ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.
ಪೊಲೀಸ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಎಎಸ್ಐ ಎಂ.ಪಿ.ಹೋಕಳೆ, ಪೊಲೀಸ ಸಿಬ್ಬಂದಿ ಬಸವರಾಜ ಸಜ್ಜನ ಹಾಗೂ ತಂಗಡಗಿ ಗ್ರಾಮದ ವಿಕಾಸ ಕಮಲಾಪೂರ ಹಾಗೂ ಬಂಡಿನಾಥ ಕಮಲಾಪೂರ ,ರವಿ ಹಾಲ್ಯಾಳ ಅವರನ್ನು ಸನ್ಮಾನಿಸಲಾಯಿತು.
ಎಎಸ್ಐ ಎಂ.ಪಿ.ಹೋಕಳೆ ಧ್ವಜಾರೋಹಣ ಮಾಡಿದರು.ಪಿಕೆಪಿಎಸ್ ಅಧ್ಯಕ್ಷ ಶ್ರೀಶೈಲ ಮರೋಳ, ಮುಖಂಡರಾದ ರಾಜುಗೌಡ ಕೊಂಗಿ,ಸ್ನೇಹಸಿರಿ ಸೇವಾ ಸಂಘದ ಸಂಚಾಲಕ ಬಸವರಾಜ ನಿಡಗುಂದಿ ಸೇರಿದಂತೆ ಸಂಘದ ಸದಸ್ಯರು, ಪದಾಧಿಕಾರಿಗಳು,ಗ್ರಾಮಸ್ಥರು ಇದ್ದರು.







