ಮುದ್ದೇಬಿಹಾಳ : ಸಿ.ಜಿ.ನಾಗರಾಳ ಶರಣ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ

ಮುದ್ದೇಬಿಹಾಳ : ಸಿ.ಜಿ.ನಾಗರಾಳ ಶರಣ ಸಾಹಿತ್ಯ ಪರಿಷತ್ತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆ

ಮುದ್ದೇಬಿಹಾಳ : ತಾಲೂಕಿನ ಶರಣ ಸಾಹಿತ್ಯ ಪರಿಷತ್ತಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಚಂದ್ರಶೇಖರ ಜಿ.ನಾಗರಾಳ ಅವಿರೋಧವಾಗಿ ಆಯ್ಕೆಯಾದರು.

ಪಟ್ಟಣದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಂಭುನಾಥ ಕಂಚ್ಯಾಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಸಿ.ಜಿ.ನಾಗರಾಳ ಅವರ ಹೆಸರನ್ನು ಸಂಗಣ್ಣ ಕಂಚ್ಯಾಣಿ ಸೂಚಿಸಿದರು.ಮುದ್ದೇಬಿಹಾಳ ತಾಲೂಕಾ ಸರಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಅಶೋಕ ಮಣಿ ಅನುಮೋದಿಸಿದರು.
ಅಧಿಕಾರ ವಹಿಸಿಕೊಂಡು ಶಸಾಪ ನೂತನ ಅಧ್ಯಕ್ಷ ಸಿ.ಜಿ.ನಾಗರಾಳ ಮಾತನಾಡಿ,ನಾನು ಎಂದೂ ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ.ಆದರೆ ಸಭೆಯಲ್ಲಿರುವ ಎಲ್ಲಾ ಗಣ್ಯಮಾನ್ಯರು ,ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟು ಅಧ್ಯಕ್ಷನನ್ನಾಗಿ ಮಾಡಿದ್ದೀರಿ.ತಮ್ಮೆಲ್ಲರ ಆಶಯದಂತೆ ಹಾಗೂ ಪರಿಷತ್ತಿನ ನಿಯಮಾವಳಿಗಳಿಗೆ ಬದ್ಧನಾಗಿ ಕಾರ್ಯನಿರ್ವಹಿಸುತ್ತೇನೆ ಹಾಗೂ ತಮ್ಮೆಲ್ಲರಿಗೆ ನಾನು ಕೃತಜ್ಞನಾಗಿದ್ದೇನೆ ಎಂದರು.
ಹಿರಿಯ ಸಾಹಿತಿ ಪ್ತೊ.ಬಿ.ಎಂ.ಹಿರೇಮಠ ಮಾತನಾಡಿ,ಮನುಷ್ಯನಿಗೆ ಅಧಿಕಾರದ ಮದ ಹಾಗೂ ಅಹಂಕಾರ ಇರಬಾರದು.ನಿಸ್ವಾರ್ಥ ರೀತಿಯಿಂದ ಸೇವೆ ಸಲ್ಲಿಸಬೇಕು,ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾದ ಚಂದ್ರಶೇಖರ ನಾಗರಾಳ ಅವರು ಸಮರ್ಥರಿದ್ದಾರೆ.