ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 1 ಆಗಿರುವ ಪವಿತ್ರ ಗೌಡ ಪಾಲಿಗೆ ಇದು ಶಾಕಿಂಗ್ ನ್ಯೂಸ್! (News update)
Join Our Telegram: https://t.me/dcgkannada
ಹೌದು, ಸದ್ಯ ಜೈಲಿನಲ್ಲಿರುವ ಪವಿತ್ರಗೌಡ ಜಾಮೀನಿಗಾಗಿ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ. ಇದರಿಂದ ಜೈಲಿನಿಂದ ಹೊರಬರುವ ಕನಸು ಕನಸಾಗಿಯೇ ಉಳಿದಿದ್ದು, ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. (News update)
ಇಂದು ಸಿಟಿ ಸಿವಿಲ್ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜೈಶಂಕರ್ ಅವರು, ಅರ್ಜಿಯನ್ನು ಆಗಸ್ಟ್ 27ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.
ಇತ್ತ, ಪವಿತ್ರಗೌಡಗೆ ಜಾಮೀನು ನೀಡಬಾರದು ಎಂದು SPP ವಾದ ಮಂಡಿಸಿರುವುದರಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಮತ್ತಷ್ಟು ದಿನ ಜೈಲೂಟವೇ ಗತಿ ಎನ್ನಲಾಗಿದೆ.
ಇದನ್ನೂ ಓದಿ: Vijay: ಖ್ಯಾತ ನಟ ರಾಜಕೀಯಕ್ಕೆ ಎಂಟ್ರಿ.. ಸ್ವಂತ ಪಕ್ಷದ ಧ್ವಜ, ಚಿಹ್ನೆ ಅನಾವರಣ.. (ವಿಡಿಯೋ ನೋಡಿ)
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದು, ಕೆಲ FSL ವರದಿಗಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.