ಮುದ್ದೇಬಿಹಾಳ : ರೈತರ ಸಹಕಾರದಿಂದ ಈ ಸಾಲಿನ ಆರ್ಥಿಕ ವರ್ಷ ಅಂತ್ಯಗೊಂಡ ಅವಧಿಯವರೆಗೆ ಸಂಘವು ಒಟ್ಟು 10.33 ಲಕ್ಷ ಲಾಭ ಗಳಿಸಿದೆ ಎಂದು ತಾಲ್ಲೂಕಿನ ಕೋಳೂರು ಎಲ್.ಟಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಸೀತಿಮನಿ ಹೇಳಿದರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಸೇರಲು ಈ ಲಿಂಕ್ ಬಳಸಿ: https://t.me/dcgkannada
ತಾಲ್ಲೂಕು ಕೋಳೂರು ತಾಂಡಾದ ದುರ್ಗಾದೇವಿ ಸಂತ ಸೇವಾಲಾಲ್ ಅವರ ದೇವಸ್ಥಾನದಲ್ಲಿ ಶನಿವಾರ ನಡೆದ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೃಷಿ ಸಹಕಾರಿ ಸಂಘದ ಬೆಳವಣಿಗೆಗೆ ರೈತರು ಕಾರಣರಾಗಿದ್ದು ಸಂಘಕ್ಕೆ ಭಾರವಾಗದಂತೆ ತಮ್ಮಿಂದಲೂ ದೇಣಿಗೆ ನೀಡಿ ನೂತನ ಕಟ್ಟಡವನ್ನು ನಿರ್ಮಿಸಲಾಗಿದೆ. ಅಕ್ಟೋಬರ್ ಎರಡನೇ ವಾರದಲ್ಲಿ ಸಂಘದ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಲು ಸಚಿವರು, ವಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ್ ಅವರನ್ನು ಕರೆಯಿಸಲಾಗುತ್ತದೆ. ವಿವಿಧ ಮಠಗಳ ಸ್ವಾಮೀಜಿಗಳನ್ನು ಆಹ್ವಾನಿಸಲಾಗುತ್ತದೆ. ಇದಕ್ಕೆ ರೈತರ ಸಹಕಾರ ಅಗತ್ಯವಾಗಿದೆ ಎಂದರು.
ತಾಂಡಾದ ಮುಖಂಡ ರವಿ ನಾಯಕ ಮಾತನಾಡಿ, ನಿಸ್ವಾರ್ಥ ಸೇವೆ ಸಲ್ಲಿಸಿದ್ದರಿಂದಲೇ ಇಂದು ಸಂಘವು ಪ್ರಗತಿಯತ್ತ ಸಾಗಿದೆ. ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಸಂಘದ ಕಟ್ಟಡದ ಉದ್ಘಾಟನಾ ಸಮಾರಂಭ ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಸಂಘದ ಲೆಕ್ಕಪತ್ರವನ್ನು ಅಶೋಕ ಲಮಾಣಿ ಓದಿದರು.
ಸಭೆಯಲ್ಲಿ ಸಂಘದ ನಿರ್ದೇಶಕರಾದ ನಿರ್ದೇಶಕರಾದ ಅಯ್ಯಪ್ಪ ಬಿದರಕುಂದಿ, ಯಲಗೂರದಪ್ಪ ಝಳಕಿ, ಭೀಮಪ್ಪ ವಾಲೀಕಾರ,ಮಲ್ಲಪ್ಪ ತಾರನಾಳ, ಚನ್ನಬಸಪ್ಪ ಕೋಳೂರ, ರೀತಿಬಾಯಿ ಲಮಾಣಿ, ಮಲ್ಲಮ್ಮ ಹಳ್ಳೂರ, ಗುರುಬಾಯಿ ಜಾಧವ,ಚೆನ್ನವ್ವ ಬಯ್ಯಾಪೂರ, ಹೋಬಾ ನಾಯಕ ಧರ್ಮಗಿರಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಸಂಗಯ್ಯ ಹೊನ್ನಳ್ಳಿ ಇದ್ದರು.
ಇದನ್ನೂ ಓದಿ: ಬಿಇಒ ಎದುರಲ್ಲೇ ಶಿಕ್ಷಕರಿಂದ ದಾಖಲೆಗಳ ತಪಾಸಣೆ: ಕೊಕ್ಕೊ ಪಂದ್ಯಾವಳಿ-ಮೈಲೇಶ್ವರದ ಬ್ರಿಲಿಯಂಟ್ ಶಾಲೆಯದ್ದೇ ಗೆಲುವು