ನನಗೆ ಸಚಿವ ಸ್ಥಾನ ಕೈ ತಪ್ಪಲು ಸಚಿವ ಎಂ.ಬಿ.ಪಾಟೀಲ್ ನೇರ ಕಾರಣ-ಸಿ.ಎಸ್.ನಾಡಗೌಡ

ನನಗೆ ಸಚಿವ ಸ್ಥಾನ ಕೈ ತಪ್ಪಲು ಸಚಿವ ಎಂ.ಬಿ.ಪಾಟೀಲ್ ನೇರ ಕಾರಣ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಜಿಲ್ಲೆಯ ರಾಜಕಾರಣದಲ್ಲಿ ಸಾಸನೂರ ಬಿ.ಎಸ್.ಪಾಟೀಲ,ಪ್ರಕಾಶ ರಾಠೋಡ ,ಶರಣಪ್ಪ ಸುಣಗಾರ,ಮನೋಹರ ಐನಾಪೂರ ಅವರನ್ನು ಬೆಳೆಯಲು ಎಂ.ಬಿ.ಪಾಟೀಲರು ಬಿಡಲಿಲ್ಲ.ಬೆಳೆಯುವವರನ್ನು ರಾಜಕೀಯದಿಂದ ನಿವೃತ್ತಿ ಹೇಗೆ ಮಾಡಿಸಬೇಕು ಎಂಬ ಕುತಂತ್ರ ಮಾಡುತ್ತಾರೆ.ಇವರು ಪಕ್ಷದಲ್ಲಿ ಕೊಂಡಿಮoಚಣ್ಣನoತೆ ಕೆಲಸ ಮಾಡುತ್ತಿದ್ದಾರೆ ಎಂದು ಮತಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ಎಂದು ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರ ವಿರುದ್ಧ ಹೆಸರು ಹೇಳದೇ ವಾಗ್ದಾಳಿ ನಡೆಸಿದ್ದಾರೆ.

ಪಟ್ಟಣದ ಮದರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಯಕರ್ತರು,ಅಭಿಮಾನಿಗಳಿಗೆ ಕೃತಜ್ಞಾ ಸಮರ್ಪಣಾ ಕಾರ್ಯಕ್ರಮದಲ್ಲಿ ಸುದೀರ್ಘ ತಮ್ಮ ರಾಜಕೀಯ ಜೀವನದ ಏಳು ಬೀಳುಗಳನ್ನು ತೆರದಿಟ್ಟರು.

ಸಚಿವ ಸ್ಥಾನಕ್ಕೆ ನನ್ನ ಹೆಸರು ಜೋರಾಗಿ ಕೇಳಿ ಬರುತ್ತಿರುವಾಗ ಯಶವಂತ್ರಾಯಗೌಡ ಪಾಟೀಲರನ್ನು ಎಬ್ಬಿಸಿ ಕೂಡಿಸುವುದು,ಯಶವಂತ್ರಾಯಗೌಡರ ಹೆಸರು ಹೆಚ್ಚು ಚರ್ಚೆ ಆಗುವಾಗ ಶಿವಾನಂದ ಪಾಟೀಲರನ್ನು ಎಬ್ಬಿಸುವುದು ಹೀಗೆ ಇನ್ನೊಬ್ಬ ಮತ್ತೊಬ್ಬರನ್ನು ಎಬ್ಬಿಸಿಕೂಡುವ ಮನಸ್ಥಿತಿ ಎಂ.ಬಿ.ಪಾಟೀಲರದ್ದಾಗಿದೆ.ಯಶವoತ್ರಾಯಗೌಡರಿಗೆ ನನ್ನ ಮಧ್ಯೆ ಜಗಳ ಹಚ್ಚಿಟ್ಟವರೇ ಎಂ.ಬಿ.ಪಾಟೀಲ ಎಂದು ಶಾಸಕ ನಾಡಗೌಡರು ವಾಗ್ದಾಳಿ ನಡೆಸಿದರು.

