ದಿ.ಡಿ.ಬಿ.ಮುದೂರಗೆ ನುಡಿನಮನ : ಅಸ್ಪೃಶ್ಯತೆಯ ವಿರುದ್ಧ ಡಿ.ಬಿ.ಮುದೂರ ದಿಟ್ಟ ಹೋರಾಟ -ನಾಡಗೌಡ

ದಿ.ಡಿ.ಬಿ.ಮುದೂರಗೆ ನುಡಿನಮನ : ಅಸ್ಪೃಶ್ಯತೆಯ ವಿರುದ್ಧ ಡಿ.ಬಿ.ಮುದೂರ ದಿಟ್ಟ ಹೋರಾಟ -ನಾಡಗೌಡ

ಮುದ್ದೇಬಿಹಾಳ : ಮತಕ್ಷೇತ್ರದಲ್ಲಿ ಬೇರೂರಿದ್ದ ಅಸ್ಪೃಶ್ಯತೆಯ ವಿರುದ್ಧ ದಿಟ್ಟತನದ ಹೋರಾಟ ಸಂಘಟಿಸಿ ಅದರಲ್ಲಿ ಯಶಸ್ವಿಯಾಗಿದ್ದವರು ದಲಿತ ನಾಯಕ ಡಿ.ಬಿ.ಮುದೂರ ಆಗಿದ್ದರು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಇಲ್ಲಿನ ಟಾಪ್ ಇನ್ ಟೌನ್ ಫಂಕ್ಷನ್ ಹಾಲ್‌ನಲ್ಲಿ ಹಮ್ಮಿಕೊಂಡಿದ್ದ ದಲಿತ ಸಂಘರ್ಷ ಸಮೀತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚು ಓದದಿದ್ದರೂ ಅನುಭವದಿಂದ ವಿದ್ಯೆಯನ್ನು ಸಂಪಾದನೆ ಮಾಡಿದ್ದರು.ಅವರು ಮಾತುಗಳಿಂದ ಆಳವಾದ ವಿಚಾರಧಾರೆಗಳನ್ನು ಹೊಂದಿದ್ದರು ಎಂಬುದು ಅರ್ಥವಾಗುತ್ತದೆ.ಅವರು ಅಂಬೇಡ್ಕರ್ ವಿಚಾರಧಾರೆಗಳನ್ನು ಅಳವಡಿಸಿಕೊಂಡಿದ್ದರು.ಸಮಾನತೆಗೋಸ್ಕರ ಹೋರಾಟ ಮಾಡುವುದು ಜನ್ಮಸಿದ್ಧ ಹಕ್ಕು.ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಆರ್ಥಿಕ,ಶೈಕ್ಷಣಿಕ ಸಾಮಾಜಿಕ ಬದಲಾವಣೆ ತರಬೇಕು ಎಂಬ ದಿಟ್ಟವಾದ ಹೋರಾಟವನ್ನು ಮುದೂರ ತಮ್ಮ ಸಂಗಡಿಗರೊAದಿಗೆ ಸಂಘಟಿಸಿದ್ದರು ಎಂದು ಹೇಳಿದರು.ಸ್ವಂತ ಬದುಕು ಬಿಟ್ಟು ಸಮಾಜಕ್ಕೆ ಹೋರಾಟ ಮಾಡಿದ್ದಾರೆ.ಮುದೂರ ಅವರಂಥವರ ಅಗತ್ಯತೆ ಸಮಾಜಕ್ಕೆ ಇದೆ ಎಂದರು.

