ಮುದ್ದೇಬಿಹಾಳ : ವಿಜಯಪುರದ ಜೆ.ಎಸ್.ಎಸ್ ಆಸ್ಪತ್ರೆ ಹಾಗೂ ಪ್ಯಾರಾ ಮಿಲಿಟರಿ ಮಾಜಿ ಯೋಧರ ಸಂಘಟನೆ ನೇತೃತ್ವದಲ್ಲಿ ಸೆ.29 ರಂದು ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ಪ್ಯಾರಾ ಮಿಲಿಟರಿ ಮಾಜಿ ಯೋಧರ ಸಂಘಟನೆ ಅಧ್ಯಕ್ಷ ಎ.ಜೆ.ಪಲ್ಟನ್ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಎಲ್ಲ ರೋಗಗಳಿಗೆ ಆರೋಗ್ಯ ಉಚಿತ ತಪಾಸಣೆ ನಡೆಸಲಾಗುತ್ತದೆ.ಈಗಾಗಲೇ ಜೆಎಸ್‌ಎಸ್ ಆಸ್ಪತ್ರೆಯವರೊಂದಿಗೆ ಮಾತನಾಡಿದ್ದು ಅವರು ಬರಲು ಒಪ್ಪಿದ್ದಾರೆ ಎಂದು ತಿಳಿಸಿದರು.
ಎಲುವು, ಕೀಲು, ಕಣ್ಣು, ಕಿವಿ, ನರ ರೋಗದ ಬಗ್ಗೆ ತಪಾಸಣೆ ನಡೆಸಲಾಗುತ್ತದೆ ಎಂದು ತಿಳಿಸಿದರು.ಪ್ಯಾರಾ ಮಿಲಿಟರಿ ಮಾಜಿ ಯೋಧರ ಸಂಘಟನೆಯಿಂದದ ಬಡ ವರ್ಗದ ಜನರಿಗೆ ಅನುಕೂಲವಾಗುವ ಕಾರ್ಯಗಳನ್ನು ಏರ್ಪಡಿಸಲಾಗುವುದು ಎಂದು ತಿಳಿಸಿದರು.
ಸಂಘಟನೆ ಕಾರ್ಯದರ್ಶಿ ಎಸ್.ಪಿ.ಚೀರಲದಿನ್ನಿ, ಉಪಾಧ್ಯಕ್ಷ ರೇವಣೆಪ್ಪ ಹರಿಜನ, ಖಜಾಂಚಿ ಬಾಬು ಮುದ್ದೇಬಿಹಾಳ, ಸದಸ್ಯರಾದ ಎ.ಎಮ್.ಅಂಗಡಿ, ಮೈಬೂಬಪಟೇಲ ಬಿರಾದಾರ,ಬಿ.ಎಸ್.ಯಾಳವಾರ, ಗುರುರಾಜ ಸರಗಣಾಚಾರಿ, ಶಿವಾನಂದ ಯಾಳವಾರ, ಆರ್.ಎಸ್.ಬಿರಾದಾರ ಮೊದಲಾದವರು ಇದ್ದರು.
ಪೂರ್ವಭಾವಿ ಸಭೆಯಲ್ಲಿ ಹಾಜರಿದ್ದ ಸದಸ್ಯರು ಪ್ಯಾರಾ ಮಿಲಿಟರಿ ಮಾಜಿ ಯೋಧರ ಸಂಘಟನೆಯ ಕುರಿತು ಚರ್ಚೆ ನಡೆಸಿದರಲ್ಲದೇ ಸಮಾಜದಲ್ಲಿ ಸಂಘಟನೆಯನ್ನು ಬಲಪಡಿಸಲು ಕೈಗೊಳ್ಳಬೇಕಾದ ಕಾರ್ಯಕ್ರಮಗಳ ಕುರಿತು ಸಮಾಲೋಚನೆ ನಡೆಸಿದರು.