Three out of the four seats held in the election went to the BJP

ಚುನಾವಣೆ ನಡೆದ ನಾಲ್ಕರಲ್ಲಿ ಮೂರು ಸ್ಥಾನ BJP ಪಾಲು.. ಆದ್ರೂ PLD ಬ್ಯಾಂಕ್ ಗದ್ದುಗೆ ಕಾಂಗ್ರೆಸ್ ಪಾಲು..! ( ವಿಡಿಯೋ ನೋಡಿ)

ಚುನಾವಣೆ ನಡೆದ ನಾಲ್ಕರಲ್ಲಿ ಮೂರು ಸ್ಥಾನ BJP ಪಾಲು.. ಆದ್ರೂ PLD ಬ್ಯಾಂಕ್ ಗದ್ದುಗೆ ಕಾಂಗ್ರೆಸ್ ಪಾಲು..! ( ವಿಡಿಯೋ ನೋಡಿ)

ಹುನಗುಂದ: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (PLD) ನಿರ್ದೇಶಕ ಮಂಡಳಿಯ 14 ಸ್ಥಾನಗಳ ಪೈಕಿ ಹತ್ತು ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದು, ಉಳಿದ ನಾಲ್ಕು ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತರು ಹಾಗೂ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

Join Our Telegram: https://t.me/dcgkannada

ಶನಿವಾರ ಪಟ್ಟಣದ ಶ್ರೀ ವಿಜಯಮಹಾಂತೇಶ ಪ್ರೌಢ ಶಾಲೆಯಲ್ಲಿ PLD ಬ್ಯಾಂಕ್‌ನ ನಾಲ್ಕು ನಿರ್ದೇಶಕ ಮಂಡಳಿಯ ಚುನಾವಣೆಯಲ್ಲಿ ವೀರೇಶ ಸಂಗನಗೌಡ ಗೌಡರ (ಜಂಬಲದಿನ್ನಿ ಸಾಮಾನ್ಯ), ರುದ್ರಪ್ಪ ವೀರಪ್ಪ ಶೀಲವಂತರ (ಹಿರೇಶಿಂಗನಗುತ್ತಿ ಸಾಮಾನ್ಯ), ಲೀಲಾವತಿ ಸಿದ್ದನಗೌಡ ಪಾಟೀಲ(ಸೂಳೇಭಾವಿ ಸಾಮಾನ್ಯ ಮಹಿಳೆ) ಬಿಜೆಪಿ ಬೆಂಬಲಿತರು, ಇನ್ನು ಶಿವನಗೌಡ ಭೀಮನಗೌಡ ಜಡಿಯಪ್ಪಗೌಡ (ನಂದವಾಡಗಿ ಸಾಮಾನ್ಯ) ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
 
ಅವಿರೋಧವಾಗಿ ಆಯ್ಕೆಯಾದವರ ವಿವರ:

ಮಹಾಲಿಂಗಪ್ಪ ರಾಚಪ್ಪ ಕಾಶಪ್ಪನವರ (ಸಾಮಾನ್ಯ, ಧನ್ನೂರ), ಶಿವಕುಮಾರಯ್ಯ ಬಸಯ್ಯ ಬಿನ್ನೇದ(ಸಾಮಾನ್ಯ, ನಾಗೂರ), ಮಲ್ಲಪ್ಪ ಮಹಾಂತಪ್ಪ ಬಿಸರಡ್ಡಿ (ಸಾಮಾನ್ಯ, ಚಿತ್ತರಗಿ), ಪ್ರಭಾಕರ ಸಿದ್ರಾಮಪ್ಪ ನಾಗರಾಳ (ಸಾಮಾನ್ಯ, ಅಮೀನಗಡ), ಸುವರ್ಣಾ ಗಂಗಪ್ಪ ಇಲಕಲ್ಲ (ಮಹಿಳಾ, ಹುನಗುಂದ), ನೂರಪ್ಪ ಮೊತಪ್ಪ ಲಮಾಣಿ(ಪರಿಶಿಷ್ಟ ಜಾತಿ, ಇಳಕಲ್), ಸೋಮೇಶ್ವರ ಹುಲ್ಲಪ್ಪ ಬಲಕುಂದಿ (ಪರಿಶಿಷ್ಟ ಪಂಗಡ, ಗುಡೂರು ಎಸ್.ಸಿ), ಖಾಜಾಸಾಬ್ ಮಹಮದ್‌ಸಾಬ್ ಮುದುಗಲ್ (ಹಿಂದುಳಿದ ವರ್ಗ ಅ,ಕರಡಿ), ಬಾಲನಗೌಡ ಹನಮಂತಗೌಡ ಪಾಟೀಲ (ಹಿಂದುಳಿದ ವರ್ಗ ಅ,ಕೂಡಲಸಂಗಮ), ಶೇಖರಪ್ಪ ಗುರಪ್ಪ ಬಾದ ವಾಡಗಿ ( ಬಿನ್‌ಸಾಲಗಾರ) ಆಯ್ಕೆಯಾಗಿದ್ದಾರೆ.

