ಮುದ್ದೇಬಿಹಾಳ: ಸರ್ವ ಧರ್ಮದವರು ಸೇರಿ ನಾಗಬೇನಾಳ ಗ್ರಾಮ ದೇವತೆ ಜಾತ್ರಾ ಮಹೋತ್ಸವವನ್ನು ಅದ್ಧೂರಿಯಿಂದ ನಡೆಸಿದರು.
ಹಂದರ ಎಲೆಯನ್ನು ಚೆಕ್ ಪೋಸ್ಟ ಎಂಬ ಸ್ಥಳದಿಂದ ನಾಗಬೇನಾಳವರೆಗೂ ಸರಿಸುಮಾರು 2 ಕಿಲೋಮೀಟರ್ DJ ಮೂಲಕ ನೃತ್ಯ ಮಾಡುವುದರ ಮೂಲಕ ತೆಗೆದಕೊಂಡು ಬಂದರು.
ಬಂಜಾರಾ ಸಮಾಜದ ನಾಗಬೇನಾಳ ತಾಂಡವರಾರು, ತಾಯಿ ಗ್ರಾಮ ದೇವತೆ ದ್ಯಾಮವ್ವಾದೇವಿ ಮತ್ತು ಗಡ್ಡಿ ಗದ್ಯಮದೇವಿಯ ಹಂದರ ಹಾಕುವ ಮೂಲಕ ನಾವೆಲ್ಲರೂ ಒಂದೇ ಎಂಬ ಭಾವೈಕ್ಯತೆ ತೋರಿದರು.
ಇದೇ ಸಂದರ್ಭದಲ್ಲಿ ಕೃಷ್ಣಪ್ಪ ನಾಯಕ್, ಗಂಗಪ್ಪ ಸಂಗನ ಗೌಡ್ರು ಪಾಟೀಲ್, ಶಂಕ್ರಪ್ಪ ಗುರಿಕಾರ, ಭೀಮಪ್ಪ ಗುರಿಕಾರ್, ಭೀಮಪ್ಪ ರಕ್ಕಸಗಿ, ಮಲ್ಲಿಕಾರ್ಜುನ ಗುತ್ತಿಹಾಳ, ಬಸಪ್ಪ ಚಳಗೇರಿ, ಬಸವರಾಜ್ ಹುತಾನಾಳ, ಆನಂದ ನಾಯಕ್, ಟೋಪಣ್ಣ ಕಾರಭಾರಿ, ಕೃಷ್ಣ್ ನಾಯಕ್, ರಘು ಪವರ್, ವೆಂಕಟೇಶ್ ನಾಯಕ್, ಮಂಜುನಾಥ, ಜಗನಾಥ ನಾಯಕ್, ಜಗದೇವ ನಾಯಕ್, ಸುರೇಶ ರಾಠೋಡ, ಲಕ್ಷ್ಮಣ್ ರಾಠೋಡ, ಹಿರು ನಾಯಕ, ಮಂಜುನಾಥ ಪೂಜಾರಿ, ಜೀವಲಾ ನಾಯಕ್, ವೆಂಕಟೇಶ್.ಎಸ್ ನಾಯಕ್, ಶಶಿಕಾಂತ ನಾಯಕ್, ಶಿವನಂದ ಪವರ್. ಹಾಗೂ ಯುವಕ ಮಂಡಳಿ ಇದ್ದರು.
ವರದಿ : ಶಿವು ರಾಠೋಡ