ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಎಕರೆಗೆ 50 ಸಾವಿರ ರೂ.ಪರಿಹಾರ ನೀಡಿ-ಎನ್.ರವಿಕುಮಾರ್

ಮುದ್ದೇಬಿಹಾಳ : ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಭೀಕರ ಬರಗಾಲ ತಲೆದೋರಿದ್ದು ರೈತರ ಪ್ರತಿ ಎಕರೆ ಜಮೀನಿಗೆ 50 ಸಾವಿರ ರೂ.ಬರ ಪರಿಹಾರ ನೀಡಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ ಆಗ್ರಹಿಸಿದರು.

ಬಿಜೆಪಿ ನಿಯೋಗದಿಂದ ಬರ ಅಧ್ಯಯನ ಪ್ರವಾಸ ನಡೆಸುವ ಮುನ್ನ ತಾಲ್ಲೂಕಿನ ಕುಂಟೋಜಿ ಬಸವೇಶ್ವರ ದೇವಸ್ಥಾನದಲ್ಲಿ ಗುರುವಾರ ರೈತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಕೇವಲ ಕೇಂದ್ರದತ್ತ ಬೆರಳು ಮಾಡದೇ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂಬುದನ್ನು ಲೆಕ್ಕ ಕೊಟ್ಟರೆ ಕೇಂದ್ರ ಸರ್ಕಾರ ನೆರವು ನೀಡಲು ಸಾಧ್ಯವಿದೆ.ಆದರೆ ಈ ಸರ್ಕಾರ ಏನೂ ಮಾಡುತ್ತಿಲ್ಲ.ದಿಲ್ಲಿಯಲ್ಲಿ ಸಂಪುಟ ವಿಸ್ತರಣೆಯಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದರು.

ರೈತರ ಬೆಳೆವಿಮೆಯನ್ನು ಸರ್ಕಾರವೇ ಕಟ್ಟುವ ವ್ಯವಸ್ಥೆ ಮಾಡಬೇಕು.ಬರ ಬಂದರೆ ರೈತರ ಸಾಲ ಮನ್ನಾ ಮಾಡಬೇಕು.ಇದಕ್ಕೆ ನಿಯಮ ಜಾರಿ ಮಾಡಬೇಕು.ಈ ಭಾಗದಲ್ಲಿ ಹೊಟ್ಟೆಪಾಡಿಗಾಗಿ ಗುಳೇ ಹೋಗುವವರ ಸಂಖ್ಯೆ ಹೆಚ್ಚಿದೆ.ರೈತರ ಮುಂದಿನ ಜೀವನ ಚೆನ್ನಾಗಿ ಆಗಬೇಕಾದರೆ ರಾಜ್ಯದ ಎಲ್ಲ ಕೆರೆಗಳ ಹೂಳೆತ್ತೇವ ಕೆಲಸ ಸರ್ಕಾರ ಮಾಡಬೇಕು.ಕೆರೆಗಳ ಹೂಳನ್ನು ರೈತರ ಹೊಲಗಳಿಗೆ ಉಚಿತವಾಗಿ ತಗೆದುಕೊಂಡು ಹೋಗಲು ಅವಕಾಶ ನೀಡಬೇಕು.ಸದ್ಯಕ್ಕೆ ಬಿತ್ತನೆಗೆ ತ್ವರಿತವಾಗಿ 15 ಸಾವಿರ ರೂ.ಸರ್ಕಾರ ರೈತರಿಗೆ ನೀಡಬೇಕು.ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಜಲಾಶಯವನ್ನು ಎತ್ತರಿಸುವ ಕೆಲಸ ಮಾಡಿದರೆ ನಿಮ್ಮ ಫೋಟೋ ಹಾಕಿಕೊಂಡು ರೈತರು ಪೂಜೆ ಮಾಡುತ್ತಿದ್ದರು.ಆದರೆ ಈ ಗ್ಯಾರಂಟಿಗಳು ಯಾರ ಜೀವನ ಉದ್ಧಾರ ಮಾಡುತ್ತಿವೆ ಎಂಬುದು ಗೊತ್ತಾಗುತ್ತಿಲ್ಲ.ಒಂದು ಲಕ್ಷ ಕೋಟಿ ರೂ.ಗಳನ್ನು ತಂದು ಕೃಷ್ಣಾ ಕೊಳ್ಳದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಂದಾಗಬೇಕು ಎಂದು ಸರ್ಕಾರವನ್ನು ರವಿಕುಮಾರ ಆಗ್ರಹಿಸಿದರು.

ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ಕುಂಟೋಜಿಯಲ್ಲಿ ಹೊಸದಾದ ಕೆರೆ ನಿರ್ಮಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.ಮುಂದಿನ ಚುನಾವಣೆಯಲ್ಲಿ ನಮ್ಮದೇ ಸರ್ಕಾರ ಬಂದಾಗ ಖಂಡಿತವಾಗಿ ಇಲ್ಲಿ ಕೆರೆ ನಿರ್ಮಿಸಿಕೊಡುವ ಕುರಿತು ಮಾತು ನೀಡಿದ್ದೇನೆ.ಆದರೆ ಇವತ್ತಿನ ಪರಿಸ್ಥಿತಿ ಭೀಕರ ಬರಗಾಲ ಇದೆ.ಬಿತ್ತಿರುವ ಬೆಳೆ ನಾಶವಾಗಿದೆ. ಕುಡಿವ ನೀರಿನ ಸಮಸ್ಯೆ ಇದೆ.ಜಾನುವಾರುಗಳಿಗೆ ಮೇವಿನ ಕೊರತೆ ಇದೆ.ನೀರಾವರಿ ಇದ್ದ ಭಾಗದಲ್ಲಿ ಇಳುವರಿ ಕಡಿಮೆ ಆಗುವ ಆತಂಕ ಇದ್ದು ರೈತರು ಸಮಸ್ಯೆಯಲ್ಲಿದ್ದಾರೆ.ಬರಗಾಲ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲು ಸರ್ಕಾರದ ಮೇಲೆ ಒತ್ತಡ ಹೇರಲು ಸದನದಲ್ಲಿ ಬಿಜೆಪಿಯಿಂದ ಒತ್ತಾಯಿಸಬೇಕು ಎಂದು ಎನ್.ರವಿಕುಮಾರ ಅವರಿಗೆ ನಡಹಳ್ಳಿ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಮಾತನಾಡಿ,50 ವರ್ಷಗಳಲ್ಲಿ ಇಲ್ಲದ ಕಂಡರೆಯದ ಬರ ಪರಿಸ್ಥಿತಿ ಈಗ ಕಾಣುತ್ತಿದ್ದೇವೆ.ರೈತರು ಬಿತ್ತನೆ ಮಾಡಿದ್ದಾರೆ.ಬಿತ್ತಿರುವ ಬೆಳೆ ಕೈಗೆ ಬರುವ ಪರಿಸ್ಥಿತಿ ಇಲ್ಲ.ನಮ್ಮ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹಾಗೂ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತೀರ್ಮಾನದಂತೆ ರೈತನ ಮನೆ ಬಾಗಿಲಿಗೆ ಹೋಗಿ ಅವರ ಅಳಲು ಆಲಿಸುವ ಕೆಲಸ ಬಿಜೆಪಿ ತಂಡಗಳು ವಿವಿಧ ಭಾಗಗಳಲ್ಲಿ ಮಾಡುತ್ತಿದ್ದೇವೆ.ಈ ಭಾಗದಲ್ಲಿ ಸಂಪೂರ್ಣ ಬರಗಾಲ ಎಂದು ಘೋಷಣೆ ಮಾಡಬೇಕು ಎಂದು ನಮ್ಮ ಪಕ್ಷದ ವತಿಯಿಂದ ಒತ್ತಾಯಿಸುತ್ತಿದ್ದೇವೆ ಎಂದರು.
ಜಿಪA ಮಾಜಿ ಸದಸ್ಯ ಗಂಗಾಧರ ನಾಡಗೌಡ ಮಾತನಾಡಿ, ಬೆಳೆವಿಮೆ ಕಟ್ಟಿದ ರೈತರಿಗೆ ಜಿಪಿಎಸ್ ಮಾಡಲು ತಿಳಿಸುತ್ತಿದ್ದು ಜಮೀನಿನಲ್ಲಿ ಸಾಕಷ್ಟು ರೈತರು ಹರಗಿದ್ದಾರೆ.ಸರ್ಕಾರದಿಂದ ಅಧ್ಯಯನ ಕೂಡ ಆಗಿಲ್ಲ.ಬೆಳೆವಿಮೆಗೆ ಕಟ್ಟಿರುವ ಹಣ ಕೂಡಾ ವಾಪಸ್ ಬರುವುದಿಲ್ಲ.ರೈತರಿಗೆ ಸರ್ಕಾರದಿಂದ ಪರಿಹಾರ ಕೊಡಿಸಲು ಪ್ರಯತ್ನ ನಮ್ಮ ಪಕ್ಷದ ಮುಖಂಡರು ಮಾಡಬೇಕು ಎಂದರು.

