ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಟ್ಯಾಕ್ಸಿ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಭಾವೈಕ್ಯತೆ ಸಂದೇಶ

ಮುದ್ದೇಬಿಹಾಳ : ಮುಸ್ಲಿಂರ ಹಬ್ಬಕ್ಕೆ ಹಿಂದೂಗಳು ಕೈಜೋಡಿಸುವುದು,ಹಿಂದೂಗಳ ಹಬ್ಬಕ್ಕೆ ಮುಸ್ಲಿಂ ಬಾಂಧವರು ಸಹಕಾರ ನೀಡುವ ಕಾರ್ಯಗಳಿಂದ ಸಮಾಜದಲ್ಲಿ ಭಾವೈಕ್ಯತೆ ಸೌಹಾರ್ದತೆ ನೆಲೆಸುತ್ತದೆ ಎಂದು ಗಣಿತ ಲೋಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಬಸವರಾಜ ಗುರವ ಹೇಳಿದರು.

ಪಟ್ಟಣದ ಪುರಸಭೆ ಮುಂದೆ ಇರುವ ಗಜಾನನ ಟ್ಯಾಕ್ಸಿ ,ಜೀಪ್ ಚಾಲಕರು,ಮಾಲೀಕರ ಸಂಘದಿoದ ಏರ್ಪಡಿಸಿದ್ದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಜಾತಿ,ಧರ್ಮಗಳ ಮಧ್ಯೆ ಭಿನ್ನಾಭಿಪ್ರಾಯಗಳನ್ನು ಇಟ್ಟುಕೊಂಡು ದೇಶದ ಹಲವೆಡೆ ವಿಷಮ ಪರಿಸ್ಥಿತಿ ಸೃಷ್ಟಿಸುವ ಕಾರ್ಯ ಮಾಡುತ್ತಿರುವುದನ್ನು ಕಾಣುತ್ತೇವೆ.ಆದರೆ ನಮ್ಮ ಭಾಗದಲ್ಲಿ ಹಿಂದೂ-ಮುಸ್ಲಿo ಬಾಂಧವರು ಪರಸ್ಪರ ಸೌಹಾರ್ದಯುತ ನಡೆಯನ್ನು ನಾವೆಲ್ಲ ಅನುಸರಿಸುತ್ತಿದ್ದೇವೆ.ಶಾಂತಿಯುತವಾದ ಹಬ್ಬದ ಆಚರಣೆಗೆ ಎಲ್ಲರೂ ಕೈ ಜೋಡಿಸಿದ್ದಾರೆ ಎಂದರು.

ವೀರಶೈವ ಲಿಂಗಾಯತ ಸಮಾಜದ ಮುಖಂಡ ಗುರುಸ್ವಾಮಿ ಬೂದಿಹಾಳಮಠ ಮಾತನಾಡಿ,ಈದ್ ಮಿಲಾದ್ ನಿಮಿತ್ಯ ಎಲ್ಲರಿಗೂ ಅನ್ನಸಂತರ್ಪಣೆ ಏರ್ಪಡಿಸುವ ಆಲೋಚನೆ ಮಾದರಿಯಾದದ್ದು.ದಾನಿಗಳ ನೆರವಿನಿಂದ ಗಣೇಶೋತ್ಸವ,ಈದ್ ಮಿಲಾದ್‌ಹಬ್ಬದಲ್ಲಿ ಹಸಿದವರಿಗೆ ಹೊತ್ತಿನ ಊಟ ಕೊಡುವುದು ಪುಣ್ಯದ ಕೆಲಸ ಎಂದರು.

ಈ ಸಂದರ್ಭದಲ್ಲಿ ಗಜಾನನ ಜೀಪ,ಟ್ಯಾಕ್ಸಿ ಚಾಲಕರ,ಮಾಲೀಕರ ಸಂಘದ ಅಧ್ಯಕ್ಷ ಹಣಮಂತ ಗುಳೇದಗುಡ್ಡ, ಪ್ರಮುಖರಾದ ಶಂಭು ಅಕ್ಕಿ,ರ‍್ರಿಸ್ವಾಮಿ,ಸಂದೀಪ ಬಿದರಕೋಟಿ,ಶಬ್ಬೀರ್ ಪಡ್ನೂರ,ಸಂಘದ ಉಪಾಧ್ಯಕ್ಷ ಜಗದೇವ ಚಲವಾದಿ,ಮಸ್ತಾನ್ ಬಾಗವಾನ,ಬಾಂಬೆಗೌಡ ಬಿರಾದಾರ,ಅಪ್ಪು ಮುರಾಳ,ಅಯ್ಯಪ್ಪ ಯಾಳವಾರ, ಮುಸ್ತಾಫ ಮುಲ್ಲಾ,ಷರೀಫ ನಾಯ್ಕೋಡಿ,ಮಲ್ಲು ಚೌಧರಿ ಸೇರಿದಂತೆ ಹಲವರು ಇದ್ದರು.

Latest News

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ

ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ:                            ಜಾಣರನ್ನು ಜಾಣರನ್ನಾಗಿ ಮಾಡುವುದು ದೊಡ್ಡದಲ್ಲ-ನಾಡಗೌಡ

ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ: ಜಾಣರನ್ನು ಜಾಣರನ್ನಾಗಿ ಮಾಡುವುದು ದೊಡ್ಡದಲ್ಲ-ನಾಡಗೌಡ

ಮುದ್ದೇಬಿಹಾಳ : ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಇಳಿಮುಖಗೊಳಿಸುವ ಕಾರ್ಯ ಶಿಕ್ಷಕರು ಮಾಡಬೇಕು.ಸರ್ಕಾರ ಜಾರಿಗೊಳಿಸಿರುವ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಸಿದರು. ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಸೆ.6 ರಂದು ನೂತನ ಸಹಕಾರ ಸಂಘದ ಕಟ್ಟಡ ಉದ್ಘಾಟನೆ

ಮುದ್ದೇಬಿಹಾಳ : ತಾಲ್ಲೂಕಿನ ಹಿರೇಮುರಾಳದ ಶ್ರೀ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಸೆ.6ರಂದು ಮದ್ಯಾಹ್ನ 1 ಗಂಟೆಗೆ ಹಮ್ಮಿಕೊಳ್ಳಲಾಗಿದೆ. ದಿವ್ಯ ಸಾನಿಧ್ಯವನ್ನು ಲಿಂಗಸೂರು ತಾಲ್ಲೂಕು ಅಂಕಲಿಮಠದ ವೀರಭದ್ರ ಸ್ವಾಮೀಜಿ ವಹಿಸುವರು.ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ನೂತನ ಕಚೇರಿ ಉದ್ಘಾಟಿಸುವರು.ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡ ನೂತನ ಗೋಡವನ್ ಹಾಗೂ ವಾಣಿಜ್ಯ ಮಳಿಗೆ ಉದ್ಘಾಟಿಸುವರು.ಸಂಘದ ಅಧ್ಯಕ್ಷ ಮಲ್ಲನಗೌಡ ಪಾಟೀಲ ಅಧ್ಯಕ್ಷತೆ ವಹಿಸುವರು.ಸಂಘದ ಉಪಾಧ್ಯಕ್ಷ