ಹೈದರಾಬಾದ್: ಹೇಮಾ ಸಮಿತಿ ವರದಿ (Hema Committee Report) ಬಂದ ನಂತರ ಮಾಲಿವುಡ್(Molly wood) ಸಿನಿಮಾರಂಗದಲ್ಲಿ ಒಂದೊಂದೇ ಲೈಂಗಿಕ ಕಿರುಕುಳ ಪ್ರಕರಣ ಬೆಳಕಿಗೆ ಬರುತ್ತಿರುವುದು ಗಮನಾರ್ಹ ಸಂಗತಿ.
ಹೌದು, ಇದೀಗ ಆಂಧ್ರ ಪ್ರದೇಶದ ರಾಜಕಾರಣಿಯೊಬ್ಬರ ಮೇಲೆ ನಟಿಯೊಬ್ಬರು ಮಾಡಿರುವ ಲೈಂಗಿಕ, ಮಾನಸಿಕ ಹಿಂಸೆಯ ಆರೋಪ ಆಂದ್ರಪ್ರದೇಶದ ರಾಜಕೀಯ ಹಾಗೂ ಸಿನಿರಂಗದಲ್ಲೂ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಕಾದಂಬರಿ ಜೇತ್ವಾನಿ (Actress Kadambari Jetwani) ಬಣ್ಣದ ಲೋಕ್ಕೆ ಕಾಲಿಡುವ ಮುನ್ನ ಮುಂಬೈನಲ್ಲಿ ಮಾಡೆಲ್ ಆಗಿದ್ದರು. 2012ರಲ್ಲಿ ಬಂದ ʼಸಡ್ಡಾ ಅಡ್ಡಾʼ ಸಿನಿಮಾದಲ್ಲಿ ಕಾಣಿಸಿಕೊಂಡ ಬಳಿಕ 2015ರಲ್ಲಿ ಬಂದ ‘ಯೂಜಾ’ ಎನ್ನುವ ತೆಲುಗು ಚಿತ್ರಕ್ಕೆ ನಾಯಕಿಯಾಗಿಯೂ ಆಯ್ಕೆ ಆಗಿದ್ದರು.
ಹೀಗೆ, ಬಣ್ಣದ ಲೋಕದಲ್ಲಿ ತನ್ನ ಮೋಹಕ ಅಂದದಿಂದ ಗಮನ ಸೆಳೆದಿದ್ದ ಕಾದಂಬರಿ ಜೇತ್ವಾನಿ ತೆಲುಗಿನ ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಇತ್ತೀಚೆಗೆ ಲೈವ್‌ನಲ್ಲಿ ಮಾತನಾಡುತ್ತಾ ಕಣ್ಣೀರಿಟ್ಟರು.
ಅಲ್ಲದೆ, ತನ್ನ ಮೇಲಾದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡಿ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ(Jagan Mohan Reddy ) ಅವರ ವೈಎಸ್‌ಆರ್‌ಸಿಪಿ(YSCRP) ಪಕ್ಷದ ನಾಯಕನೊಬ್ಬನ ಮೇಲೆ ಮಾಡಿರುವ ಲೈಂಗಿಕ ದೌರ್ಜನ್ಯದ ಆರೋಪ ಆಂಧ್ರದಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.
వీళ్ల వల్ల మన రాష్ట్రం పరువు పోతుంది 📷
— TDP YUVASHAKTHI (@tdpyuvashakthi) August 29, 2024
.
.
.#tdpyuvashakthi #kukkalavidyasagar #YSRCPLeaders #AndhraPradesh #YKamaParty #YSJagan #fusuck #tillutrolls #tdpyouthofficial pic.twitter.com/FbHUdr75rM
ವಿಜಯವಾಡದ ಜಿಪಂ ಮಾಜಿ ಅಧ್ಯಕ್ಷ ಕುಕ್ಕಲ ನಾಗೇಶ್ವರ ರಾವ್ ಅವರ ಮಗ ವೈಎಸ್‌ಆರ್‌ಸಿಪಿ ನಾಯಕ ಕುಕ್ಕಲ ವಿದ್ಯಾಸಾಗರ್ (Kukkala Vidya Sagar) ಎಂಬಾತ ಪ್ರತಿದಿನ ನನಗೆ ಅಶ್ಲೀಲ ಸಂದೇಶ ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದನು. ವಾಟ್ಸಾಪ್ ನಲ್ಲಿ ಕರೆ ಮಾಡಿ ಬೆತ್ತಲೆಯಾಗಿ ನಿಂತು ಸೆಲ್ಫಿ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದನು. ಅಂದಿನ ಆಂಧ್ರ ಸರ್ಕಾರದ ಪ್ರಬಲ ನಾಯಕರು, ಉನ್ನತ ಪೊಲೀಸ್ ಅಧಿಕಾರಿಗಳ ಗ್ಯಾಂಗ್ ಹಣ ಹಾಗೂ ಅಧಿಕಾರವನ್ನು ಬಳಸಿಕೊಂಡು ನನಗೆ ಚಿತ್ರಹಿಂಸೆ ನೀಡುತ್ತಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಆಂಧ್ರ ಸರ್ಕಾರದ ಆದೇಶದ ಮೇರೆಗೆ ಅದೊಂದು ದಿನ ಮುಂಬೈನಲ್ಲಿನ ನನ್ನ ಮನೆಗೆ ಆಂಧ್ರ ಪೊಲೀಸರು ದಾಳಿ ಮಾಡಿದ್ದರು. ನನ್ನನ್ನು ಅಪಹರಿಸಿ, ನನ್ನ ತಂದೆ – ತಾಯಿಯನ್ನು ಜೈಲಿಗಟ್ಟಿದ್ದರು. ಜೈಲಿನಲ್ಲಿ ನೀಡಿದ ಚಿತ್ರಹಿಂಸೆಯಿಂದಾಗಿ ನನ್ನ ತಂದೆಗೆ ಕಿವಿ ಕೇಳಿಸದಂತೆ ಆಯಿತು. ನನ್ನ ತಾಯಿಗೆ ಹೃದಯದ ಸಮಸ್ಯೆಯಾಯಿತು ಎಂದೂ ಆರೋಪಿಸಿದ್ದಾರೆ.
