ಹುಣಸಗಿ: ಪಟ್ಟಣದಲ್ಲಿ ಶಾರುಖ್ ತಂದೆ ಅಹ್ಮದ್ ಸಾಬ್ ರಾಯಚೂರುನನ್ನು ಕೊಲೆ ಮಾಡಿ, ಆಳದಲ್ಲಿ ಬಿಸಾಕಿ ಹೋಗಿರುವ ಆರೋಪಿಗಳನ್ನು ಆದಷ್ಟು ಬೇಗ ಬಂದಿಸಬೇಕೆಂದು ಎಂದು ಆಗ್ರಹಿಸಿ ಪೊಲೀಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
Join Our telegram: https://t.me/dcgkannada
ಸುನ್ನಿ ಮುಸ್ಲಿಂ ಕಬ್ರ್ ಸ್ಥಾನ ವಕ್ಫ್ ಬೋರ್ಡ್ ಕಮಿಟಿ, ಟಿಪ್ಪು ಸುಲ್ತಾನ ಸಂಯುಕ್ತ ರಂಗ ಕಮಿಟಿ ಮತ್ತು ಸಮಸ್ತ ಮುಸ್ಲಿಂ ಸಮುದಾಯದ ಜನರು ತನಿಖೆಗೆ ಆಗ್ರಹಿಸಿದ್ದಾರೆ.

ಕೂಡಲೇ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿ, ಶಿಕ್ಷೆ ಕೊಡಿಸಬೇಕು ಎಂದು ಮನವಿ ಪತ್ರವನ್ನು ಹುಣಸಿಗಿಯ ಪೊಲೀಸ್ ಅಧಿಕಾರಿಗಳಿಗೆ ಸಲ್ಲಿಸಲಾಯಿತು.
ಇದನ್ನೂ ಓದಿ: CM Siddaramaiah: ರಾಜ್ಯಪಾಲರ ಕ್ರಮ ಕಾನೂನು ಬಾಹಿರ, ಅಸಂವಿಧಾನಿಕ.. ಸಂಪುಟದಲ್ಲಿ ಖಂಡನಾ ನಿರ್ಣಯ ಅಂಗೀಕಾರ..
ಈ ಸಂದರ್ಭದಲ್ಲಿ ಸುನ್ನಿ ವಕ್ಫ್ ಬೋರ್ಡ್ ಕಮಿಟಿ ಅಧ್ಯಕ್ಷರ ಸುಭಾನಲಿ ಡಕ್ಕನ, ಟಿಪ್ಪು ಸುಲ್ತಾನ ಸಂಯುಕ್ತ ರಂಗದ ಅಧ್ಯಕ್ಷ ರಸುಲ್ ಬೆನ್ನೂರ, ಮಹಮ್ಮದ್ ಅಲಿ ಹವಾಲ್ದಾರ, ಮಿರ್ಜಾ ನಾದಿರ್ ಬೇಗ, ಲತ್ತಿಫ್ನದಾಫ, ಇಸ್ಮೈಲ್ ಬೆಣ್ಣೆ, ನಬಿಲಾಲ್ ಪಟೇಲ, ಯಾತನೂರ, ಸದ್ದಾಂ ಚೌದ್ರಿ, ಖಾಜಾ ಪಟೇಲ, ಖಾದರ್ ಬೆಕಿನಾಳ, ಅನ್ವರ್ ಪಾಷಾ ಚೌದ್ರಿ ಇದ್ದರು.