‘ಎಂ.ಎಲ್.ಎ ಬಳಿ ಹೋದ್ರೆ ಚಿನ್ನು ಧಣಿ ಬಳಿ ಹೋಗು ಅಂತಾರೆ, ಚಿನ್ನು ಧಣಿ ಚೀಫ್ ಆಫೀಸರ್ ಬಳಿ ಹೋಗು ಅನ್ನುತ್ತಾರೆ’

‘ಎಂ.ಎಲ್.ಎ ಬಳಿ ಹೋದ್ರೆ ಚಿನ್ನು ಧಣಿ ಬಳಿ ಹೋಗು ಅಂತಾರೆ, ಚಿನ್ನು ಧಣಿ ಚೀಫ್ ಆಫೀಸರ್ ಬಳಿ ಹೋಗು ಅನ್ನುತ್ತಾರೆ’

ಮುದ್ದೇಬಿಹಾಳ : ಪಟ್ಟಣದ ಇಂದಿರಾ ನಗರದಲ್ಲಿರುವ ಬಡವರಿಗೆ ಉತಾರೆ ಕೊಡಲು ಪುರಸಭೆಯಿಂದ ಆಗುತ್ತಿಲ್ಲ.ಇದರಿಂದ ಸಾಕಷ್ಟು ತೊಂದರೆ ಉಂಟಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಿವಾಸಿಗಳು ಬುಧವಾರ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರಿಗೆ ಅನಿರ್ದಿಷ್ಟಾವಧಿಯವರೆಗೆ ಧರಣಿ ಸತ್ಯಾಗ್ರಹ ಆರಂಭಿಸಿದ್ದಾರೆ.
ಪಟ್ಟಣದ ಅಂಬೇಡ್ಕರ್ ಸರ್ಕಲ್‌ದಿಂದ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು ತಹಶಿಲ್ದಾರ್ ಕಚೇರಿಯಲ್ಲಿ ಹಾಕಿದ್ದ ಟೆಂಟ್‌ನಲ್ಲಿ ಸಮಾವೇಶಗೊಂಡರು.

ಓಣಿಯ ನಿವಾಸಿ ನಾಗೇಶ ಜಾಧವ ಮಾತನಾಡಿ, ತಡೆಯಾಜ್ಞೆ ಇದೆ ಎಂದು ಹೇಳುತ್ತಿದ್ದಾರೆ.ಆದರೆ ಯಾವ ಜಾಗದ ಮೇಲೆ ತಡೆಯಾಜ್ಞೆ ಇದೆ ಎಂಬುದನ್ನು ಹೇಳುತ್ತಿಲ್ಲ.30-35 ವರ್ಷಗಳ ಹಿಂದೆ ಕೈ ಬರಹದ ಉತಾರೆಗಳು,ಹಕ್ಕುಪತ್ರಗಳಿದ್ದು ಅವುಗಳಿಗೆ ಉತಾರೆ ನೀಡುತ್ತಿಲ್ಲ ಎಂದು ಆರೋಪಿಸಿದರು.