ಮಾಜಿ ಶಾಸಕ ರಾಜು ಆಲಗೂರ ಮಾತನಾಡಿ, ಡಿ.ಬಿ.ಮುದೂರ ಕಠೋರ ಸ್ವಭಾವದ ವ್ಯಕ್ತಿ, ಆದರೆ ಒಳ್ಳೆಯ ಮನಸ್ಸುಳ್ಳವರು. ರಾಮಣ್ಣ ಚಲವಾದಿ, ಬಸವರಾಜ ನಾಗರಾಳ, ಡಿ.ಬಿ.ಮುದೂರ ಈ ಭಾಗದಲ್ಲಿ ದಲಿತ ಸಂಘಟನೆ ಕಟ್ಟಿದ್ದಾರೆ. ನೀಲಿ ಶಾಲು ಹಾಕಿಕೊಂಡು ಒಬ್ಬೊಬ್ಬರು ಎಂಎಲ್‌ಎ ಕರೆದು ವಯಕ್ತಿಕ ಪ್ರತಿಷ್ಠೆಯನ್ನಿಟ್ಟುಕೊಂಡು ಸಂಘಟನೆ ಕಟ್ಟಿದರೆ ಸಾಮಾಜಿಕ ಜವಾಬ್ದಾರಿ ಈಡೇರಿಸಲು ಆಗುವುದಿಲ್ಲ.ಒಂದೇ ಬ್ಯಾನರ್‌ದಲ್ಲಿ ತಾಲ್ಲೂಕಿನಲ್ಲಿ ಗಂಭೀರವಾಗಿ ಹೋರಾಟ ನಡೆಸಬೇಕು.ದಲಿತರು ಒಂದಾದರೆ ಮತ್ತೆ ಸಂಘಟನೆಗೆ ಬಲಿಷ್ಠತೆ ಬರುತ್ತದೆ ಎಂದರು.

ಹೋರಾಟಗಾರ ರಮೇಶ ಆಸಂಗಿ , ದಲಿತರ ಹಕ್ಕುಗಳಿಗೆ ಧಕ್ಕೆಯಾದಾಗ ಗಟ್ಟಿ ಧ್ವನಿ ಎತ್ತಿದ್ದು ಡಿ.ಬಿ.ಮುದೂರ,ಗೆಜ್ಜೆಪುಜೆ,ದೇವದಾಸಿ ಪದ್ಧತಿ,ಬೆತ್ತಲೆ ಸೇವೆಯ ವಿರುದ್ಧ ಹೋರಾಟ ಮಾಡಿ ಸಾಮಾಜಿಕ ನ್ಯಾಯ ಒದಗಿಸಿದ್ದಾರೆ.ಸಂವಿಧಾನದ ಮೂಲ ಆಶಯವನ್ನು ಎತ್ತಿ ಹಿಡಿಯುವ ಕೆಲಸ ಅವರು ಮಾಡಿದ್ದಾರೆ ಎಂದರು.

ಮುಖಂಡ ಅಭಿಷೇಕ ಚಕ್ರವರ್ತಿ ಮಾತನಾಡಿ, ಮೂಢನಂಬಿಕೆಗಳ ವಿರುದ್ದ ಡಿ.ಬಿ.ಮುದೂರ ಹೋರಾಟ ಮಾಡಿದರು.ದೇವಿಗೆ ಕೋಣಗಳ ಬಲಿ,ಬೆತ್ತಲೆ ಸೇವೆ,ಬಾವಿ ನೀರು ಮುಟ್ಟದಿರುವುದು ಇಂತಹ ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಟ ಮಾಡಿದವರು ಡಿ.ಬಿ.ಮುದೂರ ಅವರಾಗಿದ್ದಾರೆ ಎಂದರು. ಸಂಸದ ರಮೇಶ ಜಿಗಜಿಣಗಿ,ಬಾಗಲಕೋಟದ ಧಮ್ಮಪಾಲ ಬಂತೇಜಿ,ತಹಶೀಲ್ದಾರ್ ಕೀರ್ತಿ ಚಾಲಕ್, ಸಮಾಜ ಕಲ್ಯಾಣ ನಿರ್ದೇಶಕಿ ಬಿ.ಜಿ.ಮಠ, ಸೋಮನಗೌಡ ಪಾಟೀಲ ನಡಹಳ್ಳಿ, ವಕೀಲ ಎಂ.ಎಚ್.ಹಾಲಣ್ಣವರ,ಪ್ರಮುಖರಾದ ಮುತ್ತಪ್ಪ ಚಮಲಾಪೂರ,ಕೆ.ಬಿ.ದೊಡಮನಿ, ತಿಪ್ಪಣ್ಣ ದೊಡಮನಿ, ಆರ್.ಎನ್.ಹಾದಿಮನಿ, ಎಸ್.ಎಚ್.ಲೊಟಗೇರಿ,ದೇವೇಂದ್ರ ಹಾದಿಮನಿ, ಅರವಿಂದ ಸಾಲವಾಡಗಿ,ಶಾಂತಮ್ಮ ಡಿ. ಮುದೂರ, ರೇವಣೆಪ್ಪ ಹರಿಜನ,ಬಲಭೀಮ ನಾಯ್ಕಮಕ್ಕಳ,ಅಶೋಕ ಇರಕಲ್, ಯಮನಪ್ಪ ಹಂಗರಗಿ, ಮಲ್ಲಪ್ಪ ಬಸರಕೋಡ,ನಾಗೇಶ ಭಜಂತ್ರಿ, ಚನ್ನಪ್ಪ ವಿಜಯಕರ್,ಪರಶುರಾಮ ದಿಂಡವಾರ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ತಿಪ್ಪಣ್ಣ ಗೋನಾಳ, ಹರೀಶ ನಾಟೀಕಾರ, ಪ್ರಕಾಶ ಚಲವಾದಿ, ದೇವರಾಜ ಹಂಗರಗಿ ಸೇರಿದಂತೆ ಹಲವು ಮುಖಂಡರು ಇದ್ದರು.

