ಅವೈಜ್ಞಾನಿಕ ಆದಾಯ ಮಿತಿ ರದ್ದುಗೊಳಿಸಲು ವಿಕಲಚೇತನರ ಆಗ್ರಹ

ಅವೈಜ್ಞಾನಿಕ ಆದಾಯ ಮಿತಿ ರದ್ದುಗೊಳಿಸಲು ವಿಕಲಚೇತನರ ಆಗ್ರಹ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸರಕಾರ ಸಾಮಾಜಿಕ ಭದ್ರತೆ ಯೋಜನೆಗಳ ಅಡಿ ನೀಡಲಾಗುವ ಮಾಶಾಸನಕ್ಕೆ ಸಂಬoಧಿಸಿದoತೆ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸಿರುವ ಕ್ರಮವನ್ನು ಖಂಡಿಸಿ ಪಟ್ಟಣದಲ್ಲಿ ಗುರುವಾರ ವಿಶೇಷಚೇತನರ ನಗರ ವಿವಿದೋದ್ದೇಶ ಹಾಗೂ ಗ್ರಾಮೀಣ /ನಗರ ಪುನರ್ವಸತಿ ಕಾರ್ಯಕರ್ತರ ಸಮಿತಿ. ಹಾಗೂ ತಾಲೂಕಿನ ವಿವಿಧ ಪ್ರಗತಿಪರ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ ಕಂದಾಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆಗಮಿಸಿದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ರ‍್ಯಾಲಿ ಮೂಲಕ ಆಗಮಿಸಿದ ಹೋರಾಟಗಾರರು ತಹಶೀಲ್ದಾರ್ ಕಚೇರಿಯಲ್ಲಿ ಜಮಾಯಿಸಿದರು.

ವಿಕಲಚೇತನರ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಕೆ.ಘಾಟಿ ಮಾತನಾಡಿ, ಆದಾಯ ಮಿತಿಯನ್ನು 32,000/- ಗಳಿಗೆ ನಿಗದಿಪಡಿಸಿರುವುದು ಅವೈಜ್ಞಾನಿಕ ಮತ್ತು ಅತ್ಯಂತ ಹಾಸ್ಯಾಸ್ಪದವಾದ ಸಂಗತಿಯಾಗಿದೆ.ಆದಾಯ ಮಿತಿಯ ನೆಪ ಒಡ್ಡಿ ರಾಜ್ಯಾದ್ಯಂತ ಲಕ್ಷಾಂತರ ವಿಕಲಚೇತನರ ಮಾಶಾಸನ ತಡೆ ಹಿಡಿಯಲಾಗಿದೆ. ಇದರ ಜೊತೆಗೆ ಸಮಾಜದ ಅತ್ಯಂತ ಅಸಹಾಯಕ ವರ್ಗಗಳಾದ ವಯೋವೃದ್ಧರ ವೃದ್ಯಾಪ ವೇತನಗಳು ಹಾಗೂ ವಿಧವಾ ಮಹಿಳೆಯರ ಹಾಗೂ ಮನಸ್ವಿನಿ ವೇತನವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.ಕುಟುಂಬದ ವಾರ್ಷಿಕ ಆದಾಯವನ್ನು 32,000/- ರೂ. ನಿಗದಿ ಮಾಡಿದ ಪ್ರಕಾರ ಅದು ತಿಂಗಳಿಗೆ ಕೇವಲ 2,600/- ರೂ. ಗಳಾಗುತ್ತದೆ. ಇದು ಅತ್ಯಂತ ಹಾಸ್ಯಾಸ್ಪದವಾಗಿದ್ದು ಅದನ್ನು ಕೂಡಲೇ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ವಿಕಲಚೇತನ ಶಿವಪುತ್ರ ಮೋಟಗಿ ಮಾತನಾಡಿ, ಕಳೆದ ಐದು ತಿಂಗಳಿನಿoದ ಆದಾಯ ಮಿತಿಯ ನೆಪವೊಡ್ಡಿ ಮಾಶಾಸನ ತಡೆ ಹಿಡಿದಿರುವುದನ್ನು ಬಾಕಿ ಸಮೇತ ಪಾವತಿಸಬೇಕು.ಸರ್ಕಾರಿ ನೌಕರರು ತಮ್ಮ ವೇತನವನ್ನು ಹೆಚ್ಚಿಸಿಕೊಳ್ಳುತ್ತಾರೆ.ನಮ್ಮದೇತಕ್ಕೆ ನೀಡುತ್ತಿಲ್ಲ.ತಹಶೀಲ್ದಾರ್ ಕಚೇರಿಯಲ್ಲಿ ಮೂಲಸೌರ‍್ಯಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಮನವಿಯಲ್ಲಿ ಬಿ.ಪಿ.ಎಲ್. ರೇಷನ್ ಕಾರ್ಡ್ಗೆ ಅನ್ವಯಿಸುತ್ತಿರುವ 1,20,000/- ಗಳ ವಾರ್ಷಿಕ ಆದಾಯ ಮಿತಿಯನ್ನೇ ವಿಕಲಚೇತನರಿಗೂ ಅನ್ವಯಿಸುವಂತೆ ಕ್ರಮ ಕೈಗೊಳ್ಳಬೇಕು.ಪ್ರಸ್ತುತ ಆದಾಯದ ನೆಪ ಒಡ್ಡಿ ನಿಲ್ಲಿಸಿರುವ ವಿಕಲಚೇತನರು ಮತ್ತು ವಯೋವೃದ್ಧರು ಹಾಗೂ ವಿಧವೆ ಮತ್ತು ಮನಸ್ವಿನಿ ಮಾಶಾಸನವನ್ನು ತಕ್ಷಣವೇ ಪುನಾರಂಭಿಸಬೇಕು.ಶೇ.40 ರಷ್ಟು ಅಂಗವೈಕಲ್ಯತೆಯನ್ನು ಹೊಂದಿರುವ ವಿಶಿಷ್ಟಾಂಗರಿಗೆ ರೂ 3,000 ಗಳನ್ನು ಮತ್ತು ಶೇ.75 ರಷ್ಟು ಅಂಗವೈಕಲ್ಯತೆಯನ್ನು ಹೊಂದಿರುವ ವಿಶಿಷ್ಟಾಂಗರಿಗೆ ರೂ:5,000 ಗಳನ್ನು, ವಯೋವೃದ್ಧರಿಗೆ ರೂ 3000 ವಿಧವೆಯರಿಗೆ ರೂ:3000, ಮನಸ್ವಿನಿಯರಿಗೆ 3000 ಗಳನ್ನು ಜೀವನ ಭತ್ಯೆಯಾಗಿ ನೀಡಬೇಕು ಎಂದು ಮನವಿಯಲ್ಲಿ ಇರಿಸಲಾಗಿದೆ.
ಮನವಿಯನ್ನು ತಹಶೀಲ್ದಾರ್ ಪ್ರಭಾರ ತಹಶಿಲ್ದಾರ್ ಎಂ.ಎಸ್.ಅರಕೇರಿ ಅವರು ಸ್ವೀಕರಿಸಿದರು.ಮೂಲಭೂತ ಸೌಕರ‍್ಯಗಳನ್ನು ಕಲ್ಪಿಸುವ ಸಂಬoಧ ವಿಕಲಚೇತನರ ಒಕ್ಕೂಟದ ಸಭೆಯನ್ನು ಕರೆಯುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಎಂ.ಎo.ಕುoಬಾರ,ರುದ್ರಗೌಡ ಗೌಡರ,ಉಮೇಶ ಜತ್ತಿ,ನಾಗೇಶ ಅಮರಾವತಿ,ಬಾಲಪ್ಪ ಬಿಸಲದಿನ್ನಿ,ಅಡಿವೆಪ್ಪ ಕೊಡಗಾನೂರ,ಎಸ್.ಸಿ.ಮೇಟಿ,ಯಲ್ಲಪ್ಪ ಮಾದರ,ಪವಾಡೆಪ್ಪ ಚಲವಾದಿ,ಡಿ.ಎಚ್.ಮಾದರ,ಸಂಗೀತಾ ಕೋಳೂರ,ಸಂಗನಗೌಡ ಬಗಲಿ,ಬಿ.ಎಸ್.ನಾಯ್ಕೋಡಿ,ಶಶಿಕಾಂತ ಯಾಳಗಿ ಇದ್ದರು.

