ಮುದ್ದೇಬಿಹಾಳ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಳೆದ ಒಂದು ತಿಂಗಳಿನಿoದ ನಡೆದಿರುವ ಹೋರಾಟಕ್ಕೆ ನಾಳೆ ಸಿಹಿ ಸುದ್ದಿ ಸಿಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆ ರಾಜ್ಯ ಉಪಾಧ್ಯಕ್ಷ ಶಾಂತಗೌಡ ಪಾಟೀಲ ತಿಳಿಸಿದ್ದಾರೆ.
ತಾಲ್ಲೂಕಿನ ಹುಲ್ಲೂರ ಬಳಿ ನಡೆದಿರುವ ಹೋರಾಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕಬ್ಬಿಗೆ ಬೆಂಬಲ ಬೆಲೆ ನೀಡಲು ಕಾರ್ಖಾನೆಯ ಮಾಲೀಕರು ಕಬ್ಬು ಬೆಳೆಗಾರರ ಜೊತೆಗೆ ಸಭೆ ನಡೆಸಿದ್ದು ಒಂದು ಎರಡು ಕಡೆಯವರು ಒಂದು ಒಪ್ಪಂದಕ್ಕೆ ಬಂದಿದ್ದಾರೆ ಎಂದು ನಮ್ಮ ಸಂಘದ ರಾಜ್ಯ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.ಮಂಗಳವಾರ ಬಹುತೇಕ ಹೋರಾಟಕ್ಕೆ ಯಶಸ್ಸು ದೊರೆಯುವ ನಿರೀಕ್ಷೆ ಇದ್ದು ಹೆಚ್ಚಿನ ಸಂಖ್ಯೆಯಲ್ಲಿ ಕಬ್ಬು ಬೆಳೆಗಾರರು ಹುಲ್ಲೂರಿಗೆ ಆಗಮಿಸುವಂತೆ ತಿಳಿಸಿದ್ದಾರೆ.
ರಾಜ್ಯ,ಕೇಂದ್ರ ಸರ್ಕಾರಗಳ ಮೊಂಡುತನ:
ಕಬ್ಬಿಗೆ ಬೆಂಬಲ ಬೆಲೆ ನೀಡಲು ಮೀನಮೇಷ ನಡೆಸುತ್ತಿರುವ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮೊಂಡುತನದ ವಾದ ಮುಂದುವರೆಸಿವೆ ಎಂದು ರೈತ ಸಂಘದ ಮುಖಂಡ ಶಾಂತಗೌಡ ಪಾಟೀಲ ಟೀಕಿಸಿದರು.
ತಾಲ್ಲೂಕಿನ ಹುಲ್ಲೂರು ಗ್ರಾಮದ ಬಳಿ ಸೋಮವಾರ ಮುದ್ದೇಬಿಹಾಳ-ಬಾಗಲಕೋಟ ಮಾರ್ಗವನ್ನು ತಡೆದು ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಸ್ಥಳದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.ಕಬ್ಬಿಗೆ ಬೆಂಬಲ ಬೆಲೆ ನೀಡಲು ಬಿಜೆಪಿ ಕಾಂಗ್ರೆಸ್ ಮೇಲೆ,ಕಾಂಗ್ರೆಸ್ ಬಿಜೆಪಿ ಸರ್ಕಾರದ ಮೇಲೆ ಬೆರಳು ಮಾಡುತ್ತಾ ರಾಜಕಾರಣ ಮಾಡುತ್ತಿದ್ದಾರೆ.ರೈತರ ಕಬ್ಬು ಒಣಗುತ್ತಿದ್ದು ಕಷ್ಟದಲ್ಲಿರುವ ರೈತರಿಗೆ ನ್ಯಾಯ ಒದಗಿಸುವುದನ್ನು ಬಿಟ್ಟು ಸೂಕ್ತ ನ್ಯಾಯ ಒದಗಿಸುವ ಕೆಲಸ ಮಾಡಬೇಕು.