ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿಗೆ 35 ಲಕ್ಷ ರೂ. ದೇಣಿಗೆ ; ಸಿ.ಬಿ.ಅಸ್ಕಿ ಭರವಸೆ

ಮುದ್ದೇಬಿಹಾಳ : ಹಾಲಿ,ಮಾಜಿ ಶಾಸಕರು,ಸರ್ಕಾರಗಳಿಂದ ಬೀರಪ್ಪನ ಬೆಟ್ಟದ ದೇವಸ್ಥಾನ ಹಾಗೂ ಸಂಪರ್ಕ ರಸ್ತೆಯ ಅಭಿವೃದ್ಧಿಪಡಿಸಲು ಆಗುವುದಿಲ್ಲವೆಂದು ಘೋಷಿಸಿದರೆ ನಾನು ಸ್ವತಃ 35 ಲಕ್ಷ ರೂ.ದೇಣಿಗೆ ನೀಡಿ ದೇವಸ್ಥಾನದ ಅಭಿವೃದ್ಧಿಗೆ ಸಹಕಾರ ನೀಡುವುದಾಗಿ ಕಾಂಗ್ರೆಸ್ ಮುಖಂಡ ಸಿ.ಬಿ.ಅಸ್ಕಿ ಭರವಸೆ ನೀಡಿದರು.

ತಾಲ್ಲೂಕಿನ ಅಡವಿ ಹುಲಗಬಾಳದ ಬೀರಪ್ಪನ ಬೆಟ್ಟದಲ್ಲಿ ಮಂಗಳವಾರ ದೀಪಾವಳಿ ಪಾಡ್ಯದಂಗವಾಗಿ ಸಿಡಿಯಾನ ದ್ಯಾಮವ್ವ ದೇವಿ ,ಬೀರಲಿಂಗೇಶ್ವರ ಹಾಗೂ ಮಾಳಿಂಗರಾಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಪ್ರತಿ ವರ್ಷವೂ ಜಾತ್ರೆ ಇಲ್ಲಿ ವೈಭವದೊಂದಿಗೆ ಮಾಡುತ್ತಾರೆ.15 ವರ್ಷಗಳಿಂದ ನಾನು ಜಾತ್ರೆಗೆ ಬರುತ್ತಲೇ ಇದ್ದೇನೆ.ಆದರೆ ಈ ದೇವಸ್ಥಾನಕ್ಕೆ ಒಳ್ಳೆಯ ಸಂಪರ್ಕ ರಸ್ತೆ,ಕುಡಿವ ನೀರು ಸೇರಿದಂತೆ ಹಲವು ಸೌಕರ್ಯಗಳು ಸುಧಾರಣೆ ಕಂಡಿಲ್ಲ ಎನ್ನುವುದು ಸತ್ಯವಾಗಿದೆ.ಆದರೆ ದೇವಸ್ಥಾನದ ಅಭಿವೃದ್ಧಿಗೆ ಇರುವ ಅಡ್ಡಿ ಆತಂಕಗಳನ್ನು ನಿವಾರಿಸಿ ಬಂದಲ್ಲಿ ಅಭಿವೃದ್ಧಿಗೆ ಕೈ ಜೋಡಿಸುತ್ತೇನೆ.ಸಾಮೂಹಿಕ ವಿವಾಹದಲ್ಲಿ ನೂತನವಾಗಿ ಮದುವೆಯಾದವರು ತಂದೆ,ತಾಯಿ,ಅತ್ತೆ ಮಾವಂದಿರನ್ನು ಹೊರಗೆ ಹಾಕಬೇಡಿ.ಈ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಸಿರುವ ಎಂ.ಎನ್.ಮದರಿ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.

