58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಆ.8 ರಿಂದ ಸೆ.26ರವರೆಗೆ ಕೈಗೊಳ್ಳಲಿದ್ದಾರೆ ಎಂದು ಮಹೋತ್ಸವ ಸಮೀತಿ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ ಹೇಳಿದರು.

ಪಟ್ಟಣದ ಪಟ್ಟಣದ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಪ್ತಮ ಚಾತುರ್ಮಾಸ್ಯದ ಕುರಿತು ಅವರು ವಿವರಿಸಿದರು.ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ ತೀರ್ಥರು ಚಾತುರ್ಮಾಸ್ಯ ಅನುಷ್ಠಾನ ಕೈಗೊಂಡಿದ್ದರು.ಜು.30,1968 ರಿಂದ ಆ.25,1968ರವರೆಗೆ ಆಗಿನ ಚಾತುರ್ಮಾಸ್ಯ ಕಿಲ್ಲಾಗಲ್ಲಿಯಲ್ಲಿದ್ದ ಖಾದಿ ಗ್ರಾಮೋದ್ಯೋಗ ನೂಲುವ ಕಟ್ಟಡದಲ್ಲಿ ರಾಮರಾವ ಸಾಲವಾಡಗಿ,ಮಾಧವರಾಜ ಸಾಲವಾಡಗಿ,ಬಾಬುರಾವ ಕುಲಕರ್ಣಿ,ರಂಗರಾಜ ದೊಡ್ಡಿಹಾಳ,ವೆಂಕಪ್ಪಚಾರ್ಯ ಪುರಾಣಿಕ,ಶ್ಯಾಮರಾವ ಕುಲಕರ್ಣಿ,ವಿಠ್ಠಲರಾವ ಕುಲಕರ್ಣಿ, ನೀಲಕಂಠರಾವ ಜಹಾಗೀರದಾರ,ನರಸಿಂಹಾಚಾರ್ಯ ಜೋಷಿ ಇವರ ನೇತೃತ್ವದಲ್ಲಿ ಚಾತುರ್ಮಾಸ್ಯ ವ್ರತವನ್ನು ಆಚರಿಸಿದ್ದರು ಎಂದು ಹೇಳಿದರು.

ಆ.8 ರಂದು ಯಲಗೂರದ ಕೃಷ್ಣಾ ತೀರದಲ್ಲಿ ಶ್ರೀಗಳಿಂದ ದಂಡೋದಕ ಸ್ನಾನ,ನಂತರ ಮುದ್ದೇಬಿಹಾಳದಲ್ಲಿ ಸಂಕಲ್ಪಪೂರ್ವ ಚಾತುರ್ಮಾಸ್ಯ ದೀಕ್ಷೆ ನಡೆಯಲಿದೆ.ಆ.28 ರಂದು ಪೂರ್ಣಿಮಾ ನಿತ್ಯನೂತನ ಉಪಕರ್ಮ,ಸೆ.1ರಂದು ಉಪರಿ ಪಂಚಮಿ ವಿದ್ಯಾಭೂಷಣ ತೀರ್ಥ ಪಾದಂಗಳವರ ಮಧ್ಯಾರಾಧನೆ,ಸೆ.4 ರಂದು ಅಷ್ಟಮಿ ಕೃಷ್ಣ ಜಯಂತಿ,ಸೆ.5ರAದು ನವಮಿ ಕೃಷ್ಣ ಜಯಂತಿ,ಸೆ.23 ರಂದು ವಿದ್ಯಾಸಂಪೂರ್ಣ ತೀರ್ಥ ಶ್ರೀಗಳು ಹಾಗೂ ವಿದ್ಯಾವಿರಾಜ ತೀರ್ಥ ಶ್ರೀಗಳ ಮಧ್ಯಾರಾಧನೆ,ಸೆ.26 ರಂದು ಸೀಮೋಲ್ಲಂಘನ,ಚಾತುರ್ಮಾಸ್ಯ ವ್ರತದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ತಿಳಿಸಿದರು.

ಸಮೀತಿಯ ಪ್ರಮುಖರಾದ ಬಾಪುರಾವ ದೇಸಾಯಿ ಹಡಗಲಿ ಮಾತನಾಡಿ, ಚಾತುರ್ಮಾಸ್ಯದ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಭಾಗವಹಿಸಬಹುದಾಗಿದ್ದು ಸಮೀತಿಯವರನ್ನು ಸಂಪರ್ಕಿಸಿ ಸ್ವಾಮೀಜಿಯವರ ಪಾದಪೂಜೆಗೆ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ ಎಂದು ಹೇಳಿದರು.

ವೇ.ಗುಂಡಭಟ್ ಜೋಷಿ ಮಾತನಾಡಿ, ಚಾತುರ್ಮಾಸ್ಯದ ಸಂದರ್ಭದಲ್ಲಿ ನಿತ್ಯವೂ ಶ್ರೀಗಳಿಗೆ ಪಾದಪೂಜೆ,ಉಪನ್ಯಾಸ,ಭಜನೆ,ಶ್ರೀಮಠದ ಉಪಾಸ್ಯಮೂರ್ತಿ ವಿಠ್ಠಲ ಕೃಷ್ಣನ ಸಂಸ್ಥಾನಪೂಜೆ,ಗುರುಗಳಿಗೆ ಹಸ್ತೋದಕ,ಭಿಕ್ಷೆ,ತೊಟ್ಟಿಲು ಪೂಜೆ,ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಹೇಳಿದರು.