ಒಟ್ಟಾರೆಯಾಗಿ ಚುನಾವಣೆಯಲ್ಲಿ ಮೂವರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯಶಾಲಿಯಾಗಿದ್ದರೂ ಕೂಡಾ ನಂದವಾಡಗಿ ಕ್ಷೇತ್ರದಿಂದ ಗೆಲುವು ಸಾಧಿಸಿದ ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಜೊತೆಗೆ ಹತ್ತು ಅವಿರೋಧ ಆಯ್ಕೆಯಾಗಿರುವ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದರಿಂದ ಪಿಎಲ್‌ಡಿ ಬ್ಯಾಂಕ್ ಅಧಿಕಾರ ಕಾಂಗ್ರೆಸ್ ಬೆಂಬಲಿಗರ ಪಾಲಾಗುವುದು ನಿಶ್ಚಿತವಾಗಿದೆ.

ಬಿಜೆಪಿ ಸಂಭ್ರಮಾಚರಣೆ:

ನಾಲ್ಕು ಸ್ಥಾನದಲ್ಲಿ ಮೂವರು ಬಿಜೆಪಿ ಬೆಂಬಲಿತರು, ಓರ್ವ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸುತ್ತಿದಂತೆ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಸೇರಿ ಗುಲಾಲ ಎರಚಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಎಲ್ಲ ಚುನಾವಣೆಗೆ ದಿಕ್ಸೂಚಿ?

PLD ಬ್ಯಾಂಕ್ 4 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಲ್ವರಲ್ಲಿ ಮೂವರ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿರುವುದು. ಬಿಜೆಪಿಯ ಪಾಲಿಗೆ ಈ ಗೆಲುವು ಮುಂದೆ ನಡೆಯುವ ಎಲ್ಲ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಒಂದು ವೇಳೆ ಪಿಎಲ್‌ಡಿ ಬ್ಯಾಂಕಿನ 14 ಸ್ಥಾನಕ್ಕೂ ಚುನಾವಣೆ ನಡೆದಿದ್ದರೇ ಖಂಡಿತವಾಗಲೂ 10 ಕ್ಕೂ ಹೆಚ್ಚು ಸ್ಥಾನಗಳನ್ನು ಬಿಜೆಪಿ ಬೆಂಬಲಿತರು ಗೆಲುವು ಸಾಧಿಸುತ್ತಿದ್ದರು ಎಂದು ಬಿಜೆಪಿ ಮುಖಂಡ ರಾಜಕುಮಾರ ಬಾದವಾಡಗಿ ಹೇಳಿದರು.

‘ನಾಚಿಗೇಡಿನ ನಾಯಕತ್ವದ ಲಕ್ಷಣ’

