ಮುದ್ದೇಬಿಹಾಳ : ಶರಣ ವೀರೇಶ್ವರರ ಹೆಸರಿನಲ್ಲಿ (Muddebihal) ಸ್ಥಾಪಿತವಾದ ಬ್ಯಾಂಕ್‌ನಿಂದ ರೈತರು, ವ್ಯಾಪಾರಿಗಳ ಆರ್ಥಿಕ ಚೈತನ್ಯಕ್ಕೆ ಸಹಕಾರ ನೀಡುವ ಕಾರ್ಯ ಮುಂದೆ ಸಾಗಲಿ ಎಂದು ಉಪ್ಪಿನಬೆಟಗೇರಿ ವಿರುಪಾಕ್ಷ ಸ್ವಾಮೀಜಿ ಹೇಳಿದರು.
Join Our Telegram: https://t.me/dcgkannada
ಪಟ್ಟಣದ ದಾನೇಶ್ವರಿ ಪೆಟ್ರೋಲ್ ಹಿಂಭಾಗದಲ್ಲಿ ಬುಧವಾರ ನಾಲತವಾಡದ ಶರಣ ವೀರೇಶ್ವರ ಬ್ಯಾಂಕ್ ನೂತನ ಶಾಖೆಯ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಶಿವಯೋಗಮಂದಿರದಲ್ಲಿ ಶರಣ ವೀರೇಶ್ವರರ ಪುತ್ಥಳಿ ಅವರ ಹೆಸರಿನ ಉದ್ಯಾನವನ ಇದೆ. ಅಲ್ಲಿ ಜಂಗಮ ವಟುಗಳಿಗೆ ಪಾಠ ಶಾಲೆಯಾಗಿದ್ದು ಶ್ರೇಷ್ಠ ಶರಣರ ಹೆಸರಿನಲ್ಲಿ ಬ್ಯಾಂಕು ಉತ್ತಮ ಅಭಿವೃದ್ಧಿ ಹೊಂದಿದೆ ಎಂದರು.
ಇದನ್ನೂ ಓದಿ: Murder: ಆಸ್ತಿ ವಿಚಾರಕ್ಕೆ ಗಲಾಟೆ; ಮಚ್ಚಿನಿಂದ ಅಪ್ಪನನ್ನೆ ಕೊಚ್ಚಿ ಕೊಂದ ಪಾಪಿ ಮಗ..!
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತೀಶ ಓಸ್ವಾಲ್ ಮಾತನಾಡಿ, ದಿ.ಬಿ.ಎಂ.ಅಂಗಡಿ ಅವರು ಹುಟ್ಟು ಹಾಕಿದ ಬ್ಯಾಂಕು ಇಂದು ಹೆಮ್ಮರವಾಗಿ ಬೆಳೆದಿದೆ.ಬ್ಯಾಂಕುಗಳ ಆರ್ಥಿಕ ಸದೃಢತೆಗೆ ಗ್ರಾಹಕರ ನಿಯಮಿತ ವ್ಯವಹಾರ ಆಧಾರವಾಗಿದೆ ಎಂದರು.
ಕೂಡಲಸಂಗಮ ಪಂಚಮಸಾಲಿ ಗುರುಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ,ಬ್ಯಾಂಕ್ ಅಧ್ಯಕ್ಷ ಮಹಾಂತಪ್ಪಗೌಡ ಪಾಟೀಲ್, ಗಣ್ಯ ವರ್ತಕ ಬಿ.ಸಿ.ಮೋಟಗಿ,ಸಲಹಾ ಸಮಿತಿ ಪ್ರಮುಖ ಶಾಂತಪ್ಪ ಕಮತ, ಯುವ ಉದ್ಯಮಿ ಭರತಗೌಡ ಪಾಟೀಲ ನಡಹಳ್ಳಿ, ಬ್ಯಾಂಕ ಪ್ರಧಾನ ವ್ಯವಸ್ಥಾಪಕ ನಾಗರಾಜ ಗಂಗನಗೌಡರ ಇದ್ದರು.ಡಿ.ಆರ್.ಮಳಖೇಡ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೀರೇಶ ಬಂಗಾರಗುಂಡ ವಚನಗೀತೆಗೆ ಭರತನಾಟ್ಯ ನೃತ್ಯಗೈದರು. ಸಂಗಮೇಶ ಶಿವಣಗಿ ಸಂಗಡಿಗರು ಪ್ರಾರ್ಥಿಸಿದರು. ರಾಜು ಹಾದಿಮನಿ ನಿರೂಪಿಸಿದರು.