ಡಿಕೆಶಿ,ಸಿದ್ಧರಾಮಯ್ಯನವರಿಗೆ ನನ್ನನ್ನು ಮಂತ್ರಿ ಮಾಡುವ ಪ್ರಯತ್ನದಲ್ಲಿ ಒಲವು ಇತ್ತು.ಆದರೆ ಇವರು ನಮ್ಮ ಬೆಳವಣಿಗೆ ಸಹಿಸದೇ ನಮಗೆ ದ್ರೋಹ ಮಾಡಿದ್ದಾರೆ.ನಾನು ಯಾವತ್ತೂ ಕುರ್ಚಿ, ಕಾರಿಗಾಗಿ ಆಸೆ ಪಟ್ಟವರಲ್ಲ.ಖುರ್ಚಿಯನ್ನು ಹೊಸದಾಗಿ ನಾನು ನೋಡುತ್ತಿಲ್ಲ.ಕೆಲವರಿಗೆ ರಾಜಕಾರಣವೇ ಜೀವನ ಎಂದು ತಿಳಿದವರಿಗೆ ಇದು ವ್ಯಾಪಾರ ಆಗಿದೆ.ನನಗಲ್ಲ ಎಂದ ನಾಡಗೌಡರು,ನನ್ನ ವಿರುದ್ಧ ಮಾತನಾಡಿಸಲು ಜಿಪಂ ಸದಸ್ಯರನ್ನು ಛೂ ಬಿಡುತ್ತಾರೆ.ಹೈಕಮಾಂಡ್‌ಗೆ ಎಲ್ಲವೂ ಗೊತ್ತಿದೆ.ಆದರೆ ಅವರ ಮಾತಿಗೆ ಯಾಕೆ ಬೆಲೆ ಕೊಡುತ್ತಿದ್ದಾರೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.

ಅಣ್ಣ ತಮ್ಮಂದಿರoತೆ ತಿಳಿದವರೇ ದ್ರೋಹದ ಕೆಲಸ ಮಾಡುತ್ತಿದ್ದಾರೆ.ಕಳೆದ ಚುನಾವಣೆಯಲ್ಲೂ ನಮ್ಮ ಪಕ್ಷದವರೇ ನನ್ನವಿರುದ್ಧವಾಗಿ ಹಣ ಹಂಚಿಕೆ ಮಾಡಿದರು.ನನ್ನ ರಾಜಕೀಯ ಗುರುಗಳು ಬಿ.ಎಂ.ಪಾಟೀಲರು.ಯಾರಿಗೆ ಸಸಿ ಹಾಕಿ ಬೆಳಸಿದ್ದೆವೆಯೋ ಅವರಿಂದು ಜಾಲಿಮರವಾಗಿ ಚುಚ್ಚುವ ಕೆಲಸ ಮಾಡುತ್ತಿದ್ದಾರೆ.ರಾಜಕಾರಣ ಕೀಳುಮಟ್ಟಕ್ಕೆ ಇಳಿದಿದೆ ಎಂದು ಹೇಳಿದರು.

