ಮುದ್ದೇಬಿಹಾಳ ಕ್ಷೇತ್ರದಿಂದ ನಾಲ್ಕು ಸಾವಿರ ಜನ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ ಕ್ಷೇತ್ರದಿಂದ ನಾಲ್ಕು ಸಾವಿರ ಜನ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ನನಗೆ ಬಿ.ಎಸ್.ಯಡಿಯೂರಪ್ಪನವರು ರಾಜಕೀಯ ಗುರುಗಳು.ರಾಜಕೀಯ ಭವಿಷ್ಯ ಕಲ್ಪಿಸಿದ ಮಾರ್ಗದರ್ಶಕರಾಗಿದ್ದಾರೆ.ಮೇ.9ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಬಿಎಸ್‌ವೈ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಮತಕ್ಷೇತ್ರದಿಂದ ನಾಲ್ಕು ಸಾವಿರ ಜನ ಕಾರ್ಯಕರ್ತರು,ಅಭಿಮಾನಿಗಳು ತೆರಳಲಿದ್ದಾರೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.

ಪಟ್ಟಣದ ದಾಸೋಹ ನಿಲಯದಲ್ಲಿರುವ ಮಂಡಲ ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಸಾಮಾಜಿಕ ಕ್ಷೇತ್ರದಲ್ಲಿ 50 ವರ್ಷಗಳು ಪೂರ್ಣಗೊಳ್ಳುತ್ತಿರುವ ಈ ಸಮಯದಲ್ಲಿ ಅವರನ್ನು ಅಭಿನಂದಿಸುವುದು ನಮ್ಮೆಲ್ಲ ಕಾರ್ಯಕರ್ತರು,ಅಭಿಮಾನಿಗಳ ಕರ್ತವ್ಯವಾಗಿದೆ.ಐವತ್ತು ವರ್ಷದ ರಾಜಕೀಯ ಜೀವನದಲ್ಲಿ 45 ವರ್ಷ ಸಂಘರ್ಷದ ಬದುಕು ಅವರದ್ದಾಗಿದೆ.ಅವರು ಸಿಎಂ ಆಗಿದ್ದ ವೇಳೆ ಜಾರಿಗೊಳಿಸಿದ ಭಾಗ್ಯಲಕ್ಷಿö್ಮÃ ಯೋಜನೆ ಇಂದು ಲಕ್ಷಾಂತರ ಹೆಣ್ಣುಮಕ್ಕಳಿಗೆ ಆಸರೆಯಾಗಿದೆ.ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲಸೌಲಭ್ಯ,ನೇಕಾರರಿಗೆ ಸಾಲ ಮನ್ನಾ ,ವಿದ್ಯುತ್ ಸಬ್ಸಿಡಿ,ಕಿಸಾನ್ ಸಮ್ಮಾನ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದು ಹೇಳಿದರು.

ವಿಜಯಪುರ ಜಿಲ್ಲೆಯ ಚಿಮ್ಮಲಗಿ ಏತನೀರಾವರಿ,ಮುಳವಾಡ ಏತನೀರಾವರಿಗೆ 1800 ಕೋಟಿ ರೂ.ಅನುದಾನ ನೀಡಿದ್ದರು.ಪ್ರವಾಹದ ಸಮಯದಲ್ಲಿ 169 ಗ್ರಾಮಗಳಿಗೆ ಪುನರ್ವಸತಿ ಕಲ್ಪಿಸಿದ್ದರು.124 ಕೆರೆಗಳನ್ನು ತುಂಬಿಸುವ ಕಾರ್ಯ ಮಾಡಿದ್ದರು.ಮುಸ್ಲಿಂ ಸಮಾಜಕ್ಕೆ ಹಜ್ ಭವನ ನಿರ್ಮಾಣ,ಹಜ್ ಯಾತ್ರೆಗೆ ಅನುದಾನ ಕೊಟ್ಟವರು ಯಡಿಯೂರಪ್ಪ ಎಂದು ತಿಳಿಸಿದರು.
ವಿಜಯಪುರ ಜಿಲ್ಲೆಯಿಂದ 20 ಸಾವಿರ ಜನ ಚಿತ್ರದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ತೆರಳಲಿದ್ದು ಕಾರ್ಯಕರ್ತರು,ಅಭಿಮಾನಿಗಳು ಸ್ವಯಂಪ್ರೇರಣೆಯಿAದ ಅವರ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಚಿತ್ರದುರ್ಗದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯದೆಲ್ಲೆಡೆ ಅವರ ಅಭಿಮಾನಿಗಳು,ಕಾರ್ಯಕರ್ತರು ಅಂದಾಜು 15 ಲಕ್ಷ ಜನ ಸಮಾವೇಶಗೊಳ್ಳಲಿದ್ದಾರೆ.ಯಡಿಯೂರಪ್ಪ ಎಂದರೆ ಬಿಜೆಪಿ,ಯಡಿಯೂರಪ್ಪ ಇಲ್ಲದೇ ಬಿಜೆಪಿ ಇಲ್ಲ ಎನ್ನುವಷ್ಟರ ಮಟ್ಟಿಗೆ ಅವರ ಸೇವೆ ಪಕ್ಷಕ್ಕೆ ಇದೆ ಎಂದು ಹೇಳಿದರು.

