ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ತಾಲೂಕಿನ ಬಂಡಿಹೊಳೆ ಗ್ರಾಮದ ಜಮೀನು ಒಂದರಲ್ಲಿ ವಿದ್ಯುತ್ ತಂತಿ ತಗುಲಿ (Short circuit) ಚಿರತೆಯೊಂದು ಮೃತಪಟ್ಟಿದೆ.
ರಾಘು ದೇವಸೇಗೌಡ್ರು ಎಂಬುವವರಿಗೆ ಸೇರಿದ ಜಮೀನಲ್ಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
Join Our Telegram: https://t.me/dcgkannada
ಚಿರತೆಯೂ ಮರ ಹತ್ತುವ ವೇಳೆಯಲ್ಲಿ ಮೋಟಾರ್ ಲೈನ್ ತಂತಿ ತಗಲಿ (Short circuit) ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ.
ವಿಷಯ ತಿಳಿದ ನಂತರ ಅಕ್ಕಪಕ್ಕ ಗ್ರಾಮಸ್ಥರು, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತದನಂತರ ಸ್ಥಳಕ್ಕೆ ಭೇಟಿ ನೀಡಿ ಅರಣ್ಯ ಅಧಿಕಾರಿಗಳು ಪರಿಶೀಲಿನೆ ನಡೆಸಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ಡ್ಯಾಂ ಕ್ರಸ್ಟ್‌ಗೇಟ್ ಚೈನ್ ಲಿಂಕ್ ಕಟ್: ನದಿ ಪಾತ್ರದ ಜನರಲ್ಲಿ ಆತಂಕ!| ವಿಡಿಯೋ ನೋಡಿ