ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ : ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ : ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಮುದ್ದೇಬಿಹಾಳ : ಭೀಕರ ಬರಗಾಲದ ಸಮಯದಲ್ಲಿ ನೇಕಾರರಿಗೂ ಸಮರ್ಪಕ ಕಚ್ಚಾನೂಲು,ಬೀಮ್ ಪೂರೈಕೆ ಆಗುತ್ತಿಲ್ಲ.ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನಡೆಸುವ ನೇಕಾರರು ಗ್ರಾಮೀಣ ಭಾಗದಲ್ಲಿ ಸಂಕಷ್ಟದಲ್ಲಿದ್ದು ಅವರಿಗೆ ಸರ್ಕಾರ ಸೂಕ್ತ ನೆರವು ಒದಗಿಸಬೇಕು ಎಂದು ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಈ.ಹೆಬ್ಬಾಳ ಹೇಳಿದರು.

ಪಟ್ಟಣದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ 27ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.ನೇಕಾರರ ಬದುಕು ಇಂದು ತೀವ್ರ ಸಂಕಷ್ಟದಲ್ಲಿದೆ.ಅಗತ್ಯ ಕಚ್ಚಾ ನೂಲು ಬಾರದ್ದರಿಂದ ಉದ್ಯೋಗ ಇಲ್ಲದೇ ಖಾಲಿ ಕುಳಿತುಕೊಳ್ಳುವಂತಾಗಿದೆ.ಬೇರೊoದು ಉದ್ಯೋಗ ಗೊತ್ತಿಲ್ಲದವರಿಗೆ ಸಾಕಷ್ಟು ತೊಂದರೆಯಾಗಿದೆ.ಸರ್ಕಾರ,ಸoಬoಧಪಟ್ಟ ಸಚಿವರು ನೇಕಾರರ ನೆರವಿಗೆ ಬರಬೇಕು ಎಂದರು.

ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಪ್ಯಾಟಿಗೌಡರ ಮಾತನಾಡಿ, 2026ರ ಮಾರ್ಷ್ ಅಂತ್ಯಕ್ಕೆ 8.65 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು ಪ್ರಸಕ್ತ ಚಾಲ್ತಿ ಸಾಲಿನಲ್ಲಿ ದುಡಿಯುವ ಬಂಡವಾಳ ಒಂದು ಕೋಟಿ ರೂ.ಗಳಿಗೂ ಅಧಿಕವಾಗಿದೆ.ಸಂಘವು 14.56 ಲಕ್ಷ ರೂ.ಲಾಭ ಮಾಡಿದೆ ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ರಮೇಶ ಹೆಬ್ಬಾಳ ಮಾತನಾಡಿ, ಬನಶಂಕರಿ ಪತ್ತಿನ ಸಹಕಾರಿ ಸಂಘದಲ್ಲಿ ಶೇರು ಹೊಂದಿರುವ ಇತರೆ ಜನಾಂಗದವರ ಮಕ್ಕಳು ಎಸ್.ಎಸ್.ಎಲ್.ಸಿ,ಪಿಯುಸಿಯಲ್ಲಿ ಸಾಧನೆ ತೋರಿದ್ದಲ್ಲಿ ಮುಂದಿನ ವರ್ಷದಿಂದ ಅಂತಹ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ವಿಶೇಷ ಸನ್ಮಾನಿತರಾಗಿ ಆಗಮಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಅವರು, ಬನಶಂಕರಿ ಪತ್ತಿನ ಸಹಕಾರಿ ಸಂಘವು ನಿರಂತರವಾಗಿ 27ನೇ ವರ್ಷದಲ್ಲಿ ಪ್ರಗತಿಯತ್ತ ಸಾಗಿರುವುದು ಹೆಮ್ಮೆಯ ಸಂಗತಿ.ಸಮಾಜದವರಲ್ಲಿ ಪರಸ್ಪರ ಒಗ್ಗಟ್ಟು ಸಂಘಟನೆಯಿAದ ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಬೇಕು ಎಂದರು.

