ಕೊಲಂಬೊ: ಶ್ರೀಲಂಕಾ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಮುಗ್ಗರಿಸಿದೆ. ಶ್ರೀಲಂಕಾ ನೀಡಿದ 249 ರನ್ ಟಾರ್ಗೆಟ್ ಬೆನ್ನಟ್ಟಿದ ಭಾರತ 26.1 ಓವರ್ ಗಳಲ್ಲಿ ಆಲೌಟ್ ಆಯಿತು. ಈ ಮೂಲಕ 27 ವರ್ಷಗಳ ನಂತರ ಲಂಕಾ ವಿರುದ್ಧ ಸರಣಿ ಸೋಲನ್ನು ರೋಹಿತ್ ಪಡೆ ಒಪ್ಪಿಕೊಂಡಿದೆ.
ಭಾರತದ ಪರ ರೋಹಿತ್ ಶರ್ಮಾ-35, ಕೊಹ್ಲಿ-20, ಶುಭಮನ್-6, ಪಂತ್-6, ಅಕ್ಸರ್ ಪಟೇಲ್- 2 ರನ್ ಗಳಿಸಿದರು.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಲಂಕಾ ಪಡೆ, ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿತು. ಲಂಕಾ ಪರ ಅವಿಷ್ಕ ಫರ್ನಾಂಡೊ-96, ಕುಶಾಲ್-59 ಮತ್ತು ನಿಸ್ಸಂಕಾ-45 ರನ್ ಗಳಿಸಿದರು.
ಇತ್ತ ಟೀಮ್ ಇಂಡಿಯಾ ಪರ ರಿಯಾನ್ ಪರಾಗ್-3, ಕುಲದೀಪ್-2, ಅಕ್ಸರ್, ಸಿರಾಜ್ & ವಾಷಿಂಗ್ಟನ್ ತಲಾ 1 ವಿಕೆಟ್ ಪಡೆದರು.