ಬೆಂಗಳೂರು: ನಿಖರ ಭವಿಷ್ಯ ಹೇಳುವ ಮೂಲಕ ಹೆಸರು ವಾಸಿಯಾಗಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ (kodimathad shree) ಮತ್ತೊಂದು ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
Join Our Telegram: https://t.me/dcgkannada
ಈ ಬಾರಿ ಅವರು ನುಡಿದಿರುವ ಭವಿಷ್ಯದಲ್ಲಿ ಮನುಕುಲವನ್ನೇ ನಡುಗಿಸುವಂತಿದೆ. ಹೌದು, ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ. ಹಲವು ರಾಷ್ಟ್ರಗಳು ಪ್ರಳಯದ ಕಾರಣದಿಂದ ಮುಳುಗಿ ಹೋಗಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ ಎಂದು ಭಯಾನಕ ಭವಿಷ್ಯ ಕೊಡಿಮಠದ ಶ್ರೀ (Kodimathad shree) ಹೇಳಿದ್ದಾರೆ.
ಇದನ್ನೂ ಓದಿ: Viral video: ಭಾರತ ಬಂದ್ ವೇಳೆ ಜಿಲ್ಲಾಧಿಕಾರಿಗೆ ಬಿತ್ತು ಲಾಠಿ ಏಟು..! ವಿಡಿಯೋ ವೈರಲ್
ಇತ್ತ, ರೈತರಿಗೆ ಈ ಮಳೆಯ ನಷ್ಟಗಳು ಸಂಭವಿಸಲಿದೆ. ಈ ವರ್ಷ ಬಿಸಿಯಾದ ಜಾಗ ಪ್ರಳಯ ಆಗುತ್ತದೆ. ತಂಪಾಗಿರುವ ಜಾಗವೆಲ್ಲ ಬಿಸಿಯಾಗಿ ಬರಗಾಲ ಬರುತ್ತದೆ. ಕರ್ನಾಟಕದಲ್ಲಿ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಮುಂಜಾಗ್ರತೆ ವಹಿಸಬೇಕು ಎಂದೂ ಎಚ್ಚರಿಕೆಯ ಸಂದೇಶವನ್ನು ಶ್ರೀಗಳು ನೀಡಿದ್ದಾರೆ.