ಇಳಕಲ್: ನಗರದ ಆರಾಧ್ಯ ದೈವ ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಶರಣ ಸಂಸ್ಕೃತಿ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 21 ನವ ವಧುವರರು ಹೊಸ ಜೀವನಕ್ಕೆ ಕಾಲಿಟ್ಟರು.
ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾನಲ್ ಗೆ ಸೇರಿ: https://t.me/dcgkannada
ಬಸವ ತತ್ವದ ಅನುಸಾರವಾಗಿ ಪೂಜ್ಯ ಗುರುಮಂತ ಶ್ರೀಗಳ ಹಾಗೂ ರಾಜ್ಯದ ವಿವಿಧ ಮಠಗಳ ಮಠಾಧೀಶರ ಸಾನಿಧ್ಯದಲ್ಲಿ ಇಳಕಲ್ ನಗರದ ಎಪಿಎಂಸಿ ವರ್ತಕರ ಸಂಘ ಆಯೋಜಿಸಿದ್ದ ಸಾಮೂಹಿಕ ವಿವಾಹ ಸಮಾರಂಭ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ಶಾಸಕ ವಿಜಯಾನಂದ ಕಾಶಪ್ಪನವರ್ ಮತ್ತು ವೇದಿಕೆ ಮೇಲಿದ್ದ ಪೂಜ್ಯರು ಹಾಗೂ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವಿಜಯಾನಂದ ಕಾಶಪ್ಪನವರ್, ಬಡವರಿಗೆ ಅನುಕೂಲವಾಗಲೆಂದು ಸಾಮೂಹಿಕ ವಿವಾಹ ಮಹೋತ್ಸವ ಕಳೆದ 40 ವರ್ಷಗಳಿಂದ ಆಯೋಜಿಸಿತ ಬಂದಿರುವ ಎಪಿಎಂಸಿ ವರ್ತಕರಿಗೆ ಹಾಗೂ ಸಂಘದವರಿಗೆ ಅಭಿನಂದನೆಗಳನ್ನು ತಿಳಿಸಿದರು.
ಹತ್ತಾರು ಜನ ಪೂಜ್ಯರು ಹಾಗೂ ಗಣ್ಯರ, ಸಾವಿರಾರು ಭಕ್ತರ ಸಮ್ಮುಖದಲ್ಲಿ ನವ ಜೀವನಕ್ಕೆ ಕಾಲಿಡುತ್ತಿರುವ ಎಂದು ನವ ಜೋಡಿಗಳಿಗೆ ಶುಭ ಹಾರೈಸಿದರು.
ಅಲ್ಲದೆ, ಶರಣ ಸಂಸ್ಕೃತಿ ಮಹೋತ್ಸವದ ಈ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ಜೀವನಕ್ಕೆ ಕಾಲಿಡುತ್ತಿರುವ ನೀವುಗಳು ಸುಖ ಸಂಸಾರ ಸಾಗಿಸಿದರೆ ವಿವಾಹ ಮಹೋತ್ಸವ ಆಯೋಜಿಸಿದವರಿಗೂ ಹಾಗೂ ಪೂಜ್ಯ ವಿಜಯ ಮಹಾಂತ ಅಪ್ಪಗಳವರಿಗೂ ಕೃತಜ್ಞತೆ ಸಲ್ಲಿಸಿದಂತಾಗುತ್ತದೆ. ಸದ್ಯ ನಮ್ಮ ದೇಶದ ಜನಸಂಖ್ಯೆ 139 ಕೋಟಿ ದಾಟಿದೆ ಅದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದ ನಿಯಮದಂತೆ ಆರತಿಗೆ ಒಬ್ಬಳು ಕೀರ್ತಿಗೆ ಒಬ್ಬ ಎಂಬಂತೆ ಎರಡು ಮಕ್ಕಳನ್ನು ಹಂದಿ ಸುಖ ಜೀವನ ಸಾಗಿಸಿ ಎಂದು ಕಿವಿಮಾತು ಹೇಳಿದರು.
ಸಾನಿಧ್ಯ ವಹಿಸಿದ್ದ ಗುರು ಮಹಾಂತ ಶ್ರೀಗಳು ಮಾತನಾಡಿ, ನವ ಜೀವನಕ್ಕೆ ಕಾಲಿಡುತ್ತಿರುವ ವರರು ತಮ್ಮಲ್ಲಿರುವ ದುಶ್ಚಟಗಳನ್ನು ಇಂದಿನಿಂದಲೇ ಈ ಕ್ಷೇತ್ರದಲ್ಲಿಯೇ ತ್ಯಜಿಸಿ ಪೂಜ್ಯರ ಪಾದಕ್ಕೆ ಅರ್ಪಿಸಬೇಕು. ದುಶ್ಚಟಗಳನ್ನು ತ್ಯಜಿಸಿದಾಗ ಮಾತ್ರ ಸುಖ ಜೀವನ ಸಾಗಿಸಲು ಸಾಧ್ಯ ಎಂದು ಆಶೀರ್ವಚನ ನೀಡಿದರು.
ಇದನ್ನೂ ಓದಿ: Pramod mutalik: ಹಲಾಲ್ ಕ್ಕಿಂತ ದೊಡ್ಡ ಡೆಂಜರ್ ಚೀನಾ ವಸ್ತುಗಳು: ಪ್ರಮೋದ್ ಮುತಾಲಿಕ್ ಆಕ್ರೋಶ
ಕಾರ್ಯಕ್ರಮದ ವೇದಿಕೆ ಮೇಲೆ ಎಪಿಎಂಸಿ ವರ್ತಕರಾದ ಮಹಾಂತಗೌಡ ಪಾಟೀಲ್ ತೊಂಡಿಹಾಳ, ಅಮರೇಶ್ ಗೌಡರ್, ಸಂಗಣ್ಣ ಕಂಪ್ಲಿ, ಹಿರಿಯರಾದ ಜಿಪಿ ಪಾಟೀಲ್, ಶಿವರುದ್ರಪ್ಪ ಗೊಂಗಡಶೆಟ್ಟಿ, ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ನವ ಜೀವನಕ್ಕೆ ಕಾಲಿಟ್ಟ 21 ಜೋಡಿಗಳು pic.twitter.com/AfhzSLeHtA
— dcgkannada (@dcgkannada) September 2, 2024