ನಿವಾಸಿ ರಿಯಾಜಹ್ಮದ ಉಣ್ಣಿಬಾವಿ ಮಾತನಾಡಿ, ‘ಉತಾರೆಗಾಗಿ ಮುಖ್ಯಾಧಿಕಾರಿಗೆ ನಾಲ್ಕು ಸಲ ಅರ್ಜಿ ಕೊಟ್ಟಿದ್ದೇನೆ.ಅಲ್ಲದೆ ಎಂ.ಎಲ್.ಎ ಮನೆಗೆ ಹೋಗಿ ಅರ್ಜಿ ಕೊಟ್ಟಿದ್ದೇನೆ.ಉತಾರೆ ತಗೊಂಡು ಏನು ಗಾಡಿ ತಗೊಳ್ಳುವನು ಇದ್ದೀಯಾ ಎಂದು ಎಂಎಲ್‌ಎ ಕೇಳುತ್ತಾರೆ.ಅವರು ಚಿನ್ನು ಧಣಿಗೆ ಹೇಳುತ್ತೇನೆ ಹೋಗು ಎಂದ್ರು, ಚಿನ್ನು ಧಣಿ ಚೀಫ್ ಆಫೀಸರ ಬಳಿ ಹೋಗಲು ಹೇಳಿದರು.ಚೀಫ್ ಆಫೀಸರ್ ಕೇಳಿದರೆ ಇವತ್ತು ಬಾ ನಾಳೆ ಬಾ ಎಂದು ಉಡಾಫೆ ಉತ್ತರ ಕೊಡುತ್ತಿದ್ದಾರೆ.ನಾನು ಸೌದಿಗೆ ಹೋಗುವವನು ಇದ್ದೇನೆ ಎಂದರೂ ನೀನು ಸೌದಿಗೆ ಹೋಗು ನಾನೇ ಗರಪಟ್ಟಿ ತುಂಬಿಕೊAಡು ಉತಾರೆ ನಿನ್ನ ಮನಿಗೆ ಕಳಿಸಿಕೊಡುತ್ತೇನೆ ಎಂದು ಬೇಜವಾಬ್ದಾರಿಯಿಂದ ಮುಖ್ಯಾಧಿಕಾರಿ ಮಾತನಾಡುತ್ತಿದ್ದಾರೆ.ಎಂ.ಎಲ್.ಎ ಮನಿಗೆ ಎರಡು ಬಾರಿ ಹೋಗಿದ್ದೇನೆ.ಅವರು ಚಿನ್ನು ಧಣಿ ಬಳಿ ಹೋಗು ಎನ್ನುವುದು,ಚಿನ್ನು ಧಣಿ ಚೀಫ್ ಆಫೀಸರ್ ಬಳಿ ಹೋಗು’ ಎಂದು ತಿರುಗಾಡಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಓಣಿಯ ನಿವಾಸಿ ಮಹೆಬೂಬ ಮುಲ್ಲಾ ಮಾತನಾಡಿ, ‘ಇಂದಿರಾ ನಗರದಲ್ಲಿ ವಾಸಿಸುತ್ತಿರುವವರು ಬಡವರು,ದಲಿತರು, ಹಿಂದುಳಿದವರು, ಎಲ್ಲ ವರ್ಗದವರು ಇದ್ದಾರೆ.1972ರಲ್ಲಿ ಕಾನೂನು ಬದ್ಧವಾಗಿ ಉತಾರೆ ಇತ್ತು.ಈಗ ಕಂಪ್ಯೂಟರ್ ಉತಾರೆ ಬಂದ ಮೇಲೆ ಯಾರೊಬ್ಬರಿಗೂ ಉತಾರೆ ಕೊಡುತ್ತಿಲ್ಲ.ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಕ್ಕು ಪತ್ರಗಳನ್ನು ಬದಲಾಯಿಸಿದರು.ಹಕ್ಕುಪತ್ರ ಇದ್ದರೂ ಉತಾರೆ ಕೊಡುತ್ತಿಲ್ಲ.