ಮುದ್ದೇಬಿಹಾಳ : ಹಿಂದುಳಿದ ಸಮಾಜದಲ್ಲಿ ಜನಿಸಿದ್ದರೂ ಶಿಕ್ಷಣದಲ್ಲಿ ನಮ್ಮವರು ಎಂದಿಗೂ ಹಿಂದೆ ಬಿದ್ದಿಲ್ಲ.ಶಿಕ್ಷಣದೊಂದಿಗೆ ಜನಾಂಗವನ್ನು ಆರ್ಥಿಕ ಸಬಲತೆಯತ್ತ ಕೊಂಡೊಯ್ಯುವ ಕಾರ್ಯ ಸಮಾಜದ ಬಾಂಧವರು ಮಾಡಬೇಕು ಎಂದು ಮುದ್ದೇಬಿಹಾಳ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಸ್.ಬಡದಾನಿ ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಭಾನುವಾರ ದೇವಾಂಗ ಸಮಾಜ ಹಾಗೂ ದೇವಾಂಗ ನೌಕರರ ಸಂಘದ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಹಿಂದುಳಿದ ವರ್ಗದವರ ನೇಮಕಾತಿ ವಿಭಾಗದಲ್ಲಿ ಕೆಲಸ ಮಾಡಿರುವ ನನಗೆ ನಮ್ಮ ಜನಾಂಗದವರು ಶೈಕ್ಷಣಿಕವಾಗಿ ಇನ್ನೂ ಪ್ರಗತಿ ಸಾಧಿಸಬೇಕಾಗಿದೆ ಎಂಬ ಅರಿವಿದೆ.ಸಮಾಜದಲ್ಲಿರುವ ಅತ್ಯಂತ ಕಡು ಬಡ ಪ್ರತಿಭಾವಂತ ಮಕ್ಕಳ ಶೈಕ್ಷಣಿಕ ಮುನ್ನಡೆಗೆ ತಮ್ಮಿಂದಾದ ನೆರವು ನೀಡುವುದಾಗಿ ಹೇಳಿದರು.
ದೇವಾಂಗ ನೌಕರರ ಸಂಘದ ಅಧ್ಯಕ್ಷ ಶ್ರೀಶೈಲ ಭಾವಿಕಟ್ಟಿ ಮಾತನಾಡಿ, ಅತ್ಯಂತ ಸರಳ ಸಜ್ಜನಿಕೆಯ ವ್ಯಕ್ತಿ ಬಡದಾನಿ ಅವರಾಗಿದ್ದು ಸಾಕಷ್ಟು ಕಷ್ಟಕೋಟಲೆಗಳನ್ನು ಎದುರಿಸಿ ಇಂದು ಮುದ್ದೇಬಿಹಾಳದ ಬಿಇಒ ಆಗಿ ಸೇವೆಗೆ ಬಂದಿರುವುದು ನಮಗೆಲ್ಲರಿಗೂ ಹೆಮ್ಮೆ ತರುವ ಸಂಗತಿಯಾಗಿದೆ.ಸಮಾಜದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನಾವೆಲ್ಲರೂ ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದು ಹೇಳಿದರು.
ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಶಂಕರ ಈ.ಹೆಬ್ಬಾಳ ಮಾತನಾಡಿ, ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಹುದ್ದೆ ಅತ್ಯಂತ ಜವಾಬ್ದಾರಿಯಾಗಿದೆ.ಎಲ್ಲ ಜಾತಿ ಜನಾಂಗದವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಕೆಲಸ ಮಾಡುವ ಶಿಕ್ಷಕರಿಗೆ ಪ್ರೋತ್ಸಾಹ,ಕೆಲಸ ಮಾಡದ ಶಿಕ್ಷಕರಿಗೆ ಕಠಿಣ ಸೂಚನೆಗಳನ್ನು ನೀಡುವ ಮೂಲಕ ಎಲ್ಲರ ಮೆಚ್ಚುಗೆ ಗಳಿಸುವಂತೆ ಸಲಹೆ ಮಾಡಿದರು.
ದೇವಾಂಗ ಸಮಾಜದ ಅಧ್ಯಕ್ಷರಾದ ಚನ್ನಬಸ್ಸು ಗುಡ್ಡದ, ಮುತ್ತಣ್ಣ ಪ್ಯಾಟಿಗೌಡರ, ಮಾತನಾಡಿದರು.ಸಮಾಜದ ಹಿರಿಯರಾದ ಸಿದ್ದಣ್ಣ ಚಿತ್ತರಗಿ,ಬಸವರಾಜ ಅಗಸಬಾಳ,ಈಶ್ವರಪ್ಪ ಹೆಬ್ಬಾಳ,ದೇವಾಂಗ ನೌಕರರ ಸಂಘದ ಸದಸ್ಯರಾದ ಬಿ.ಬಿ.ಕಲ್ಲುಂಡಿ, ಸಿ.ಎಚ್.ಚಿತ್ತರಗಿ, ಎನ್.ಎಸ್.ಚಿತ್ತರಗಿ, ಅನೀಲ್ ಬೇನಾಳ, ಸಂತೋಷ ಹೆಬ್ಬಾಳ,ವೀರೇಶ ಮಾಶೆಟ್ಟಿ,ಶಿವಾನಂದ ಹೆಬ್ಬಾಳ,ರುಕ್ಮಿಣಿ ಶೇಬಿನಕಟ್ಟಿ, ಸುನಂದಾ ಗುಡ್ಡದ,ರಾಘು ಬೇಲಾಳ,ಸುರೇಶ ಮಾಶ್ಯಾಳ,ಐ.ಎಸ್.ಮೋರ್ಖೆ,ಮಹಾಂತೇಶ ಮೋರ್ಖೆ,ವಿಜಯಲಕ್ಷಿö್ಮÃ ಬಡದಾನಿ,ಶಿಕ್ಷಕಿ ಪ್ಯಾಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.ಅಮೃತಾ ಹೆಬ್ಬಾಳ ಹಾಗೂ ಅರ್ಪಿತಾ ಹೆಬ್ಬಾಳ ಸ್ವಾಗತ ಗೀತೆ ಹಾಡಿದರು.ಕಸ್ತೂರಿ ಗದೆಪ್ಪನವರ ಪ್ರಾರ್ಥಿಸಿದರು.ಸಂತೋಷ ಚಿತ್ತರಗಿ ನಿರೂಪಿಸಿದರು. ಸಿಆರ್‌ಪಿ ಸರಸ್ವತಿ ವಡವಡಗಿ(ಹುಣಶ್ಯಾಳ) ವಂದಿಸಿದರು.
ಶೀಘ್ರ ಪ್ರತಿಭಾ ಪುರಸ್ಕಾರ ಆಯೋಜನೆ:
ದೇವಾಂಗ ಸಮಾಜದ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸುವ,ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸೆಪ್ಟೆಂಬರ್ ತಿಂಗಳಲ್ಲಿ ಆಯೋಜಿಸುವುದಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತದೆ ಎಂದು ದೇವಾಂಗ ನೌಕರರ ಸಂಘದ ಅಧ್ಯಕ್ಷ ಶ್ರೀಶೈಲ ಭಾವಿಕಟ್ಟಿ ತಿಳಿಸಿದರು.