ವೇ.ವೆಂಕಟೇಶಾಚಾರ್ಯ ಗ್ರಾಮಪುರೋಹಿತ ಮಾತನಾಡಿ, ಚಾತುರ್ಮಾಸ್ಯ ನಿಮಿತ್ಯ ವಿಠ್ಠಲ ಕೃಷ್ಣನ ಪೂಜೆ,ತಪ್ತಮುದ್ರಧಾರಣೆ,ಪ್ರವಚನ ಹಾಗೂ ವಿಶೇಷ ದಿನಗಳಲ್ಲಿ ಸಂಗೀತ,ದಾಸವಾಣಿ,ಸಾAಸ್ಕೃತಿಕ ಕಾರ್ಯಕ್ರಮಗಳು,ಸಾಧಕರಿಗೆ ಸನ್ಮಾನ,ಹೋಮ ಹವನ ಮುಂದಾದ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

58 ವರ್ಷಗಳ ಬಳಿಕ ಹಮ್ಮಿಕೊಂಡಿರುವ ಈ ಚಾತುರ್ಮಾಶ್ಯ ಕಾರ್ಯಕ್ರಮಕ್ಕೆ ರಾಜ್ಯದ ಉದ್ದಗಲಕ್ಕೂ ವಿಪ್ರ ಸಮಾಜದ ಬಾಂಧವರು ಪೀಠಗಳ ಭೇಧವಿಲ್ಲದೇ ಪಾಲ್ಗೊಳ್ಳಲಿದ್ದಾರೆ ಎಂದು ಸಂಘಟಕರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮೀತಿಯ ಕಾರ್ಯದರ್ಶಿ ಕೃಷ್ಣಾಜಿ ಕುಲಕರ್ಣಿ, ಸಹ ಕಾರ್ಯದರ್ಶಿ ಪುಟ್ಟು ಕುಲಕರ್ಣಿ,ಪ್ರಶಾಂತ ಸರಾಫ,ವಾಸುದೇವ ಸಾಲವಾಡಗಿ,ಚಂದ್ರಕಾAತ ಕುಲಖರ್ನಿ, ಪ್ರದೀಪ ಕುಲಕರ್ಣಿ,ಸುಹಾಸ ದೇಶಪಾಂಡೆ,ಶ್ರೀಧರ ದೇಶಪಾಂಡೆ,ಸುರೇಶ ಕುಲಕರ್ಣಿ,ದಿನೇಶ ಕುಲಕರ್ಣಿ,ರಾಘವೇಂದ್ರ ಕುಲಕರ್ಣಿ,ಸುಭಾಷ ಕುಲಕರ್ಣಿ,ಗುರುರಾಜ ಕುಲಕರ್ಣಿ,ಪ್ರಕಾಶ ದೇಶಪಾಂಡೆ ಸೇರಿದಂತೆ ಸಮೀತಿಯ ಸದಸ್ಯರು ಇದ್ದರು.

Latest News

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಬರಗಾಲದ ಕುರಿತು ಕರೆದಿದ್ದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ರಾಜ್ಯದ ರೈತರಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ:                                            ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ: ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಮುದ್ದೇಬಿಹಾಳ : ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು 60 ರೂ.ಗಳಿಗೆ ಹೆಚ್ಚಿಸಬೇಕು.ಸಬ್ 2026-27ನೇ ಸಾಲಿನಲ್ಲಿ

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಮುದ್ದೇಬಿಹಾಳ : ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿಯ ಕೆಪಿಎಸ್ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಥ್ರೋಬಾಲ್ ಬಾಲಕರು,ಬಾಲಕಿಯರ ವಿಭಾಗದಲ್ಲಿ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ವೈಯಕ್ತಿಕ ಪ್ರತಿಭೆಯ ಜತೆಗೆ ಅವರು ಪ್ರತಿನಿಧಿಸುವ ಪ್ರದೇಶದ ಹೆಸರೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು. ಪಟ್ಟಣದ ಓಸ್ವಾಲ್ ಹಾಲ್‌ನಲ್ಲಿ ರವಿವಾರ ನಡೆದ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಏಕಲವ್ಯ ರೋಲರ್

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ :                                      ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ : ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಮುದ್ದೇಬಿಹಾಳ : ಭೀಕರ ಬರಗಾಲದ ಸಮಯದಲ್ಲಿ ನೇಕಾರರಿಗೂ ಸಮರ್ಪಕ ಕಚ್ಚಾನೂಲು,ಬೀಮ್ ಪೂರೈಕೆ ಆಗುತ್ತಿಲ್ಲ.ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನಡೆಸುವ ನೇಕಾರರು ಗ್ರಾಮೀಣ ಭಾಗದಲ್ಲಿ ಸಂಕಷ್ಟದಲ್ಲಿದ್ದು ಅವರಿಗೆ ಸರ್ಕಾರ ಸೂಕ್ತ ನೆರವು ಒದಗಿಸಬೇಕು ಎಂದು ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಈ.ಹೆಬ್ಬಾಳ ಹೇಳಿದರು. ಪಟ್ಟಣದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ 27ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.ನೇಕಾರರ ಬದುಕು