ಪಕ್ಷದ ಮುಖಂಡರಾದ ಎಂ.ಎಸ್.ಪಾಟೀಲ, ಪ್ರಭು ಕಡಿ,ಮಲಕೇಂದ್ರಗೌಡ ಪಾಟೀಲ,ಚೆನ್ನಬಸ್ಸು ಚೆನ್ನಿಗಾವಿ,ಗಿರೀಶಗೌಡ ಪಾಟೀಲ,ಮದನಸ್ವಾಮಿ ಹಿರೇಮಠ,ಡಾ.ವೀರೇಶ ಪಾಟೀಲ,ಡಾ.ಸಿ.ಕೆ.ಶಿವಯೋಗಿಮಠ,ಕೆಂಚಪ್ಪ ಬಿರಾದಾರ,ಎಂ.ಆರ್.ಪಾಟೀಲ ವಕೀಲರು,ಮುತ್ತಣ್ಣ ಹುಗ್ಗಿ, ಮಲ್ಲಯ್ಯ ಬಿರಾದಾರ,ಪ್ರೇಮಸಿಂಗ ಚವ್ಹಾಣ,ಸೋಮನಗೌಡ ಬಿರಾದಾರ,ಮಹಾಂತಗೌಡ ಗಂಗನಗೌಡರ ಮೊದಲಾದವರು ಇದ್ದರು.


2008,2013ರಲ್ಲಿ ಟಿಕೇಟ್ ಕೊಡುವುದಾಗಿ ಯಡಿಯೂರಪ್ಪನವರು ನನಗೆ ಕರೆದಿದ್ದರು.ಆದರೆ ಅಂದಿನ ರಾಜಕೀಯ ಸ್ಥಿತ್ಯಂತರಗಳ ಮಧ್ಯೆ ನಾನು ಹೋಗಿರಲಿಲ್ಲ.2018ರಲ್ಲಿ ಮತ್ತೆ ಕರೆದು ಟಿಕೇಟ್ ಕೊಟ್ಟರು.ಆಗ ಗೆಲುವು ಸಾಧಿಸಿದಾಗ ನನಗೆ ನಿಗಮ ಮಂಡಳಿ ಸ್ಥಾನ ನೀಡಿ ಪ್ರೋತ್ಸಾಹಿಸಿದ್ದರು.2023ರ ಚುನಾವಣೆಯಲ್ಲಿ ಸೋತಿದ್ದರೂ ನನಗೆ ಪಕ್ಷದ ರೈತ ಮೋರ್ಚಾ ಸ್ಥಾನಮಾನ ಕೊಟ್ಟು ಬೆಳೆಸಿದ್ದಾರೆ.ನಾನು ಅವರ ಶಿಷ್ಯ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ.
–ಎ.ಎಸ್.ಪಾಟೀಲ ನಡಹಳ್ಳಿ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ

Latest News

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ:      ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ವಿದ್ಯಾಸ್ಪೂರ್ತಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ: ಸ್ವಾತಂತ್ರ್ಯದ ಉಳಿವಿಗೆ ಶ್ರಮಿಸೋಣ-ರಾಜೇಶ್ವರಿ ಪಾಟೀಲ್

