ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ ನಡೆಯಲಿದ್ದ ಬೃಹತ್ ರೈತರ ಪ್ರತಿಭಟನಾ ಸಮಾವೇಶಕ್ಕೆ ಮುದ್ದೇಬಿಹಾಳ ತಾಲ್ಲೂಕಿನಿಂದ ತೆರಳುತ್ತಿದ್ದ ರೈತ ಮುಖಂಡರನ್ನು ಬೆಳಗಾವಿ ಬಳಿಯ ಪಂಚಗಾವ ಬಳಿ ಪೊಲೀಸರು ತಡೆದು ನಿಲ್ಲಿಸಿ ವಶಕ್ಕೆ ಪಡೆದುಕೊಂಡು ನಂತರ ಬಿಡುಗಡೆ ಮಾಡಿದ ಘಟನೆ ನಡೆದಿದೆ.
ತಾಲ್ಲೂಕಿನ ಹುಲ್ಲೂರಿನಲ್ಲಿ ರೈತ ಸಂಘದ ಹೋರಾಟ ಮುಕ್ತಾಯಗೊಳಿಸಿ ಗುರುವಾರ ಬೆಲೆ ನಿಗದಿ ಖಚಿತವೆಂದು ತೆರಳಿದ್ದ ರೈತ ಮುಖಂಡರುಗಳಿಗೆ ಮತ್ತೆ ನಿರಾಸೆ ಉಂಟಾಗಿದೆ.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ನೇತೃತ್ವದಲ್ಲಿ ಎರಡ್ಮೂರು ಟ್ರಾö್ಯಕ್ಸ್ಗಳಲ್ಲಿ ಬೆಳಗಾವಿಗೆ ತೆರಳುತ್ತಿದ್ದ ಜಿಲ್ಲಾ,ತಾಲ್ಲೂಕು ಮುಖಂಡರುಗಳನ್ನು ಪೊಲೀಸರು ತಡೆದು ನಿಲ್ಲಿಸಿ ಮುಂದೆ ಹೋಗದಂತೆ ತಡೆಯೊಡ್ಡಿದರು.
ಈ ವೇಳೆ ಮಾತನಾಡಿದ ತಾಳಿಕೋಟಿ ತಾಲ್ಲೂಕು ಅಧ್ಯಕ್ಷ ದೇವರಾಜ ಗುಂಡಕನಾಳ, ನಾವು ಎಲ್ಲಿಯೇ ಹೋದರು ಬಂಧನಕ್ಕೆ ಒಳಗಾಗುವುದು ಶತಃಸಿದ್ಧ ಮುಂದೆ ಹೋಗಲು ಬಿಡಿ ಎಂದು ಪೊಲೀಸರಿಗೆ ತಿಳಿಸಿದರು.ಇದೇ ರಾಜ್ಯ ಕಮೀಟಿಯ ಪದಾಧಿಕಾರಿಯಾಗಿದ್ದ ಶಾಂತಗೌಡ ಪಾಟೀಲ ಅವರನ್ನು ಪೊಲೀಸರು ಸೌಜನ್ಯಯುತವಾಗಿ ಮಾತನಾಡಿಸುತ್ತಲೇ ವಶಕ್ಕೆ ಪಡೆದುಕೊಂಡು ಗುಪ್ತಸ್ಥಳದಲ್ಲಿರಿಸಿ ನಂತರ ಬಿಡುಗಡೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಮುದ್ದೇಬಿಹಾಳದಿAದ ಹೋರಾಟಗಾರರಾದ ಹುಲಗಪ್ಪ ನಾಯ್ಕಮಕ್ಕಳ, ಬಸವರಾಜ ಬಳವಾಟ,ಅರಳದಿನ್ನಿಯ ಶಿವಯ್ಯ ಹಿರೇಮಠ ,ಶರಣಪ್ಪ ಕೊಪ್ಪ ಮತ್ತಿತರರು ಪಾಲ್ಗೊಂಡಿದ್ದರು.
ಹೋರಾಟ ಹತ್ತಿಕ್ಕಲು ಡಿಕೆಶಿ ಸರ್ಕಾರದ ಹುನ್ನಾರ-ಶಾಂತಗೌಡ : ಕರ್ನಾಟಕ ರಾಜ್ಯ ರೈತ ಸಂಘದ ಬೇಡಿಕೆಗಳನ್ನು ಸಹಾನಾಭೂತಿಯಿಂದ ಆಲಿಸಿ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದ ರಾಜ್ಯದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ರೈತರ ಹೋರಾಟವನ್ನು ಪೊಲೀಸರ ಬಲ ಪ್ರಯೋಗಿಸಿ ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ ಎಂದು ಮುಖಂಡ ಶಾಂತಗೌಡ ಪಾಟೀಲ ಆರೋಪಿಸಿದರು.
ದೂರವಾಣಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜಾರಿ,ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಅವರನ್ನು ಪೊಲೀಸರು ಬಂಧಿಸಿರುವುದು ಅಕ್ಷಮ್ಯ ಅಪರಾಧ.ಎಂಎಸ್ಪಿ ಗಾಗಿ ರೈತರು ಹೋರಾಟ ಮಾಡಿದರೆ ರಾಜ್ಯ ಸರ್ಕಾರ ಬೆಂಬಲ ಕೊಡುತ್ತದೆ.ಯಾವ ಟೋಲ್ ನಾಕಾ ಬಂದ್ ಮಾಡಿದರೂ ಕೇಸು,ಸೆಕ್ಷನ್ ಕಾಯ್ದೆ ಹಾಕುವುದಿಲ್ಲ.ಆದರೆ ರಾಜ್ಯದ ಎಸ್ಎಪಿ ಕೇಳಿದರೆ ಸರ್ಕಾರದ ವಿರುದ್ಧ ಹೋರಾಟ ಮಾಡಿದಂತೆ ಎಂದು ರೈತರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದ್ದು ಮುಂದಿನ ಚುನಾವಣೆಗಳಲ್ಲಿ ಈ ಸರ್ಕಾರಕ್ಕೆ ರೈತರು ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು. 3650 ರೂ.ದರ ಕೊಡಲು ಮಾತುಕತೆ ಆಗಿದ್ದು ಅದನ್ನು ಲಿಖಿತಾಗಿ ಬರೆದುಕೊಟ್ಟು ರೈತರ ಮುಂದೆಯೆ ಹೇಳಿಸುವುದಕ್ಕೆ ಯೋಜನೆ ರೂಪಿಸಲಾಗಿತ್ತು.ಆದರೆ ಸರ್ಕಾರ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದು ರೈತರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ತಿಳಿಸಿದ್ದಾರೆ.







