ಮುದ್ದೇಬಿಹಾಳ : ತಾಲ್ಲೂಕಿನ ಅಡವಿ ಹುಲಗಬಾಳದ ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ಮತ್ತು ಸಿಡಿಯಾನ ದ್ಯಾಮವ್ವ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನ.10 ರಂದು ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಾತ್ರಾ ಮಹೋತ್ಸವದ ಸ್ವಾಗತ ಸಮೀತಿ ಅಧ್ಯಕ್ಷರು,ಸಮಾಜ ಸೇವಕ ಎಂ.ಎನ್.ಮದರಿ ಹೇಳಿದರು.
ಪಟ್ಟಣದ ಪಲ್ಲವಿ ಹೊಟೇಲ್ದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ಕಳೆದ ಎರಡು ವರ್ಷಗಳಿಂದ ಜಾತ್ರಾ ಕಾರ್ಯಕ್ರಮ ಮಾತ್ರ ಜರುಗಿದ್ದು ಯಾವುದೇ ಸಾಮೂಹಿಕ ಮದುವೆಗಳು ನಡೆದಿರಲಿಲ್ಲ.ಈ ವರ್ಷ ಜಾತ್ರಾ ಮಹೋತ್ಸವ ಸಮೀತಿಯ ಸದಸ್ಯರೆಲ್ಲರೂ ಸಾಮೂಹಿಕ ವಿವಾಹ ನಡೆಸುವ ಕುರಿತು ಮನವರಿಕೆ ಮಾಡಿದಾಗ ಸಾರ್ವಜನಿಕವಾಗಿ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸಿದ್ದೇವೆ.ಒಟ್ಟು ಎಂಟು ಜೋಡಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಲಿದ್ದಾರೆ ಎಂದು ತಿಳಿಸಿದರು.
ನ.9ರಂದು ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.ಅಂದೇ ರಾತ್ರಿ 12 ಗಂಟೆ ನಂತರ ಮಾಯಣ್ಣ ಪೂಜಾರಿ ಸಂಗಡಿಗರಿAದ ದೈಗೊಂಡನ ದರ್ಬಾರ ಪ್ರದರ್ಶನ ನಡೆಯಲಿದೆ.
ನ.10 ರಂದು ಬೆಳಗ್ಗೆ 11.30ಕ್ಕೆ ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಮ್ಮೇಳನ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.ಅಂದೇ ರಾತ್ರಿ 10.30ಕ್ಕೆ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.ನ.11 ರಂದು ಟಗರಿನ ಕಾಳಗ ಸ್ಪರ್ಧೆಗಳು ನಡೆಯಲಿವೆ ಎಂದು ತಿಳಿಸಿದರು.
ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯ ಸಂಗನಬಸಪ್ಪ ಹುಂಡೇಕಾರ(ಮುತ್ತಣ್ಣ) ಮಾತನಾಡಿ, ಹಿಂದಿನಿAದ ಹೇಗೆ ಜಾತ್ರೆ,ಸಾಮೂಹಿಕ ವಿವಾಹ ಮಾಡಿಕೊಂಡು ಬಂದಿದ್ದೇವೆಯೋ ಗ್ರಾಮದ ದೈವರು ಸುತ್ತಮುತ್ತಲಿನ ಗ್ರಾಮಸ್ಥರ ಸಹಕಾರ ಪಡೆದುಕೊಂಡು ಈ ಬಾರಿಯೂ ವೈಭವದಿಂದ ಜಾತ್ರೆ ನಡೆಸಲಾಗುವುದು.ಜಾತ್ರಾ ಕಮೀಟಿಯ ಸ್ವಾಗತ ಸಮೀತಿಯ ಅಧ್ಯಕ್ಷರಾಗಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ ಅವರು ಸೇವೆ ಮಾಡುತ್ತಿದ್ದಾರೆ.ಸುತ್ತಲಿನ ಎಲ್ಲ ಗ್ರಾಮಸ್ಥರು ಒಗ್ಗೂಡಿ ಈ ಜಾತ್ರೆ ನಡೆಸುತ್ತಿದ್ದೇವೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬೀರಪ್ಪ ಹೊಕ್ರಾಣಿ,ಸಂಗಣ್ಣ ಪೂಜಾರಿ,ಗಂಗಪ್ಪ ಚಪ್ಪರ,ಮಲ್ಲಪ್ಪ ಗುಡಿಹಾಳ,ರಾಮನಗೌಡ ಪಾಟೀಲ,ನಿಂಗಪ್ಪ ಪೂಜಾರಿ,ಅಯ್ಯಾಳಪ್ಪ ಕೆಂಭಾವಿ,ಪರಶುರಾಮ ನಾಗೂರ,ಸಿದ್ಧಣ್ಣ ಪೂಜಾರಿ,ನಂದಪ್ಪಗೌಡ ಬಿರಾದಾರ,ಬಸಪ್ಪ ಗುರಿಕಾರ,ಮಲ್ಲಿಕಾರ್ಜುನ ಗುಳಬಾಳ,ಸಂಗಪ್ಪ ಬಿರಾದಾರ,ಯಮನಪ್ಪ ಗುಳಬಾಳ ಮೊದಲಾದವರು ಇದ್ದರು.
ಹೊಸ ನಾಯಕತ್ವದ ಉದಯ:
ಕಳೆದ 20 ವರ್ಷಗಳಿoದಲೂ ಹೆಚ್ಚು ಕಾಲ ಬೀರಪ್ಪನ ಬೆಟ್ಟದಲ್ಲಿ ಸಾಮೂಹಿಕ ವಿವಾಹ,ಧರ್ಮಸಭೆ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದ್ದ ಜಿಪಂ ಮಾಜಿ ಸದಸ್ಯರೊಬ್ಬರು ಈ ಕಾರ್ಯಕ್ರಮದಿಂದ ಸಕ್ರಿಯವಾಗಿ ಗ್ರಾಮದ ದೈವದವರೊಂದಿಗೆ ತೊಡಗಿಕೊಳ್ಳದ ಕಾರಣ ಸಮಾಜ ಸೇವಕ ಎಂ.ಎನ್.ಮದರಿ ಅವರ ಹೆಗಲಿಗೆ ಈ ಕಾರ್ಯಕ್ರಮದ ನೇತೃತ್ವವನ್ನು ಮಸಾರಿ ಹಳ್ಳಿಯ ಜನರು ಹೊರೆಸಿದ್ದಾರೆ.ಸುದ್ದಿಗೋಷ್ಠಿಯಲ್ಲೂ ಕೂಡಾ ಅಡವಿ ಹುಲಗಬಾಳ ಹಾಗೂ ಇತರೆ ಗ್ರಾಮಗಳ ಹಿರಿಯರು ಹಿಂದೆ ಜಾತ್ರೆ ಮಾಡುತ್ತಿದ್ದ ಮುಖಂಡರೂ ಕಾರ್ಯಕ್ರಮದ ಜೊತೆಗೆ ಇದ್ದಾರೆ.ಅವರ ವಯಕ್ತಿಕ ಕಾರಣಗಳ ಕಾರಣ ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಉತ್ತರಿಸಿದರು.ಈ ಭಾಗದಲ್ಲಿ ಕುರುಬ ಸಮಾಜದಿಂದ ಹೊಸ ನಾಯಕತ್ವದ ಉದಯಕ್ಕೆ ಈ ಕಾರ್ಯಕ್ರಮ ಭವಿಷ್ಯದಲ್ಲಿ ವೇದಿಕೆ ಆಗಲಿದೆಯೇ ಎಂಬ ಮಾತುಗಳು ಚರ್ಚೆಗೆ ನಾಂದಿ ಹಾಡಿವೆ.







