ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ.

ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ ಕಾರ್ಯಕ್ರಮ ಉದ್ಘಾಟಿಸುವರು.ಕಾನಿಪ ಧ್ವನಿ ತಾಲ್ಲೂಕು ಅಧ್ಯಕ್ಷ ಶಂಕರ ಹೆಬ್ಬಾಳ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಗದಗ ನಿವೃತ್ತ ಡಿಡಿಪಿಐ ಎಸ್.ಡಿ.ಗಾಂಜಿ,ಉದ್ಯಮಿ ಎ.ಗಣೇಶ ನಾರಾಯಣಸ್ವಾಮಿ,ಮದರಿ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಟ್ರಸ್ಟ್ನ ಅಧ್ಯಕ್ಷ ಯಮನಪ್ಪ ವಡ್ಡರ,ಕಾನಿಪ ಧ್ವನಿ ರಾಜ್ಯ ಕಾರ್ಯಾಧ್ಯಕ್ಷ ಇರ್ಫಾನ್ ಬೀಳಗಿ,ಸಂಘಟನೆಯ ಉತ್ತರ ಕರ್ನಾಟಕ ಉಸ್ತುವಾರಿ ಅಶೋಕ ರಾಠೋಡ,ಕಾನಿಪ ಧ್ವನಿ ಜಿಲ್ಲಾಧ್ಯಕ್ಷ ವಿನಾಯಕ ಸೊಂಡೂರ,ದಿ ನೇಚರ್ ಗ್ರೋಮೋರ್ ಫೌಂಡೇಶನ್ ಅಧ್ಯಕ್ಷೆ ಸಂಗೀತಾ ನಾಡಗೌಡ,ಕದಳಿ ವೇದಿಕೆ ತಾಲ್ಲೂಕು ಅಧ್ಯಕ್ಷೆ ಕಾಶೀಬಾಯಿ ರಾಂಪೂರ,ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅಶೋಕ ಮಣಿ,ಸಿಪಿಐ ಮೊಹ್ಮದ ಫಸಿವುದ್ದೀನ್,ಸರಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಸ್.ಎಸ್.ಅಂಗಡಿ ಆಗಮಿಸುವರು.

ಇದೇ ವೇಳೆ ಪ್ರತಿಭಾವಂತ ಸರಕಾರಿ,ಖಾಸಗಿ,ಅನುದಾನಿತ ಪ್ರೌಢಶಾಲೆ ಎಸ್.ಎಸ್.ಎಲ್.ಸಿ ಟಾಪರ್‌ಗಳನ್ನು ಸನ್ಮಾನಿಸಲಾಗುವುದು ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ವಾಯ್.ದಫೇದಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ತಾಲ್ಲೂಕು ಬರಪೀಡಿತ ಎಂದು ಘೋಷಣೆಗೆ ಸ್ಥಳ ಪರಿಶೀಲನೆಗೆ ಆದೇಶ ಮಾಡಿದ್ದಾರೆ.ಅಧಿಕೃತವಾಗಿ ಬರಪೀಡಿತ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ : ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ನಾಡಗೌಡರ

ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿಕೆ:                                ಬಸವಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ 13.56 ಲಕ್ಷ ರೂ.ಲಾಭ

ಅಧ್ಯಕ್ಷ ಬಿ.ಎಂ.ಇಸ್ಲಾoಪೂರ ಹೇಳಿಕೆ: ಬಸವಜ್ಯೋತಿ ಪತ್ತಿನ ಸಹಕಾರ ಸಂಘಕ್ಕೆ 13.56 ಲಕ್ಷ ರೂ.ಲಾಭ

ಮುದ್ದೇಬಿಹಾಳ : ಸನ್ 2025-26ನೇ ಸಾಲಿನ ವರದಿ ವರ್ಷದಲ್ಲಿ ಸಂಘದ ಆದಾಯ ಒಟ್ಟು 1.04

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ:                              ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಬರ ಪರಿಸ್ಥಿತಿಯಲ್ಲಿ ಸರ್ಕಾರ ನೆರವು ನೀಡಲಿ: ರೈತರ ಸಾಲ,ಬಡ್ಡಿ ಮನ್ನಾಕ್ಕೆ ಆಗ್ರಹ-ಬಿ.ಕೆ.ಬಿರಾದಾರ

ಮುದ್ದೇಬಿಹಾಳ : ಪ್ರಕೃತಿ ವಿಕೋಪ ಹಾಗೂ ತೀವ್ರ ಬರಪೀಡಿತ ಸಂದರ್ಭದಲ್ಲಿ ರೈತರಿಗೆ ನೆರವು ಒದಗಿಸುವ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಪಟ್ಟಣ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಶನಿವಾರ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ ನಡೆಸುತ್ತಿದ್ದ ಹೋರಾಟದ ಭಾಗವಾಗಿ ಆರನೇ ದಿನದ ಪ್ರತಿಭಟನೆಯನ್ನು ಮುದ್ದೇಬಿಹಾಳ ಬಂದ್ ಕರೆ ನೀಡುವ ಮೂಲಕ ಮುಂದುವರೆಸಲಾಗಿತ್ತು.ಬoದ್‌ಗೆ ವ್ಯಾಪಾರಸ್ಥರು,ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮುದ್ದೇಬಿಹಾಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಎಲ್ಲ ಅಂಗಡಿ

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಸ್ವಯಂ ಉದ್ಯೋಗದಿಂದ ಆರ್ಥಿಕ ಸಬಲತೆ – ಶಿವಾನಂದ ಪಿ.

ಮುದ್ದೇಬಿಹಾಳ : ಕಿರು ಹಾಗೂ ಮಧ್ಯಮ ಉದ್ದಿಮೆ ಆರಂಭಿಸಲು ಬಯಸುವವರು ಸಿಡ್ಬಿ ಸಮೃದ್ಧಿ ಯೋಜನೆಯಡಿ 50 ಸಾವಿರ ರೂ.ಗಳಿಂದ ಗರಿಷ್ಠ 5 ಲಕ್ಷ ರೂ.ಗಳವರೆಗೆ ಸಾಲ ಸೌಲಭ್ಯ ಪಡೆಯಬಹುದಾಗಿದೆ.ಫಲಾನುಭವಿಗಳು ಯೋಜನೆಯ ಸದುಪಯೋಗ ಪಡೆದುಕೊಂಡು ಸ್ವಯಂ ಉದ್ಯೋಗದ ಮೂಲಕ ಆರ್ಥಿಕವಾಗಿ ಸಬಲರಾಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಿವಾನಂದ ಪಿ. ಹೇಳಿದರು. ಪಟ್ಟಣದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಶುಕ್ರವಾರ ನಡೆದ ಸಿಡ್ಬಿ ಸಮೃದ್ಧಿ