ಮುದ್ದೇಬಿಹಾಳ : ವಸತಿ ನಿಲಯದ ವಿದ್ಯಾರ್ಥಿನಿಗೆ ತಾಳಿ ಕಟ್ಟಿದ ಪ್ರಕರಣದ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧನದ ಭೀತಿಯಲ್ಲಿ ಪೆಟ್ರೋಲ್ ಕುಡಿದು ಅಸ್ವಸ್ಥಗೊಂಡು, ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಆರೋಪಿ ಮೌನೇಶ ಮಾದರ ಗುಣಮುಖನಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಸೇವಾ ನ್ಯೂನತೆ ಆಪಾದನೆ ಮೇರೆಗೆ ಘಾಳಪೂಜಿ ಸರ್ಕಾರಿ ವಸತಿ ನಿಲಯದ ವಾರ್ಡನ್ ಶಿವಲಿಂಗಪ್ಪ ಕಾಂಬಳೆ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಹಾಗೂ ವಸತಿ ಶಾಲೆಯ ಪ್ರಾಚಾರ್ಯರಿಗೂ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಪುಂಡಲೀಕ ಮಾನವರ ತಿಳಿಸಿದ್ದಾರೆ.
ಮತ್ತೆ ಇಬ್ಬರ ಬಂಧನ:
ನಾಲತವಾಡ ಪಟ್ಟಣದಲ್ಲಿ ಚುಡಾಯಿಸಿ, ಕಿರುಕುಳ ನೀಡಿದ್ದ ಯುವಕರ ವಿರುದ್ಧ ಪೋಕ್ಸೊ ದೂರು ದಾಖಲಿಸಿ, ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಮಸಬಿನಾಳ ಮತ್ತು ಸಂಗಮೇಶ ಮಾದರ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜಯ ತಿಪರೆಡ್ಡಿ ತಿಳಿಸಿದ್ದಾರೆ.
ಅಪ್ರಾಪ್ತೆಗೆ ತಾಳಿಕಟ್ಟಿ ಬಂಧಿತನಾಗಿರುವ ಮೌನೇಶ ಮಾದರ ನಾಲತವಾಡದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣದಲ್ಲೂ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತೆಗೆ ತಾಳಿಕಟ್ಟಿದ ಆರೋಪಿ ಬಂಧನ: ವಸತಿ ಶಾಲೆ ವಾರ್ಡನ್ ಅಮಾನತು
ಅಪ್ರಾಪ್ತೆಗೆ ತಾಳಿಕಟ್ಟಿದ ಆರೋಪಿ ಬಂಧನ: ವಸತಿ ಶಾಲೆ ವಾರ್ಡನ್ ಅಮಾನತು
Latest News
ಎಐ ಚಾಲಿತ ಟ್ರಾಫಿಕ್ ಸಿಗ್ನಲ್ ಅಳವಡಿಕೆಗೆ ಚಾಲನೆ; ಆರಕ್ಷಕರು ಸಮಾಜದ ರಕ್ಷಕರು,ಅವರನ್ನು ಬಳಸಿಕೊಳ್ಳಬಾರದು-ನಾಡಗೌಡ
ಮುದ್ದೇಬಿಹಾಳ : ಹೆಚ್ಚುತ್ತಿರುವ ಜನಸಂಚಾರ ದಟ್ಟಣೆ ನಿಯಂತ್ರಣ ಹಾಗೂ ಪೊಲೀಸ್ ಇಲಾಖೆ ಮತ್ತಷ್ಟು ದಕ್ಷತೆಯಿಂದ
ಗ್ರಾಮೀಣ ಭಾಗದ ಯುವಕರ ಉದ್ಯೋಗಾವಕಾಶಕ್ಕಾಗಿ ಹೊಸ ಕಾಲೇಜು
ಮುದ್ದೇಬಿಹಾಳ : ಪಾರ್ವತಿಬಾಯಿ ಭೂರಮಲ್ ಓಸ್ವಾಲ್ ಕುಟುಂಬದವರು ಪರಿಶ್ರಮದಿಂದ ಗಳಿಸಿದ ಆಸ್ತಿಯನ್ನು ದಾನ ಮಾಡುವ
ಮುದ್ದೇಬಿಹಾಳಕ್ಕೆ ಸರ್ಕಾರಿ ಐಟಿಐ ತಂದ ಶಾಸಕರು: ಸೆ.3 ರಂದು 8.63 ಕೋಟಿ ರೂ ಕಾಮಗಾರಿಗೆ ಚಾಲನೆ
ಮುದ್ದೇಬಿಹಾಳ : ತಾಲ್ಲೂಕಿನ ನಾಲತವಾಡ ಪಟ್ಟಣದಲ್ಲಿದ್ದ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ ಬಿಟ್ಟರೆ ಮತ್ತೊಂದು
ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’
ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ
ಶಿಕ್ಷಣ,ಆರ್ಥಿಕ ಸಬಲತೆಗೆ ಒತ್ತು ನೀಡಿ: ಸಮಾಜದ ಋಣ ತೀರಿಸುವ ಕಾರ್ಯ ಮಾಡೋಣ-ಎಂ.ಎಸ್.ಬಡದಾನಿ
ಮುದ್ದೇಬಿಹಾಳ : ಹಿಂದುಳಿದ ಸಮಾಜದಲ್ಲಿ ಜನಿಸಿದ್ದರೂ ಶಿಕ್ಷಣದಲ್ಲಿ ನಮ್ಮವರು ಎಂದಿಗೂ ಹಿಂದೆ ಬಿದ್ದಿಲ್ಲ.ಶಿಕ್ಷಣದೊಂದಿಗೆ ಜನಾಂಗವನ್ನು ಆರ್ಥಿಕ ಸಬಲತೆಯತ್ತ ಕೊಂಡೊಯ್ಯುವ ಕಾರ್ಯ ಸಮಾಜದ ಬಾಂಧವರು ಮಾಡಬೇಕು ಎಂದು ಮುದ್ದೇಬಿಹಾಳ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಹೇಳಿದರು. ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ದೇವಾಂಗ ಸಮಾಜ ಹಾಗೂ ದೇವಾಂಗ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದುಳಿದ ವರ್ಗದವರ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡಿರುವ ನನಗೆ ನಮ್ಮ ಜನಾಂಗದವರು
ಹುಲ್ಲೂರ ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ವೀರಾಗ್ರಣಿ ಪ್ರಶಸ್ತಿ
ಮುದ್ದೇಬಿಹಾಳ : ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಹುಲ್ಲೂರು ಗ್ರಾಮದ ಎಸ್.ಎನ್.ಡಿ. ನ್ಯಾಷನಲ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಸತತ ಎರಡನೇ ಬಾರಿಗೆ ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ. ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಾಲಕರ ವಿಭಾಗದಲ್ಲಿ ಕಬಡ್ಡಿ ಪ್ರಥಮ, ವಾಲಿಬಾಲ್ ಪ್ರಥಮ, ರಿಲೇ ಪ್ರಥಮ, ಥ್ರೋಬಾಲ್ ಪ್ರಥಮ, ಖೋ-ಖೋ ದ್ವಿತೀಯ, 400 ಮೀ. ಓಟದಲ್ಲಿ ಪ್ರಥಮ, 600