ಸAಘದ ನಾಲತವಾಡ ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಬಸವರಾಜ ಪಣೀಗೋಳ,ಶಿಕ್ಷಕ ಶಿವಾನಂದ ಹೆಬ್ಬಾಳ ಮಾತನಾಡಿದರು.
ಸಂಘದ ನಿರ್ದೇಶಕರಾದ ಸುಭಾಷ ರುದ್ರಗಂಟಿ,ಬಸವರಾಜ ಅಗಸಬಾಳ,ಬಸಪ್ಪ ಹುಣಶ್ಯಾಳ,ಚಂದ್ರಕಾoತ ಹೆಬ್ಬಾಳ,ದ್ಯಾವಪ್ಪ ಹುಣಶ್ಯಾಳ,ಉಮೇಶ ಪ್ಯಾಟಿಗೌಡರ,ಸಂಗಪ್ಪ ಕಲ್ಲುಂಡಿ,ಶoಕ್ರಮ್ಮ ಪ್ಯಾಟಿಗೌಡರ,ಜಯಶ್ರೀ ಹೆಬ್ಬಾಳ,ನಾಲತವಾಡ ಶಾಖೆಯ ಪ್ರಭಾರ ವ್ಯವಸ್ಥಾಪಕ ಚಂದ್ರಶೇಖರ ಪ್ಯಾಟಿಗೌಡರ, ಗಣ್ಯರಾದ ಮುತ್ತಣ್ಣ ಪ್ಯಾಟಿಗೌಡರ,ಶಂಕರಲಿoಗ ಹುಣಶ್ಯಾಳ,ಕಾಶೀನಾಥ ಹೆಬ್ಬಾಳ,ಅಮರೇಶ ಡಂಬಳ ಸೇರಿದಂತೆ,ಮುದ್ದೇಬಿಹಾಳ,ನಾಲತವಾಡ ಶಾಖೆಗಳ ಸಲಹಾ ಸಮೀತಿ ಸದಸ್ಯರು,ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದುಕೊಂಡ ಆದರ್ಶ ಹೆಬ್ಬಾಳ,ಅರ್ಚನಾ ಪ್ಯಾಟಿಗೌಡರ,ಸೌಭಾಗ್ಯ ರುದ್ರಗಂಟಿ,ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಅಶ್ವಿನಿ ರುದ್ರಗಂಟಿ,ಕುಶಾಲ ಗುಡಗುಂಟಿ,ರಾಧಿಕಾ ಇಂಜಿಗನರಿ ಅವರಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.ಡಿ.ಬಿ.ಬೇಲಾಳ ಪ್ರಾರ್ಥನಾ ಗೀತೆ ಹಾಡಿದರು.ರಮೇಶ ಹೆಬ್ಬಾಳ ಕಾರ್ಯಕ್ರಮ ನಿರೂಪಿಸಿದರು.ದ್ಯಾವಪ್ಪ ಹುಣಶ್ಯಾಳ ವಂದಿಸಿದರು.ಕಾರ್ಯಕ್ರಮಕ್ಕೂ ಮುನ್ನ ಈಚೇಗೆ ನಿಧನರಾದ ಸಂಘದ ಪಿಗ್ಮಿ ಸಂಗ್ರಾಹಕರಾದ ಗುರಯ್ಯ ಮುದ್ನೂರಮಠ ಅವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

Latest News

9.49 ಲಕ್ಷ ರೂ.ಲಾಭ :                                                           ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

9.49 ಲಕ್ಷ ರೂ.ಲಾಭ : ಹಡಲಗೇರಿ ಪಿಕೆಪಿಎಸ್‌ನಿಂದ 4.47 ಕೋಟಿ ರೂ.ಸಾಲ ಹಂಚಿಕೆ

ಮುದ್ದೇಬಿಹಾಳ : ಈ ಆರ್ಥಿಕ ವರ್ಷದಲ್ಲಿ ಒಟ್ಟು 4.47 ಕೋಟಿ ರೂ.ಸಾಲ ರೈತರಿಗೆ ಹಂಚಿಕೆ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ ತೀವ್ರ ಬರಪೀಡಿತ ತಾಲ್ಲೂಕು ಘೋಷಣೆಗೆ ಅರ್ಹ-ಶ್ರೀಶೈಲ್ ಮರೋಳ

