ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ 2018ರಲ್ಲಿಯೇ ಟೆಂಡರ್ ಆಗಿದ್ದು ಕಳೆದ ಎಂಟು ವರ್ಷಗಳಿಂದ ರೈತರ ಜಮೀನಿಗೆ ಅತ್ತ ಹನಿ ನೀರೂ ಹರಿದಿಲ್ಲ,ಇತ್ತ ಪರಿಹಾರವೂ ಸಿಕ್ಕಿಲ್ಲ.ಅ.5ರವರೆಗೆ ಬಾಕಿ ಕೆಲಸ ಪೂರ್ಣಗೊಳಿಸದಿದ್ದರೆ ನಾಗರಬೆಟ್ಟದಲ್ಲಿ ರೈತರೊಂದಿಗೆ ಹೋರಾಟ ನಡೆಸುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಪಲ್ಲವಿ ಹೊಟೇಲ್ ಸಭಾಂಗಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. 14 ಹಳ್ಳಿಗಳ ಸುಮಾರು 3200 ಹೆಕ್ಟೇರ್ ಪ್ರದೇಶಕ್ಕೆ ನೀರು ಉಣಿಸುವ ಬಹುದೊಡ್ಡ ಯೋಜನೆಯಾಗಿದ್ದು ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ಜೂ.8ರಂದು ಆಲಮಟ್ಟಿಯಲ್ಲಿ ಸಾವಿರಾರು ರೈತರೊಂದಿಗೆ ಯೋಜನೆ ತ್ವರಿತವಾಗಿ ಪೂರ್ಣಗೊಳಿಸಲು ಆಗ್ರಹಿಸಿ ಹೋರಾಟ ಮಾಡಿದಾಗ ಕೆಬಿಜೆಎನ್‌ಎಲ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮೂರು ತಿಂಗಳ ಕಾಲಾವಕಾಶ ಕೋರಿದ್ದರು.ಆದರೆ ಕೊಟ್ಟಿರುವ ಗಡುವು ಮುಗಿದು ಮತ್ತೆ ಹೆಚ್ಚುವರಿಯಾಗಿ ಒಂದು ತಿಂಗಳು ಆಗಿದೆ.ಆದರೆ ಯಾವುದೇ ಪ್ರಗತಿ ಆಗಿಲ್ಲ ಎಂದು ಹೇಳಿದರು.
ಕೆಲಸ ಪೂರ್ಣಗೊಳಿಸುವಂತೆ ಆಲಮಟ್ಟಿಯ ವಿಶೇಷ ಭೂಸ್ವಾಧೀನ ಕಚೇರಿ,ಕೆಬಿಜೆಎನ್‌ಎಲ್ ಸಿಇ ಅಧಿಕಾರಿಗಳ ಕಚೇರಿಗೆ ಅಲೆದಾಡಡುತ್ತಿದ್ದೇವೆ.ಆದರೆ ಐತೀರ್ಪನಂತೆ ಅಧಿಕಾರಿಗಳು ಕೆಲಸ ಮಾಡುತ್ತಿಲ್ಲ.ಕನಿಷ್ಠ ಕಾಲುವೆಯಲ್ಲಿನ ಹೂಳು,ಕಸ,ಕಡ್ಡಿ ತಗೆದು ನೀರನ್ನಾದರೂ ಹರಿಸುವ ಕಾರ್ಯ ಮಾಡಿ ಕಾಳುವೆ ಕೊನೆಯ ಅಂಚಿನವರೆಗೆ ನೀರು ಹರಿಸಬೇಕು.ಅಧಿಕಾರಿಗಳು,ಜನಪ್ರತಿನಿಧಿಗಳ ನಿರ್ಲಕ್ಷö್ಯದಿಂದ ರೈತರಿಗೆ ಸೂಕ್ತ ಪರಿಹಾರ ದೊರಕುತ್ತಿಲ್ಲ.31 ಪಕರಣಗಳಲ್ಲಿ ಹೆಚ್ಚುವರಿ ಇರುವ ಜಾಗಗಳಿಗೆ ಸಹಿ ಮಾಡಿಕೊಡುತ್ತೇವೆ ಎಂದರೂ ಅದರ ಕಡತ ಮುಂದೆ ಒಯ್ಯುತ್ತಿಲ್ಲ.ಶಾಸಕರು ಯಾಕೆ ಬೇಜವಾಬ್ದಾರಿತನ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.
ಆಲಮಟ್ಟಿ ಎಸ್.ಎಲ್.ಓ ಆಫೀಸ್ ದನದ ಕೊಂಡವಾಡದoತಾಗಿದೆ.ಐದು, ಹತ್ತು ಸಾವಿರ ಹಣ ಕೊಟ್ಟರೆ ಅಲ್ಲಿ ರೈತರ ಫೈಲ್ ಹುಡುಕಾಡುತ್ತೇವೆ ಎಂದು ಹೇಳುತ್ತಾರೆ.ಅಲ್ಲಿ ಹೇಳುವವರು ಕೇಳುವವರು ಯಾರೂ ಇಲ್ಲ.ರೈತರನ್ನು ಮಾತನಾಡಿಸುವುದೂ ಇಲ್ಲ ಎಂದು ನಡಹಳ್ಳಿ ಶಾಂತಗೌಡ ಆರೋಪಿಸಿದರು.
