‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

‘ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಾಡಗೌಡರು ಮನೆಗೆ ಹೋಗಲಿ’

ಮುದ್ದೇಬಿಹಾಳ : ರಾಜ್ಯಾದ್ಯಂತ ಬರದ ಪರಿಸ್ಥಿತಿ ಇದ್ದರೂ ವಿಜಯಪುರ ಜಿಲ್ಲೆಯಲ್ಲಿ ಕೇವಲ ಮೂರು ತಾಲ್ಲೂಕುಗಳನ್ನು ಮಾತ್ರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿರುವ ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದೆಯಾ ಎಂದು ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ,ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಅವರು ಕ್ಷೇತ್ರದ ಶಾಸಕ ಸಿ.ಎಸ್.ನಾಡಗೌಡರಿಗೆ ರಾಜೀನಾಮೆ ನೀಡಿ ಮನೆಗೆ ಹೋಗುವಂತೆ ಆಗ್ರಹಿಸಿದ್ದಾರೆ.

ಪಟ್ಟಣದ ಮಾರುತಿ ನಗರದಲ್ಲಿರುವ ಫಾರ್ಮ ಹೌಸ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಉತ್ತರ ಕರ್ನಾಟಕದ 10 ಜಿಲ್ಲೆಗಳ 91 ತಾಲ್ಲೂಕುಗಳಲ್ಲಿ ಕೇವಲ 22 ತಾಲ್ಲೂಕು ಮಾತ್ರ ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಲಾಗಿದೆ.ಅದರಲ್ಲೂ ವಿಜಯಪುರ ಜಿಲ್ಲೆ ಬ್ರಿಟಿಷರ ಕಾಲದಿಂದಲೂ ಬರಗಾಲಕ್ಕೆ ತುತ್ತಾಗಿರುವ ಜಿಲ್ಲೆ. ಕಾಂಗ್ರೆಸ್ ಸರಕಾರದಲ್ಲಿ ನಮ್ಮ ಜಿಲ್ಲೆ ಪೂರ್ಣ ಪ್ರಮಾಣದಲ್ಲಿ ಬರಪೀಡಿತವಾಗಿಲ್ಲ ಎಂದು ಲೇವಡಿ ಮಾಡಿದರು.ವಿಜಯಪುರ ತಾಲ್ಲೂಕು, ನಿಡಗುಂದಿ ಹಾಗೂ ಕೊಲ್ರಾö್ಹರ ತಾಲ್ಲೂಕುಗಳು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ.ಬೆಳಗಾವಿ,ಕಲ್ಬುರ್ಗಿ,ಧಾರವಾಡ ಜಿಲ್ಲೆಯಲ್ಲಿ ಒಂದೂ ತಾಲ್ಲೂಕು ಬರಪೀಡಿತ ಪಟ್ಟಿಯಲ್ಲಿ ಇಲ್ಲ.ಈ ಸರಕಾರ ಬರಗಾಲದ ಬಗ್ಗೆ ಅದೆಷ್ಟು ಗಂಭೀರವಾಗಿದೆ ಎಂಬುದು ಇದರಿಂದ ತಿಳಿದು ಬರುತ್ತದೆ. ಎಂ.ಎಲ್.ಎಗಳು ಏನು ಮಾಡ್ತಿದ್ದಾರೆ.ಕನಿಷ್ಠ ನಮ್ಮ ತಾಲ್ಲೂಕುಗಳು ಬರಪೀಡಿತವಲ್ಲ ಎಂಬುದನ್ನಾದರೂ ಘೋಷಣೆ ಮಾಡಿಬಿಡಿ ಎಂದು ಹರಿಹಾಯ್ದರು.