ರಾಜಕಾರಣ ನಿಂತ ನೀರಲ್ಲ,ಹರಿಯುವ ನೀರಾಗಿದೆ.ನೀವು ಕೊಟ್ಟ ಶಕ್ತಿಯಿಂದ ಮಂತ್ರಿಮoಡಲದಲ್ಲಿ ಇವರೆಲ್ಲ ಸಚಿವರಾಗಿ ಕೂತಿದ್ದಾರೆ.ಪ್ರಾಂತವಾರು,ಜಾತಿವಾರು,ಪಕ್ಷದ ಸೇವೆ,ಗುಣಗಳು ಏನನ್ನೂ ನೋಡುವುದಿಲ್ಲ.ಮೇಲಿನವರಿಗೆ ತಪ್ಪು ಮಾಹಿತಿ ಕೊಡುವ ಕೆಲಸ ಮಾಡುತ್ತಾರೆ.ಆದರೆ ಪಕ್ಷ ನಿಷ್ಠರನ್ನು ಹೈಕಮಾಂಡ್ ಗುರುತಿಸುವುದಿಲ್ಲ.ನನ್ನ ಉಸಿರಿನಲ್ಲಿ ಕಾಂಗ್ರೆಸ್ ಇದ್ದು ಎಂದಿಗೂ ಪಕ್ಷದ ವಿರುದ್ಧವಾಗಿಲ್ಲ.ಸಂಚುಗಳನ್ನ ಮಾಡುವವರು, ಕ್ಷೀಣಗೊಳಿಸುವವರು,ಮೋಸ ವಂಚನೆ ಮಾಡುವವರು ,ನಿಷ್ಠೆ ಇಲ್ಲದವರನ್ನು ದೊಡ್ಡವರು ಎಂದು ಯಾವತ್ತಿಗೂ ಕರೆಯುವುದಿಲ್ಲ.ಸ್ವಾರ್ಥಮಯ ಜೀವನ ಕೆಲಸ ಮಾಡುವರು.ಕೈಗೊಂಬೆ ಆಗಿ ಕೆಲಸ ಮಾಡೋದು ಬೇಡ.ನಮ್ಮ ಕ್ಷೇತ್ರದ ಸಂಪ್ರದಾಯ ಮುಂದುವರೆಸಿಕೊoಡು ಹೊಗೋಣ.ಕಾರ್ಯಕರ್ತರು ಬೇಸರಿಸಿಕೊಳ್ಳಬೇಡಿ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ,ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಸಂತೋಷ ಚವ್ಹಾಣ,ಬಾಲಾಜಿ ಶುಗರ್ಸ್ ನಿರ್ದೇಶಕ ರಾಹುಲ್ ಗೌಡ ಪಾಟೀಲ,ಬಿ.ಎಸ್.ಪಾಟೀಲ ಯಾಳಗಿ,ರಮೇಶ ಓಸ್ವಾಲ್,ಬಿ.ಕೆ.ಬಿರಾದಾರ, ಮಹೆಬೂಬ ಚೋರಗಸ್ತಿ,ದಾನಪ್ಪ ನಾಗಠಾಣ,ಅಶೋಕ ತಡಸದ,ಎಂ.ಎಸ್.ದೇಶಮುಖ,ಗುರು ದೇಶಮುಖ,ಶಿವಶಂಕರಗೌಡ ಹಿರೇಗೌಡರ,ಬಾಪುರಾಯ ದೇಸಾಯಿ,ಶಿವಪ್ಪ ತಾತರೆಡ್ಡಿ,ಎಸ್.ಎಸ್.ಹುಲ್ಲೂರ,ಅಕ್ಷತಾ ಚಲವಾದಿ,ಸತೀಶ ಓಸ್ವಾಲ,ಎಚ್.ಎಸ್.ಪಾಟೀಲ ಬಾವೂರ, ಮಲ್ಲಿಕಾರ್ಜುನ ಸಿದರೆಡ್ಡಿ ಇದ್ದರು.ಶ್ರೀಶೈಲ ಹೂಗಾರ ನಿರೂಪಿಸಿದರು.

ಚುನಾವಣೆಯಲ್ಲಿ ನನ್ನ ವಿರುದ್ದ ಬಿಜೆಪಿಯವರಿಗೆ ಫಂಡಿoಗ್ ಮಾಡಿದ್ದರು.ಹಾಲುಮತ ಸಮಾಜದವರನ್ನು ವಿಜಯಪುರ ಜಿಪಂ ಅಧ್ಯಕ್ಷರನ್ನಾಗಿ ಮಾಡಬೇಕಾದಾಗ ಸಾಕಷ್ಟು ಸರ್ಕಸ್ ಮಾಡಬೇಕಾಯ್ತು.ಕೆಂಚಪ್ಪ ಬಿರಾದಾರನನ್ನು ಜಿಪಂ ಉಪಾಧ್ಯಕ್ಷರನ್ನಾಗಿ ಮಾಡಬೇಕಾದಾಗ ಇವರು ವಿರೋಧಿಸಿದ್ದರು.ಎಸ್.ಎಂ.ಕೃಷ್ಣರ ಮುಂದೆ ರಾಜೀನಾಮೆ ಕೊಟ್ಟಾಗ ಜಿಪಂ ಉಪಾಧ್ಯಕ್ಷರನ್ನಾಗಿ ಬಿರಾದಾರಗೆ ಅವಕಾಶ ಸಿಕ್ಕಿತ್ತು. ಒಬ್ಬರೇ ಇಬ್ಬರೇ ಎಂ.ಬಿ.ಪಾಟೀಲರಿoದ ನನಗಷ್ಟೇ ಅಲ್ಲ ಹಲವರಿಗೆ ದ್ರೋಹ ಆಗಿದೆ ಎಂದು ನಾಡಗೌಡರು ಹೇಳಿದರು.