ಪಿಎಲ್‌ಡಿ ಬ್ಯಾಂಕ್ ಚುನಾವಣೆಯ ಮತದಾರ ಯಾದಿಯನ್ನು ತನ್ನ ಮೂಗಿನ ನೇರಕ್ಕೆ ತಯಾರಿಸಿ ಮತ್ತೇ ಕೋರ್ಟ್ನಲ್ಲಿ ಹೆಚ್ಚುವರಿ ಮತದಾರರನ್ನು ಒಪ್ಪಿಗೆ ತರೋವುದು ನಾಚಿಗೇಡಿನ ನಾಯಕತ್ವದ ಲಕ್ಷಣವಾಗಿದೆ. ಆದರೂ ಸಹಿತ ಸದ್ಯ ನಾಲ್ಕು ಸ್ಥಾನಗಳಲ್ಲಿ ಮೂವರು ಬಿಜೆಪಿ ಬೆಂಬಲಿತರು ಗೆದ್ದಿರೋದು ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಜನರ ಒಲವು ನಮ್ಮ ಪರವಾಗಿದೆ ಎನ್ನುವುದನ್ನು ಈ ಚುನಾವಣೆ ಸಾಬೀತು ಮಾಡಿದೆ. ಈಗ ಮೂವರು ಗೆದ್ದಿದ್ದಾರೆ. ಹಾಗೇನಾದರೂ ಮರಳಿ ಎಲ್ಲರನ್ನು ರಾಜೀನಾಮೆ ಕೊಡಿಸಿ ಚುನಾವಣೆ ಎದರಿಸಲಿ ನಾವು 10 ಕ್ಕೂ ಹೆಚ್ಚು ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಬಿಜೆಪಿ ಪರತಗೌಡ ಪಾಟೀಲ ಹೇಳಿದರು.

Latest News

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ;              ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಶೇರುದಾರರಿಗೆ ಶೇ.12 ರಷ್ಟು ಲಾಭಾಂಶ ಘೋಷಣೆ; ಶರಣ ವೀರೇಶ್ವರ ಬ್ಯಾಂಕಿಗೆ 1.15 ಕೋಟಿ ರೂ.ಲಾಭ-ಎಂ.ಎಸ್.ಪಾಟೀಲ್

ಮುದ್ದೇಬಿಹಾಳ / ನಾಲತವಾಡ : ಗ್ರಾಹಕರ ಉತ್ತಮ ಸಹಕಾರ ಹಾಗೂ ಶೇರುದಾರರ ಬೆಂಬಲ,ಆಡಳಿತ ಮಂಡಳಿಯ

ಅವೈಜ್ಞಾನಿಕ ಆದಾಯ ಮಿತಿ ರದ್ದುಗೊಳಿಸಲು ವಿಕಲಚೇತನರ ಆಗ್ರಹ

ಅವೈಜ್ಞಾನಿಕ ಆದಾಯ ಮಿತಿ ರದ್ದುಗೊಳಿಸಲು ವಿಕಲಚೇತನರ ಆಗ್ರಹ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಸರಕಾರ ಸಾಮಾಜಿಕ ಭದ್ರತೆ ಯೋಜನೆಗಳ ಅಡಿ ನೀಡಲಾಗುವ ಮಾಶಾಸನಕ್ಕೆ

ಎಂಎಲ್‌ಎ,ಮಂತ್ರಿಗಳ ವೇತನ,ಭತ್ಯೆ ಕಡಿತಗೊಳಿಸಿ-ಎ.ಎಸ್.ಪಾಟೀಲ್ ನಡಹಳ್ಳಿ

ಎಂಎಲ್‌ಎ,ಮಂತ್ರಿಗಳ ವೇತನ,ಭತ್ಯೆ ಕಡಿತಗೊಳಿಸಿ-ಎ.ಎಸ್.ಪಾಟೀಲ್ ನಡಹಳ್ಳಿ

ಮುದ್ದೇಬಿಹಾಳ : ಹಿಂದೆoದೂ ಕಂಡರಿಯದoತ ಭೀಕರ ಬರಗಾಲ ಈ ವರ್ಷ ಬಂದಿದ್ದು ರೈತರ ಖಾತೆಗೆ

ಅಂಜುಮನ್ ಚುನಾವಣೆಯಲ್ಲಿ ಮಹತ್ವದ ಬೆಳವಣಿಗೆ: ಮಕಾನದಾರ,ದಫೇದಾರ,ಸೋಠೆ,ಗೋಲಂದಾಜಗೆ ಹೈಕೋರ್ಟ್ ಬಿಗ್ ರಿಲೀಫ್

ಅಂಜುಮನ್ ಚುನಾವಣೆಯಲ್ಲಿ ಮಹತ್ವದ ಬೆಳವಣಿಗೆ: ಮಕಾನದಾರ,ದಫೇದಾರ,ಸೋಠೆ,ಗೋಲಂದಾಜಗೆ ಹೈಕೋರ್ಟ್ ಬಿಗ್ ರಿಲೀಫ್

