If there is any loss of life due to the negligence of officials, action will be taken against them: Minister Santosh Lad

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: ಸಚಿವ ಸಂತೋಷ್‌ ಲಾಡ್

ಅಧಿಕಾರಿಗಳ ನಿರ್ಲಕ್ಷ್ಯದಿಂದ ಯಾವುದೇ ಜೀವಹಾನಿ ಉಂಟಾದರೆ ಅವರ ವಿರುದ್ಧ ಕ್ರಮ: ಸಚಿವ ಸಂತೋಷ್‌ ಲಾಡ್

ಧಾರವಾಡ, ಜೂನ್‌ 16: ಮಳೆಗಾಲದ ಸಂಕಷ್ಟ ಸಂದರ್ಭದಲ್ಲಿಯೂ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ಸಾರ್ವಜನಿಕ ಸ್ನೇಹಿಯಾಗಿ ನಿರ್ವಹಿಸಬೇಕು. ನಿಮ್ಮ ಇಲಾಖೆ ಕರ್ತವ್ಯಗಳಿಂದ ವಿಮುಖರಾಗಬೇಡಿ. ಯಾವುದೇ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ಲಕ್ಷ್ಯದಿಂದ ಜೀವ ಹಾನಿ ಉಂಟಾದರೆ, ಆಯಾ ಅಧಿಕಾರಿಯನ್ನು ಜವಾಬ್ದಾರಗೊಳಿಸಿ, ಕಾನೂನುಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಕಾರ್ಮಿಕ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಳೆಯಿಂದ ಆಗಿರುವ ಹಾನಿ, ಅದಕ್ಕೆ ಕೈಗೊಳ್ಳಬೇಕಾದರೆ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಭೆ ನಡೆಸಿ ಮಾತನಾಡಿದರು.

ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆಯಲ್ಲಿ ಸುಮಾರು 2 ಸಾವಿರದಷ್ಟು ಪೌರಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಐದು ಮೀಟರ್ ರಸ್ತೆಯನ್ನು ಸ್ವಚ್ಛತೆ ಕೊಟ್ಟು, ಪ್ರತಿದಿನ 10 ಕಿ.ಮೀ ರಂತೆ ಸಂಪೂರ್ಣ ನಗರವನ್ನು ಸ್ವಚ್ಛ ಮಾಡಲು ಒಂದು ರೋಡ್ ಮ್ಯಾಪ್‍ ಸಿದ್ಧ ಮಾಡಿಕೊಳ್ಳಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಸಚಿವರು ಹೇಳಿದರು.

ಜನರು ಜಾಗೃತರಾಗಬೇಕು ಇಳಿಜಾರು ಪ್ರದೇಶದಲ್ಲಿ ಅವರು ಮನೆ ಕಟ್ಟುತ್ತಾರೆ, ಅನಧಿಕೃತ ಜಾಗದಲ್ಲಿ ಅವರೇ ನಿವೇಶನವನ್ನು ಕಟ್ಟಿಕೊಳ್ಳುತ್ತಾರೆ, ಅನಧಿಕೃತ ಲೇಜೌಟ್‍ಗಳನ್ನು ಮಾಡಿಕೊಳ್ಳುತ್ತಾರೆ. ಇದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಸಾರ್ವಜನಿಕರಿಗೆ ನಾಗರಿಕ ಸಮಸ್ಯೆಗಳನ್ನು ಅರ್ಥೈಸಬೇಕು. ಅದಕ್ಕಾಗಿ ಸಾರ್ವಜನಿಕರಿಗೆ ಈ ಕುರಿತು ಮನವರಿಕೆಯಾಗಬೇಕು ಎಂದು ಅವರು ಹೇಳಿದರು.