ಮಳೆ ಇಲ್ಲದ್ದಕ್ಕೆ ಕುಡಿವ ನೀರಿಗೆ ಕೊರತೆ ಉಂಟಾಗುತ್ತಿದೆ.ಶಾಸಕರ ಬಗ್ಗೆ ವಯಕ್ತಿಕವಾಗಿ ನಮಗೆ ಗೌರವವಿದೆ.ಆದರೆ ರೈತರ ವಿಷಯದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುವುದರಿಂದ ರೈತ ಸಂಘಟನೆ ಹೋರಾಟಕ್ಕೆ ಇಳಿಯಬೇಕಿದೆ.ಭೂಸ್ವಾಧೀನ ಕಾಯ್ದೆ 2013ರಂತೆ ಎರಡು ವರ್ಷದ ಒಳಗೆ ಐತೀರ್ಪು ಪೂರ್ಣಗೊಳ್ಳಬೇಕು ಎಂದು ಇದೆ.ಆದರೆ ಸುಮಾರು ಎಂಟು ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ.ನಿಮಗೆ ನಾಚಿಗೆ ಬರಬೇಕು.ಅಲ್ಲಿ ರೈತರು ತಕರಾರರು ಮಾಡುತ್ತಿಲ್ಲ.ಭೂಮಿ ಕಳೆದುಕೊಂಡ ರೈತನಿಗೆ ಪರಿಹಾರ ಸಿಗಬೇಕು.ಈವರೆಗೂ ಪರಿಹಾರ ಕೊಡಿ ಎಂದು ಯಾವೊಬ್ಬ ರೈತರು ಹೋರಾಟ ಮಾಡಿಲ್ಲ.ಭೂಮಿ ಕಳೆದುಕೊಂಡ ರೈತರು ನಾವು ಸದ್ಯಕ್ಕೆ ದುಡ್ಡು ಕೇಳುತ್ತಿಲ್ಲ.ಮೊದಲು ಕಾಲುವೆ ನೀರು ಕೊಡಬೇಕು.ಕನ್ಸೆಂಟ್ ಅವಾರ್ಡ್ಗೆ ಇವತ್ತೇ ಸಹಿ ಮಾಡುವುದಕ್ಕೆ ನಾವೆಲ್ಲ ಸಿದ್ದರಿದ್ದೇವೆ.ಅವಾರ್ಡ್ ಕಾಫಿ ನೀಡಿ ಎಂದರು.
ಇಲ್ಲಿ ರೈತರದ್ದು ಏನೂ ತಪ್ಪಿಲ್ಲ.ಎಲ್ಲ ತಪ್ಪು ಅಧಿಕಾರಿಗಳು,ಕೆಬಿಜೆಎನ್‌ಎಲ್ ಅಧಿಕಾರಿಗಳದ್ದು ಹಾಗೂ ಶಾಸಕರ ಬೇಜವಾಬ್ದಾರಿತನ ಇದೆ.150 ರೈತರಲ್ಲಿ 93 ರೈತರು ಕನ್ಸೆಂಟ್ ಅವಾರ್ಡಗೆ ಸಹಿ ಮಾಡಿಕೊಟ್ಟಿದ್ದಾರೆ.ಬರೀ ರೈತರಿಗೆ ಭರವಸೆಯನ್ನೇ ಹೇಳುತ್ತಾ ಸಾಗುತ್ತಿದ್ದಾರೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಹುಲಗಪ್ಪ ನಾಯ್ಕಮಕ್ಕಳ, ಅಂಬರೀಶ ಬಾಗೇವಾಡಿ, ಶಂಕರಲಿoಗ ಪ್ಯಾಟಿ,ಮಹಾದೇವಪ್ಪ ಬಡಿಗೇರ,ಸಿದ್ದನಗೌಡ ಪಾಟೀಲ,ವೀರೇಶ ಬಿರಾದಾರ,ಹಣಮಂತ್ರಾಯ ಬಿರಾದಾರ,ಬಸನಗೌಡ ಪಾಟೀಲ,ಸಿದ್ದಪ್ಪ ಸೋಮನಾಳ,ಯಮನಪ್ಪ ರಕ್ಕಸಗಿ,ರವಿಕುಮಾರ ಶಿರಕಟ್ಟಿ,ಪರಪ್ಪ ಗುರಿಕಾರ,ಶರಣಗೌಡ ಶಿರಕಟ್ಟಿ,ಮಲ್ಲಪ್ಪ ರಕ್ಕಸಗಿ,ಶಂಕರಗೌಡ ಶಿರಕಟ್ಟಿ,ಕರೆಪ್ಪ ಕೇಸಾಪೂರ,ಶೇಖಪ್ಪ ಕೇಸಾಪೂರ,ಸುಭಾಷಚಂದ್ರ ಭೋಗಾಪೂರ,ಶ್ರೀಶೈಲ ಚಲವಾದಿ,ದಂಡಪ್ಪ ಚಲವಾದಿ,ಲಕ್ಕಪ್ಪ ಬಂಗಾರಗುoಡ,ಮಹoದ್ರ ಬಂಗಾರಗುoಡ,ಆನoದ ಪಾಟೀಲ,ಪ್ರಭು ಚಲವಾದಿ, ಮೊದಲಾದವರು ಇದ್ದರು.