ಸಿಎಂ ಡಿ.ಕೆ.ಶಿವಕುಮಾರ ಹಾಗೂ ಕೇಂದ್ರದ ಸಚಿವ ಪ್ರಹ್ಲಾದ ಜೋಷಿ ಅವರು ಕಬ್ಬು ಬೆಳೆಗಾರರ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.ಭವಿಷ್ಯದಲ್ಲಿ ದೊಡ್ಡ ಬೆಲೆಯನ್ನು ಇವರು ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಮುದ್ದೇಬಿಹಾಳ, ನಿಡಗುಂದಿ ತಾಲೂಕಿನ ರೈತ ಬಾಂಧವರು ಕಬ್ಬಿಗೆ ಬೆಂಬಲ ಬೆಲೆ ನೀಡಬೇಕು ಎಂದು ನಿರಂತರವಾಗಿ ಹೋರಾಟದಲ್ಲಿ ಪಾಲ್ಗೊಳ್ಳಬೇಕು.ಹುಲ್ಲೂರ್ ಬಳಿ ನ್ಯಾಯ ಸಿಗುವವರೆಗೆ ಹೋರಾಟ ಮಾಡಲು ಬೃಹತ್ ವೇದಿಕೆ ಹಾಕಿದ್ದೇವೆ. ತಾವೆಲ್ಲರೂ ಜ್ಯಾತ್ಯಾತೀತ ಹಾಗೂ ಪಕ್ಷಾತೀತವಾಗಿ ಹೋರಾಟದಲ್ಲಿ ಭಾಗವಹಿಸಬೇಕು ಎಂದು ವಿನಂತಿಸಿದರು. ಮುಖಂಡರಾದ ಮಲ್ಲಿಕಾರ್ಜುನ ಗೋಡೆಕರ, ಭೀಮು ಬಾಗಲಕೋಟ, ದೇವರಾಜ ಗುಂಡಕನಾಳ, ಗುರುನಾಥಗೌಡ ಬಿರಾದಾರ, ಅಮೋಘಸಿದ್ದ ಡೋಣುರ, ಪ್ರಶಾಂತ ಮೂಲಿ, ಹಣಮಂತ ಅಂಬಿಗೇರ, ಯಮನೂರಿ ಮೇಲಿನಮನಿ, ನಿಂಗಪ್ಪ ಹುಲ್ಲೂರ, ಕಾಶೀಮ್ ನಾಯ್ಕೋಡಿ ಸೇರಿದಂತೆ ನೂರಾರು ರೈತರು ಇದ್ದರು.
ಬೇಡಿಕೆಗಳು:
ಕಬ್ಬಿನ ಎಂ.ಎಸ್.ಪಿ ದರ 31 ರಿಂದ ರೂ. 60 ನಿಗದಿಪಡಿಸಬೇಕು.9.5 %ರಿಕವರಿ ಕಬ್ಬಿನ ದರ ಪ್ರತಿ ಟನ್ ಗೆ ರೂ. 5500 ನಿಗದಿಪಡಿಸಬೇಕು.ಡಾ.ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಬೇಕು.ಮಹಾರಾಷ್ಟ್ರ, ಗುಜರಾತ್, ಯು.ಪಿ ಮಾದರಿಯಲ್ಲಿ ಕರ್ನಾಟಕದಲ್ಲಿ 100% ಇಥೆನಾಲನ್ನು ಖರೀದಿಸಬೇಕು.ಎಸ್‌ಎಪಿ ಪ್ರತಿ ಟನ್ ಗೆ ರೂ.1000 ನಿಗದಿಪಡಿಸಬೇಕು.ರಿಕವರಿಯಲ್ಲಿ ಪಾರದರ್ಶಕತೆ ತರಬೇಕು.ಬರಗಾಲ ಪರಿಹಾರ ಕನಿಷ್ಟ ಎಕರೆಗೆ ರೂ. 50,000 ನೀಡಬೇಕು.ಸಮರ್ಪಕ ಕೃಷಿ ವಿದ್ಯುತ್ ಪೂರೈಕೆ.
ಎಚ್&ಟಿ ಯಲ್ಲಿ ಕಡಿತದಲ್ಲಿ ನ್ಯಾಯಬೇಕು.ಸರ್ಕಾರದಿಂದ ತೂಕದ ಯಂತ್ರ ಕಾರ್ಖಾನೆ ಮುಂದೆ ಅಳವಡಿಸಬೇಕು.ರೈತರ ಕಬ್ಬಿನ ಬಿಲ್‌ನ್ನು 14 ದಿನದೊಳಗೆ ಪಾವತಿಸಬೇಕು ಎಂದು ಬೇಡಿಕೆಗಳನ್ನು ಸಲ್ಲಿಸಲಾಗಿದೆ.