ಧಾರವಾಡ ಜಿಲ್ಲೆಯಲ್ಲಿ ಹಾಗೂ ಎಲ್ಲ ತಾಲೂಕುಗಳು ಸೇರಿ ಅಂದಾಜು ಶೇ 67 ರಷ್ಟು ಮುಂಗಾರು ಬಿತ್ತನೆಯಾಗಿದೆ. ಬಿತ್ತನೆ ಬೀಜ ಹಾನಿ ಪರಿಶೀಲಿಸಿ ಹಾಗೂ ರೈತ ಮುಖಂಡರೊಂದಿಗೆ ಚರ್ಚೆ ಮಾಡಿ, ನಂತರ ಮತ್ತೆ ಸಹಾಯಧನದಲ್ಲಿ ಬಿತ್ತನೆ ಬೀಜ ವಿತರಣೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಅವರು ಹೇಳಿದರು.

ಎಲ್ಲ ಗ್ರಾಮ ಪಂಚಾಯತ ಅಧಿಕಾರಿಗಳವರು ತಮ್ಮ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ, ಆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಜನರೊಂದಿಗೆ ಉತ್ತಮ ರೀತಿಯಲ್ಲಿ ಪ್ರತಿಕ್ರಿಯಿಸಬೇಕು. ಒಂದು ವೇಳೆ ನಾವು ನೆರೆಹಾವಳಿಗಳ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ಅಧಿಕಾರಿಗಳು ಇಲ್ಲದೆ ಇರುವುದು ಕಂಡುಬಂದಲ್ಲಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಮಳೆಗಾಲ ಮುಗಿಯುವವರೆಗೂ ಯಾವುದೇ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನವನ್ನು ಬಿಟ್ಟು ಹೋಗಬಾರದು. ಜನಸಾಮಾನ್ಯರು ಯಾವುದೇ ಸಮಯದಲ್ಲಿ ಕರೆ ಮಾಡಿದರು ಅಧಿಕಾರಿಗಳು ಅದಕ್ಕೆ ಸರಿಯಾಗಿ ಸ್ಪಂದನೆ ಮಾಡಬೇಕು ಎಂದು ಹೇಳಿದರು.

ಮುಂಬರುವಂತಹ ಪ್ರತಿಯೊಂದು ಕೆ.ಡಿ.ಪಿ ಸಭೆಯಲ್ಲಿ ಎಲ್ಲಾ ಅಧಿಕಾರಿ ವರ್ಗದವರು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸ್ಥಳಗಳಲ್ಲಿ ಯಾವ ರೀತಿ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸ್ಥಳಗಳನ್ನು ಗುರುತಿಸಬೇಕು. ಮಳೆಗಾಲ ಮುಗಿಯುವವರೆಗೂ ಅಧಿಕಾರಿಗಳು 24X7 ಕೆಲಸವನ್ನು ಮಾಡಬೇಕು ಎಂದು ಸಚಿವರು ತುಳಿಸಿದರು.

ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ಕೂಡಲೇ ಯಾವುದೇ ರೀತಿ ಅಡಚಣೆಗಳು ಜನರಿಗೆ ಆಗದ ಹಾಗೆ ತಾತ್ಕಾಲಿಕವಾಗಿ ಆದರೂ ರಸ್ತೆ ಮಾಡಿ ಜನರಿಗೆ ಮಾರ್ಗವನ್ನು ಕಲ್ಪಿಸಬೇಕು ಎಂದು ಲೋಕೋಪಯೋಗಿ ಇಲಾಖೆಯವರಿಗೆ ಸೂಚಿಸಿದರು.

ಅಂಗನವಾಡಿ, ಶಾಲೆ, ಕಾಲೇಜುಗಳ ಕಟ್ಟಡಗಳು ಮಳೆಯಿಂದ ಸೋರುತ್ತಿದ್ದರೆ ಅಂತಹ ಸ್ಥಳಗಳಲ್ಲಿ ವಿದ್ಯಾರ್ಥಿಗಳನ್ನು ಕೂರಿಸಿದರೆ ಅಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆ ಆದರೆ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಹೊಣೆಯಾಗುತ್ತಾರೆ ಎಂದು ಹೇಳಿದರು.