ವಿಜಯಪುರ ಡಿಸಿಗೆ ತಲೆ ಕೆಟ್ಟಿದೆಯಾ ? ಬುದ್ದಿ ಇದೆಯಾ ? ಒಂದಾದರೂ ತಾಲ್ಲೂಕನ್ನು ಭೇಟಿ ಮಾಡಿದ್ದಾರಾ ? ಕೆಡಿಪಿ ಸಭೆಯನ್ನಾದರೂ ಮಾಡಿದ್ದಾರಾ ? ಎಂದು ಪ್ರಶ್ನಿಸಿದ ಅವರು, ಬರಗಾಲ ಜಿಲ್ಲೆ ಎಂದಾದರೂ ಘೋಷಣೆ ಮಾಡಿದ್ದರೆ ಕೇಂದ್ರದಿoದಲಾದರೂ ರೈತರಿಗೆ ಪರಿಹಾರ ಬಂದಿರುತ್ತಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುದ್ದೇಬಿಹಾಳ, ತಾಳಿಕೋಟಿ ತಾಲ್ಲೂಕಿನಲ್ಲಿ ಮಳೆ ಆಗಿದೆಯಾ ? ಬಿತ್ತನೆ ಕೂಡಾ ಆಗಿಲ್ಲ.ಆದರೆ ಮಂಡ್ಯ ಜಿಲ್ಲೆಯಲ್ಲಿ ಶೇ.100 ರಷ್ಟು,ಹಳೆ ಮೈಸೂರು ಭಾಗದಲ್ಲಿ ಶೇ.85 ರಷ್ಟು ತಾಲ್ಲೂಕುಗಳನ್ನು ಬರಪೀಡಿತ ಘೊಷಣೆ ಮಾಡಲಾಗಿದೆ. ಗದಗ,ಹಾವೇರಿ ಜಿಲ್ಲೆಯಲ್ಲಿ ನಾಮಕೇವಾಸ್ತೆ ಎನ್ನುವಂತೆ ಒಂದೊoದು ತಾಲ್ಲೂಕು ಬರಪೀಡಿತ ಎಂದು ಘೋಷಣೆ ಮಾಡಿದ್ದಾರೆ ಎಂದು ತಿಳಿಸಿದರು.
ನಮ್ಮ ಜಿಲ್ಲೆಯ ಶಾಸಕರುಗಳು ನಾಳೆ ಪತ್ರಿಕಾಗೋಷ್ಠಿ ಕರೆದು ಜಿಲ್ಲೆಯನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು.ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಆಗ್ರಹಿಸಿದರು.ಹಿರಿಯ ಶಾಸಕರು, ಆರು ಬಾರಿ ಗೆದ್ದಿದ್ದರಲ್ಲ ಪುಣ್ಯಾತ್ಮರೇ.ಯಾವ್ಯಾವುದಕ್ಕೋ ಹೋರಾಟ ಮಾಡ್ತಿದ್ದೀರ ಇದಕ್ಕೆ ಹೋರಾಟ ಮಾಡಿ.ಏನು ಮಾಡ್ತಾ ಇದ್ದೀರಿ ಅಪ್ಪಾಜಿ, ಮಂತ್ರಿ ಪದವಿ ಸಿಕ್ಕಿಲ್ಲ ಎಂದು ಕಣ್ಣೀರು ಹಾಕಿದ್ದೀರ ರೈತರಿಗಾಗಿ ಕಣ್ಣೀರು ಹಾಕಿ. ಘೋಷಣೆ ಮಾಡಿಸಿ ನಂತರ ಕೇಂದ್ರದಿoದ ಪರಿಹಾರ ಕೊಡಲು ಸಾಧ್ಯವಿದೆ ಎಂದು ನಡಹಳ್ಳಿ ಹೇಳಿದರು.

ಶಾಸಕ ಅಪ್ಪಾಜಿ ಅವರು 24 ಗಂಟೆಯಲ್ಲಿ ಈ ತಾಲ್ಲೂಕು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಬೇಕು.ಇಲ್ಲದಿದ್ದಲ್ಲಿ ರೈತರು ಎಂದಿಗೂ ಕ್ಷಮಿಸುವುದಿಲ್ಲ.ನೈತಿಕತೆ ಇದ್ದರೆ,ನಿಮ್ಮ ಮೇಲೆ ಜನರ ಋಣ ಇದೆ ಎಂದಾದರೆ ಸಿಎಂ ಜೊತೆ ಮಾತನಾಡಿ ಜಿಲ್ಲೆಯ ಎಲ್ಲ ಶಾಸಕರು ಸಿಎಂ ಬಳಿ ಹೋಗಿ.ಕೊರಳುಪಟ್ಟಿ ಹಿಡಿದು ಘೋಷಣೆ ಮಾಡಿಸಿ ಎಂದು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಜಿಪಂ ಮಾಜಿ ಉಪಾಧ್ಯಕ್ಷ ಕೆ.ಆರ್.ಬಿರಾದಾರ,ಮುಖಂಡ ಮಲಕೇಂದ್ರಗೌಡ ಪಾಟೀಲ, ಗುರುನಾಥಗೌಡ ಬಿರಾದಾರ,ತಾಪಂ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ,ಸoಗಮೇಶ ಹತ್ತಿ,ಸೋಮನಗೌಡ ಬಿರಾದಾರ ಕವಡಿಮಟ್ಟಿ,ಸಂಗನಬಸಪ್ಪ ಹುಂಡೇಕಾರ,ಸಿದ್ದರಾಜ ಹೊಳಿ,ಗಿರೀಶಗೌಡ ಪಾಟೀಲ ,ನಿಖಿಲ ಮಲಗಲದಿನ್ನಿ ಮೊದಲಾದವರು ಇದ್ದರು.

