ಕುಂಟೋಜಿ ಎಸ್ಡಿಎಂಸಿ ರಚನೆಯಲ್ಲಿ ನಿಯಮ ಉಲ್ಲಂಘನೆ ಆರೋಪ

ಕುಂಟೋಜಿ ಎಸ್ಡಿಎಂಸಿ ರಚನೆಯಲ್ಲಿ ನಿಯಮ ಉಲ್ಲಂಘನೆ ಆರೋಪ

ಮುದ್ದೇಬಿಹಾಳ : ತಾಲ್ಲೂಕಿನ ಕುಂಟೋಜಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ಸಮೀತಿ ರಚನೆಯಲ್ಲಿ ಅಕ್ರಮ ನಡೆದಿದ್ದು ತನಿಖೆ ನಡೆಸಿ ನಿಯಮಾನುಸಾರ ಸಮೀತಿಯನ್ನು ಮರು ರಚಿಸಬೇಕು ಎಂದು ಆಗ್ರಹಿಸಿ ಗ್ರಾಮದ ಯುವಕರು,ಕೆಲ ಮುಖಂಡರು ಬಿಇಓಗೆ ಸೋಮವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ಪಟ್ಟಣದ ಬಿಇಓ ಕಚೇರಿಗೆ ಆಗಮಿಸಿದ್ದ ಗ್ರಾಮದ ಯುವಕರು,ಮುಖಂಡರು ಬಿಇಓ ಬಿ.ಎಸ್.ಸಾವಳಗಿ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಸಲ್ಲಿಸಿದ ಮನವಿಯಲ್ಲಿ, ಕುಂಟೋಜಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್.ಡಿ.ಎಂ.ಸಿ ರಚನೆಯ ಸಂದರ್ಭದಲ್ಲಿ ಸರ್ಕಾರದ ನಿಯಮಾವಳಿ ಹಾಗೂ ಮಾರ್ಗಸೂಚಿಗಳನ್ವಯ ಸರಿಯಾಗಿ ಪಾಲಿಸಿಲ್ಲ ಎಂಬ ಗಂಭೀರ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.ನಿಯಮಾನುಸಾರ ಎಸ್ಡಿಎಂಸಿ ಸಮೀತಿಯಲ್ಲಿ ಸದಸ್ಯರಾಗುವ ಪೋಷಕರ ಮಕ್ಕಳು ಸಂಬoಧಿಸಿದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವುದು ಸೇರಿದಂತೆ ಅಗತ್ಯ ಅರ್ಹತೆಗಳನ್ನ ಪರಿಗಣಿಸಬೇಕಾಗಿರುತ್ತದೆ.ಆದರೆ ಶಾಲೆಯೊಂದಿಗೆ ನೇರ ಸಂಬoಧವಿಲ್ಲದ ಕೆಲವು ವ್ಯಕ್ತಿಗಳು ತಪ್ಪು ಮಾಹಿತಿ ಹಾಗೂ ಪ್ರಭಾವವನ್ನು ಬಳಸಿ ಸಮೀತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹಾಗೂ ಸದಸ್ಯ ಸ್ಥಾನಗಳನ್ನು ಪಡೆದಿದ್ದಾರೆ ಎಂಬ ಆರೋಪಗಳು ಬಂದಿವೆ.ಈ ಕುರಿತು ಪ್ರಶ್ನಿಸಿದ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಕೆಲವು ವ್ಯಕ್ತಿಗಳಿಂದ ಬೆದರಿಕೆ ಹಾಕುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವ ಘಟನೆಗಳು ನಡೆದಿವೆ.’ನಾವು ಶಾಲೆಗೆ ಭೂದಾನ ನೀಡಿದ್ದೇವೆ.ನಮ್ಮನ್ನೇ ಅಧ್ಯಕ್ಷರನ್ನಾಗಿ ಮಾಡದಿದ್ದರೆ ಶಾಲೆಗೆ ಬೀಗ ಹಾಕುತ್ತೇವೆ’ ಎಂಬ ರೀತಿಯ ಬೆದರಿಕೆಯ ಹೇಳಿಕೆಗಳನ್ನು ಸಾರ್ವಜನಿಕವಾಗಿ ನೀಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಕೂಡಲೇ ಅಧಿಕಾರಿಗಳು ಪ್ರಸ್ತುತ ರಚನೆಯಾಗಿರುವ ಎಸ್.ಡಿ.ಎಂ.ಸಿ ಸಮೀತಿಯ ರಚನಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ತನಿಖೆ ನಡೆಸಬೇಕು.ಸಮಿತಿಯಲ್ಲಿರುವ ಪ್ರತಿ ಸದಸ್ಯರ ಅರ್ಹತೆ ಅವರ ಮಕ್ಕಳು ಸದರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುರಿತು ಪರಿಶೀಲನೆ ನಡೆಸಬೇಕು.ನಿಯಮಾವಳಿಗಳನ್ನು ಉಲ್ಲಂಘಿಸಿದ್ದು ಕಂಡು ಬಂದರೆ ಪ್ರಸ್ತುತ ಎಸ್ಡಿಎಂಸಿ ಸಮಿತಿ ವಿಸರ್ಜನೆ ಮಾಡಿ ಹೊಸದಾಗಿ ಸಮೀತಿಯನ್ನು ರಚಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಸಮಯದಲ್ಲಿ ಮಂಜುನಾಥ ಹೆಬ್ಬಾಳ,ವಿಜಯ ಲಿಂಗದಳ್ಳಿ,ಬಸವರಾಜ ಕಾಟಿ,ಅನೀಲ ಪಲ್ಲೇದ,ಬಸ್ಸು ಚವನಬಾವಿ,ಸಚಿನ ಚಿನ್ನಾಪೂರ,ಮಹೇಶ ಹುಗ್ಗಿ,ಶಿವು ಕುರಿ,ಪ್ರವೀಣ ಪಲ್ಲೇದ,ರಾಮು ಗಂಜಿಹಾಳ,ಶಾಹೀಲ್ ತಾಳಿಕೋಟಿ, ಎಂ.ಬಿ.ಸರೂರ, ಎಸ್.ಸಿ.ತಳವಾರ,ಶಿವಪ್ಪ ನಾಯ್ಕೋಡಿ ಮೊದಲಾದವರು ಇದ್ದರು.