ಜಾತ್ರಾ ಕಮೀಟಿಯ ಸ್ವಾಗತ ಸಮೀತಿ ಅಧ್ಯಕ್ಷ ಎಂ.ಎನ್.ಮದರಿ ಮಾತನಾಡಿ, ಎರಡು ವರ್ಷಗಳಿಂದ ಜಾತ್ರೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಗಳು ಸ್ಥಗಿತಗೊಂಡಿದ್ದವು.ಸುತ್ತಮುತ್ತಲಿನ ಗ್ರಾಮಸ್ಥರು ದೇವಸ್ಥಾನದ ಜಾತ್ರೆ ನಡೆಸಿ ಸುಮ್ಮನೆ ಕೂಡುತ್ತಿದ್ದರು.ಆದರೆ ಈ ಬಾರಿ ಸಾಮೂಹಿಕ ವಿವಾಹ ಮಾಡುವ ನಿರ್ಧಾರ ಮಾಡಿದಾಗ ನಮ್ಮ ಕುಟುಂಬದಿoದ ತಾಳಿ,ಕಾಲುಂಗರು ದಾನವಾಗಿ ನೀಡಲು ಕಮೀಟಿಯವರು ಕೋರಿದಾಗ ಅದನ್ನು ನೆರವೇರಿಸಿದ್ದೇವೆ.ಜಾತ್ರೆಯ ದಾಸೋಹ,ಕುಡಿವ ನೀರು,ಪೆಂಡಾಲ್ ಸೇರಿದಂತೆ ಹಲವು ಸೇವೆಗಳನ್ನು ಅಡವಿ ಹುಲಗಬಾಳ ಸುತ್ತಮುತ್ತಲಿನ ಗ್ರಾಮದ ದೈವದವರು ಕೈಗೊಂಡಿದ್ದಾರೆ.ಇಲ್ಲಿ ಎಲ್ಲ ಜಾತಿ,ಜನಾಂಗದವರು ಇದು ತಮ್ಮದೇ ಜಾತ್ರೆ ಎಂದು ಭಾವಿಸಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ,ಬೀರಪ್ಪನ ಬೆಟ್ಟದ ದೇವಸ್ಥಾನ ಸಮೀತಿಯವರು ಸಂಘವನ್ನು ನೋಂದಾಯಿಸಿ.ಅದಕ್ಕೆ ನಾನೇ 25 ಲಕ್ಷ ರೂ.ದೇಣಿಗೆ ನೀಡುತ್ತೇನೆ.ಇನ್ನುಳಿದವರು ಹಣ ನೀಡಲಿ.ರೈತರು ಪ್ರತಿ ಒಂದು ಟನ್ ಕಬ್ಬು ಕೊಟ್ಟರೆ ದೇವಸ್ಥಾನ ಅಭಿವೃದ್ಧಿ ಆಗುತ್ತದೆ ಎಂದು ಹೇಳಿದರು.

ಗೋವಾ ಕನ್ನಡಿಗರ ಸಂಘದ ಗೌರವಾಧ್ಯಕ್ಷ ಸಿದ್ಧಣ್ಣ ಮೇಟಿ,ಮುಖಂಡ ಮಲಕೇಂದ್ರಗೌಡ ಪಾಟೀಲ ಮತ್ತಿತರರು ಮಾತನಾಡಿ, ಬೀರಪ್ಪನ ಬೆಟ್ಟದ ಅಭಿವೃದ್ಧಿಗೆ ಜಾತಿ,ಮತ ಪಂಥಗಳನ್ನು ತೊರೆದು ಎಲ್ಲರೂ ಒಗ್ಗೂಡಿಸಿದಾಗ ಅಭಿವೃದ್ಧಿಯಾಗಲು ಸಾಧ್ಯವಿದೆ ಎಂದರು.