ಯುವ ರೈತ ಬಸವರಾಜ ಕಾಟಿ ಮಾತನಾಡಿ, ನಾನು ಉನ್ನತ ಶಿಕ್ಷಣ ಪಡೆದುಕೊಂಡು ನೌಕರಿ ಹಿಡಿಯಬೇಕೆಂಬ ಆಸೆ ತೊರೆದು ರೈತನಾಗಬೇಕು ಎಂಬ ಆಸೆಯಿಂದ ಹೊಲ ಉಳುಮೆ ಮಾಡಲು ಮುಂದಾದರೆ ಹಾಕಿದ್ದ ಖರ್ಚು ಬರದಂತಾಯಿತು.ಸರ್ಕಾರಗಳು ನೆರವಿಗೆ ಬರುತ್ತಿಲ್ಲ.ಹೀಗಾದರೆ ಯುವಕರು ಕೃಷಿಯತ್ತ ಹೇಗೆ ಮುಖ ಮಾಡುವುದಕ್ಕೆ ಸಾಧ್ಯವಿದೆ ಎಂದು ಪ್ರಶ್ನಿಸಿದರು.ತಾಲ್ಲೂಕಿನ ಹೊಕ್ರಾಣಿ ಕ್ರಾಸ್‌ನಲ್ಲಿರುವ ರೈತನ ಜಮೀನೊಂದರಲ್ಲಿ ಬಿಜೆಪಿ ನಾಯಕರು ನಾಟಿಯಾಗದ ಬೆಳೆಯನ್ನು ವೀಕ್ಷಿಸಿದರು.ಕುಂಟೋಜಿಯ ರೈತರು ಬರ ಪರಿಸ್ಥಿತಿಯ ಕುರಿತು ಬಿಜೆಪಿ ನಾಯಕರ ಗಮನಕ್ಕೆ ತಂದರು. ರಾಯಬಾಗ ಶಾಸಕ ಧುರ್ಯೋಧನ ಐಹೊಳೆ,ಬಿಜೆಪಿ ಬೆಳಗಾವಿ ಸಹ ಪ್ರಭಾರಿ ಬಸವರಾಜ ಯಂಕoಚಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ,ಮoಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ,ಮುಖಂಡರಾದ ಎಂ.ಎಸ್.ಪಾಟೀಲ,ಮಲಕೇoದ್ರಗೌಡ ಪಾಟೀಲ,ಗುರು ದೇಶಮುಖ,ಎಂ.ಬಿ.ಅoಗಡಿ,ಕೆoಚಪ್ಪ ಬಿರಾದಾರ,ಮಲ್ಲಿಕಾರ್ಜುನ ದೇವರಮನಿ,ಗಿರೀಶಗೌಡ ಪಾಟೀಲ,ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ,ಗೌರಮ್ಮ ಹುನಗುಂದ,ಸoಗನಗೌಡ ಪಾಟೀಲ,ಅಶೋಕ ರಾಠೋಡ,ಸಂತೋಷ ಬಾದರಬಂಡಿ,ರವೀAದ್ರ ಬಿರಾದಾರ,ಕುಂಟೋಜಿ ಬಸವೇಶ್ವರ ದೇವಸ್ಥಾನ ಕಮೀಟಿ ಅಧ್ಯಕ್ಷ ಗುರುಲಿಂಗ ಸುಲ್ಲಳ್ಳಿ,ಮಾಜಿ ಸೈನಿಕ ನಾಗಲಿಂಗಯ್ಯ ಮಠ ಸೇರಿದಂತೆ ಹಲವರು ಇದ್ದರು.ಕುಂಟೋಜಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಿಜೆಪಿ ನಿಯೋಗ ಜಿಲ್ಲೆಯಲ್ಲಿ ಬರ ಅಧ್ಯಯನ ಪ್ರವಾಸವನ್ನು ನಡೆಸಿತು.

ಪಪ್ಪುಗೆ ಸೊಪ್ಪಿನ ಬಗ್ಗೆ ಏನಾದರೂ ಗೊತ್ತಾ ? : ಪಪ್ಪುಗೆ ಸೊಪ್ಪಿನ ಬಗ್ಗೆ ಏನಾದರೂ ಗೊತ್ತಾ? ರೈತರ ಬಗ್ಗೆ ಏನಾದರೂ ತಿಳಿದಿದೆಯೇ ? ರಾಹುಲ್ ಗಾಂಧಿ ಇದರಸೇ ಆಲೂ ಡಾಲೋ ಉದರಸೇ ಸೋನಾ ಆಯೇಗಾ ಎನ್ನುತ್ತಾರೆ.ಅವರಿಗೆ ರೈತರ ಕಷ್ಟ ಏನು ಗೊತ್ತಿದೆ ಎಂದು ಬಿಜೆಪಿಯ ಎನ್.ರವಿಕುಮಾರ ಲೇವಡಿ ಮಾಡಿದರು.