ಆರು ತಿಂಗಳಿಂದ ಯಾರೊಂದಿಗೂ ಮಾತನಾಡಲಿಲ್ಲ. ಯಾರಿಗಾದರೂ ಹೇಳಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈನಲ್ಲಿ ನನ್ನನ್ನು ಅಪಹರಿಸಿ ವಿಜಯವಾಡಕ್ಕೆ ಕರೆತರಲಾಯಿತು. ನನ್ನ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ನನ್ನ ಪೋಷಕರ ಫೋನ್ ವಶಪಡಿಸಿಕೊಳ್ಳಲಾಗಿದೆ. ಅವರು ನನ್ನ ಸಂಬಂಧಿಕರಿಗೆ ಬೆದರಿಕೆ ಹಾಕಿದರು ಎಂದು ಅವರು ಹೇಳಿದ್ದಾರೆ.
ನಕಲಿ ದಾಖಲೆ ಸೃಷ್ಟಿಸಿ ನನ್ನ ಮೇಲೆ ದೂರು ದಾಖಲಿಸಿ ಸುಮಾರು 45 ದಿನಗಳ ಕಾಲ ನನ್ನನ್ನು ಬಂಧಿಸಿ ಚಿತ್ರಹಿಂಸೆ ನೀಡಿದ್ದಾರೆ. ಈ ಕಾಲದಲ್ಲಿಯೂ ಮಹಿಳೆಗೆ ಈ ರೀತಿಯಾದರೆ ಮಹಿಳೆಯರಿಗೆ ಸ್ವಾತಂತ್ರ್ಯ ಎಲ್ಲಿದೆ ಎಂದು ಕಣ್ಣೀರಿಟ್ಟಿದ್ದಾರೆ.
ವಿದ್ಯಾ ಸಾಗರ್ ಪರಿಚಯವಾದದ್ದು ಹೇಗೆ?
ನನ್ನ ಮೇಲೆ ಸುಳ್ಳ ಆರೋಪ ಮಾಡಿ, ನಕಲಿ ದಾಖಲೆ ಸೃಷ್ಟಿಸಿ ನನ್ನನ್ನು ಜೈಲಿಗಟ್ಟಿದ ಈತ ನನ್ನ ಸ್ನೇಹಿತವೆಂದು ಹೇಳಿಕೊಂಡು 2009ರಿಂದ ಪರಿಚಯವಾಗಿದ್ದ. ನನ್ನ ಕುಟುಂಬದ ಬಗ್ಗೆ ಮಾತನಾಡುತ್ತಾ, ಒಳ್ಳೆಯದನ್ನು ಬಯಸುತ್ತಾ ನನ್ನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದ. ಈತ ನನ್ನ ಜೀವನದಲ್ಲಿ ಹೇಗೆಲ್ಲಾ ಮಾಡುತ್ತಾನೆ ಅಂಥ ನಾನು ಕಲ್ಪನೆಯೂ ಮಾಡಿಕೊಂಡಿರಲಿಲ್ಲ. ಅವನ ಒಳ್ಳೆಯತನದ ಹಿಂದೆ ಒಂದು ಕೆಟ್ಟ ಉದ್ದೇಶವಿತ್ತು ಎಂದು ನಟಿ ಹೇಳಿದ್ದಾರೆ.
ಚಂದ್ರಬಾಬು ನಾಯ್ಡು ಅವರು ಮುಖ್ಯಮಂತ್ರಿಯಾದ ಬಳಿಕ ನಾನು ಜೈಲಿನಿಂದ ಹೊರಬಂದಿದ್ದೇನೆ. ಅವರು ನಮ್ಮ ಜೀವನಕ್ಕೆ ದೇವರಂತೆ ಬಂದರು ಎಂದು ಅವರು ಚಂದ್ರಬಾಬು ನಾಯ್ಡು ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಸದ್ಯ ನಟಿಯ ಈ ಆರೋಪ ಆಂಧ್ರ ಪ್ರದೇಶದಲ್ಲಿ ರಾಜಕೀಯ ಸಂಚಲನ ಸೃಷ್ಟಿಸಿದೆ. ಆರೋಪಿ ವಿದ್ಯಾ ಸಾಗರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.