ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಶನಿವಾರದಿಂದ ಕೈಗೊಂಡಿದ್ದು ಸಂಕಲ್ಪಪೂರ್ವ ಚಾತುರ್ಮಾಸ್ಯ ದೀಕ್ಷೆ ತನ್ನಿಮಿತ್ಯ ಶ್ರೀಗಳನ್ನು ಚಾತುರ್ಮಾಸ್ಯ ಮಹೋತ್ಸವ ಸಮೀತಿ ಹಾಗೂ ಸಮಸ್ತ ವಿಪ್ರ ಸಮಾಜದ ಬಾಂಧವರು ಭವ್ಯ ಮೆರವಣಿಗೆ ಮೂಲಕ ಶಿವ ಚಿದಂಬರ ದೇವಸ್ಥಾನಕ್ಕೆ ಕರೆದೊಯ್ಯರು.

ಪಟ್ಟಣದ ರಾಘವೇಂದ್ರ ಮಠದಿಂದ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಕೂರಿಸಿ ಸಕಲ ವಾದ್ಯವೈಭವಗಳೊಂದಿಗೆ ಮೆರವಣಿಗೆ ನಡೆಸಲಾಯಿತು.ಮೆರವಣಿಗೆಯಲ್ಲಿ ವಿಪ್ರ ಸಮಾಜದ ಭಜನಾ ಸಮೀತಿಯ ಪದಾಧಿಕಾರಿಗಳು ಹಾಗೂ ಡೊಳ್ಳಿನ ಮೇಳ,ಮಹಿಳೆಯರು ವಿಶೇಷ ಮೆರಗು ತಂದಿತು. ಮಹೋತ್ಸವ ಸಮೀತಿಯ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ, ಬಾಪುರಾವ ದೇಸಾಯಿ ಹಡಗಲಿ,ವೇ.ಗುಂಡಭಟ್ ಜೋಷಿ,ವೆಂಕಟೇಶಾಚಾರ್ಯ ಗ್ರಾಮಪುರೋಹಿತ , ಸಮೀತಿಯ ಕಾರ್ಯದರ್ಶಿ ಕೃಷ್ಣಾಜಿ ಕುಲಕರ್ಣಿ, ಸಹ ಕಾರ್ಯದರ್ಶಿ ಪುಟ್ಟು ಕುಲಕರ್ಣಿ,ಪ್ರಶಾಂತ ಸರಾಫ,ವಾಸುದೇವ ಸಾಲವಾಡಗಿ,ಚಂದ್ರಕಾoತ ಕುಲಕರ್ಣಿ, ಪ್ರದೀಪ ಕುಲಕರ್ಣಿ,ಸುಹಾಸ ದೇಶಪಾಂಡೆ,ಶ್ರೀಧರ ದೇಶಪಾಂಡೆ,ಸುರೇಶ ಕುಲಕರ್ಣಿ,ದಿನೇಶ ಕುಲಕರ್ಣಿ,ರಾಘವೇಂದ್ರ ಕುಲಕರ್ಣಿ,ಸುಭಾಷ ಕುಲಕರ್ಣಿ,ಗುರುರಾಜ ಕುಲಕರ್ಣಿ,ಪ್ರಕಾಶ ದೇಶಪಾಂಡೆ ಸೇರಿದಂತೆ ಸಮೀತಿಯ ಸದಸ್ಯರು ಇದ್ದರು.

58 ವರ್ಷಗಳ ಬಳಿಕ ಚಾತುರ್ಮಾಸ್ಯ :
ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ ತೀರ್ಥರು ಚಾತುರ್ಮಾಸ್ಯ ಅನುಷ್ಠಾನ ಕೈಗೊಂಡಿದ್ದರು.ಜು.30,1968 ರಿಂದ ಆ.25,1968ರವರೆಗೆ ಆಗಿನ ಚಾತುರ್ಮಾಸ್ಯ ಕಿಲ್ಲಾಗಲ್ಲಿಯಲ್ಲಿದ್ದ ಖಾದಿ ಗ್ರಾಮೋದ್ಯೋಗ ನೂಲುವ ಕಟ್ಟಡದಲ್ಲಿ ರಾಮರಾವ ಸಾಲವಾಡಗಿ,ಮಾಧವರಾಜ ಸಾಲವಾಡಗಿ,ಬಾಬುರಾವ ಕುಲಕರ್ಣಿ,ರಂಗರಾಜ ದೊಡ್ಡಿಹಾಳ,ವೆಂಕಪ್ಪಚಾರ್ಯ ಪುರಾಣಿಕ,ಶ್ಯಾಮರಾವ ಕುಲಕರ್ಣಿ,ವಿಠ್ಠಲರಾವ ಕುಲಕರ್ಣಿ, ನೀಲಕಂಠರಾವ ಜಹಾಗೀರದಾರ,ನರಸಿಂಹಾಚಾರ್ಯ ಜೋಷಿ ಇವರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತವನ್ನು ಆಚರಿಸಲಾಗಿತ್ತು.

Latest News

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2025-26ನೇ ಸಾಲಿನ ಮಾರ್ಚ ಅಂತ್ಯಕ್ಕೆ ನಮ್ಮ ಸಂಘವು

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ಮುದ್ದೇಬಿಹಾಳ : ರೈತರಿಗೆ ಸಾಲ ನೀಡುವುದು ಅವರನ್ನು ಸಾಲಗಾರರನ್ನಾಗಿ ಮಾಡುವ ಉದ್ದೇಶದಿಂದಲ್ಲ, ಬದಲಾಗಿ ಕೃಷಿ ಚಟುವಟಿಕೆಗಳನ್ನು ಬಲಪಡಿಸಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಎಂದು ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು. ತಾಲ್ಲೂಕಿನ ಹಿರೇಮುರಾಳದ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡವನ್ನು ಅಂಕಲಿಮಠದ ವೀರಭದ್ರ ಸ್ವಾಮೀಜಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರೈತರು ತಮ್ಮ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಸಿದರು. ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