ದಲಿತ ಹೋರಾಟಗಾರ ದಿ.ಡಿ.ಬಿ.ಮುದೂರ ಅವರು ನೇರ ನುಡಿ ನಿಷ್ಠುರ ನಾಯಕ.ತಮ್ಮ ಸ್ವಂತಕ್ಕಾಗಿ ಏನೂ ಮಾಡಿಕೊಂಡವರಲ್ಲ.ಅನ್ಯಾಯವಾದಾಗ ದಿಟ್ಟ ಧ್ವನಿ ಎತ್ತಿದವರು.ಸಮಾಜಕ್ಕೆ ಸರ್ವಸ್ವವನ್ನು ಅರ್ಪಿಸಿದ್ದಾರೆ.ಅವರ ಮಗಳ ನಿಶ್ಚಿತಾರ್ಥ ಆಗಿದ್ದು ಆಕೆಯ ವಿವಾಹಕ್ಕೆ ಕುಟುಂಬದವರು ಮಾಡಿರುವ ಯಾದಿಯನ್ನು ನಮ್ಮ ಶಿವಾಚಾರ್ಯ ಸಂಸ್ಥೆಯಿAದ ಭರಿಸುವ ಕಾರ್ಯ ಮಾಡುತ್ತೇವೆ.
—ರವಿ ನಾಯಕ,ಆಡಳಿತಾಧಿಕಾರಿ,ಎಸ್.ಎಸ್.ಶಿವಾಚಾರ್ಯ ವಿದ್ಯಾಸಂಸ್ಥೆ,ಶಿರೋಳ-ಮುದ್ದೇಬಿಹಾಳ

Latest News

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ:                                           ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ದಿ.ದೇಶಮುಖ ದಂಪತಿ ಪುಣ್ಯಸ್ಮರಣೆ: ಸಕ್ರಿಯ ರಾಜಕಾರಣಕ್ಕೆ ದೇಶಮುಖ ಮನೆತನದ ಕುಡಿ ಮರಳಲಿ-ಕತ್ತಿ

ಮುದ್ದೇಬಿಹಾಳ : ಕಲುಷಿತಗೊಂಡಿರುವ ರಾಜಕೀಯ ಕ್ಷೇತ್ರದ ಶುದ್ಧೀಕರಣಕ್ಕೆ ದೇಶಮುಖ ಮನೆತನದಂತ ಕುಟುಂಬದವರು ಸಕ್ರಿಯ ರಾಜಕಾರಣದಲ್ಲಿರಬೇಕು