ಸ್ಥಳೀಯ ಅಧಿಕಾರಿಗಳಿಗೆ ಸಚಿವರಿಂದ ಮೊಬೈಲ್ ಕರೆ
ಸಚಿವ ಸಂತೋಷ ಲಾಡ್ ಅವರು ಸಭೆಯಲ್ಲಿಯೇ ಎಲ್ಲ ತಾಲೂಕಿನ ಆಯ್ದ ಗ್ರಾಮ ಪಂಚಾಯತಿಯ ಪಂಚಾಯತ ರಾಜ್ಯ ಅಭಿವೃದ್ಧಿ ಅಧಿಕಾರಿಗಳನ್ನು ಮೊಬೈಲ್ ಕರೆ ಮಾಡಿ, ಸ್ಥಾನಿಕವಾಗಿ ಲಭ್ಯರಿರುವ ಬಗ್ಗೆ ಪರಿಶೀಲಿಸಿದರು. ಮೊಬೈಲ್ ನಲ್ಲಿ ಕಾಲ್‌ ಮಾಡಿದ ಅವರು, ತಾವು ಎಲ್ಲಿದ್ದರಿ, ನಿಮ್ಮೂರಿಗೆ ಮಳೆ ಹಾನಿ, ಸಾರ್ವಜನಿಕರ ಸಮಸ್ಯೆಗಳಿಗೆ ಏನು ಕ್ರಮಕೈಗೊಂಡಿದ್ದರಿ ಎಂದು ಪ್ರಶ್ನಿಸಿ, ಮಳೆಗಾಲ ಮುಗಿಯುವವರೆಗೆ ನಿಮ್ಮ ಕೇಂದ್ರ ಸ್ಥಾನವನ್ನು ಬಿಡದಂತೆ ಮತ್ತು ಯಾವುದೇ ರೀತಿಯ ಹಾನಿಯಾಗದಂತೆ ಸಾರ್ವಜನಿಕರಿಗೆ ತಕ್ಷಣ ಸ್ಪಂದಿಸಬೇಕೆಂದು ಸೂಚಿಸಿದರು.

ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್‌, ಶಾಸಕ ಎನ್. ಎಚ್. ಕೋನರೆಡ್ಡಿ, ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷಾಧಿಕಾರಿ ಗೋಪಾಲ್ ಎಂ. ಬ್ಯಾಕೋಡ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Latest News

ಮುದ್ದೇಬಿಹಾಳ : ಮಾ.9 ರಂದು ಮುದ್ದೇಬಿಹಾಳ, ನಾಲತವಾಡದಲ್ಲಿ ಸೌಹಾರ್ದಕೂಟ

ಮುದ್ದೇಬಿಹಾಳ : ಮಾ.9 ರಂದು ಮುದ್ದೇಬಿಹಾಳ, ನಾಲತವಾಡದಲ್ಲಿ ಸೌಹಾರ್ದಕೂಟ

ಮುದ್ದೇಬಿಹಾಳ : ಯಾವುದೇ ರಾಜಕೀಯ ಪ್ರತಿಫಲಾಪೇಕ್ಷೆಯಿಲ್ಲದೇ ಅಸ್ಕಿ ಫೌಂಡೇಶನ್ ಕಳೆದ 15 ವರ್ಷಗಳಿಂದ ಜನಸೇವೆಯಲ್ಲಿ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ರಂಜಾನ್ ಮಾಸದಲ್ಲೇ ಯುದ್ಧ ನಡೆಯುವ ಅವಶ್ಯಕತೆ ಇರಲಿಲ್ಲ-ನಾಡಗೌಡ

ಮುದ್ದೇಬಿಹಾಳ : ರಂಜಾನ್ ಹಬ್ಬ ಎಲ್ಲ ಹಬ್ಬಗಳ ಜೊತೆಗೆ ಆಚರಣೆಗೆ ಬರುತ್ತದೆ.ನಾವೆಲ್ಲ ಯುದ್ಧವನ್ನು ಖಂಡಿಸಬೇಕು.ವಿಶೇಷವಾಗಿ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮಾ.9 ರಂದು ಎಂಟನೇ ವರ್ಷದ ವಾರ್ಷಿಕೋತ್ಸವ