ಕಾಲುವೆ ಮಾಡಿಸಿದ್ದು ಎಂ.ಬಿ.ಪಾಟೀಲ್;
ಎo.ಬಿ.ಪಾಟೀಲರು ಮುಖ್ಯಕಾಲುವೆಗಳನ್ನು ಮಾಡಿದ್ದರಿಂದಲೇ ನೀರು ಹರಿಸಿ ವಯಕ್ತಿಕವಾಗಿ ಎಂ.ಬಿ.ಪಾಟೀಲರಿಗೆ ಅಭಿನಂದನೆ ತಿಳಿಸುತ್ತೇವೆ.ನೀರಾವರಿ ಮಂತ್ರಿಯಾದ ಸಮಯದಲ್ಲಿ ಕಾಲುವೆಗಳನ್ನು ಮಾಡಿದ್ದರಿಂದಲೇ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿದೆ.ಇದಕ್ಕೆ ಎಂ.ಬಿ.ಪಾಟೀಲರೇ ಕಾರಣರು.ಇದಕ್ಕೆ ಅವರನ್ನು ಗೌರವ ಕೊಡುತ್ತೇವೆ,ಅಭಿನಂದಿಸುತ್ತೇವೆ.ಬರಪೀಡಿತ ತಾಲ್ಲೂಕು ಘೋಷಣೆಯಲ್ಲಿ ಎಂ.ಬಿ.ಪಾಟೀಲರ ತಪ್ಪಿಲ್ಲ.ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಹೋರಾಟಕ್ಕಿಳಿದರೆ ಶಾಸಕರು ರಾಜಕಾರಣ ಮಾಡುತ್ತಿದ್ದೀರಿ ಎನ್ನುತ್ತಾರೆ.ನೀವು ಕೆಲಸ ಸರಿಯಾಗಿ ಕೆಲಸ ಮಾಡಿದ್ದೀರಿ ನಿಮ್ಮನ್ನು ಕೇಳುವ ಪ್ರಶ್ನೆಯೇ ಬರುವುದಿಲ್ಲ.ಬರಗಾಲದ ಬಗ್ಗೆ ಶಾಸಕರು ಕೆಡಿಪಿ ಸಭೆಯನ್ನೇ ಕರೆದಿಲ್ಲ.ವಿಜಯಪುರದಲ್ಲಿ ಕೆಡಿಪಿ ಸಭೆ ಕರೆದಾಗ ನಮ್ಮ ಸಭೆಗೆ ಶಾಸಕರು ಬಂದಿಲ್ಲ ಎಂದು ಉಸ್ತುವಾರಿ ಸಚಿವರು ಹೇಳಿದ್ದಾರೆ.ಮುದ್ದೇಬಿಹಾಳ ತಾಲ್ಲೂಕಿನ ಬರಪೀಡಿತ ಪ್ರದೇಶದ ಅವಲೋಕನಕ್ಕೆ ಬರುತ್ತೇವೆ ಎಂದಾಗ ಅವರು ಬೆಂಗಳೂರು,ದಿಲ್ಲಿಯಲ್ಲಿದ್ದೇನೆ ಎಂದು ಉತ್ತರ ಕೊಟ್ಟಿದ್ದಾರೆ ಎಂದು ಉಸ್ತುವಾರಿ ಸಚಿವರು ಹೇಳಿದ್ದರು.ಎಂ.ಬಿ.ಪಾಟೀಲರು,ಶಾಸಕರ ಮಧ್ಯೆ ಏನೇ ಇದ್ದರೂ ಅದು ನಮ್ಮ ರೈತರಿಗೆ ಬೇಡವಾದದ್ದು.ನಮ್ಮ ರೈತರನ್ನು ಸಾಯಿಹೊಡೆಯಬೇಡಿ ಎಂದು ಶಾಂತೌಡ ನಡಹಳ್ಳಿ ಹೇಳಿದರು.
—-ಶಾಂತಗೌಡ ಪಾಟೀಲ್ ನಡಹಳ್ಳಿ, ರೈತ ಸಂಘದ ರಾಜ್ಯ ಉಪಾಧ್ಯಕ್ಷ