ಜಿಪo ಮಾಜಿ ಸದಸ್ಯ ಗಂಗಾಧರ ನಾಡಗೌಡ,ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿಲ್ಪಾ ಕುದರಗೊಂಡ ಮಾತನಾಡಿದರು.ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ್ದ ಯರಝರಿ ಯಲ್ಲಾಲಿಂಗೇಶ್ವರ ಮಠದ ಮಲ್ಲಾರಲಿಂಗ ಸ್ವಾಮೀಜಿ,ಅಗತೀರ್ಥದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ,ತಿಂಥಣಿ ಬ್ರಿಜ್‌ನ ಕಾಗಿನೆಲೆ ಶಾಖಾ ಮಠದ ಸಿದ್ದಬೀರ ದೇವರು,ಸರೂರಿನ ಸಿದ್ದಯ್ಯ ಗುರುವಿನ,ಸಹದೇವಯ್ಯ ಗುರುವಿನ ವಹಿಸಿದ್ದರು.ಅಧ್ಯಕ್ಷತೆಯನ್ನು ಅಡವಿ ಹುಲಗಬಾಳ,ಅಡವಿ ಸೋಮನಾಳ ಹಾಗೂ ಗೋನಾಳ ಗ್ರಾಮಸ್ಥರು ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಬಿರಾದಾರ,ಜಿಪಂ ಮಾಜಿ ಉಪಾಧ್ಯಕ್ಷ ಕೆಂಚಪ್ಪ ಬಿರಾದಾರ,ಮಾಜಿ ಸದಸ್ಯ ಬೀರಪ್ಪ ಸಾಸನೂರ,ಬಿ.ಎಸ್.ಶಿರೋಳ,ತಾಪಂ ಮಾಜಿ ಸದಸ್ಯ ಸಂಗನಬಸಪ್ಪ ಹುಂಡೇಕಾರ, ಪುರಸಭೆ ಮಾಜಿ ಸದಸ್ಯೆ ಸಂಗಮ್ಮ ದೇವರಳ್ಳಿ,ಕಾಂಗ್ರೆಸ್ ಧುರೀಣ ರವೀಚಂದ್ರ ಆಲ್ದಾಳ,ಮೂಕಿಹಾಳದ ಕಾಶೀಂಪಟೇಲ್ ಪಾಟೀಲ,ಮಲ್ಲಣ್ಣ ಅಪರಾಧಿ,ಹಣಮಂತ ಕುರಿ,ಎಚ್.ಎಮ್.ನಾಯ್ಕ,ಸಂಗಣ್ಣ ಪೂಜಾರಿ ಸೇರಿದಂತೆ ಹಲವರು ಇದ್ದರು.

ವಿಜಯಕರ್ ಕಟು ನುಡಿ :
ಕಾಂಗ್ರೆಸ್ ಮುಖಂಡ ವಾಯ್.ಎಚ್.ವಿಜಯಕರ್ ಮಾತನಾಡಿ, ಬೀರಪ್ಪನ ಬೆಟ್ಟದ ದೇವಸ್ಥಾನಗಳ ಅಭಿವೃದ್ಧಿ ಹಾಗೂ ಸಂಪರ್ಕ ರಸ್ತೆ 25 ವರ್ಷಗಳಿಂದ ಆಗದ ಕುರಿತು ಸ್ವಪಕ್ಷದ ಶಾಸಕರಾದಿಯಾಗಿ ಪಕ್ಷದ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.ಸಮಾಜ ಒಗ್ಗಟ್ಟಾಗದಿದ್ದರೆ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿದರು.ಇನ್ನುಳಿದಂತೆ ಕಾರ್ಯಕ್ರಮದಲ್ಲಿ ಸ್ವಾಮೀಜಿಗಳು,ರಾಜಕೀಯ ಮುಖಂಡರ ಭಾಷಣದಲ್ಲಿ ರಾಜಕೀಯ ಭಾಷಣವೇ ಪ್ರಧಾನವಾಗಿತ್ತೇ ಹೊರತು ಸಾಮೂಹಿಕ ವಿವಾಹ ಹಾಗೂ ಸರ್ವಧರ್ಮ ಸಮ್ಮೇಳನದ ಕುರಿತು ಮಾತುಗಳನ್ನು ಉಲ್ಲೇಖಿಸಿದ್ದು ಅಲ್ಪಸ್ವಲ್ಪ ಮಾತ್ರ .

Latest News

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ:      ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುಖಂಡ ಶಾಂತಗೌಡ ಪಾಟೀಲ ಬಂಧನ,ಬಿಡುಗಡೆ: ಪಂಚಗಾವ ಬಳಿ ಮುದ್ದೇಬಿಹಾಳದ ರೈತ ಮುಖಂಡರು ವಶಕ್ಕೆ

ಮುದ್ದೇಬಿಹಾಳ : ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿ ಬೆಳಗಾವಿಯಲ್ಲಿ ಗುರುವಾರ

ಸಿಎಂ ಡಿಕೆಶಿ ನೇತೃತ್ವದ ಸಭೆ :                                           ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಸಿಎಂ ಡಿಕೆಶಿ ನೇತೃತ್ವದ ಸಭೆ : ಮುದ್ದೇಬಿಹಾಳದ ಬಸವ ಇಂಟರ್‌ನ್ಯಾಷನಲ್ ಶಾಲೆ ಭಾಗಿ

ಮುದ್ದೇಬಿಹಾಳ : ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿ ಹಾಗೂ ಗುಣಮಟ್ಟದ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶದಿಂದ

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ;                         ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ನಾಳೆ ಬೆಳಗಾವಿಯಲ್ಲಿ ಅಧಿಕೃತ ಘೋಷಣೆ; ಕಬ್ಬಿಗೆ 3500 ರೂ.ಮೇಲೆಯೇ ದರ ಫಿಕ್ಸ್..?!!