ತಮ್ಮ ಎಂದುಕೊoಡವರಿoದಲೇ ನನ್ನನ್ನು ಮುಗಿಸುವ ಸಂಚು :
ಯಾರನ್ನು ನನ್ನ ತಮ್ಮ ಎಂದು ಭಾವಿಸಿದ್ದೇನೋ ಅವರೆ ರಾಜಕೀಯ ದುರಾಸೆಯಿಂದ ನಮ್ಮನ್ನು ಮುಗಿಸುವ ಹುನ್ನಾರ ನಡೆದಿದೆ.ಇಂತಹ ಚಟುವಟಿಕೆ ಎಲ್ಲ ಪಕ್ಷದಲ್ಲು ನಡೆಯುತ್ತಿರಬಹುದು.ಅಭಿವೃದ್ಧಿಯಲ್ಲಿ ತೊಂದರೆ ಮಾಡುತ್ತಿರುವುದು, ಅನುದಾನದಲ್ಲಿ ತೊಂದರೆ ಮಾಡುತ್ತಿರುವುದು ಇದನ್ನು ನಾನು ನಮ್ಮ ಪಕ್ಷದೊಳಗಡೆ ಎದುರಿಸಬೇಕಾಗಿರುವುದು ದುರ್ದೈವದ ಸಂಗತಿ.ನನಗೆ ಸೋಲು ಗೌರವ ಕಡಿಮೆ ಮಾಡಲಿಲ್ಲ.ಪಕ್ಷಾತೀತವಾಗಿ ಗೌರವಿಸುತ್ತಿದ್ದೀರಿ.ಮುಂದೆ ಏನೇ ಬರಲಿ ನಿಮ್ಮೆಲ್ಲರ ಆಶೀರ್ವಾದ ತಡೆದುಕೊಳ್ಳುವ ಕೆಲಸ ಮಾಡುತ್ತೇನೆ.ನೀವು ನನಗೆ ಸುಧೀರ್ಘ ಅವಧಿಗೆ ಅವಕಾಶ ಕೊಟ್ಟಿದ್ದೀರಿ ನಿಮ್ಮ ಋಣ ತೀರಿಸಲು ಆಗುತ್ತಿಲ್ಲ.
ಸಿ.ಎಸ್.ನಾಡಗೌಡ,ಶಾಸಕ

Latest News

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ

ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ:                            ಜಾಣರನ್ನು ಜಾಣರನ್ನಾಗಿ ಮಾಡುವುದು ದೊಡ್ಡದಲ್ಲ-ನಾಡಗೌಡ

ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ: ಜಾಣರನ್ನು ಜಾಣರನ್ನಾಗಿ ಮಾಡುವುದು ದೊಡ್ಡದಲ್ಲ-ನಾಡಗೌಡ

ಮುದ್ದೇಬಿಹಾಳ : ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಇಳಿಮುಖಗೊಳಿಸುವ ಕಾರ್ಯ ಶಿಕ್ಷಕರು ಮಾಡಬೇಕು.ಸರ್ಕಾರ ಜಾರಿಗೊಳಿಸಿರುವ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಸಿದರು. ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಸೆ.6ರಂದು ಮದ್ಯಾಹ್ನ 1 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ಲಿಂಗಸೂರು ತಾಲ್ಲೂಕು ಅಂಕಲಿಮಠದ ವೀರಭದ್ರ ಸ್ವಾಮೀಜಿ ವಹಿಸುವರು.ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ನೂತನ ಕಚೇರಿ ಉದ್ಘಾಟಿಸುವರು.ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ನೂತನ ಗೋಡವನ್ ಹಾಗೂ ವಾಣಿಜ್ಯ ಮಳಿಗೆ ಉದ್ಘಾಟಿಸುವರು.ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.ಸಂಘದ ಉಪಾಧ್ಯಕ್ಷ