ಮುದ್ದೇಬಿಹಾಳ : ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ವಿಧಾನಪರಿಷತ್ ಸದಸ್ಯ, ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು ಮುದ್ದೇಬಿಹಾಳ ಪಟ್ಟಣಕ್ಕೆ ಸೋಮವಾರ ಸಂಜೆ ದಿಢೀರ್ ಭೇಟಿ ನೀಡಿದ್ದರು.
ಅಂಬೇಡ್ಕರ ವೃತ್ತದ ಮೂಲಕ ಕವಡಿಮಟ್ಟಿ ಗ್ರಾಮಕ್ಕೆ ತೆರಳುತ್ತಿದ್ದ ಅವರನ್ನು ಕಾಂಗ್ರೆಸ್ ಮುಖಂಡರು ಹಾಗೂ ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ ಬಿ ಅಸ್ಕಿ(ಕೊಣ್ಣೂರ) ರವರು ಗೆಳೆಯರ ಬಳಗದೊಂದಿಗೆ ಸನ್ಮಾನಿಸಿ ಗೌರವಿಸಿದರು. ಈ ಸಮಯದಲ್ಲಿ ಪುರಸಭೆ ಅಧ್ಯಕ್ಷರಾದ ಮಹೆಬೂಬ ಗೊಳಸಂಗಿ, ಕಸಾಪ ಅಧ್ಯಕ್ಷರಾದ ಕಾಮರಾಜ ಬಿರಾದಾರ, ಗ್ಯಾರಂಟಿ ಸಮಿತಿ ಸದಸ್ಯರಾದ ಸಂಗಪ್ಪ ಮೇಲಿನಮನಿ, ಸದು ಮಠ, ಮುತ್ತು ರಾಯಗೊಂಡ,ಹುಸೇನ ಮುಲ್ಲಾ, ರವಿ ಅಮರಣ್ಣವರ ಸೇರಿದಂತೆ ಇನ್ನೂ ಅನೇಕ ಕಾಂಗ್ರೆಸ್ ಯುವ ಮುಖಂಡರು ಉಪಸ್ಥಿತರಿದ್ದರು.
ಸಿಎಂ ಪುತ್ರನಿಗೆ ಕುರಿ ಗಿಫ್ಟ್ ನೀಡಿದ ಕವಡಿಮಟ್ಟಿ ಅಭಿಮಾನಿಗಳು: ಕವಡಿಮಟ್ಟಿ ಗ್ರಾಮಕ್ಕೆ ಖಾಸಗಿ ಕಾರ್ಯನಿಮತ್ಯ ಆಗಮಿಸಿದ್ದ ಸಿಎಂ ಪುತ್ರ ಡಾ.ಯತೀಂದ್ರ ಸಿದ್ಧರಾಮಯ್ಯನವರಿಗೆ ಕವಡಿಮಟ್ಟಿ ಗ್ರಾಮದ ಅಭಿಮಾನಿಗಳು, ಯುವಕರು ಕುರಿಯನ್ನು ಕೊಡುಗೆಯಾಗಿ ನೀಡಿ ಅಭಿಮಾನ ಮೆರೆದರು.