ನಮ್ಮ ಪೂರ್ವಜರು ಶಾಲೆಗೆ ಭೂದಾನ ನೀಡಿದ್ದಾರೆ.ಗ್ರಾಮಸ್ಥರ ಹಾಗೂ ಪಾಲಕರ ಅಭಿಪ್ರಾಯ ಪಡೆದುಕೊಂಡೇ ನನ್ನನ್ನು ಅಧ್ಯಕ್ಷನೆಂದು ಘೋಷಿಸಲಾಗಿದೆ.ಆದರೆ ಈಗ ಮನವಿ ಕೊಟ್ಟವರಲ್ಲಿ ಬಹುತೇಕರಿಗೆ ಮದುವೆಯೇ ಆಗಿಲ್ಲ.ನನ್ನ ಮೊಮ್ಮಗ ಸರ್ಕಾರಿ ಶಾಲೆಯಲ್ಲಿಯೇ ಓದುತ್ತಿದ್ದಾನೆ.ನಾನು ಪೋಷಕನಾಗಿದ್ದು ನಿಯಮಾನುಸಾರವೇ ಆಯ್ಕೆ ನಡೆದಿದೆ. —-ಎಂ.ಬಿ.ಬಿರಾದಾರ,ಎಸ್ಡಿಎoಸಿ ಅಧ್ಯಕ್ಷ,ಕುಂಟೋಜಿ

ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪಾಲಕರು ಎಸ್.ಡಿ.ಎಂಸಿಗೆ ಪದಾಧಿಕಾರಿಗಳಾಗಲು ನಿಯಮ ರೂಪಿಸಲಾಗಿದೆ.ಈ ಬಗ್ಗೆ ಗ್ರಾಮಸ್ಥರಿಂದ ಸಲ್ಲಿಕೆಯಾದ ದೂರು ಅರ್ಜಿಯನ್ನು ಗಮನಿಸಲಾಗುವುದು.ಶಾಲೆಗೆ ಭೇಟಿ ನೀಡಿ ಸಮೀತಿ ರಚನೆಯಲ್ಲಿ ಯಾವ ನಿಯಮಗಳನ್ನು ಅನುಸರಿಸಲಾಗಿದೆ ಪರಿಶೀಲನೆ ಮಾಡುತ್ತೇನೆ.ಶಿಕ್ಷಣ ಪ್ರೇಮಿಗಳನ್ನು,ಹಿತೈಷಿಗಳನ್ನು ಶಾಲೆಯ ಗೌರವಧ್ಯಾಕ್ಷರನ್ನಾಗಿ ಆಯ್ಕೆ ಮಾಡಬಹುದಾಗಿದೆ.
—ಆರ್.ಬಿ.ಧಮ್ಮೂರಮಠ, ಬಿ.ಆರ್.ಸಿ

Latest News

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ

ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ:                            ಜಾಣರನ್ನು ಜಾಣರನ್ನಾಗಿ ಮಾಡುವುದು ದೊಡ್ಡದಲ್ಲ-ನಾಡಗೌಡ

ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ: ಜಾಣರನ್ನು ಜಾಣರನ್ನಾಗಿ ಮಾಡುವುದು ದೊಡ್ಡದಲ್ಲ-ನಾಡಗೌಡ

ಮುದ್ದೇಬಿಹಾಳ : ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಇಳಿಮುಖಗೊಳಿಸುವ ಕಾರ್ಯ ಶಿಕ್ಷಕರು ಮಾಡಬೇಕು.ಸರ್ಕಾರ ಜಾರಿಗೊಳಿಸಿರುವ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಸಿದರು. ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಸೆ.6ರಂದು ಮದ್ಯಾಹ್ನ 1 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ಲಿಂಗಸೂರು ತಾಲ್ಲೂಕು ಅಂಕಲಿಮಠದ ವೀರಭದ್ರ ಸ್ವಾಮೀಜಿ ವಹಿಸುವರು.ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ನೂತನ ಕಚೇರಿ ಉದ್ಘಾಟಿಸುವರು.ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ನೂತನ ಗೋಡವನ್ ಹಾಗೂ ವಾಣಿಜ್ಯ ಮಳಿಗೆ ಉದ್ಘಾಟಿಸುವರು.ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.ಸಂಘದ ಉಪಾಧ್ಯಕ್ಷ