ಮೈಸೂರು: ಪ್ರೀತಿಯ ವೈಫಲ್ಯದಿಂದ ಬೇಸತ್ತ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ತಾಲೂಕಿನ ಹಡಜನ ಗ್ರಾಮದಲ್ಲಿ ಸಂಭವಿಸಿದೆ. (Love failure)
Join Our Telegram: https://t.me/dcgkannada
ಮೃತನನ್ನು 28 ವರ್ಷದ ಮಧುಸೂಧನ್ ಎಂದು ತಿಳಿದು ಬಂದಿದೆ.
ಕಳೆದ ಕೆಲ ತಿಂಗಳಿಂದ ಮಧುಸೂಧನ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಈ ವಿಚಾರ ಯುವತಿಯ ಮನೆಯಲ್ಲಿ ತಿಳಿದು ಆಕೆಗೆ ಬುದ್ಧಿವಾದ ಹೇಳಿದ್ದಾರೆ.
ಮನೆಯವರ ಮಾತಿಗೆ ಕಟ್ಟುಬಿದ್ದ ಯುವತಿ ಮಧುಸೂಧನ್ ನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದಾಳೆ. ಇದರಿಂದ ಮನನೊಂದ ಯುವಕ ಇಲಿ ಪಾಶಾನ ಔಷಧಿಯನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. (Love failure)
ಆದರೆ, ಅದರಿಂದ ಏನು ಅಗದ ಹಿನ್ನೆಲೆ ಮತ್ತೆ ಮೂರು ಇಲಿ ಔಷಧಿಯನ್ನು ತಂದು ಆರೇಂಜ್ ಜ್ಯೂಸ್ ಗೆ ಮಿಶ್ರಣ ಮಾಡಿ ಕುಡಿದಿದ್ದಾನೆ.
ಅಲ್ಲದೆ, ಇದೆಲ್ಲವನ್ನೂ ಮಧುಸೂಧನ್ ವಿಡಿಯೋವನ್ನು ಕೂಡ ಮಾಡಿದ್ದಾನೆ. ವಿಡಿಯೋದಲ್ಲಿ ತನ್ನ ಸಾವಿಗೆ ಯುವತಿ ಹಾಗೂ ಆಕೆಯ ಮನೆಯವರೇ ಕಾರಣ ಎಂದು ಹೇಳಿದ್ದಾನೆ.
ಇದನ್ನೂ ಓದಿ: ಅತ್ಯಾಚಾರಿಗಳಿಗೆ ಭಯ ಹುಟ್ಟಿಸುವ ಕಾನೂನು ರೂಪಿಸಿ: ಕರ್ನಾಟಕ ಮುಸ್ಲಿಂ ಫೋರಂ ಆಗ್ರಹ (ವಿಡಿಯೋ ನೋಡಿ)
ವಿಷಯ ತಿಳಿದ ಕೂಡಲೇ ಪೋಷಕರು ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮಧುಸೂಧನ್ ಸಾವನಪ್ಪಿದ್ದಾನೆ ಎಂದು ತಿಳಿದು ಬಂದಿದೆ.