋಗುವಂತೆ ಆಗ್ರಹಿಸಿದ್ದಾರೆ. ಪಟ್ಟಣದ ಮಾರುತಿ ನಗರದಲ್ಲಿರುವ ಫಾರ್ಮ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಬಿಇಓ ಎಂ.ಎಸ್.ಬಡದಾನಿ ಅಧಿಕಾರ ಸ್ವೀಕಾರ

ಮುದ್ದೇಬಿಹಾಳ : ನೂತನ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ಎಂ.ಎಸ್.ಬಡದಾನಿ ಅವರಿಗೆ ತಾಲ್ಲೂಕಿನ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರು ಸನ್ಮಾನಿಸಿದರು. ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ನಿಕಟಪೂರ್ವ ರಾಜ್ಯ ಉಪಾದ್ಯಕ್ಷ ಗೋಪಾಲ ಹೂಗಾರ, ಸಿಆರ್‌ಪಿ ಜಿ.ಎಚ್.ಚವ್ಹಾಣ,ಸಂತ ಕನಕದಾಸ ಶಾಲೆಯ ಮುಖ್ಯಗುರು ಎಮ್.ಎನ್.ಯರಝರಿ, ಆರ್.ಎಸ್.ವಾಲೀಕಾರ,ಆರ್.ವಾಯ್.ಪಾಟೀಲ, ,ಎಮ್.ಸಿ.ಕಬಾಡೆ, ಶಂಕರ ಭಾರತಿ ಶಾಲೆಯ ಎಮ್.ಎಮ್.ಮಸ್ಕಿ, ಜ್ಞಾನ ಗಂಗೋತ್ರಿ ಶಾಲೆಯ ಎಂ.ಬಿ.ನದಾಫ, ತಂಗಡಗಿಯ ಚರಲಿಂಗೇಶ್ವರ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎಲ್.ಮಾದರ , ಸಂಜೀವ ಜಾಲವಾದಿ ಉಪಸ್ಥಿತರಿದ್ದರು.