ಮುದ್ದೇಬಿಹಾಳ : ಪ್ರಸಕ್ತ ವರ್ಷ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಭೀಕರ ಬರಗಾಲವಿದ್ದು ರೈತರು ಸಂಕಷ್ಟದಲ್ಲಿದ್ದು ಶಾಸಕ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ:                       ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಬಸರಕೋಡ ಪಿಕೆಪಿಎಸ್‌ನ 51ನೇ ವಾರ್ಷಿಕ ಸಭೆ: ಮಾಜಿ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ದಾವೆಗೆ ತೀರ್ಮಾನ-ಎಚ್.ಬಿ.ಮೇಟಿ

ಮುದ್ದೇಬಿಹಾಳ : ನಮ್ಮ ಸಂಘದ ಹಿಂದಿನ ಕಾರ್ಯದರ್ಶಿ ಮಾಡಿದ ಅವ್ಯವಹಾರದಿಂದ ಸಂಘಕ್ಕೆ ಲಾಭಾಂಶ ಕಡಿಮೆಯಾಗಿದೆ.ಅವರ

16.17 ಲಕ್ಷ ರೂ.ಲಾಭ :                                                     ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

16.17 ಲಕ್ಷ ರೂ.ಲಾಭ : ಮುದ್ದೇಬಿಹಾಳ ಪಿಕೆಪಿಎಸ್‌ನಿಂದ 8.18 ಕೋಟಿ ರೂ ಸಾಲ ಹಂಚಿಕೆ

ಮುದ್ದೇಬಿಹಾಳ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಿoದ ಸನ್ 2025-26 ನೇ ಸಾಲಿನಲ್ಲಿ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮೂರುವರೆ ವರ್ಷದಲ್ಲಿ 500 ಕಾರ್ಯಕರ್ತರ ಮೇಲೆ ಎಫ್.ಐ.ಆರ್-ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ತಾಲ್ಲೂಕು ಬರಪೀಡಿತ ಎಂದು ಘೋಷಣೆಗೆ ಸ್ಥಳ ಪರಿಶೀಲನೆಗೆ ಆದೇಶ ಮಾಡಿದ್ದಾರೆ.ಅಧಿಕೃತವಾಗಿ ಬರಪೀಡಿತ ತಾಲ್ಲೂಕು ಇನ್ನೂವರೆಗೂ ಘೋಷಣೆಯಾಗಿಲ್ಲ.ಎರಡು ದಿನಗಳ ಕಾಲ ಮಣ್ಣಿನ ತೇವಾಂಶ,ಬೆಳೆಯ ಗುಣಮಟ್ಟ,ವಾತಾವರಣದಲ್ಲಿ ತೇವಾಂಶ ಎಷ್ಟಿದೆ ಎಂದು ಸರ್ವೆ ಮಾಡಿ ಸರ್ಕಾರಕ್ಕೆ ವರದಿ ಕಳಿಸಬೇಕು.ಈಗ ಸಾಧಾರಣ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದಾರೆ ಎಂದು ಮಾಜಿ ಶಾಸಕ,ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು. ಪಟ್ಟಣದ ದಾಸೋಹ ನಿಲಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಒಂದು ದಿನವೂ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ ಬರಪೀಡಿತ ತಾಲ್ಲೂಕು ಘೋಷಣೆ ; ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಮುದ್ದೇಬಿಹಾಳ : ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಮುದ್ದೇಬಿಹಾಳ ತಾಲ್ಲೂಕು ಘೋಷಣೆಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು,ನಾಡಗೌಡರ ಅಭಿಮಾನಿಗಳು ಗುರುವಾರ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ರಾಜ್ಯ ಸರ್ಕಾರದಿಂದ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿ ಬಿಡುಗಡೆಯಾಗುತ್ತಲೇ ಅದರಲ್ಲಿ ಮುದ್ದೇಬಿಹಾಳ ತಾಲ್ಲೂಕು ಹೆಸರು ಪ್ರಕಟಗೊಳ್ಳುತ್ತಿದ್ದಂತೆ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಮುಖಂಡರು ಸರ್ಕಾರಕ್ಕೆ,ಸಿಎಂ,ಕoದಾಯ ಮಂತ್ರಿ ಹಾಗೂ ಶಾಸಕ ಸಿ.ಎಸ್.ನಾಡಗೌಡರಿಗೆ ಜಯಘೋಷಗಳನ್ನು ಹಾಕಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