ಭ್ರಷ್ಟನನ್ನು ಪಕ್ಕದಲ್ಲಿ ಕೂರಿಸಿಕೊಂಡಿರುವ ಸಿಎಂಗೆ ನೈತಿಕತೆ ಇಲ್ಲ:
ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದರೂ ಅಧಿವೇಶನದಲ್ಲಿ ಚರ್ಚೆ ನಡೆಸಲು ಬಿಜೆಪಿಯವರು ಬಿಡಲಿಲ್ಲವೇಕೆ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಡಹಳ್ಳಿ ಅವರು, ನಾನು ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತೇನೆ ಎಂದು ಅಧಿಕಾರಕ್ಕೆ ಬಂದ ಸಿಎಂ ಡಿ.ಕೆ.ಶಿವಕುಮಾರ ಅವರು, ಪಕ್ಕದಲ್ಲಿಯೇ ವಾಲ್ಮೀಕಿ ಸಮಾಜದ ಅನುದಾನ ಲೂಟಿ ಮಾಡಿದ ಭ್ರಷ್ಟ ಸಚಿವರನ್ನು ರಕ್ಷಣೆ ಮಾಡುತ್ತಿರುವುದರಿಂದಲೇ ನಮ್ಮ ಪಕ್ಷ ಅಂತವರು ರಾಜೀನಾಮೆ ಕೊಟ್ಟ ಬಳಿಕವೇ ಅಧಿವೇಶನ ನಡೆಸಲು ಬಿಡುವುದಾಗಿ ತಿಳಿಸಿದ್ದರು.ಅಧಿವೇಶನ ಮತ್ತೆ ನಡೆಸಲು ಬರುತ್ತದೆ.ಆದರೆ ಕಳಂಕಿತ ಸಚಿವರನ್ನು ಜೊತೆಯಲ್ಲಿಟ್ಟುಕೊಂಡಿರುವ ಸಿಎಂ ಡಿಕೆಶಿ ಒಬ್ಬ ಬ್ರಷ್ಟ ಸಿಎಂ ಎಂದು ಆರೋಪಿಸಿದರು.

Latest News

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಟಿಎಪಿಸಿಎಂಎಸ್‌ನ 69ನೇ ವಾರ್ಷಿಕ ಮಹಾಸಭೆ : ಮುದ್ದೇಬಿಹಾಳ ಟಿಎಪಿಸಿಎಂಎಸ್‌ಗೆ 20.34 ಲಕ್ಷ ರೂ.ಲಾಭ-ಎಂ.ಎಸ್.ಮೇಟಿ

ಮುದ್ದೇಬಿಹಾಳ : ರೈತರ ಸಹಕಾರದಿಂದ ಸನ್ 2025-26ನೇ ಸಾಲಿನ ಮಾರ್ಚ ಅಂತ್ಯಕ್ಕೆ ನಮ್ಮ ಸಂಘವು

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಕ್ರೀಡಾಸ್ಫೂರ್ತಿಯಿಂದ ಆಟಗಳಲ್ಲಿ ಪಾಲ್ಗೊಳ್ಳಿ-ಎಂ.ಎಸ್.ಬಡದಾನಿ

ಮುದ್ದೇಬಿಹಾಳ : ಆಟಗಳಲ್ಲಿ ಸೋಲು ಗೆಲುವು ಸಾಮಾನ್ಯ ಸಂಗತಿ.ಆದರೆ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿಯಿಂದ ಪಾಲ್ಗೊಳ್ಳುವ ಕಾರ್ಯ