ಮಗನಿಗೆ ಎಂಜೀನಿಯರ್ ಓದಿಸಬೇಕು.ಮದುವೆ,ಶಾಲೆ ಶುಲ್ಕ ಕಟ್ಟಲು ಮನೆಯ ಮೇಲೆ ಸಾಲ ಪಡೆದುಕೊಳ್ಳಬೇಕಿದೆ. ಇದಕ್ಕೆ ಉತಾರೆ ಕೊಡುವಂತೆ ನೀಡಬೇಕು ಎಂದರೂ ನಿರ್ಲಕ್ಷö್ಯ ವಹಿಸಿದ್ದಾರೆ. ಕನಿಷ್ಠ 400 ಮನೆಗಳಿಗೆ ಉತಾರೆ ಕೊಡಬೇಕು.ಸರ್ವೆ ನಂ.57,58ಕ್ಕೆ ಸಂಬAಧಿಸಿದAತೆ ಉತಾರೆ ನೀಡಬೇಕು.ಅಲ್ಲಿ ತಡೆಯಾಜ್ಞೆ ಇದೆ ಎನ್ನುತ್ತಿದ್ದಾರೆ.ಆದರೆ ಯಾವ ಜಾಗಕ್ಕೆ, ಎಷ್ಟು ಜಾಗಕ್ಕೆ ಸ್ಟೇ ಇದೆ ಎಂಬುದನ್ನು ಹೇಳುತ್ತಿಲ್ಲ.ಯಾರು ಸ್ಟೇ ತಂದಿದ್ದಾರೆ ಎಂದು ಮುಖ್ಯಾಧಿಕಾರಿ ಹೇಳುತ್ತಿಲ್ಲ’ ಎಂದು ಹರಿಹಾಯ್ದರು.
ಬಡಾವಣೆಯ ನಿವಾಸಿಗಳಾದ ಬಸವರಾಜ ಕೋಳೂರ, ಪರಶುರಾಮ ನಾಲತವಾಡ,ಬಾಬು ಬಳಗಾನೂರ, ಬುಡ್ಡಾ ಮುಲ್ಲಾ,ವಿಷ್ಣು ದಳವಾಯಿ, ಚಂದ್ರಶೇಖರ ಮಹಾಲಿಂಗಪೂರ,ಶಿವಪ್ಪ ಬೆನಕಟ್ಟಿ, ಬಸವರಾಜ ಕಲಾದಗಿ,ರಾಜು ಪಾತ್ರೋಟ,ನಾರಾಯಣ ಮಿರಜಕರ್, ಮಂಜು ಚಲವಾದಿ ನೂರಾರು ಜನ ಇದ್ದರು.
ತಹಶೀಲ್ದಾರ್ ಭೇಟಿ: ಧರಣಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ KEERTI CHALAK ಪ್ರತಿಭಟನಾಕಾರರ ಮನವಿ ಆಲಿಸಿದರು.ಅಲ್ಲಿನ ಜಾಗೆಯ ಮೇಲೆ ತಡೆಯಾಜ್ಞೆ ಇದ್ದು ಅದರ ಬಗ್ಗೆ ಪರಿಶೀಲನೆ ನಡೆಸಿ ಉತಾರೆ ನೀಡುವ ಬಗ್ಗೆ ಮುಖ್ಯಾಧಿಕಾರಿಗಳೊಂದಿಗೆ ಮಾತನಾಡುತ್ತೇನೆ.ದರಣಿ ಹಿಂದಕ್ಕೆ ಪಡೆದುಕೊಳ್ಳುವಂತೆ ವಿನಂತಿಸಿದರೂ ಅದಕ್ಕೆ ಧರಣಿ ನಿರತರು ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಬರುವವರೆಗೂ ಹೋರಾಟ ಕೈ ಬಿಡುವುದಿಲ್ಲ ಎಂದು ಧರಣಿ ಮುಂದುವರೆಸಿದರು.

