ಕೋವಿಡ್ ಸಮಯದಲ್ಲಿ ನಿರ್ವಹಿಸಿದ ಸೇವೆ ಅನುಪಮ-ಡಾ.ಶೇಗುಣಸಿ

ಕೋವಿಡ್ ಸಮಯದಲ್ಲಿ ನಿರ್ವಹಿಸಿದ ಸೇವೆ ಅನುಪಮ-ಡಾ.ಶೇಗುಣಸಿ

ಮುದ್ದೇಬಿಹಾಳ : ಕೋವಿಡ್ ಸಮಯದಲ್ಲಿ ಜೀವ ಒತ್ತೆ ಇಟ್ಟು ಸೇವೆ ಸಲ್ಲಿಸಿದ ವೈದ್ಯರು,ಶುಶ್ರೂಷಕರ ಸೇವೆ ಅನುಪಮವಾದದ್ದು ಎಂದು ಕಾಳಗಿ ಸಮುದಾಯ ಕೇಂದ್ರದ ವೈದ್ಯ ಡಾ.ಅನೀಲಕುಮಾರ ಶೇಗುಣಸಿ ಹೇಳಿದರು.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬುಧವಾರ ಕರ್ನಾಟಕ ರಾಜ್ಯ ಸರ್ಕಾರಿ ಶುಶ್ರೂಷಾಧಿಕಾರಿಗಳ ಕೇಂದ್ರ ಸಂಘದ ತಾಲೂಕು ಘಟಕದಿಂದ ನೂತನ ವರ್ಷದ ದಿನದರ್ಶಿಕೆ ಉದ್ಘಾಟನೆ,ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪರಶುರಾಮ ವಡ್ಡರ ಮಾತನಾಡಿ, ವೈದ್ಯಕೀಯ ಸೇವೆಯನ್ನು ಜನರು ಮೆಚ್ಚುವಂತೆ ನೀಡುತ್ತಿರುವ ಎಲ್ಲ ಸಿಬ್ಬಂದಿಯನ್ನು ಅಭಿನಂದಿಸುತ್ತೇನೆ. ಎಲ್ಲರೂ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಾರೆ ಎಂದರು.

ಡಾ.ಅನುಪಮಾ ಶೆಟ್ಟಿ, ಹಿರಿಯ ಶುಶ್ರೂಷಅಧಿಕಾರಿಗಳಾದ ಸಂಜಯ ಭೋಸಲೆ,ಕರ್ನಾಟಕ ರಾಜ್ಯ ಸಹಕಾರ ಪಟ್ಟಣ ಬ್ಯಾಂಕುಗಳ ಮಹಾಮಂಡಳದ ನಿರ್ದೇಶಕ ಆನಂದಗೌಡ ಬಿರಾದಾರ,ಅಯ್ಯಮ್ಮ ಕೊಣ್ಣೂರ, ಶಾಂತಾ ಮೇಟಿ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ವಿಠ್ಠಲ ಕಿಲಾರಟ್ಟಿ ಮಾತನಾಡಿದರು.

ಸಂಘದ ಉಪಾಧ್ಯಕ್ಷ ಅವಪ್ಪ ಅವನ್ನವರ, ಖಜಾಂಚಿ ಶೇಖಪ್ಪ ಬಿರಾದಾರ, ಸಂಘಟನಾ ಕಾರ್ಯದರ್ಶಿ ಮುನಾವರಪಾಷಾ ಹೊನ್ನುಟಗಿ, ಜಂಟಿ ಕಾರ್ಯದರ್ಶಿ ಜ್ಯೋತಿ ಕೋಳೂರಗಿ, ಸಚೀನ ರಾಥೋಡ, ಸಂತೋಷ ಅಂಗಡಿಗೇರಿ, ಜಿಲ್ಲಾ ಕಾರ್ಯದರ್ಶಿ ಯಲಗೂರೇಶ ತೊನಶ್ಯಾಳ,ಆಸ್ಪತ್ರೆಯ ಸಿಬ್ಬಂದಿ ಬಸವರಾಜ ಹಾವೇರಿ, ವಿಜಯ ಮಾಂತೇಶ ಪವಾಡಶೆಟ್ಟಿ, ದಾವೂದ ಮಕಾನದಾರ, ಬಸವರಾಜ ಬಡಿಗೇರ, ಎಂ.ಎಸ್. ಗೌಡರ, ಮಲ್ಲು ತಂಗಡಗಿ, ಶ್ರೀಕಾಂತ ಸಜ್ಜನ, ಕಲ್ಯಾಣಿ ಕೊಣ್ಣೂರ, ಓಲೆಕಾರ್, ರಾಜಶ್ರೀ ಹೊಕ್ರಾಣಿ, ರೇಖಾ ಜಾಯಗೊಂಡ, ನಸ್ರೀನ ಕೆ, ಶಿಲ್ಪ, ಭಾರತಿ, ರೇಷ್ಮಾ, ಸಲೀಂ ನದಾಫ,ಎಲ್ಲ ವಿಭಾಗದ ಇದ್ದರು.
ಪ್ರಧಾನ ಕಾರ್ಯದರ್ಶಿ ಮಹಮ್ಮದರಫೀಕ ಬಾಗವಾನ ಸ್ವಾಗತಿಸಿದರು.ಸಂಘದ ಅಧ್ಯಕ್ಷ ಶಿವಣ್ಣ ಎಸ್.ಮಾಗಿ ನಿರೂಪಿಸಿದರು. ಹಿರಿಯ ಸಲಹೆಗಾರರಾದ ಕಾಶಿನಾಥ ವಗದುರ್ಗಿ ವಂದಿಸಿದರು.