ಮುದ್ದೇಬಿಹಾಳ : ಪಟ್ಟಣದ ಮಹಾಂತೇಶ ನಗರದಲ್ಲಿರುವ ವಿಶ್ವಭಾರತಿ ಪಬ್ಲಿಕ್ ಸ್ಕೂಲ್‌ನ ಎಂಟನೇ ವಾರ್ಷಿಕೋತ್ಸವ ಕಾರ್ಯಕ್ರಮ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮುದ್ದೇಬಿಹಾಳ : ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ:   ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಶಾಸಕ ವಿಜಯಾನಂದ ಕಾಶಪ್ಪನವರ ಘೋಷಣೆ: ಕಾಶಪ್ಪನವರ ಕುಟುಂಬದಿoದ ಸಕ್ಕರೆ ಕಾರ್ಖಾನೆ ಸ್ಥಾಪನೆ

ಮುದ್ದೇಬಿಹಾಳ : ನಮ್ಮ ಭಾಗದ ರೈತರಿಗೆ ಅನುಕೂಲ ಒದಗಿಸುವ ನಿಟ್ಟಿನಲ್ಲಿ ಕಾಶಪ್ಪನವರ ಕುಟುಂಬದಿoದ ಹುನಗುಂದ ತಾಲ್ಲೂಕಿನ ಬೆಳಗಲ್ ಗ್ರಾಮದಲ್ಲಿ ಸಕ್ಕರೆ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಿದ್ದೇವೆ ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು. ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಗುರುವಾರ ಹುನಗುಂದದ ಶ್ರೀ ಎಸ್.ಆರ್.ಕೆ. ಸೌಹಾರ್ದ ಪತ್ತಿನ ಸಹಕಾರಿ ಸಂಘ ಇದರ 15ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಹುನಗುಂದ ಭಾಗದಲ್ಲಿ ಸಕ್ಕರೆ ಕಾರ್ಖಾನೆ ಆರಂಭಿಸಿದರೆ ಉದ್ಯೋಗ ಸೃಷ್ಟಿಯಾಗುತ್ತವೆ.ಅದರಲ್ಲಿಯೂ ಈ ಭಾಗದ

ಚಿಣ್ಣರ ಬಣ್ಣದೋಕುಳಿ ಸಡಗರ ಹೆಚ್ಚಿಸಿದ ವರ್ಣರಂಜಿತ ಕಾರಂಜಿ

ಚಿಣ್ಣರ ಬಣ್ಣದೋಕುಳಿ ಸಡಗರ ಹೆಚ್ಚಿಸಿದ ವರ್ಣರಂಜಿತ ಕಾರಂಜಿ

ಮುದ್ದೇಬಿಹಾಳ : ಬಣ್ಣದ ಹಬ್ಬ ಪ್ರೀತಿ ಮತ್ತು ವಸಂತಗಳ ಸಂಕೇತವಾಗಿ ಆಚರಿಸಲಾಗುವ ಪ್ರಮುಖ ಹಿಂದೂ ಹಬ್ಬವಾಗಿದೆ.ದೇವತೆಗಳ ಶಾಶ್ವತ ಮತ್ತು ದೈವಿಕ ಪ್ರೀತಿಯನ್ನು ಇದು ಸೂಚಿಸುತ್ತದೆ.ಈ ದಿನವು ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವವಿದ್ಯಾಲಯದ ರೇಣುಕಾ ಅಕ್ಕನವರು ಹೇಳಿದರು. ಪಟ್ಟಣದ ಹುಡ್ಕೋ ಗವಿಸಿದ್ಧೇಶ್ವರ ವೇದಿಕೆಯ ಆವರಣದಲ್ಲಿ ಸಮಾನ ಮನಸ್ಕ ಯುವ ಬಳಗದ ಆಶ್ರಯದಲ್ಲಿ ಬುಧವಾರ ಚಿಣ್ಣರ ಬಣ್ಣದ ಓಕುಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.