ಮುದ್ದೇಬಿಹಾಳ : ಬರಗಾಲದ ಸಮಯದಲ್ಲಿ ರೈತರು ಬೆಳೆದಿರುವ ಕಬ್ಬು ಕಾರ್ಖಾನೆಗೆ ಸಾಗಿಸದಿದ್ದರೆ ಬಂದಷ್ಟು ಫಸಲು

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ:                                 ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ: ತಡ ರಾತ್ರಿಯವರೆಗೂ ನಡೆಯಲಿದೆ ಸಂಧಾನ ಸಭೆ…!?

ಮುದ್ದೇಬಿಹಾಳ : ಕಬ್ಬು ಬೆಳೆಗಾರರಿಗೆ ಮಂಗಳವಾರ ಸಿಹಿ ಸುದ್ದಿ ಸಿಗಲಿದೆ ಎಂಬ ನಿರೀಕ್ಷೆ ಇನ್ನೂ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ:  ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ: ಕಾರ್ಖಾನೆಯವರು ಉಲ್ಟಾ ಹೊಡೆದಿದ್ದಾರೆ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಬ್ಬು ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಶನಿವಾರ ಕರೆ ನೀಡಲಾಗಿದ್ದ ಮುದ್ದೇಬಿಹಾಳ ತಾಲ್ಲೂಕು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು ರೈತರ ಹೋರಾಟಕ್ಕೆ ಸಾರ್ವಜನಿಕವಾಗಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಂಘದ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ,ಮುಖಂಡರಾದ ಹುಲಗಪ್ಪ ನಾಯಕಮಕ್ಕಳ ಮತ್ತಿತರರ ನೇತೃತ್ವದಲ್ಲಿ ಮುದ್ದೇಬಿಹಾಳ ಪಟ್ಟಣದಲ್ಲಿ ವ್ಯಾಪಾರಸ್ಥರಿಗೆ ಹಾಗೂ ಹೊಟೇಲ್ ಮಾಲೀಕರುಗಳಿಗೆ ಅಂಗಡಿಗಳನ್ನು ಬಂದ್ ಮಾಡಿ ರೈತರ ಹೋರಾಟಕ್ಕೆ ಬೆಂಬಲ ನೀಡುವಂತೆ

ಬೆಳೆ ಸರ್ವೆಯಲ್ಲಿ ಭಾರೀ ಲೋಪ; ಅಧಿಕಾರಿಗಳು,ಜನಪ್ರತಿನಿಧಿಗಳು ರೈತರ ಕತ್ತು ಕೊಯ್ಯಬೇಡಿ-ಶಾಂತಗೌಡ ಪಾಟೀಲ್

ಬೆಳೆ ಸರ್ವೆಯಲ್ಲಿ ಭಾರೀ ಲೋಪ; ಅಧಿಕಾರಿಗಳು,ಜನಪ್ರತಿನಿಧಿಗಳು ರೈತರ ಕತ್ತು ಕೊಯ್ಯಬೇಡಿ-ಶಾಂತಗೌಡ ಪಾಟೀಲ್

ಮುದ್ದೇಬಿಹಾಳ : ಕಳೆದ ಬಾರಿ ರೈತರಿಗೆ ಬೆಳೆ ವಿಮೆ ನೀಡುವ ಸಮಯದಲ್ಲಿ ಸಮೀಕ್ಷೆ ಸರಿಯಾಗಿ ಮಾಡಿಲ್ಲ.ಮೂಕಿಹಾಳ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಹಾರವೇ ಬಂದಿಲ್ಲ.ಮುದ್ದೇಬಿಹಾಳ ತಾಲ್ಲೂಕಿನಲ್ಲಿ ಮತ್ತೆ ರೈತರಿಗೆ ಮೋಸ ಮಾಡುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ಆರೋಪಿಸಿದರು. ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.ತಂಗಡಗಿ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ,ಸಿಬ್ಬಂದಿ ನಮ್ಮ ಹೊಲದ ಪಕ್ಕದಲ್ಲಿ ನೀರಾವರಿ ಆಶ್ರಿತ