ಮುದ್ದೇಬಿಹಾಳ : ಲಕ್ಷಾಂತರ ಜನ ಹಿರಿಯರು,ಯುವಕರ ತ್ಯಾಗ,ಬಲಿದಾನದಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತಿದ್ದು ಅದನ್ನು

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ತಂಗಡಗಿಯಲ್ಲಿ ಧ್ವಜಾರೋಹಣ: ಪೊಲೀಸರಿಗೆ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ತಂಗಡಗಿ ಗ್ರಾಮದ ಸ್ನೇಹಸಿರಿ ಸೇವಾ ಸಂಘದಿಂದ 80ನೇ ಸ್ವಾತಂತ್ರ್ಯೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳದಲ್ಲಿ ಸಂಭ್ರಮದ 80ನೇ ಸ್ವಾತಂತ್ರ್ಯೋತ್ಸವ; ಬರಗಾಲದ ಹೆಸರಿನಲ್ಲಿ ಜನರ ದಾರಿ ತಪ್ಪಿಸುವ ಹುನ್ನಾರ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಈ ವರ್ಷ ಹಿಂದೆoದಿಗಿoತಲೂ ಅಧಿಕ ಪ್ರಮಾಣದಲ್ಲಿ ಬರಗಾಲ ಕಾಡುತ್ತಿದೆ.ಆದರೆ ಕೆಲವರು ಬರಗಾಲವನ್ನು

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಆ.11,12 ರಂದು ಶಾಸಕ ನಾಡಗೌಡರಿಂದ ಬರ ಪರಿಸ್ಥಿತಿ ವೀಕ್ಷಣೆ

ಮುದ್ದೇಬಿಹಾಳ : ಕೆಎಸ್‌ಡಿಎಲ್ ಅಧ್ಯಕ್ಷ,ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅವರು ಬರ ಪರಿಸ್ಥಿತಿ ಕುರಿತು ಆ.11,12 ರಂದು ಅವಲೋಕನ ನಡೆಸಿ ಬೆಳೆ ವೀಕ್ಷಣೆ ಮಾಡಲಿದ್ದಾರೆ ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ. ಆ.11 ರದು ಬೆಳಗ್ಗೆ 11.30ಕ್ಕೆ ಜಿಲ್ಲಾಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಬರ ಪರಿಸ್ಥಿತಿ ಕುರಿತು ಚರ್ಚೆ, ಮದ್ಯಾಹ್ನ 2.30ಕ್ಕೆ ಬರಪೀಡಿತ ಪ್ರದೇಶಗಳಾದ ಹರಿಂದ್ರಾಳ,ಹಡಲಗೇರಿ ಗ್ರಾಮಗಳಲ್ಲಿ ಹತ್ತಿ,ತೊಗರಿ,ಸಜ್ಜೆ ಬೆಳೆಗಳ ವೀಕ್ಷಣೆ,ಸಂಜೆ 4ಕ್ಕೆ ಢವಳಗಿ ಹೋಬಳಿಯ ಹತ್ತಿ ತೊಗರಿ ಬೆಳೆಗಳ ವೀಕ್ಷಣೆ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ ಬದಲಿಗೆ ಪರಸ್ಪರ ಮಾತನಾಡದಿರುವುದರಿಂದ, ಮುಖ ಗಂಟು ಹಾಕಿರುವುದರಿಂದ ಬಡವನಾಗಿ ಕಾಣುತ್ತಾನೆ. ಮನುಷ್ಯ ಬದುಕಿನಲ್ಲಿ ನೂರು ಕಾಲ ಬದುಕಿರುವಷ್ಟು ನಗು ಸಂಗ್ರಹಿಸಬೇಕು. ಗೆಳೆಯರ ನಡುವೆ ಸರಿ, ತಪ್ಪುಗಳ ಆರೋಗ್ಯಕರ ಚರ್ಚೆ ನಡೆಯಬೇಕು ಎಂದು ಹಿರೂರು ಜಯಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಪಟ್ಟಣದ ಹಡಲಗೇರಿ ರಸ್ತೆ ಪಕ್ಕದಲ್ಲಿರುವ ಶ್ರೀ ಪದ್ಮಾವತಿ ದೇವಸ್ಥಾನದ ಸಮುದಾಯ ಭವನದಲ್ಲಿ ವಿಬಿಸಿ ಪ್ರೌಢಶಾಲೆಯ 1985-86ನೇ