ಇಳಕಲ್ಲ.(ಗ್ರಾ). ಅರವತ್ತು ವರ್ಷದ ವ್ಯಕ್ತಿಯೊಬ್ಬ ಆಸ್ತಿ ವಿಷಯವಾಗಿ ತನ್ನ ತಮ್ಮನ ಹೆಂಡತಿ ಮತ್ತು ಮಗನನ್ನು ಭೀಕರವಾಗಿ ಕೊಲೆ ಮಾಡಿದ ಘಟನೆ ಇಳಕಲ್ಲ ತಾಲೂಕಿನ ನಂದವಾಡಗಿ ಗ್ರಾಮದಲ್ಲಿ ಸೋಮವಾರದಂದು ನಡೆದಿದೆ.
ಗ್ರಾಮದ ಸಣ್ಣಸೋಮಪ್ಪ ಕೆ ಗೋನಾಳ (60) ಸೋಮವಾರದಂದು ಮುಂಜಾನೆ ಹೊಲದಲ್ಲಿ ಕೆಲಸ ಮಾಡುವಾಗ ಆತನ ತಮ್ಮ ನಿಂಗಪ್ಪನ ಪತ್ನಿ ಸಂಗಮ್ಮ ಗೋನಾಳ (45) ಮತ್ತು ಆಕೆಯ ಮಗ ಸೋಮಪ್ಪ ಗೋನಾಳ (26) ಇವರ ಜೊತೆಗೆ ವಾದಕ್ಕೆ ಇಳಿದಿದ್ದಾನೆ. ಅದು ವಿಕೋಪಕ್ಕೆ ಹೋದಾಗ ಕೈಯಲ್ಲಿ ಇದ್ದ ಕೊಡಲಿಯಿಂದ ಇಬ್ಬರನ್ನೂ ಬರ್ಬರವಾಗಿ ಹತ್ಯೆಗೈದು ರಕ್ತಸಿಕ್ತವಾದ ಕೊಡಲಿಯನ್ನು ಸಿನಿ ಮಾದರಿಯಲ್ಲಿ ಪೋಲಿಸ್ ಔಟ್ ಪೋಸ್ಟ್ ಗೆ ತೆಗೆದುಕೊಂಡು ಹೋಗಿ ನಾನು ಜೋಡಿ ಕೊಲೆ ಮಾಡಿ ಬಂದಿದ್ದೇನೆ ಎಂದು ಶರಣಾಗತನಾಗಿದ್ದಾನೆ.
ಸ್ಥಳಕ್ಕೆ ಧಾವಿಸಿದ ಇಳಕಲ್ ಗ್ರಾಮೀಣ ಪೋಲಿಸ್ ಠಾಣೆಯ ಪಿಎಸ್ ಐ ಮಲ್ಲಿಕಾರ್ಜುನ ಸತ್ತಿಗೌಡರ ಮತ್ತು ಪೋಲಿಸರು ಶವಗಳನ್ನು ಪೋಸ್ಟ್ ಮಾರ್ಟಂಗೆ ಕಳಿಸಿ, ಆರೋಪಿಯನ್ನು ಪೋಲಿಸ್ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ವಿಶ್ವನಾಥರಾವ್ ಕುಲಕರ್ಣಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಹಗಲು ಸಮಯದಲ್ಲಿ ನಡೆದ ಇಂತಹ ಭೀಕರ ಜೋಡಿ ಕೊಲೆಗೆ ಗ್ರಾಮಸ್ಥರು ಭಯಭೀತರಾಗಿದ್ದಾರೆ.