ಮುದ್ದೇಬಿಹಾಳ : ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಒಟ್ಟು ಮೂರು ಪೆನಲ್‌ಗಳು ಸ್ಪರ್ಧಿಸಿದ್ದವು.ಅದರಲ್ಲಿ ಗುರುಸ್ಪಂದನ ಶಿಕ್ಷಕರ ಬಳಗದ ಬಿ.ಎಚ್.ಮುದ್ನೂರ(312),ಎನ್.ಎಸ್.ತುರಡಗಿ(282),ಬಿ.ಎಸ್.ಹೊಳಿ(222),ಶಾಂತು ಬಿರಾದಾರ(195),ಆಯ್.ಎ.ಹಿರೇಮಠ(181),ಬಿ.ಎಚ್.ಭಗವತಿ(180),ರೇಣುಕಾ ಹಿರೇಮಠ(237),ಶೈಲಾ ಗೊಂಗಡಿ(209) ಆಯ್ಕೆಯಾಗಿದ್ದು ಸ್ವಾಭಿಮಾನ ಶಿಕ್ಷಕರ ಬಳಗದಿಂದ ಬಿ.ಎಸ್.ಶೇಖಣ್ಣವರ(241),ಎಸ್.ಟಿ.ಪಾಟೀಲ(205),ಎಸ್.ಆರ್.ರಾಠೋಡ(206) ಆಯ್ಕೆಯಾದರು.ರಾಧಾಕೃಷ್ಣನ್ ಬಳಗದಿಂದ ಸಿದ್ದನಗೌಡ ಬಿಜ್ಜೂರ(179) ಆಯ್ಕೆಯಾಗಿದ್ದಾರೆ.
ಒಟ್ಟು 563 ಮತದಾರರಲ್ಲಿ 521 ಜನ ತಮ್ಮ ಹಕ್ಕು ಚಲಾಯಿಸಿದ್ದಾರೆ.9 ಪುರುಷ,3 ಮಹಿಳಾ ಸ್ಥಾನಗಳಿಗೆ 27 ಪುರುಷರ,8 ಮಹಿಳಾ ಶಿಕ್ಷಕರು ಸ್ಪರ್ಧೆಯಲ್ಲಿದ್ದರು ಎಂದು ಚುನಾವಣಾಧಿಕಾರಿ, ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಎಂ.ಎಸ್.ಕವಡಿಮಟ್ಟಿ ಮಾಹಿತಿ ನೀಡಿದರು.ಸಹಾಯಕ ಚುನಾವಣಾಧಿಕಾರಿಯಾಗಿ ಕೆ.ಆಯ್.ಅವಟಿ ಕಾರ್ಯನಿರ್ವಹಿಸಿದರು.