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ನನ್ನ ಜನ ರಾಜೀನಾಮೆ ಕೊಡು ಎಂದರೆ ಕೊಡುತ್ತೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ತಮಗೆ ಷಡ್ಯಂತ್ರದಿಂದ ಸಚಿವ ಸ್ಥಾನ ಕೈ ತಪ್ಪಿದ್ದು ಇದಕ್ಕಾಗಿ ತಮ್ಮ ಸ್ಥಾನಕ್ಕೆ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ:                            ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಪತ್ರಕರ್ತ ಗುಲಾಂ ದಫೇದಾರ ನಾಮಪತ್ರ ಸಲ್ಲಿಕೆ: ಅಂಜುಮನ್ ಗತವೈಭವ ಮರುಸ್ಥಾಪಿಸಲು ಯತ್ನ-ಅಬ್ದುಲಗಫೂರ್ ಮಕಾನದಾರ

ಮುದ್ದೇಬಿಹಾಳ : ಸ್ವಾತಂತ್ರ ಪೂರ್ವದಲ್ಲಿ ಹುಟ್ಟಿರುವ ಅಂಜುಮನ್ ಇಸ್ಲಾಂ ಕಮೀಟಿಯ ಆರಂಭದಲ್ಲಿದ್ದ ವೈಭವವನ್ನು ಮರಳಿ

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ:      ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಜು.26 ರಂದು ಪತ್ರಿಕಾ ಹಾಗೂ ವೈದ್ಯರ ದಿನಾಚರಣೆ: ನಿವೃತ್ತ ನೌಕರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ

ಮುದ್ದೇಬಿಹಾಳ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ(ರಿ) ಹಾಗೂ ಮದರಿಯ ಚೈತ್ರಾ ಆರೋಗ್ಯ ಮತ್ತು ಶಿಕ್ಷಣ ಸೇವಾ ಟ್ರಸ್ಟ್(ರಿ) ಸಹಯೋಗದಲ್ಲಿ ಪತ್ರಿಕಾ ಹಾಗೂ ವೈದ್ಯರ ದಿನಾಚರಣೆಯ ಅಂಗವಾಗಿ ಜು.26 ರಂದು ಬೆಳಗ್ಗೆ 10.00ಕ್ಕೆ ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಿವೃತ್ತ ನೌಕರರ ಸಂಘದ ಸದಸ್ಯರಿಗೆ ಆರೋಗ್ಯ ಉಚಿತ ತಪಾಸಣೆ, ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗಿದೆ. ಹುನಗುಂದ-ಮುದ್ದೇಬಿಹಾಳದ ಗಚ್ಚಿನಮಠ-ಹೊಸಮಠದ ಅಮರೇಶ್ವರ ದೇವರು ದಿವ್ಯ ಸಾನಿಧ್ಯ ವಹಿಸುವರು.ಕಾನಿಪ ಧ್ವನಿ ರಾಜ್ಯ ಅಧ್ಯಕ್ಷ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ:                 ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

650 ಅಂಕ ಪಡೆದ ಮಾನಸಾ ಎಚ್. ಪ್ರಥಮ: ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿಗೆ 190 ಮೆಡಿಕಲ್ ಸೀಟು ನಿರೀಕ್ಷೆ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜು ಹಾಗೂ ನೀಟ್ ಅಕಾಡೆಮಿಯ 2026ರ ನೀಟ್ ಫಲಿತಾಂಶ ಪ್ರಕಟಗೊಂಡಿದ್ದು 12 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದುಕೊಂಡಿದ್ದಾರೆ. ನೀಟ್ ಫಲಿತಾಂಶದ ಕುರಿತು ಮಾಹಿತಿ ನೀಡಿರುವ ಸಂಸ್ಥೆಯ ಚೇರಮನ್ ಎಂ.ಎಸ್.ಪಾಟೀಲ್, ಆಡಳಿತಾಧಿಕಾರಿ ಅಮೀತಗೌಡ ಪಾಟೀಲ ಅವರು, ಈ ಬಾರಿ 190ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಮೆಡಿಕಲ್ ಸೀಟು ದೊರೆಯುವ ನಿರೀಕ್ಷೆ ಇದೆ ಎಂದು ತಿಳಿಸಿದರು.ನೀಟ್‌ನಲ್ಲಿ 500ಕ್ಕೂ ಅಧಿಕ 140 ವಿದ್ಯಾರ್ಥಿಗಳು,