ಸುತ್ತೂರು ಶ್ರೀಗಳು ಹಾಗೂ ಪೂಜ್ಯ ಸಿದ್ದೇಶ್ವರ ಶ್ರೀಗಳ ಆಶೀರ್ವಾದದಿಂದ ಈ ಮುದ್ದೇಬಿಹಾಳ ತಾಲೂಕಿನ ಶರಣ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದೆ.ಇದರ ಸಂಸ್ಥಾಪಕ ಅಧ್ಯಕ್ಷನಾಗಿ ನಾನು ನಿಯತ್ತಿನಿಂದ ಕಾರ್ಯನಿರ್ವಹಿಸಿದ್ದೇನೆ ಎಂದು ತಮ್ಮ ಗತಕಾಲದ ಸವಿ ನೆನಪುಗಳನ್ನು ಹಂಚಿಕೊAಡರು.
ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಜಂಭುನಾಥ ಕಂಚ್ಯಾಣಿ,ನಿಕಟಪೂರ್ವ ಅಧ್ಯಕ್ಷ ಬಸವರಾಜ ನಾಲತವಾಡ,ಪ್ರೊ.ವ್ಹಿ.ಡಿ.ಐಹೊಳ್ಳಿ, ವ್ಹಿ.ಸಿ.ನಾಗಠಾಣ,ಬಸವರಾಜ ಕೋರಿ ಮಾತನಾಡಿದರು.ಸಭೆಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಚ ಎಂ.ಜಿ.ಯಾದವಾಡ, ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವ್ಹಿ.ಸಿ.ನಾಗಠಾಣ,ಹಿರಿಯ ಸಾಹಿತಿಗಳಾದ ಪ್ತೊ.ಬಿ.ಎಂ.ಹಿರೇಮಠ ಹಾಗೂ ಪ್ರೊ.ವ್ಹಿ.ಡಿ.ಐಹೊಳ್ಳಿ ಇದ್ದರು.
ಹಿರಿಯ ಸಾಹಿತಿಗಳಾದ ಚಂದ್ರಶೇಖರ ಇಟಗಿ,ರುದ್ರೇಶ ಕಿತ್ತೂರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎA.ಬೆಳಗಲ್,ಬಾಪೂಗೌಡ ಪಂ. ಪಾಟೀಲ್, ಸಿದ್ದನಗೌಡ ಬಿಜ್ಜೂರ, ಬಸವರಾಜ ಲಿಂಗದಳ್ಳಿ,ಶ್ರೀಶೈಲ ಎಸ್.ಕೆ, ಎಸ್.ಎಸ್.ಹುನಗುಂದ, ಎಂ.ಎಸ್.ಬಿರಾದಾರ, ಎಸ್.ಆರ್.ಗೌಡರ, ಪತ್ರಕರ್ತ ದಾನಯ್ಯ ಹಿರೇಮಠ, ಎಸ್.ಎಸ್.ಕಲ್ಯಾಣಿ,ಸಂಗಣ್ಣ ಕಂಚ್ಯಾಣಿ,ನ್ಯಾಯವಾದಿ ಎನ್.ಆರ್.ಮೊಕಾಶಿ,ಎಚ್.ಬಿ.ದಳವಾಯಿ,ಎಂ.ಬಿ.ಗುಡಗುAಟಿ,ಎA.ಬಿ.ಪಾಟೀಲ್, ಸಂಗಣ್ಣ ಶಿವಣಗಿ ಮೊದಲಾದವರು ಪಾಲ್ಗೊಂಡಿದ್ದರು.
ಬಸವ ಮಹಾಮನೆ ಸಮೀತಿಯ ಅಧ್ಯಕ್ಷ ಎಸ್.ಎ.ಬೇವಿನಗಿಡದ ಸ್ವಾಗತಿಸಿದರು.ಜಿಲ್ಲಾ ಶರಣಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಈರಣ್ಣ ತೊಂಡಿಕಟ್ಟಿ ವಂದಿಸಿದರು,ಹಿರಿಯ ಸಾಹಿತಿ ಅಶೋಕ ಮಣಿ ಕಾರ್ಯಕ್ರಮ ನಿರೂಪಿಸಿದರು.