ಮುದ್ದೇಬಿಹಾಳ : ಮಹತ್ವದ ಬೆಳವಣಿಗೆಯೊಂದರಲ್ಲಿ ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ಚುನಾವಣೆಯಲ್ಲಿ ತಿರಸ್ಕಾರಗೊಂಡಿದ್ದ ನಾಲ್ವರ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಆ.8 ರಂದು ಪದ ಪ್ರದಾನ,ಜಾನಪದ ಬುಡಕಟ್ಟು ದಿನಾಚರಣೆ

ಮುದ್ದೇಬಿಹಾಳ : ಕನ್ನಡ ಜಾನಪದ ಪರಿಷತ್ ತಾಲೂಕು ಘಟಕದ ಉದ್ಘಾಟನೆ,ಪದ ಪ್ರದಾನ ಹಾಗೂ ಜಾನಪದ ಬುಡಕಟ್ಟು ದಿನಾಚರಣೆ ಸಮಾರಂಭ ಆ.8 ರಂದು ಮದ್ಯಾಹ್ನ 12.30ಕ್ಕೆ ಪಟ್ಟಣದ ಎಂಜಿಎoಕೆ ಶಾಲೆಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಪರಿಷತ್ ರಾಜ್ಯಾಧ್ಯಕ್ಷ ಜಾನಪದ ಎಸ್.ಬಾಲಾಜಿ ಉದ್ಘಾಟಿಸುವರು.ಎಂಜಿಎAಕೆ ಸಂಸ್ಥೆಯ ಅಧ್ಯಕ್ಷ ಮನೋಹರ ಕೋರಿ ಉಪಸ್ಥಿತರಿರುವರು.ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.ಬಾಗಲಕೋಟ ಕಜಾಪ ಜಿಲ್ಲಾಧ್ಯಕ್ಷ ಡಿ.ಎಂ.ಸಾಹುಕಾರ ಪ್ರಾಸ್ತಾವಿಕ ನುಡಿಗಳನ್ನಾಡುವರು. ಕಜಾಪ ಜಿಲ್ಲಾ ಸಂಚಾಲಕ ಪುಂಡಲೀಕ ಮುರಾಳ

ಅಂತರ್‌ರಾಜ್ಯ ಕಳ್ಳರ ಬಂಧನ :                                       ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಅಂತರ್‌ರಾಜ್ಯ ಕಳ್ಳರ ಬಂಧನ : ಬಸರಕೋಡದ ಪವಾಡ ಬಸವೇಶ್ವರರ ಮೂರ್ತಿ ಕರಗಿಸಿ ಮಾರಿದ್ದ ಗಟ್ಟಿ ಬೆಳ್ಳಿ ವಶಕ್ಕೆ

ಮುದ್ದೇಬಿಹಾಳ(ವಿಜಯಪುರ ಜಿಲ್ಲೆ ): ತಾಲ್ಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಕಳ್ಳತನ ಪ್ರಕರಣ ಭೇದಿಸಿರುವ ವಿಜಯಪುರ ಜಿಲ್ಲೆಯ ಪೊಲೀಸರು ಗುಜರಾತ ಮೂಲದ ಅಂತರಾಜ್ಯ ಮಟ್ಟದ ಮೂವರು ಕಳ್ಳರನ್ನು ಬಂಧಿಸಿ ಅವರಿಂದ ತುಂಡರಿಸಿದ ಬೆಳ್ಳಿ ಹಾಗೂ ಬೆಳ್ಳಿ ತುಣುಕು ಸೇರಿ ಹಲವು ಸಾಮಗ್ರಿ ವಶಕ್ಕೆ ಪಡೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬೆಳಗಾವಿ ಉತ್ತರ ವಲಯದ ಐಜಿಪಿ ಸಂದೀಪ ಪಾಟೀಲ ಅವರು,ಕಳೆದ ಜು. 5 ರಂದು ರಾತ್ರಿ ಬಸರಕೋಡದ ಪವಾಡಬಸವೇಶ್ವರ