Latest News

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಸದಾ ಮುಖ ಗಂಟು ಹಾಕಿಕೊಂಡು ಇರಬೇಡಿ-ಜಯಸಿದ್ದೇಶ್ವರ ಶ್ರೀ

ಮುದ್ದೇಬಿಹಾಳ : ಹಣ, ಆಸ್ತಿ, ಅಂತಸ್ತು, ಐಶ್ವರ್ಯ, ಉದ್ಯೋಗ ಮುಂತಾದವುಗಳ ಕೊರತೆಯಿಂದ ಮನುಷ್ಯ ಬಡವನಾಗುವುದಿಲ್ಲ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಏಳನೇ ಚಾತುರ್ಮಾಸ್ಯ ಕಾರ್ಯಕ್ರಮಕ್ಕೆ ಚಾಲನೆ: ಹುಣಶಿಹೊಳೆ ಕಣ್ವಮಠದ ವಿದ್ಯಾಕಣ್ವವಿರಾಜ್ ತೀರ್ಥರ ಭವ್ಯ ಮೆರವಣಿಗೆ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ,ಪದ ಪ್ರದಾನ ಹಾಗೂ ಜಾನಪದ

ಅಂತರ್‌ರಾಜ್ಯ ಕಳ್ಳರ ಬಂಧನ :                                       ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಅಂತರ್‌ರಾಜ್ಯ ಕಳ್ಳರ ಬಂಧನ : ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ): ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ ಕ್ಷೇತ್ರದಿಂದ ಶೇ.82.47 ರಷ್ಟು ಪ್ರಗತಿ ಸಾಧನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಮತಗಟ್ಟೆ ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸುತ್ತಿದ್ದು ಈವರೆಗೆ ಶೇ.82.47ರಷ್ಟು ಗಣತಿ ನಮೂನೆಗಳನ್ನು ಗಣಕೀಕರಣಗೊಳಿಸಲಾಗಿದೆ ಎಂದು ಮತದಾರರ ನೋಂದಣಾಧಿಕಾರಿ ಬಿ.ಎ.ಸೌದಾಗರ ಹೇಳಿದರು. ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಮಂಗಳವಾರ ಎಸ್.ಆಯ್.ಆರ್ ಪ್ರಕ್ರಿಯೆಯಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಿದ ಮೇಲ್ವಿಚಾರಕರು,ಬಿಎಲ್‌ಓಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಗೈರು ಹಾಜರಿ 1483, ಶಾಶ್ವತವಾಗಿ ಸ್ಥಳಾಂತರಗೊAಡವರು 16331,8505 ಮತದಾರರು ಮರಣ ಹೊಂದಿದ್ದಾರೆ ಎಂದು ತಿಳಿಸಿದರು. ಇದೇ ವೇಳೆ ಬಿಎಲ್‌ಓಗಳ ಸಹಕಾರದಿಂದ ಉತ್ತಮ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

58 ವರ್ಷಗಳ ಬಳಿಕ ಮುದ್ದೇಬಿಹಾಳದಲ್ಲಿ ಚಾತುರ್ಮಾಸ್ಯ ಮಹೋತ್ಸವ

ಮುದ್ದೇಬಿಹಾಳ : ಪಟ್ಟಣದಲ್ಲಿ ಸುಮಾರು 58 ವರ್ಷಗಳ ಬಳಿಕ ಪ್ರಥಮವಾಗಿ ಹುಣಶಿಹೊಳೆ ಕಣ್ವಮಠದ ಪೀಠಾಧಿಕಾರಿಗಳಾದ ವಿದ್ಯಾಕಣ್ವವಿರಾಜ್ ತೀರ್ಥ ಶ್ರೀಗಳು ತಮ್ಮ ಏಳನೇ ಚಾತುರ್ಮಾಸ್ಯವನ್ನು ಆ.8 ರಿಂದ ಸೆ.26ರವರೆಗೆ ಕೈಗೊಳ್ಳಲಿದ್ದಾರೆ ಎಂದು ಮಹೋತ್ಸವ ಸಮೀತಿ ಅಧ್ಯಕ್ಷ ಅನೀಲಕುಮಾರ ಕುಲಕರ್ಣಿ ಹೇಳಿದರು. ಪಟ್ಟಣದ ಪಟ್ಟಣದ ಶ್ರೀ ಶಿವ ಚಿದಂಬರ ದೇವಸ್ಥಾನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಸಪ್ತಮ ಚಾತುರ್ಮಾಸ್ಯದ ಕುರಿತು ಅವರು ವಿವರಿಸಿದರು.ಮುದ್ದೇಬಿಹಾಳ ಪಟ್ಟಣದಲ್ಲಿ ಸುಮಾರು 58 ವರ್ಷಗಳ ಹಿಂದೆ ಹುಣಶಿಹೊಳೆ ಕಣ್ವಮಠದ ವಿದ್ಯಾತಪೋನಿಧಿ