Latest News

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ:                                                                                   ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಕಾನಿಪ ಧ್ವನಿ ಸಂಘಟನೆಯಿOದ ರಾಜ್ಯಪಾಲರು,ಸಿಎಂಗೆ ಮನವಿ: ‘ತಗಡೂರುಗೆ ಕೊಟ್ಟಿರುವ ಅಕಾಡೆಮಿ ಪ್ರಶಸ್ತಿ,ಸ್ಥಾನಮಾನ ಅನರ್ಹಗೊಳಿಸಿ’

ಮುದ್ದೇಬಿಹಾಳ : ರಾಜ್ಯಮಟ್ಟದ ದಿನಪತ್ರಿಕೆಯೊಂದರಲ್ಲಿ ಬೆಂಗಳೂರು ನಗರ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಯನಿರತ ಪತ್ರಕರ್ತರ ಸಂಘದ

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಅಂಜುಮನ್ ಕಮೀಟಿ ನೂತನ ಪದಾಧಿಕಾರಿಗಳ ಸನ್ಮಾನ: ಶೈಕ್ಷಣಿಕೆ ಪ್ರಗತಿಗೆ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿ-ಮನಿಯಾರ್

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆ ಕೇವಲ ಬಡವರು,ಅನಾಥರು ಆರ್ಥಿಕವಾಗಿ ಹಿಂದುಳಿದವರಿಗಾಗಿ ಸಮಾಜದ ಪ್ರತಿಯೊಬ್ಬರಿಗೂ ಸೇರಿದ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ :                                           ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ : ಅಂಜುಮನ್ ಕಮೀಟಿಗೆ ಅಲ್ಲಾಭಕ್ಷ ದೇಸಾಯಿ(ಲಾರಾ) ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಮುದ್ದೇಬಿಹಾಳ : ಪಟ್ಟಣದ ಪ್ರತಿಷ್ಠಿತ ಅಂಜುಮನ್ ಇಸ್ಲಾಂ ಕಮೀಟಿಯ ನೂತನ ಪದಾಧಿಕಾರಿಗಳನ್ನು ಸೋಮವಾರ ಆಯ್ಕೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ನಿಯಮ ಉಲ್ಲಂಘಿಸಿ ಚುನಾವಣೆಗೆ ಮುಂದಾದರೇ ಅಧಿಕಾರಿ? : ಆ.31 ರಂದು ಅಂಜುಮನ್ ಕಮೀಟಿ ಅಧ್ಯಕ್ಷ,ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ

ಮುದ್ದೇಬಿಹಾಳ : ಕರ್ನಾಟಕ ವಕ್ಭ್ ಕಾಯ್ದೆ 1995ರ ಸಂಬAಧಿತ ನಿಬಂಧನೆಗಳು ಹಾಗೂ ಕರ್ನಾಟಕ ರಾಜ್ಯ

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ  ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಅಂಜುಮನ್ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ಕೊಡದ ಚುನಾವಣಾಧಿಕಾರಿ…!

ಮುದ್ದೇಬಿಹಾಳ : ಅಂಜುಮನ್ ಇಸ್ಲಾಂ ಕಮೀಟಿಗೆ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಕೊಡುವ ಕಾರ್ಯ ಚುನಾವಣಾಧಿಕಾರಿಗಳಿಂದ ಆಗದೇ ಇರುವುದು ಅಚ್ಚರಿ ಹಾಗೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.ನ್ಯಾಯಾಲಯದ ಆದೇಶಕ್ಕೆ ಒಳಪಟ್ಟಂತೆ ಫಲಿತಾಂಶ ಪ್ರಕಟಿಸಿರುವ ಚುನಾವಣಾಧಿಕಾರಿಯೂ ಆಗಿರುವ ಔದ್ರಾಮ್ ಹಾಗೂ ಕೇರ್‌ಟೇಕರ್ ಆಗಿರುವ ತಬಸ್ಸುಮ ಮುಲ್ಲಾ ಅವರು ಆಯ್ಕೆಯಾದ ಸದಸ್ಯರಿಗೆ ಪ್ರಮಾಣಪತ್ರ ಕೊಡದೇ ಇರುವುದು ಯಾತಕ್ಕಾಗಿ ಎಂಬುದು ಆಯ್ಕೆಯಾಗಿರುವ ಹಲವು ಸದಸ್ಯರ ಪ್ರಶ್ನೆಯಾಗಿದೆ. ಸಾಮಾನ್ಯವಾಗಿ ಯಾವುದೇ ಚುನಾವಣೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕಾನೂನು ಬದ್ಧವಾಗಿ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ;                                        ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಬ್ರಹ್ಮಶ್ರೀ ನಾರಾಯಣಗುರು ಜಯಂತಿ; ಅನಿಷ್ಠ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಮಹಾನ್ ಸಂತ

ಮುದ್ದೇಬಿಹಾಳ : ಅನಿಷ್ಠ ಪದ್ಧತಿಗಳ ವಿರುದ್ಧ ಹೋರಾಡಿ ಜಾಗೃತಿ ಮೂಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರು ಅವರು ಎಂದು ತಹಶೀಲ್ದಾರ್ ಆನಂದ ಕೋಲಾರ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರದ ಎದುರಿಗೆ ಇರುವ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯ ಈಡಿಗ ಸಮಾಜದ ಅಧ್ಯಕ್ಷ ಎ.ಗಣೇಶ ಅನ್ನಗೌನಿ,ಮುಖಂಡರಾದ ಟಿ.ವಿಜಯಭಾಸ್ಕರ್,ಎ.ಚಂದ್ರಶೇಖರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