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಬರಪರಿಸ್ಥಿತಿ ಸರ್ವೆ ವರದಿ ಬಹಿರಂಗಪಡಿಸಿ-ನಡಹಳ್ಳಿ ಸವಾಲು

ಮುದ್ದೇಬಿಹಾಳ : ಮತಕ್ಷೇತ್ರದ ಮುದ್ದೇಬಿಹಾಳ ಹಾಗೂ ತಾಳಿಕೋಟಿ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹಿಸಿ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಕೆಎಸ್‌ಡಿಎಲ್ ನಿಗಮಕ್ಕೆ ರಾಜೀನಾಮೆ ಕೊಟ್ಟಿದ್ದೇನೆ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ನನ್ನ ಹಾಗೂ ಎಂ.ಬಿ.ಪಾಟೀಲರ ಮಧ್ಯೆ ತಾತ್ವಿಕವಾದ ಸಂಘರ್ಷಗಳಿದ್ದವು.ಅವರು ಯಾಕೆ ವಯಕ್ತಿಕವಾಗಿ ನನ್ನ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ರೈತರನ್ನು ಸಾಲಗಾರರನ್ನಾಗಿ ಮಾಡುವುದು ನಮ್ಮ ಉದ್ದೇಶವಲ್ಲ: ಶಾಸಕ ಶಿವಾನಂದ ಪಾಟೀಲ

ಮುದ್ದೇಬಿಹಾಳ : ರೈತರಿಗೆ ಸಾಲ ನೀಡುವುದು ಅವರನ್ನು ಸಾಲಗಾರರನ್ನಾಗಿ ಮಾಡುವ ಉದ್ದೇಶದಿಂದಲ್ಲ, ಬದಲಾಗಿ ಕೃಷಿ ಚಟುವಟಿಕೆಗಳನ್ನು ಬಲಪಡಿಸಿ ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉದ್ದೇಶದಿಂದ ಎಂದು ವಿಜಯಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಹೇಳಿದರು. ತಾಲ್ಲೂಕಿನ ಹಿರೇಮುರಾಳದ ಸಂಗಮೇಶ್ವರ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಹಕಾರಿ ಸಂಘದ ನೂತನ ಕಟ್ಟಡವನ್ನು ಅಂಕಲಿಮಠದ ವೀರಭದ್ರ ಸ್ವಾಮೀಜಿ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ರೈತರು ತಮ್ಮ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು.

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ;     ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಶಾಸಕ ನಾಡಗೌಡರ ವಿರುದ್ಧ ಹರಿಹಾಯ್ದ ನಡಹಳ್ಳಿ; ಶಾಸಕರೇ ಸಿಎಂ ಮನೆ ಮುಂದೆ ಧರಣಿ ಮಾಡಿ- ನಡಹಳ್ಳಿ ಹೇಳಿಕೆ

ಮುದ್ದೇಬಿಹಾಳ : ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವನ್ನು ಬರಪೀಡಿತ ಪ್ರದೇಶವೆಂದು ಘೋಷಿಸಬೇಕು. ಆದಷ್ಟು ಬೇಗ ಸರ್ಕಾರ ಈ ಕುರಿತು ತೀರ್ಮಾನ ಕೈಗೊಂಡು ರೈತರಿಗೆ ಪರಿಹಾರ ನೀಡಬೇಕು. ಇಲ್ಲವಾದರೆ ರೈತರನ್ನು ಪಕ್ಷಾತೀತವಾಗಿ ಒಗ್ಗೂಡಿಸಿ ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಎಚ್ಚರಿಸಿದರು. ಮುದ್ದೇಬಿಹಾಳದಲ್ಲಿ ಬರ ಘೋಷಣೆಗೆ ಆಗ್ರಹಿಸಿ ತಹಶೀಲ್ದಾರ್ ಕಚೇರಿ ಮುಂದೆ ಸೋಮವಾರದಿಂದ ಹಮ್ಮಿಕೊಂಡಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ಸರ್ಕಾರಕ್ಕೆ ಮಗ್ಗಲ ಮುಳ್ಳಾಗಿ