ಮುದ್ದೇಬಿಹಾಳ : ಪ್ರಸ್ತುತ ರಾಜ್ಯಪಾಲರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಕುರಿತು ಮುಡಾ ಪ್ರಕರಣದಲ್ಲಿ ತನಿಖೆಗೆ ಅನುಮತಿ ನೀಡಿರುವುದು ಏಕಪಕ್ಷೀಯ ಹಾಗೂ ನಿರಾಧಾರವಾಗಿದೆ. ಅದು ಖಂಡನೀಯ ಎಂದು ಕಾಂಗ್ರೆಸ್ ನಾಯಕಿ ಸಂಗೀತಾ ನಾಡಗೌಡ ಅವರು ಪ್ರತಿಕ್ರಿಯೆ (Muda Case Reaction) ನೀಡಿದ್ದಾರೆ.
Join Our Telegram: https://t.me/dcgkannada
ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯಪಾಲರಿಗೆ ಈ ಅಧಿಕಾರವನ್ನು ನಮ್ಮ ಸಂವಿಧಾನ ನೀಡಿದ್ದರೂ, ಪ್ರಕರಣದ ಪೂರ್ವಾಪರಗಳನ್ನು ಪರಾಮರ್ಶಿಸದೇ ತರಾತುರಿಯಲ್ಲಿ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಇದು ಹಲವಾರು ಸಂಶಯಗಳಿಗೆ ಎಡೆಮಾಡಿ ಕೊಟ್ಟಿದೆ ಎಂದಿದ್ದಾರೆ.
ಇದಕ್ಕೆ ಪುಷ್ಟಿ ನೀಡುವಂತೆ, ರಾಜ್ಯಪಾಲರು ತಾವು ನೀಡಿದ ಹದಿನಾರು ಪುಟಗಳ ವರದಿಯಲ್ಲಿಯೇ, “ಮೇಲ್ನೋಟಕ್ಕೆ ಮಾತ್ರ ಈ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ಹೆಸರು ಕೇಳಿ ಬರುತ್ತಿದೆ… ” ಎಂದು ಸ್ಪಷ್ಟವಾಗಿ ಉಲ್ಲೇಖಸಿರುವುದು, ಸನ್ಮಾನ್ಯ ರಾಜ್ಯಪಾಲರು ಯಾವುದೋ ಒತ್ತಡಕ್ಕೆ ಮಣಿದು ಈ ನಿರ್ಧಾರ ಕೈಗೊಂಡಿದ್ದಾರೆ ಎಂಬುದು ರಾಜ್ಯದ ಜನತೆಗೆ ಮನವರಿಕೆಯಾಗಿದೆ ಎಂದು (Muda Case Recation) ತಿಳಿಸಿದ್ದಾರೆ.
ಇದನ್ನೂ ಓದಿ: CM Siddaramaiah ದೆಹಲಿಗೆ, ಕುತೂಹಲ ಮೂಡಿಸಿದ ಸಿಎಂ ರಾಜಕೀಯ ನಡೆ!
ಬೇರೆ ಪಕ್ಷದ ಹಲವಾರು ನಾಯಕರ ವಿರುದ್ಧ ಹಲವಾರು ಪ್ರಕರಣಗಳು ರಾಜ್ಯಪಾಲರ ಮುಂದೇ ಇದ್ದರೂ, ಇದೇ ಒಂದು ಪ್ರಕರಣದಲ್ಲಿ ರಾಜ್ಯಪಾಲರಿಗೆ ಏಕಿಷ್ಟು ಆಸಕ್ತಿ ಎಂಬುದು ಸಧ್ಯದ ಪ್ರಶ್ನೆಯಾಗಿದೆ. ತಮ್ಮ ಸುಧೀರ್ಘ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪು ಚುಕ್ಕೆ ಹೊಂದಿರದ ಸಿದ್ದರಾಮಯ್ಯನವರು ಕಾನೂನು ಪ್ರಕ್ರಿಯೆಯಲ್ಲಿ ಮತ್ತೆ ಪುಟಕ್ಕಿಟ್ಟ ಚಿನ್ನದಂತೆ ಹೊರಬರುವುದು ಮಾತ್ರ ಸತ್ಯವಾಗಿದೆ. ರಾಜ್ಯಪಾಲರ ಈ ನಡೆ ಮಾತ್ರ ಖಂಡನೀಯ ಎಂದು ಸಂಗೀತಾ ನಾಡಗೌಡ ತಿಳಿಸಿದ್ದಾರೆ.