Latest News

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಸ್ಥಿರಾಸ್ತಿ ಮಾರ್ಗಸೂಚಿ ದರ ಪರಿಷ್ಕರಣೆ; ಆಕ್ಷೇಪಣೆ ಸಲ್ಲಿಕೆಗೆ ಸೂಚನೆ

ಮುದ್ದೇಬಿಹಾಳ : ಮುದ್ದೇಬಿಹಾಳ ಉಪ ನೋಂದಣಿ ಕಛೇರಿಯ ವ್ಯಾಪ್ತಿಗೆ ಬರುವ ನಗರ ಮತ್ತು ಗ್ರಾಮಾಂತರ

ಸಮಾಜ ಸೇವಕ ಎಂ.ಎನ್.ಮದರಿ ಹೇಳಿಕೆ :                                    ನ.10 ರಂದು ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ,ಧರ್ಮಸಭೆ

ಸಮಾಜ ಸೇವಕ ಎಂ.ಎನ್.ಮದರಿ ಹೇಳಿಕೆ : ನ.10 ರಂದು ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ,ಧರ್ಮಸಭೆ

ಮುದ್ದೇಬಿಹಾಳ : ತಾಲ್ಲೂಕಿನ ಅಡವಿ ಹುಲಗಬಾಳದ ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ಮತ್ತು ಸಿಡಿಯಾನ ದ್ಯಾಮವ್ವ

ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ :                                      ಟನ್ ಕಬ್ಬಿಗೆ 3600 ರೂ.ದರ ಘೋಷಣೆ ಮಾಡಿದ ಬಾಲಾಜಿ ಶುಗರ್ಸ್

ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ : ಟನ್ ಕಬ್ಬಿಗೆ 3600 ರೂ.ದರ ಘೋಷಣೆ ಮಾಡಿದ ಬಾಲಾಜಿ ಶುಗರ್ಸ್

ಮುದ್ದೇಬಿಹಾಳ : ತಾಲೂಕಿನ ಯರಗಲ್ಲ ಗ್ರಾಮದಲ್ಲಿರುವ ಶ್ರೀ ಬಾಲಾಜಿ ಶುಗರ್ಸ್ ಅಂಡ್ ಕೆಮಿಕಲ್ಸ್ ಪ್ರೈವೇಟ್

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ:      ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ

ಹುಲ್ಲೂರಿನಲ್ಲಿ ಕಬ್ಬು ಬೆಳೆಗಾರರ ಧರಣಿ:                                 ನಾಳೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನಿರೀಕ್ಷೆ-ಶಾಂತಗೌಡ ಪಾಟೀಲ್

ಹುಲ್ಲೂರಿನಲ್ಲಿ ಕಬ್ಬು ಬೆಳೆಗಾರರ ಧರಣಿ: ನಾಳೆ ಕಬ್ಬು ಬೆಳೆಗಾರರಿಗೆ ಸಿಹಿ ಸುದ್ದಿ ನಿರೀಕ್ಷೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿoದ ನಡೆದಿರುವ ಹೋರಾಟಕ್ಕೆ ನಾಳೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದ್ದಾರೆ. ತಾಲ್ಲೂಕಿನ ಹುಲ್ಲೂರ ಬಳಿ ನಡೆದಿರುವ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಬ್ಬಿಗೆ ಬೆಂಬಲ ಬೆಲೆ ನೀಡಲು ಕಾರ್ಖಾನೆಯ ಮಾಲೀಕರು ಕಬ್ಬು ಬೆಳೆಗಾರರ ಜೊತೆಗೆ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ನಿಯೋಜಿತ ಕನ್ನಡ ಸಾಹಿತ್ಯಭವನ ನಿರ್ಮಾಣಕ್ಕೆ ಸ್ಥಳ ನಿಗದಿ

ಮುದ್ದೇಬಿಹಾಳ : ಸಾಹಿತ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಪಟ್ಟಣದ ಆಲಮಟ್ಟಿ ರಸ್ತೆಯ ಬಳಿ ಇರುವ ಸಾಯಿಮಂದಿರ ಸಮೀಪದಲ್ಲಿರುವ ಢವಳಗಿ ಲೇಔಟ್ ಬಳಿ ಇರುವ ಸಾರ್ವಜನಿಕ ಉದ್ಯಾನವನದಲ್ಲಿ ಕನ್ನಡ ಸಾಹಿತ್ಯ ಭವನ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು. ಪಟ್ಟಣದ ಆಲಮಟ್ಟಿ ರಸ್ತೆಯ ಸಾಯಿ ಮಂದಿರದ ಹತ್ತಿರ ಇರುವ ಢವಳಗಿ ಲೇಔಟ್‌ಬಳಿ ಸಾರ್ವಜನಿಕ ಉದ್ಯಾನವನದಲ್ಲಿ ನಿಗದಿ ಮಾಡಿದ ಸ್ಥಳದಲ್ಲಿ ಭಾನುವಾರ ನಿಯೋಜಿತ ಕನ್ನಡ ಸಾಹಿತ್ಯ