ವಿಜಯಪುರ ಜಿಲ್ಲೆಯನ್ನು 371 ಜೆ ಅಡಿ ಸೇರ್ಪಡೆಗೂ ಮನವಿ: ವಿಜಯಪುರ ಜಿಲ್ಲೆಯು ಹೈದ್ರಾಬಾದ್ ನಿಜಾಮರ ಆಳ್ವಿಕೆಯಲ್ಲಿ ಒಳಪಟ್ಟಿದ್ದು ಹಿಂದುಳಿದ ಜಿಲ್ಲೆಯಾಗಿದೆ.ಆದರೆ ಈವರೆಗೂ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕೊಟ್ಟಿರುವ 371ಜೆ ಸೌಲಭ್ಯವನ್ನು ವಿಜಯಪುರಕ್ಕೆ ಒದಗಿಸಿಲ್ಲ.ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ವಿಶೇಷ ಮೀಸಲಾತಿ ಸೌಲಭ್ಯದಡಿ ವಿಜಯಪುರಕ್ಕೆ 371ಜೆ ಸ್ಥಾನಮಾನ ಕಲ್ಪಿಸಬೇಕು ಎಂದು ಯುವ ವಕೀಲ ಚಂದ್ರಶೇಖರ ಹೊಸಮನಿ ಒತ್ತಾಯಿಸಿದರು.ಸಂಘ ಸಂಸ್ಥೆಗಳು,ಶಾಸಕರು,ಸoಸದರು,ಮoತ್ರಿಗಳು ಇದಕ್ಕಾಗಿ ಒತ್ತಾಯಿಸುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.ತಹಶೀಲ್ದಾರ್‌ಗೆ ಪ್ರತ್ಯೇಕ ಮನವಿ ಪತ್ರ ಸಲ್ಲಿಸಲಾಯಿತು.

Latest News

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2025-26ನೇ ಸಾಲಿನ ಮಾರ್ಚ ಅಂತ್ಯಕ್ಕೆ ನಮ್ಮ ಸಂಘವು

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ಮುದ್ದೇಬಿಹಾಳ : ರೈತರಿಗೆ ಸಾಲ ನೀಡುವುದು ಅವರನ್ನು ಸಾಲಗಾರರನ್ನಾಗಿ ಮಾಡುವ ಉದ್ದೇಶದಿಂದಲ್ಲ, ಬದಲಾಗಿ ಕೃಷಿ ಚಟುವಟಿಕೆಗಳನ್ನು ಬಲಪಡಿಸಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಎಂದು ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು. ತಾಲ್ಲೂಕಿನ ಹಿರೇಮುರಾಳದ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡವನ್ನು ಅಂಕಲಿಮಠದ ವೀರಭದ್ರ ಸ್ವಾಮೀಜಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರೈತರು ತಮ್ಮ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಸಿದರು. ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