ಮುದ್ದೇಬಿಹಾಳ : ಉತ್ತರ ಕರ್ನಾಟಕ ಭಾಗದಲ್ಲಿಯೇ ಅತೀ ಹೆಚ್ಚು ಮೆಡಿಕಲ್ ಸೀಟುಗಳನ್ನು ಕೊಟ್ಟಿರುವ ಕೀರ್ತಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಗಿದ್ದು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸಂಸ್ಥೆಯಿಂದ ನಿರಂತರವಾಗಿ ಸ್ಕಾಲರಶಿಪ್ ಎಕ್ಸಾಂ ನಡೆಸಿಕೊಂಡು ಬರಲಾಗುತ್ತಿದೆ ಎಂದು ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮೀತಗೌಡ ಎಂ.ಪಾಟೀಲ ಹೇಳಿದರು.
ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ನೀಟ್ ಅಕಾಡೆಮಿ ನೇತೃತ್ವದಲ್ಲಿ ಶನಿವಾರ ಸ್ಕಾಲರ್‌ಶಿಪ್ ಎಕ್ಸಾಂ-2025ರಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಸಿ ಅವರು ಮಾತನಾಡಿದರು. 2021ರಲ್ಲಿ 143, 2022ರಲ್ಲಿ 145, 2023ರಲ್ಲಿ 156, 2024ರಲ್ಲಿ 172 ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಂಡಿದ್ದಾರೆ. ಈ ವರ್ಷವೂ 170ಕ್ಕೂ ಹೆಚ್ಚು ಮೆಡಿಕಲ್ ಸೀಟುಗಳನ್ನು ಸಂಸ್ಥೆಯಡಿ ಓದಿದ ವಿದ್ಯಾರ್ಥಿಗಳು ಪಡೆದುಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದರು.
ಇದೇ ಪ್ರಥಮ ಬಾರಿಗೆ ನೀಟ್ ಅಕಾಡೆಮಿಯಿಂದ ಸ್ಕಾಲಶಿಪ್ ಎಕ್ಸಾಂ ನಡೆಸಿದ್ದು ಉತ್ತರ ಕರ್ನಾಟಕ ಭಾಗದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೂ ನಮ್ಮ ಸಂಸ್ಥೆಯಲ್ಲಿ ಓದಿದ ವಿದ್ಯಾರ್ಥಿಗಳೊಂದಿಗೆ ಪೈಪೋಟಿ ನೀಡಲು ಸಾಧ್ಯವಾಗಿಲ್ಲ. ನಮ್ಮ ಸಂಸ್ಥೆಯಡಿ ಓದುವ ವಿದ್ಯಾರ್ಥಿಗಳ ಕಠಿಣ ಪರಿಶ್ರಮದ ಓದು ಈ ಸಾಧನೆಗೆ ಕಾರಣವಾಗಿದೆ. ನಮ್ಮ ಸಂಸ್ಥೆಯಿಂದ ಒಂದೇ ವರ್ಷದ ಅವಧಿಯಲ್ಲಿ ವಿವಿಧ ವರ್ಗಗಳ ಪ್ರತಿಭಾವಂತ ವಿದ್ಯಾರ್ಥಿಗಳ ಉಚಿತ ಶಿಕ್ಷಣಕ್ಕಾಗಿ ಆರು ಕೋಟಿ ರೂ. ಗಳಿಗಿಂತಲೂ ಹೆಚ್ಚು ಮೊತ್ತವನ್ನು ಸ್ಕಾಲರ್‌ಶಿಪ್ ರೂಪದಲ್ಲಿ ನೀಡಲಾಗುತ್ತಿದೆ ಎಂದರು.
ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ಇಸ್ಮಾಯಿಲ್ ಮನಿಯಾರ ಮಾತನಾಡಿ, ಈ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿ ಅಖೀಲ್ ಅಹ್ಮದ್ 625 ಅಂಕ ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ ಪಡೆದಿರುವುದು ನಮ್ಮೆಲ್ಲರಿಗೆ ಹೆಮ್ಮೆ ತರುವ ಸಂಗತಿ ಎಂದರು.
ನೀಟ್ ಅಕಾಡೆಮಿಯಿಂದ ನಡೆದ ಪರೀಕ್ಷೆಯಲ್ಲಿ 1-20 ನೇ ಸ್ಥಾನ ಪಡೆದ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಊಟ ವಸತಿಯೊಂದಿಗೆ ಒಂದು ವರ್ಷದ ಶಿಕ್ಷಣ ಉಚಿತವಾಗಿ ನೀಡಲಾಗುತ್ತದೆ. 20 -40ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಒಂದು ವರ್ಷದ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ ಎಂದು ಸಂಸ್ಥೆಯಿಂದ ಘೋಷಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರೊ.ನಾಗೇಶ ಬಿರಾಜದಾರ, ರಾಜಶೇಖರ ಹಿರೇಮಠ, ಮಂಜುನಾಥ ಮಂಕಣಿ, ಆನಂದ ನಾವಗಿ, ಸಂದೀಪ ಘೋರ್ಪಡೆ, ಮಹಾಂತೇಶ ಬಿರಾದಾರ ಇದ್ದರು.
ಉಚಿತ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು:
ಪರೀಕ್ಷೆಯಲ್ಲಿ ಮೊದಲ 20 ಸ್ಥಾನ ಪಡೆದ ಸಮರ್ಥ ಸೋನವಾಲ್ಕರ, ಭೀಮನಗೌಡ ಚೌಧರಿ, ಚೈತನ್ಯ ಜೈನಾಪೂರ, ಮಂಜುನಾಥ ಕರಜಗಿ, ಸ್ಪೂರ್ತಿ, ಸಂಜಯಕುಮಾರ ಸಿ., ಸ್ಪೂರ್ತಿ ಮುಧೋಳ, ಆದರ್ಶ ಬಿರಾದಾರ, ಪೂನಮ್ ರಾಠೋಡ, ತನುಜಾ, ಮಂಜುನಾಥ ಕಾಖಂಡಕಿ, ಬಸವರಾಜ ರಾಠೋಡ, ಮನೋಜ ಚಾಕೋಟಿ, ಪವಿತ್ರಾ ಬಡಕಣ್ಣವರ, ಅನಿಲ ಕದಂ, ಶ್ರೀಗೌರಿ, ಮಲ್ಲಿಕಾರ್ಜುನ ಗುಬ್ಬೇವಾಡ, ಸುಷ್ಮಿತಾ ಬಿದರಿ, ಪ್ರಭಾವತಿ ಸರಕಾರ, ಸುಪ್ರಿಯಾ ಮ್ಯಾಗೇರಿ ಅವರನ್ನು ಸನ್ಮಾನಿಸಲಾಯಿತು. ಪರೀಕ್ಷೆಗೆ ಒಟ್ಟು 455 ವಿದ್ಯಾರ್ಥಿಗಳು ಹಾಜರಾಗಿದ್ದರು.