ಮಂಡ್ಯ: ಇಂದು ಬೆಳ್ಳಂಬೆಳ್ಳಿಗ್ಗೆ ಮಂಡ್ಯದಲ್ಲಿ ರೌಡಿಶೀಟರ್ (Rowdy sheeter) ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಡಕ್ಕ ಅಲಿಯಾಸ್ ಮುತ್ತುರಾಜ್‌ನ ಮೇಲೆ ಹಲಗೂರು ಠಾಣಾ ಸಿಪಿವೈ ಶ್ರೀಧರ್ ಫೈರಿಂಗ್ ಮಾಡಿದ್ದಾರೆ.
ಜುಲೈ 30 ರಂದು ಕಾಂತರಾಜು ಎಂಬಾತನ ಕೊಲೆ ನಡೆದಿತ್ತು. ಆ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ಸಿಪಿವೈ ಶ್ರೀಧರ್ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನ ಆರಂಭಿಸಿದ್ದರು.
Join Our Telegram: https://t.me/dcgkannada
ಕಾಂತರಾಜು ಕೊಲೆಗೆ ಮುತ್ತುರಾಜ ಅಲಿಯಾಸ್ ಡಕ್ಕ ಎಂಬಾತನಿಂದ ಸುಫಾರಿ ಬಗ್ಗೆ ಆರೋಪಿಗಳು ತನಿಖೆ ವೇಳೆ ಬಾಯ್ದಿಟ್ಟಿದ್ದರು. ಈತ ಡಕ್ಕ ಚಿಕ್ಕಮಲಗೂಡು ಬಳಿ ಇರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಡಕ್ಕ ಬೈಕ್ ನಲ್ಲಿ ಹೋಗುತ್ತಿರುವಾಗ ಆರೋಪಿಯನ್ನ ಹಿಡಿಯಲು ಸಿಪಿಐ ಶ್ರೀಧರ್ ಅಂಡ್ ಟೀಂ ಮುಂದಾಗಿತ್ತು. ಈ ವೇಳೆ ಬೈಕ್ ಬೀಳಿಸಿ ಡಕ್ಕ (Rowdy sheeter) ಓಡಲು ಮುಂದಾಗಿದ್ದ ಈ ವೇಳೆ ಹಿಡಿಯಲು ಮುಂದಾದ ಪೇದೆ ಮೇಲೆ ಡ್ರಾಗನ್ ನಿಂದ ಹಲ್ಲೆ ನಡೆಸಿದ್ದ ಆರೋಪಿ ಡಕ್ಕ ಏರ್ ಫೈರ್ ವಾರ್ನಿಂಗ್ ಬಗ್ಗಲಿಲ್ಲ. ಕೊನೆಗೆ ತಮ್ಮ ಆತ್ಮರಕ್ಷಣೆಗಾಗಿ ಸಿಪಿವೈ ಶ್ರೀಧರ್ ರಿಂದ ಫೈರಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಕಟ್: ನದಿ ಪಾತ್ರದ ಜನರಲ್ಲಿ ಆತಂಕ!| ವಿಡಿಯೋ ನೋಡಿ
ಡಕ್ಕನ ಬಲಗಾಲಿಗೆ ಗುಂಡೇಟು ತಗುಲಿದೆ. ಮುತ್ತುರಾಜ್ ಅಲಿಯಾಸ್ ಡಕ್ಕ 11 ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. 3 ಕೊಲೆ, 3 ಕೊಲೆಗೆ ಯತ್ನ 2 ರಾಬರಿ ಪ್ರಕರಣ ಸೇರಿ ಹಲವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ.