ಇಳಕಲ್: ಐಟಿಐ ಮುಗಿಸಿ ಕೌಶಲ್ಯ ಹೊಂದಿದ ವಿದ್ಯಾರ್ಥಿಗಳಿಗೆ ಸರಕಾರವೇ ಹಣಕಾಸು ನೆರವು ನೀಡಿ ವಿದೇಶಗಳಿಗೆ ಕಳಿಸುತ್ತಾರೆ, ಇದರ ಸದುಪಯೋಗ ಪಡೆದು ಉನ್ನತ ಜೀವನ ಸಾಗಿಸಬೇಕು ಎಂದು ಕೂಡಲಸಂಗಮದ ಜಿ.ಟಿ.ಟಿ.ಸಿ. ಉಪನ್ಯಾಸಕ ವಿಶ್ವನಾಥ ಹೊಕ್ರಾಣಿ ತಿಳಿಸಿದರು.
ಇಳಕಲ್ಲಿನ ಶ್ರೀವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ, ಶ್ರೀ ಜಗದ್ಗುರು ಗಂಗಾಧರ ಮೂರುಸಾವಿರಮಠ, ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಅಖಿಲ ಭಾರತ ವೃತ್ತಿ ಪರೀಕ್ಷೆ-2022-24 ರಲ್ಲಿ ಉತ್ತೀರ್ಣರಾದ ತರಬೇತಾರ್ಥಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಘಟಿಕೋತ್ಸವ ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಇಳಕಲ್ ನಗರಸಭೆ ಅಧ್ಯಕ್ಷೆ ಶ್ರೀಮತಿ ಸುಧಾರಾಣಿ ಮುರುಗೇಶ ಸಂಗಮ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಐಟಿಐ ಶಿಕ್ಷಣ ಪಡೆದು ಸ್ವಾವಲಂಬಿ ಬದುಕು ಸಾಗಿಸಬೇಕು ಎಂದು ಹೇಳಿದರು.
ಬೆಂಗಳೂರಿನ ಟೊಯೊಟಾ ಕಿರ್ಲೋಸ್ಕರ್ ಮೋಟರ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಚಿದಾನಂದ ಹಿರೇಮಠ ಮಾತನಾಡಿ ಸಹಾಯ ಕೇಳುವ, ಕ್ಷಮೆ ಕೋರುವ ಹಾಗೂ ಧನ್ಯವಾದಗಳು ಅರ್ಪಿಸುವ ಈ ಮೂರು ಗುಣಗಳನ್ನು ಬೆಳೆಸಿಕೋಂಡರೆ, ಜೀವನದಲ್ಲಿ ಯಶಸ್ಸಯ ಶತಸಿದ್ದ. ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಸ್ಥೆಯ ಚೇರಮನ್ ಬಸವರಾಜ ಕೆ. ಗೋಟೂರ ವಹಿಸಿದ್ದರು.
ನಗರಸಭೆಯ ಉಪಾಧ್ಯಕ್ಷೆ ಶ್ರೀಮತಿ ಕಾಳಮ್ಮ ವಿ, ಜಕ್ಕಾ ಹಾಗೂ ವೀದಿಕೆ ಮೇಲಿದ್ದ ಗಣ್ಯರು ತೇರ್ಗಡೆಹೊಂದಿದ ತರಬೇತಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು,
ಕಾರ‍್ಯಕ್ರಮದಲ್ಲಿ ತರಬೇತಿ ಅಧಿಕಾರಿಗಳಾದ ಎಂ.ಎಸ್.ಬೆಳವಣಿಕಿ ಹಾಗೂ ಡಬ್ಲು.ಎಚ್. ಢಾಲಾಯತ್ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಚಾರ್ಯ ಕೆ.ಎನ್.ಮಧುರಕರ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಗಣ್ಯರಿಗೆ ಸ್ವಾಗತಿಸಿದರು. ಬಸವರಾಜ ಅಂಗಡಿ ವಂದಿಸಿದರು. ಪ್ರಕಾಶ ಸಾರವಾಡ ಹಾಗೂ ಮಹಾಂತೇಶ ಚಿಂತಾಮಣಿ ನಿರೂಪಿಸಿದರು.