Latest News

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ರೈತರು ಭಿಕ್ಷುಕರಲ್ಲ ; ಸಿಎಂ ಡಿಕೆಶಿ ರೈತರ ಕ್ಷಮೆಯಾಚಿಸಲಿ – ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ಬರಗಾಲದ ಕುರಿತು ಕರೆದಿದ್ದ ನಾಲ್ಕು ದಿನಗಳ ವಿಶೇಷ ಅಧಿವೇಶನದಲ್ಲಿ ರಾಜ್ಯದ ರೈತರಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ:                                            ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಕಬ್ಬಿಗೆ 5500 ರೂ.ದರ ನಿಗದಿಗೆ ಆಗ್ರಹ: ಸೆ.29 ರಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮನೆಗೆ ಮುತ್ತಿಗೆ

ಮುದ್ದೇಬಿಹಾಳ : ಸಕ್ಕರೆಗೆ ಕನಿಷ್ಠ ಮಾರಾಟ ಬೆಲೆಯನ್ನು 60 ರೂ.ಗಳಿಗೆ ಹೆಚ್ಚಿಸಬೇಕು.ಸಬ್ 2026-27ನೇ ಸಾಲಿನಲ್ಲಿ

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಔಷಧ ತಜ್ಞರ ಸೇವೆ ಆರೋಗ್ಯ ಕ್ಷೇತ್ರದ ಬೆನ್ನೆಲುಬು-ಡಾ.ರಂಗನಾಥ್

ಮುದ್ದೇಬಿಹಾಳ : ಔಷಧಗಳ ಬಳಕೆ, ಪ್ರಮಾಣ ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಥ್ರೋಬಾಲ್ : ಬಿದರಕುಂದಿ ಕೆಪಿಎಸ್ ಆದರ್ಶ ವಿದ್ಯಾಲಯ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿಯ ಕೆಪಿಎಸ್ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ಥ್ರೋಬಾಲ್ ಬಾಲಕರು,ಬಾಲಕಿಯರ ವಿಭಾಗದಲ್ಲಿ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಸಾಗಲಿ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನಮ್ಮಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಅವರ ವೈಯಕ್ತಿಕ ಪ್ರತಿಭೆಯ ಜತೆಗೆ ಅವರು ಪ್ರತಿನಿಧಿಸುವ ಪ್ರದೇಶದ ಹೆಸರೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಬೆಳೆಯುತ್ತದೆ ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು. ಪಟ್ಟಣದ ಓಸ್ವಾಲ್ ಹಾಲ್‌ನಲ್ಲಿ ರವಿವಾರ ನಡೆದ ರಾಜ್ಯ ಕರಾಟೆ ಶಿಕ್ಷಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಏಕಲವ್ಯ ರೋಲರ್ ಸ್ಕೆಟಿಂಗ್ ಅಕಾಡೆಮಿಯ ಸಾಧಕ ವಿದ್ಯಾರ್ಥಿಗಳ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಕ್ಷೇತ್ರದಲ್ಲಿ ಏಕಲವ್ಯ ರೋಲರ್

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ :                                      ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಬನಶಂಕರಿ ಪತ್ತಿನ ಸಹಕಾರಿ ಸಂಘಕ್ಕೆ 14.56 ಲಕ್ಷ ರೂ.ಲಾಭ : ‘ನೇಕಾರರ ಸಂಕಷ್ಟಕ್ಕೆ ಸರ್ಕಾರ ನೆರವು ಒದಗಿಸಲಿ’

ಮುದ್ದೇಬಿಹಾಳ : ಭೀಕರ ಬರಗಾಲದ ಸಮಯದಲ್ಲಿ ನೇಕಾರರಿಗೂ ಸಮರ್ಪಕ ಕಚ್ಚಾನೂಲು,ಬೀಮ್ ಪೂರೈಕೆ ಆಗುತ್ತಿಲ್ಲ.ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ನಡೆಸುವ ನೇಕಾರರು ಗ್ರಾಮೀಣ ಭಾಗದಲ್ಲಿ ಸಂಕಷ್ಟದಲ್ಲಿದ್ದು ಅವರಿಗೆ ಸರ್ಕಾರ ಸೂಕ್ತ ನೆರವು ಒದಗಿಸಬೇಕು ಎಂದು ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಈ.ಹೆಬ್ಬಾಳ ಹೇಳಿದರು. ಪಟ್ಟಣದ ಶ್ರೀ ಬನಶಂಕರಿ ಪತ್ತಿನ ಸಹಕಾರಿ ಸಂಘದ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ 27ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಅವರು ಮಾತನಾಡಿದರು.ನೇಕಾರರ ಬದುಕು